ಯಾಸಿನ್ ಮಲಿಕ್ ಪರವಾಗಿ ಟ್ವೀಟ್ ಮಾಡಿದ ಶಾಹಿದ್ ಅಫ್ರಿದಿಗೆ ತಕ್ಕ ಉತ್ತರ ನೀಡಿ ಬಾಯ್ಮುಚ್ಚಿಸಿದ ಅಮಿತ್ ಮಿಶ್ರಾ
ಯಾಸಿನ್ ಮಲಿಕ್‌ಗೆ ಶಿಕ್ಷೆ ಪ್ರಕಟವಾಗುವ ಮುನ್ನವೇ ಅಫ್ರಿದಿ, ತಮ್ಮ ಟ್ವಿಟರ್ ಖಾತೆಯಲ್ಲಿ "ತನ್ನ ಅಬ್ಬರದ ಮಾನವ ಹಕ್ಕು ಉಲ್ಲಂಘನೆಗಳ ವಿರುದ್ಧ ವಿಮರ್ಶಾತ್ಮಕ ಧ್ವನಿಗಳನ್ನು ಮೌನಗೊಳಿಸಲು...
ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ (terror funding case) ದೋಷಿಯಾಗಿರುವ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ (Yasin Malik) ಬೆಂಬಲ ನೀಡಿ ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi)ಕಾಶ್ಮೀರದ ವಿರುದ್ಧದ ಚರ್ಚೆಯನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ. ಯಾಸಿನ್ ಮಲಿಕ್‌ಗೆ ಇಂದು ದೆಹಲಿಯ ವಿಶೇಷ ಎನ್ಐಎ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಯಾಸಿನ್ ಮಲಿಕ್ ವಿರುದ್ಧ ಕ್ರಿಮಿನಲ್ ಪಿತೂರಿ, ದೇಶದ ವಿರುದ್ಧ ಯುದ್ಧ, ಇತರ ಕಾನೂನುಬಾಹಿರ ಚಟುವಟಿಕೆಗಳು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡುವ ಆರೋಪ ಹೊರಿಸಲಾಗಿದೆ. ಯಾಸಿನ್ ಮಲಿಕ್‌ಗೆ ಶಿಕ್ಷೆ ಪ್ರಕಟವಾಗುವ ಮುನ್ನವೇ ಅಫ್ರಿದಿ, ತಮ್ಮ ಟ್ವಿಟರ್ ಖಾತೆಯಲ್ಲಿ “ತನ್ನ ಅಬ್ಬರದ ಮಾನವ ಹಕ್ಕು ಉಲ್ಲಂಘನೆಗಳ ವಿರುದ್ಧ ವಿಮರ್ಶಾತ್ಮಕ ಧ್ವನಿಗಳನ್ನು ಮೌನಗೊಳಿಸಲು ಭಾರತದ ನಿರಂತರ ಪ್ರಯತ್ನಗಳು ನಿಷ್ಪ್ರಯೋಜಕವಾಗಿದೆ. ಯಾಸಿನ್ ಮಲಿಕ್ ವಿರುದ್ಧದ ಆರೋಪಗಳು ಕಾಶ್ಮೀರದ ಸ್ವಾತಂತ್ರ್ಯ ಹೋರಾಟವನ್ನು ತಡೆಯುವುದಿಲ್ಲ. ಕಾಶ್ಮೀರ ನಾಯಕರ ವಿರುದ್ಧ ಅನ್ಯಾಯ ಮತ್ತು ಕಾನೂನುಬಾಹಿರ ವಿಚಾರಣೆ ಬಗ್ಗೆ ಗಮನಹರಿಸುವಂತೆ ವಿಶ್ವಸಂಸ್ಥೆಯಲ್ಲಿ ಒತ್ತಾಯಿಸುತ್ತಿದ್ದೇನೆ ಎಂದು ಬರೆದಿದ್ದಾರೆ. ಕಾಶ್ಮೀರ ವಿಚಾರವಾಗಿ ಅಫ್ರಿದಿ ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. “ಕಾಶ್ಮೀರಿಗಳ ಸಂಕಟವನ್ನು ಅನುಭವಿಸಲು ಧಾರ್ಮಿಕ ನಂಬಿಕೆ ಬೇಕಾಗಿಲ್ಲ. ಸರಿಯಾದ ಸ್ಥಳದಲ್ಲಿ ಸರಿಯಾದ ಹೃದಯ ಇರಬೇಕು. ಕಾಶ್ಮೀರವನ್ನು ಉಳಿಸಿ” ಎಂದು ಅಫ್ರಿದಿ 2020 ರಲ್ಲಿ ಬರೆದಿದ್ದರು.
Dear @safridiofficial he himself has pleaded guilty in court on record. Not everything is misleading like your birthdate. ???https://t.co/eSnFLiEd0z
ಇದನ್ನೂ ಓದಿ— Amit Mishra (@MishiAmit) May 25, 2022
ಅದೇ ವರ್ಷ, ಕಾಶ್ಮೀರದ ತಂಡವು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ (ಪಿಎಸ್‌ಎಲ್) ಆಡುವುದನ್ನು ನೋಡಲು ಬಯಸುತ್ತೇನೆ ಎಂದು ಅವರು ಹೇಳಿದ್ದರು. “ಕಾಶ್ಮೀರದ ಜನರು ನನ್ನ ಮೇಲೆ ತೋರಿದ ಎಲ್ಲಾ ಪ್ರೀತಿಯಿಂದ ನಾನು ವಿನಮ್ರನಾಗಿದ್ದೇನೆ. ಪಿಎಸ್ಎಲ್ ನ ಮುಂದಿನ ಆವೃತ್ತಿಯಲ್ಲಿ ಕಾಶ್ಮೀರದಿಂದ ಒಂದು ತಂಡ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ಕಾಶ್ಮೀರದಿಂದ ಒಂದು ತಂಡ ಇದ್ದರೆ, ನಾನು ಆ ತಂಡಕ್ಕಾಗಿ ಆಡಲು ಬಯಸುತ್ತೇನೆ ಎಂದು ಅಫ್ರಿದಿ ಹೇಳಿದ್ದರು.
ಯಾಸಿನ್ ಮಲಿಕ್ ಪರ ಅಫ್ರಿದಿ ಟ್ವೀಟ್ಗೆ ಪ್ರತಿಕ್ರಿಯಿಸಿದ ಭಾರತೀಯ ಕ್ರಿಕೆಟಿಗ ಅಮಿತ್ ಮಿಶ್ರಾ ಆತ್ಮೀಯ ಅಫ್ರಿದಿ, ಆತ (ಯಾಸಿನ್ ಮಲಿಕ್) ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ನಿಮ್ಮ ಜನ್ಮದಿನಾಂಕದಂತೆ ಎಲ್ಲವೂ ದಾರಿತಪ್ಪಿಸುವುದಿಲ್ಲ” ಎಂದಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 8:50 pm, Wed, 25 May 22