Rajat Patidar: ಪಂದ್ಯ ಮುಗಿದ ಬಳಿಕ ಬೇಸರದ ಮಾತುಗಳನ್ನಾಡಿದ ರಜತ್ ಪಟಿದಾರ್: ಏನು ಹೇಳಿದ್ರು ಕೇಳಿ

Post-Match Presentation Ceremony, LSG vs RCB: ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಬೌಲರ್​ಗಳ ಬೆಂಡೆತ್ತಿ ಆಕರ್ಷಕ ಚೊಚ್ಚಲ ಶತಕ ಸಿಡಿಸಿದ ರಜತ್ ಪಟಿದಾರ್ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಪಂದ್ಯ ಮುಗಿದ ಬಳಿಕ ಮಾತನಾಡಿದ ರಜತ್ ಏನು ಹೇಳಿದರು ಕೇಳಿ.

Rajat Patidar: ಪಂದ್ಯ ಮುಗಿದ ಬಳಿಕ ಬೇಸರದ ಮಾತುಗಳನ್ನಾಡಿದ ರಜತ್ ಪಟಿದಾರ್: ಏನು ಹೇಳಿದ್ರು ಕೇಳಿ
Rajat Patidar post-match presentation, LSG vs RCB
Follow us
TV9 Web
| Updated By: Vinay Bhat

Updated on:May 26, 2022 | 9:21 AM

ಐಪಿಎಲ್ ಇತಿಹಾಸದ ಎಲಿಮಿನೇಟರ್ ಪಂದ್ಯದಲ್ಲಿ ಇದುವರೆಗೆ ಕಳಪೆ ಪ್ರದರ್ಶನ ನೀಡುತ್ತಾ ಬಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಐಪಿಎಲ್ 2022 ರ (IPL 2022) ಮೊದಲ ಅಗ್ನಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದೆ. ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ (LSG vs RCB) ಬೊಂಬಾಟ್ ಪ್ರದರ್ಶನ ನೀಡಿ 14 ರನ್​ಗಳಿಂದ ಜಯ ಸಾಧಿಸಿ ಕ್ವಾಲಿಫೈಯರ್-2 ಗೆ ಲಗ್ಗೆಯಿಟ್ಟಿದೆ. ಬೆಂಗಳೂರು ಈ ಪಂದ್ಯದಲ್ಲಿ ಗೆಲುವು ಸಾಧಿಸಲು ರಜತ್ ಪಟಿದಾರ್ (Rajat Patidar) ಎಂದರೆ ತಪ್ಪಾಗಲಾರದು. ಮೊದಲ ಓವರ್​ನಲ್ಲೇ ನಾಯಕ ಫಾಫ್ ಡುಪ್ಲೆಸಿಸ್ ವಿಕೆಟ್ ಕಳೆದುಕೊಂಡಾಗ ಕ್ರೀಸ್​​ಗೆ ಬಂದ ಇವರು ಲಖನೌ ಬೌಲರ್​ಗಳ ಬೆಂಡೆತ್ತಿ ಆಕರ್ಷಕ ಚೊಚ್ಚಲ ಶತಕ ಸಿಡಿಸಿ ಅಬ್ಬರಿಸಿದರು. ಆರ್​ಸಿಬಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. ಕೇವಲ 54 ಎಸೆತಗಳಲ್ಲಿ 12 ಫೋರ್ ಹಾಗೂ 7 ಅಮೋಘ ಸಿಕ್ಸರ್​ಗಳನ್ನು ಸಿಡಿಸಿ ಅಜೇಯ 112 ರನ್ ಗಳಿಸಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ರಜತ್ ಏನು ಹೇಳಿದರು ಕೇಳಿ.

ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ಮಾತನಾಡಿದ ಪಟಿದಾರ್ ಮಹತ್ವದ ಹೇಳಿಕೆ ನೀಡಿದರು. ಮೊದಲಿಗೆ ತನ್ನ ಆಟದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಇವರು, “ನಾನು ಬಾಲ್​ಗೆ ಟೈಮ್ ಮಾಡುವಾಗ ನನ್ನ ಗಮನ ಪೂರ್ತಿ ಅದರ ಮೇಲೆ ಮಾತ್ರ ಇರುತ್ತಿತ್ತು. ಪವರ್ ಪ್ಲೇಯ ಕೊನೆಯ ಓವರ್​​ ಅನ್ನು ಕ್ರುನಾಲ್ ಪಾಂಡ್ಯ ಬೌಲಿಂಗ್ ಮಾಡಿದಾಗ ನನ್ನ ಉದ್ದೇಶ ಸ್ಪಷ್ಟವಾಗಿತ್ತು. ಹಾಗೂ ಆತ್ಮವಿಶ್ವಾಸದಿಂದ ಇದ್ದೆ. ಈ ವಿಕೆಟ್ ಮಾತ್ರ ಅದ್ಭುತವಾಗಿತ್ತು. ಅದಕ್ಕಾಗಿ ನನಗೆ ಕೆಲ ಅತ್ಯುತ್ತಮ ಹೊಡೆತ ಸಿಡಿಸಲು ಕಾರಣವಾಯಿತು. ಡಾಟ್ ಬಾಲ್ ಅನ್ನು ಸರಿಯಾಗಿ ಎದುರಿಸುವ ಸಾಮರ್ಥ್ಯ ನನ್ನಲ್ಲಿರುವ ಕಾರಣ ನಾನು ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ,” ಎಂದು ಹೇಳಿದ್ದಾರೆ.

Rajat Patidar: ಪಟಿದಾರ್ ಶತಕವನ್ನು ತನ್ನ ಶತಕದಂತೆ ಸಂಭ್ರಮಿಸಿದ ವಿರಾಟ್ ಕೊಹ್ಲಿ: ವಿಡಿಯೋ ನೋಡಿ

ಇದನ್ನೂ ಓದಿ
Image
LSG vs RCB Match Report: ಆರ್​ಸಿಬಿ ಸಾಂಘಿಕ ಹೋರಾಟಕ್ಕೆ ಮಣಿದ ಲಕ್ನೋ; ಮುಂದಿನ ಎದುರಾಳಿ ರಾಜಸ್ಥಾನ
Image
Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
Image
IPL 2022 Eliminator: LSG vs RCB ಪಂದ್ಯಕ್ಕೆ ವರುಣನ ಅಡ್ಡಿ: ಹೀಗೆ ನಡೆಯಲಿದೆ ಮ್ಯಾಚ್
Image
LSG vs RCB IPL 2022 Eliminator Highlights: ರಜತ್ ಅಬ್ಬರದ ಶತಕ; 2ನೇ ಕ್ವಾಲಿಫೈಯರ್​ಗೆ ಆರ್​ಸಿಬಿ ಎಂಟ್ರಿ

ಐಪಿಎಲ್ 2021ರ ಬಳಿಕ ಏನಾಯಿತು ಎಂಬ ಬಗ್ಗೆ ಪಟಿದಾರ್ ಬೇಸರದ ಮಾತುಗಳನ್ನು ಆಡಿದರು. “ಐಪಿಎಲ್ 2021ರ ಬಳಿಕ ನಾನು ನನ್ನ ಕ್ಷಬ್​ನಲ್ಲಿ ಸತತವಾಗಿ ಕ್ರಿಕೆಟ್ ಆಡುತ್ತಿದ್ದೆ, ಅದರಲ್ಲೇ ಬ್ಯುಸಿ ಇರುತ್ತಿದ್ದೆ. 2021 ರ ಐಪಿಎಲ್ ನಂತರ ನನ್ನನ್ನು ಯಾರೂ ಆಯ್ಕೆ ಮಾಡಿಲ್ಲ. ಆದರೆ, ಅದು ನನ್ನ ಕೈಯಲ್ಲಿ ಕೂಡ ಇಲ್ಲ,” ಎಂದು ಹೇಳಿದ್ದಾರೆ. ಪಟಿದಾರ್ ಐಪಿಎಲ್ 2022ರ ಹರಾಜಿನಲ್ಲೂ ಸೇಲ್ ಆಗದೆ ಉಳಿದಿದ್ದರು. ಆದರೆ, ಟೂರ್ನಿ ಆರಂಭವಾದ ಬಳಿಕ ಲವಿತ್ ಸಿಸ್ನೋಡಿಯಾ ಗಾಯಾಕ್ಕೆ ತುತ್ತಾದ ಪರಿಣಾಮ ಇವರ ಬದಲಿಗೆ ಆರ್‌ಸಿಬಿ ತಂಡವನ್ನು ರಜತ್ ಸೇರಿಕೊಂಡರು. ಅಚಾನಕ್ ಆಗಿ ತಂಡ ಸೇರಿಕೊಂಡ ಇವರು ಈ ಮಟ್ಟಿಗೆ ಬ್ಯಾಟಿಂಗ್ ಆಡಿ ತಂಡದ ಗೆಲುವಿಗೆ ಮುಖ್ಯ ಕೊಡುಗೆ ನೀಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ಇನ್ನು ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮತ್ತೊಬ್ಬ ಆಟಗಾರ ಹರ್ಷಲ್ ಪಟೇಲ್ ಮಾತನಾಡಿ, “ಇಂಜುರಿಗೆ ತುತ್ತಾಗಿದ್ದರೂ ನನ್ನ ಬೆರಳುಗಳು ಈಗ ಸರಿಯಾಗಿವೆ. 24 ಎಸೆತಗಳಲ್ಲಿ ಹಾಕಿದ್ದು ಸಂತಸ ನೀಡಿದೆ. ನಾನು ಬೌಲಿಂಗ್​ನಲ್ಲಿ ಇನ್ನೂ ಉತ್ತಮವಾಗಿ ಹೇಗೆ ಮಾಡಬಹುದು ಎಂಬ ಯೋಚನೆ ನನ್ನ ತಲೆಯಲ್ಲಿ ಓಡುತ್ತಲೇ ಇತ್ತು. ನಾನು ನನ್ನ ಬೌಲಿಂಗ್ ಬಗ್ಗೆ ಹಿಂದಿನ ದಿನದಲ್ಲಿ ಗಮನಿಸಿದ್ದೆ. ನನ್ನ ಹಾರ್ಡ್ ಲೆಂತ್ ಬಾಲ್ 7.5 ಪರ್ ಓವರ್​ಗೆ ಇರುತ್ತಿತ್ತು. ಸ್ಟಾಯಿನಿಸ್​ಗೆ ವೈಡ್ ಬಾಲ್ ಹಾಕಲು ನಿರ್ಧರಿಸಿದೆ. ಆದರೆ, ಅದು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ಬರಲಿಲ್ಲ. ಹೀಗಾಗಿ ಮೊದಲ ಎರಡು ಓವರ್​​​ನಲ್ಲಿ ನಾನು ಹೇಗೆ ಬೌಲಿಂಗ್ ಮಾಡಿದೆನೊ ಅದೇರೀತಿ ಮಾಡಲು ನಿರ್ಧರಿಸಿದೆ,” ಎಂದು ಹೇಳಿದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:21 am, Thu, 26 May 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ