8 Years of Modi Government: ಕಾಶಿಯಿಂದ ಕಾಶ್ಮೀರದವರೆಗೆ; ಮೋದಿ ಅವಧಿಯಲ್ಲಿ ಅಭಿವೃದ್ಧಿ ಕಂಡ ಪ್ರಮುಖ ದೇವಾಲಯಗಳಿವು

Development of Temples during Modi Period: ಕಳೆದ 8 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ರಾಮಮಂದಿರ, ಕಾಶಿ ವಿಶ್ವನಾಥ ದೇವಸ್ಥಾನ, ಸೋಮನಾಥಪುರ ದೇವಸ್ಥಾನ ಸೇರಿದಂತೆ ಹಲವು ಪ್ರಮುಖ ದೇವಾಲಯಗಳಿಗೆ ಹೊಸ ರೂಪ ನೀಡಿದ್ದಾರೆ.

8 Years of Modi Government: ಕಾಶಿಯಿಂದ ಕಾಶ್ಮೀರದವರೆಗೆ; ಮೋದಿ ಅವಧಿಯಲ್ಲಿ ಅಭಿವೃದ್ಧಿ ಕಂಡ ಪ್ರಮುಖ ದೇವಾಲಯಗಳಿವು
ನರೇಂದ್ರ ಮೋದಿImage Credit source: The Print
Follow us
TV9 Web
| Updated By: ಸುಷ್ಮಾ ಚಕ್ರೆ

Updated on: May 26, 2022 | 5:42 AM

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅಧಿಕಾರ ಸ್ವೀಕರಿಸಿದ ದಿನದಿಂದ ಇದುವರೆಗೂ ಭಾರತದ ಅದೆಷ್ಟೋ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿಸಿದ್ದಾರೆ, ಹಳೆಯ ದೇವಾಲಯಗಳನ್ನು ಮೇಲ್ದರ್ಜೆಗೇರಿಸಿದ್ದಾರೆ. 2014ರಲ್ಲಿ ನರೇಂದ್ರ ಮೋದಿ (PM Modi) ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ಅವರು ವಾರಾಣಸಿಯನ್ನು (Varanasi) ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿಪಡಿಸುವ ಬಗ್ಗೆ ಮಾತನಾಡಿದ್ದರು. ಅದೇ ಹೆಸರಿನ ಯೋಜನೆಯನ್ನು 2016ರಲ್ಲಿ ಅಧಿಕೃತವಾಗಿ ಪ್ರಾರಂಭಿಸಲಾಯಿತು. ಕಾಶಿಯನ್ನು (Kashi) ಜಪಾನಿನ ಪಾರಂಪರಿಕ ನಗರವಾದ ಕ್ಯೋಟೋ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕೆಂಬುದು ನರೇಂದ್ರ ಮೋದಿಯವರ ಕನಸಾಗಿತ್ತು. ಅದರಂತೆ ವಾರಾಣಸಿ ಇದೀಗ ಹೊಸ ರೂಪ ಪಡೆಯುತ್ತಿದೆ.

ಕಾಶಿ ಮತ್ತು ಕ್ಯೋಟೋ ಎರಡೂ ಪುರಾತನ ನಗರಗಳಾಗಿದ್ದು, ಆಧುನಿಕ ಕಾಲದಲ್ಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಕ್ಯೋಟೋ ಜಪಾನ್‌ನ ಅಭಿವೃದ್ಧಿ ಹೊಂದಿದ ನಗರಗಳಲ್ಲಿ ಒಂದಾಗಿದೆ. ಇದು ಆರ್ಥಿಕ ಶಕ್ತಿ ಕೇಂದ್ರವಾಗಿದೆ. ಭಾರತವು ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದರೊಂದಿಗೆ ಕ್ಯೋಟೋ ಮಾದರಿಯಲ್ಲಿ ಕಾಶಿಯನ್ನು ಅಭಿವೃದ್ಧಿಪಡಿಸುವ ಕುರಿತು ಪ್ರಧಾನಿ ಮೋದಿ ಮಾತನಾಡಿದ್ದರು. ಕಳೆದ 8 ವರ್ಷಗಳಲ್ಲಿ (8 Years of Modi Government) ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ರಾಮಮಂದಿರ, ಕಾಶಿ ವಿಶ್ವನಾಥ ದೇವಸ್ಥಾನ, ಸೋಮನಾಥಪುರ ದೇವಸ್ಥಾನ ಸೇರಿದಂತೆ ಹಲವು ಪ್ರಮುಖ ದೇವಾಲಯಗಳಿಗೆ ಹೊಸ ರೂಪ ನೀಡಿದ್ದಾರೆ, ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪ್ರಸಿದ್ಧಿಯಾಗುವಂತೆ ಮಾಡಿದ್ದಾರೆ.

ಕಾಶಿ ವಿಶ್ವನಾಥ ದೇವಸ್ಥಾನ: ಲೋಕಸಭಾ ಚುನಾವಣೆಗೂ ಮೊದಲು 2019ರ ಮಾರ್ಚ್ ತಿಂಗಳಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದರು. ಈ ಯೋಜನೆಯು ಗಂಗಾ ನದಿಯ ದಡದಲ್ಲಿರುವ ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥ ಮಂದಿರ ಸಂಕೀರ್ಣವನ್ನು ನವೀಕರಿಸುವ ಗುರಿಯನ್ನು ಹೊಂದಿದೆ. ಕೇಂದ್ರ ಸರ್ಕಾರವು ಸುಮಾರು 400 ಕಟ್ಟಡಗಳು ಮತ್ತು ಮನೆಗಳನ್ನು ಅವುಗಳ ಮಾಲೀಕರೊಂದಿಗೆ ಪರಸ್ಪರ ಒಪ್ಪಂದದ ಮೂಲಕ ಸ್ವಾಧೀನಪಡಿಸಿಕೊಂಡಿತು. ಕಾಶಿ ವಿಶ್ವನಾಥ ದೇವಾಲಯದ ಪುನರ್ನಿರ್ಮಾಣ ಯೋಜನೆಯ ಭಾಗವಾಗಿ ಈ ಕಟ್ಟಡ ಮತ್ತು ಮನೆಗಳನ್ನು ಕೆಡವಲಾಯಿತು. ಕಾಶಿ ವಿಶ್ವನಾಥ ಕಾರಿಡಾರ್ ಈಗ ಶಿವನಿಗೆ ಸಮರ್ಪಿತವಾದ ದೇವಾಲಯವನ್ನು ಗಂಗಾ ನದಿಯೊಂದಿಗೆ ಸಂಪರ್ಕಿಸುತ್ತದೆ.

ಇದನ್ನೂ ಓದಿ
Image
8 Years of Modi Government: ನೋಟು ಅಮಾನ್ಯೀಕರಣದಿಂದ ಡಿಜಿಟಲ್ ಇಂಡಿಯಾವರೆಗೆ; ಪ್ರಧಾನಿ ನರೇಂದ್ರ ಮೋದಿಯ 10 ಮಹತ್ವದ ನಿರ್ಧಾರಗಳಿವು
Image
8 Years of Modi Government: ಪ್ರಧಾನಿ ನರೇಂದ್ರ ಮೋದಿಯಿಂದ ವಿಶ್ವನಾಯಕರಿಗೆ ಅಮೂಲ್ಯ ಗಿಫ್ಟ್: ಇದುವರೆಗೆ ಯಾವೆಲ್ಲಾ ಉಡುಗೊರೆ ನೀಡಿದ್ದಾರೆ ಗೊತ್ತಾ?
Image
8 Years of Modi Government: ಏಕರೂಪ ನಾಗರಿಕ ಸಂಹಿತೆ: ಮೋದಿ ಸರ್ಕಾರದ ಎದುರು ಹಲವು ಸವಾಲುಗಳು
Image
8 Years Of Modi Government: ನರೇಂದ್ರ ಮೋದಿ ನೇತೃತ್ವ ಸರ್ಕಾರದ ಡಿಜಿಟಲ್ ಕ್ರಾಂತಿ; ಎಂಟು ವರ್ಷದಲ್ಲಿ ಎಷ್ಟೆಲ್ಲ ಬದಲಾವಣೆ!

2024ರ ಲೋಕಸಭಾ ಚುನಾವಣೆಯ ಮೇಲೆ ಬಹಳ ಪರಿಣಾಮ ಬೀರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಕೇವಲ ಎರಡು ತಿಂಗಳ ಮುಂಚಿತವಾಗಿ ಕಾಶಿ ವಿಶ್ವನಾಥ್ ಕಾರಿಡಾರ್ ಯೋಜನೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಕಾಶಿ ವಿಶ್ವನಾಥ ದೇವಾಲಯವು ಮೊಘಲ್ ದೊರೆ ಔರಂಗಜೇಬನ ಆದೇಶದ ಮೇರೆಗೆ ದಾಳಿ ಮಾಡಿದ ಇತಿಹಾಸವನ್ನು ಹೊಂದಿದೆ. ಈ ದೇವಾಲಯವನ್ನು ಮರಾಠ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ಪುನರ್ನಿರ್ಮಿಸಿದ್ದರು.

ಇದನ್ನೂ ಓದಿ: 8 Years of Modi Government: ಪ್ರಧಾನಿ ನರೇಂದ್ರ ಮೋದಿಯಿಂದ ವಿಶ್ವನಾಯಕರಿಗೆ ಅಮೂಲ್ಯ ಗಿಫ್ಟ್: ಇದುವರೆಗೆ ಯಾವೆಲ್ಲಾ ಉಡುಗೊರೆ ನೀಡಿದ್ದಾರೆ ಗೊತ್ತಾ?

ಸೋಮನಾಥ ದೇವಾಲಯ: ಗುಜರಾತ್‌ನಲ್ಲಿರುವ ಸೋಮನಾಥ ದೇವಾಲಯವು ಅಫ್ಘಾನಿಸ್ತಾನದ ಘಜ್ನಿಯ ಮಹಮೂದ್‌ನಿಂದ ಔರಂಗಜೇಬ್‌ನವರೆಗೆ ಹಲವಾರು ಸೈನ್ಯಗಳಿಂದ ದಾಳಿಗೊಳಗಾದ ಇತಿಹಾಸವನ್ನು ಹೊಂದಿದೆ. ಇದು ಅಹಲ್ಯಾಬಾಯಿ ಹೋಳ್ಕರ್‌ರಿಂದ ಪುನರ್ನಿರ್ಮಾಣಗೊಂಡಿದೆ. ಭಾರತಕ್ಕೆ ಸ್ವಾತಂತ್ರ್ಯದ ನಂತರದ ಮೊದಲ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಉಪಕ್ರಮದಲ್ಲಿ ದೇವಾಲಯವನ್ನು ನವೀಕರಿಸಲಾಯಿತು. ಪ್ರಧಾನಿ ಮೋದಿ ಸೋಮನಾಥ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿಯವರು ಸೋಮನಾಥ ದೇವಾಲಯದ ಸಂಕೀರ್ಣದಲ್ಲಿ ಹೊಸ ನವೀಕರಣ ಯೋಜನೆಗಳನ್ನು ಉದ್ಘಾಟಿಸಿದರು.

ಕೇದಾರನಾಥ ದೇವಾಲಯ: ಶಿವನಿಗೆ ಸಮರ್ಪಿತವಾದ ಕೇದಾರನಾಥ ದೇವಾಲಯದೊಂದಿಗಿನ ಸಂಬಂಧದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಲವಾರು ಬಾರಿ ಮಾತನಾಡಿದ್ದಾರೆ. ತಾವು ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಕೇದಾರನಾಥ ತಮ್ಮ ನೆಚ್ಚಿನ ನಿಲ್ದಾಣವಾಗಿತ್ತು ಎಂದು ಅವರು ಹೇಳಿದ್ದಾರೆ. 2013ರ ಉತ್ತರಾಖಂಡದ ಪ್ರವಾಹವು ಕೇದಾರನಾಥ ದೇವಾಲಯದ ಆವರಣವನ್ನು ಧ್ವಂಸಗೊಳಿಸಿತ್ತು. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಮೋದಿ ಸರ್ಕಾರವು ಕೇದಾರನಾಥ ದೇವಾಲಯದ ನವೀಕರಣ ಯೋಜನೆಯನ್ನು ಪ್ರಾರಂಭಿಸಿತು. ಈ ಇಡೀ ದೇವಾಲಯದ ಸಂಕೀರ್ಣವನ್ನು ಈಗ ಪುನಃ ಸ್ಥಾಪಿಸಲಾಗಿದೆ.

ಅಯೋಧ್ಯೆಯಲ್ಲಿ ರಾಮಮಂದಿರ: 1980ರ ದಶಕದ ಅಂತ್ಯದಲ್ಲಿ ಬಿಜೆಪಿ ನಾಯಕರಾಗಿ, ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮನ ಜನ್ಮಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೆಂಬಲವನ್ನು ಹೆಚ್ಚಿಸಲು ಎಲ್‌ಕೆ ಅಡ್ವಾಣಿಯವರ ರಥಯಾತ್ರೆಯ ಭಾಗವಾಗಿದ್ದರು. ಹಲವು ದಶಕಗಳಿಂದ ಈ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಉಳಿದಿತ್ತು. ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಅಯೋಧ್ಯೆ ವಿವಾದದ ಪ್ರಕರಣದ ವಿಚಾರಣೆ ತ್ವರಿತಗತಿಯಲ್ಲಿ ಸಾಗಿತ್ತು.

2019ರ ನವೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ರಾಮ ಜನ್ಮಭೂಮಿಯ ಪೀಠಾಧಿಪತಿ ರಾಮ್ ಲಲ್ಲಾ ಶೀರ್ಷಿಕೆಯ ಪರವಾಗಿ ತೀರ್ಪು ನೀಡಿತು. 1992ರ ಡಿಸೆಂಬರ್ 6ರವರೆಗೆ ಬಾಬರಿ ಮಸೀದಿ ಇದ್ದ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. 2020ರ ಆಗಸ್ಟ್‌ನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ನೆರವೇರಿಸಿದರು.

ಚಾರ್ ಧಾಮ್ ಯೋಜನೆ: ಭಾರತದ ಪ್ರಮುಖ 4 ಯಾತ್ರಾಸ್ಥಳಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥವನ್ನು ಸಂಪರ್ಕಿಸಲು ಮೋದಿ ಸರ್ಕಾರ ಚಾರ್ ಧಾಮ್ ಯೋಜನೆಯನ್ನು ಪ್ರಾರಂಭಿಸಿತು. ಚಾರ್ ಧಾಮ್ ಯಾತ್ರೆಯನ್ನು ಹಿಂದೂಗಳು ಕೈಗೊಳ್ಳಬೇಕಾದ ಪ್ರಮುಖ ಧಾರ್ಮಿಕ ಪ್ರವಾಸವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: 8 Years of Modi Government: ನೋಟು ಅಮಾನ್ಯೀಕರಣದಿಂದ ಡಿಜಿಟಲ್ ಇಂಡಿಯಾವರೆಗೆ; ಪ್ರಧಾನಿ ನರೇಂದ್ರ ಮೋದಿಯ 10 ಮಹತ್ವದ ನಿರ್ಧಾರಗಳಿವು

ಕಾಶ್ಮೀರದಲ್ಲಿ ದೇವಾಲಯದ ನವೀಕರಣ: ಜಮ್ಮು ಮತ್ತು ಕಾಶ್ಮೀರದಲ್ಲಿ ದೇವಾಲಯಗಳ ಪುನರುಜ್ಜೀವನದ ಕಾರ್ಯಗಳು ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಹೆಚ್ಚು ಪ್ರಚಾರಕ್ಕೆ ಬಾರದ ಯೋಜನೆಗಳಲ್ಲಿ ಒಂದಾಗಿದೆ. 2019ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನರೇಂದ್ರ ಮೋದಿ ಸರ್ಕಾರವು ಶ್ರೀನಗರ ಸೇರಿದಂತೆ ಕಣಿವೆಯ ಹಲವಾರು ದೇವಾಲಯಗಳ ಸಂಕೀರ್ಣಗಳಲ್ಲಿ ನವೀಕರಣ ಕಾರ್ಯಗಳನ್ನು ಪ್ರಾರಂಭಿಸಿತು. ಜಮ್ಮು ಮತ್ತು ಕಾಶ್ಮೀರದಲ್ಲಿ 50,000 ದೇವಾಲಯಗಳಿವೆ. ಕಾಶ್ಮೀರ ಕಣಿವೆಯಲ್ಲಿ ಪವಿತ್ರ ವೃಕ್ಷಗಳು ಸೇರಿದಂತೆ ಹಿಂದೂಗಳಿಗೆ ಕೇವಲ 1,842 ಪೂಜಾ ಸ್ಥಳಗಳಿವೆ.

ಕೆಲವು ವರದಿಗಳು ಕಾಶ್ಮೀರ ಕಣಿವೆಯಲ್ಲಿ 952 ದೇವಾಲಯಗಳ ಸಂಖ್ಯೆಯನ್ನು ಹಾಕಲು ಸರ್ಕಾರದ ಅಂಕಿಅಂಶಗಳನ್ನು ಉಲ್ಲೇಖಿಸಿವೆ. ಅವುಗಳಲ್ಲಿ 212 ಮಾತ್ರ ತೆರೆದಿವೆ ಮತ್ತು ಕಾರ್ಯನಿರ್ವಹಿಸುತ್ತಿವೆ. ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂಗಳು ತಮ್ಮ ತಾಯ್ನಾಡಿಗೆ ಮರಳಲು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಕ್ರಮವಾಗಿ ಮೋದಿ ಸರ್ಕಾರವು ದೇವಾಲಯದ ನವೀಕರಣವನ್ನು ಕೈಗೊಳ್ಳುತ್ತಿದೆ. ಕಾಶ್ಮೀರದಲ್ಲಿ ಎರಡು ದೇವಾಲಯಗಳ ನವೀಕರಣ ಕಾರ್ಯಗಳು ಗಮನ ಸೆಳೆದಿವೆ. ಶ್ರೀನಗರದ ಝೀಲಂ ನದಿಯ ದಡದಲ್ಲಿ 1835ರಲ್ಲಿ ಮಹಾರಾಜ ಗುಲಾಬ್ ಸಿಂಗ್ ನಿರ್ಮಿಸಿದ ರಘುನಾಥ ದೇವಾಲಯದ ಪುನಃಸ್ಥಾಪನೆ ಒಂದು. ಭಗವಾನ್ ರಾಮನಿಗೆ ಸಮರ್ಪಿತವಾಗಿರುವ ದೇವಾಲಯದ ನವೀಕರಣ ಕಾರ್ಯವು ಅಕ್ಟೋಬರ್ 2020ರಲ್ಲಿ ಪ್ರಾರಂಭವಾಯಿತು.

ವಿದೇಶದಲ್ಲಿರುವ ದೇವಾಲಯಗಳು: 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಯುಎಇಗೆ ಭೇಟಿ ನೀಡಿದಾಗ ಮೊದಲ ಬಾರಿಗೆ ಅಬುಧಾಬಿಯಲ್ಲಿ ಹಿಂದೂ ದೇವಾಲಯಕ್ಕೆ ಅಡಿಪಾಯ ಹಾಕಿದರು. 2015ರಲ್ಲಿ ಪ್ರಧಾನಿ ಮೋದಿಯವರು ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯುಎಇ ಸರ್ಕಾರವು ದೇವಾಲಯಕ್ಕೆ ಭೂಮಿ ಮಂಜೂರು ಮಾಡಿತ್ತು. 2019 ರಲ್ಲಿ ಪ್ರಧಾನಿ ಮೋದಿ ಅವರು ಬಹ್ರೇನ್‌ನಲ್ಲಿ 200 ವರ್ಷಗಳಷ್ಟು ಹಳೆಯದಾದ ದೇವಾಲಯದ ಬಹು ಮಿಲಿಯನ್ ಡಾಲರ್‌ಗಳ ನವೀಕರಣ ಯೋಜನೆಯನ್ನು ಪ್ರಾರಂಭಿಸಿದರು. ಭಗವಾನ್ ಶ್ರೀ ಕೃಷ್ಣನಿಗೆ ಸಮರ್ಪಿತವಾಗಿರುವ, ಬಹ್ರೇನ್‌ನ ಮನಾಮದಲ್ಲಿರುವ ಶ್ರೀನಾಥ್‌ಜಿ ದೇವಸ್ಥಾನವು ಪೂರ್ಣಗೊಂಡಾಗ ಮೂರು ಅಂತಸ್ತಿನ ಕಟ್ಟಡವಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ