8 Years Of Modi Government: ನರೇಂದ್ರ ಮೋದಿ ನೇತೃತ್ವ ಸರ್ಕಾರದ ಡಿಜಿಟಲ್ ಕ್ರಾಂತಿ; ಎಂಟು ವರ್ಷದಲ್ಲಿ ಎಷ್ಟೆಲ್ಲ ಬದಲಾವಣೆ!

Narendra Modi Govt. Schemes: ಕಳೆದ ಎಂಟು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರವು ಸಮಾಜದ ವಿವಿಧ ಸ್ತರಗಳಿಗೆ ನೇರವಾಗಿ ಪ್ರಯೋಜನವಾಗುವಂತೆ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ತಂದಿರುವ ಬದಲಾವಣೆಗಳ ವಿವರ ಇಲ್ಲಿದೆ.

8 Years Of Modi Government: ನರೇಂದ್ರ ಮೋದಿ ನೇತೃತ್ವ ಸರ್ಕಾರದ ಡಿಜಿಟಲ್ ಕ್ರಾಂತಿ; ಎಂಟು ವರ್ಷದಲ್ಲಿ ಎಷ್ಟೆಲ್ಲ ಬದಲಾವಣೆ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 25, 2022 | 12:16 PM

ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಮುಂದಾಳತ್ವದ ಎನ್​ಡಿಎ ಸರ್ಕಾರ ಅಧಿಕಾರ ಹಿಡಿದು 8 ವರ್ಷ ಪೂರ್ಣಗೊಂಡಿದೆ. 2014ನೇ ಇಸವಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರದಲ್ಲಿ ದೇಶದ ಡಿಜಿಟಲ್ ವ್ಯವಸ್ಥೆಯಲ್ಲೇ ಕ್ರಾಂತಿಕಾರಿ ಬದಲಾವಣೆಗಳಾಗಿವೆ. 2013-14ರ ವರೆಗೆ ಡಿಜಿಟಲ್ ಮೂಲಸೌಕರ್ಯದ ಕೊರತೆಯಿಂದಾಗಿ ಭಾರತದ ಪಾವತಿ ಎಕೋ ಸಿಸ್ಟಮ್ ಹೆಚ್ಚಾಗಿ ಭೌತಿಕ ವಿಧಾನಗಳಲ್ಲಿ – ನಗದು, ಚೆಕ್ ಇತ್ಯಾದಿಗಳಲ್ಲಿ ನಡೆಯುತ್ತಿತ್ತು; ಆ ಹೊತ್ತಿಗೆ ಇ-ಪೇಮೆಂಟ್​ ಆಯ್ಕೆಗಳು ಇದ್ದಾಗಲೂ ಆ ರೀತಿಯ ಬಳಕೆ ಹೆಚ್ಚಾಗಿತ್ತು. 2013-14ರಲ್ಲಿ ಭಾರತದಲ್ಲಿ ಕೇವಲ 220 ಕೋಟಿ ಇ-ವಹಿವಾಟುಗಳು ನಡೆದಿವೆ. ಇದು ವಿಶ್ವಾದ್ಯಂತ ಡಿಜಿಟಲ್ ವಹಿವಾಟಿನ ಒಂದು ಸಣ್ಣ ಭಾಗವಾಗಿತ್ತು. ದೊಡ್ಡ ಪ್ರಮಾಣದ ಭೌತಿಕ ವಿತ್ತೀಯ ವಹಿವಾಟುಗಳು ತೆರಿಗೆ ವಂಚನೆಗೆ ಸಹಾಯ ಮಾಡಿತ್ತು ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗೆ ಪರ್ಯಾಯವಾಗಿ ವಹಿವಾಟುಗಳನ್ನು ಸುಗಮಗೊಳಿಸಿತು. ಮೋದಿ ಸರ್ಕಾರವು ಅಧಿಕಾರ ವಹಿಸಿಕೊಂಡ ನಂತರ ಸಮಾಜದ ಎಲ್ಲ ವರ್ಗಗಳಿಗೆ ಹಣಕಾಸು ವಹಿವಾಟಿನ ಆದ್ಯತೆ ವಿಧಾನವನ್ನಾಗಿ ಮಾಡುವ ದೃಷ್ಟಿಯಿಂದ ಡಿಜಿಟಲ್ ಪಾವತಿ ಎಕೋ ಸಿಸ್ಟಮ್ ಅಭಿವೃದ್ಧಿಪಡಿಸಲು ಶೀಘ್ರವಾಗಿ ಮುನ್ನಡೆಸಿತು. ಈ ಪ್ರಯತ್ನದ ಫಲಿತಾಂಶಗಳು ಅದ್ಭುತವಾಗಿವೆ.

– ಎಲ್ಲ ಭಾರತೀಯರಿಗೆ ಡಿಜಿಟಲ್ ಪೇಮೆಂಟ್​ಗಳು ಈಗ ಅತ್ಯಂತ ಜನಪ್ರಿಯ ವಹಿವಾಟು ವಿಧಾನವಾಗಿದೆ.

– ಡಿಜಿಟಲ್ ಪೇಮೆಂಟ್​ಗಳನ್ನು ಸಕ್ರಿಯಗೊಳಿಸಲು ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆ ಇದೆ.

– 45 ಕೋಟಿಗೂ ಹೆಚ್ಚು ಜನ್ ಧನ್ ಖಾತೆಗಳು, UPI, ರುಪೇ ಕಾರ್ಡ್‌ಗಳಂತಹ ವಿಶ್ವಾಸಾರ್ಹ ಪಾವತಿ ಆಯ್ಕೆಗಳಿವೆ.

– ಭಾರತವು ಈಗ ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ಎಕೋ ಸಿಸ್ಟಮ್ ವ್ಯವಸ್ಥೆಯನ್ನು ಹೊಂದಿದ್ದು, ಇದನ್ನು 10 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ನಿರ್ಮಿಸಲಾಗಿದೆ.  2020-21ರಲ್ಲಿ ಭಾರತವು 5,554 ಕೋಟಿ ಡಿಜಿಟಲ್ ಪಾವತಿ ವಹಿವಾಟುಗಳನ್ನು ದಾಖಲಿಸಿದೆ. ಇದು 2021-22ರಲ್ಲಿ 7,422 ಕೋಟಿ ಡಿಜಿಟಲ್ ವಹಿವಾಟುಗಳಿಗೆ ಏರಿಕೆಯಾಗಿದೆ.

– 2020 ಮತ್ತು 2021ರಲ್ಲಿ, ಚೀನಾ, ದಕ್ಷಿಣ ಕೊರಿಯಾ ಮತ್ತು ಅಮೆರಿಕಾಗಿಂತ ಭಾರತವು ರಿಯಲ್​ ಟೈಮ್ ಆನ್‌ಲೈನ್ ಪಾವತಿಗಳಲ್ಲಿ ವಿಶ್ವಕ್ಕೇ ನಂಬರ್​ 1 ಆಗಿ ಹೊರಹೊಮ್ಮಿದೆ.

2020ರಲ್ಲಿ ಚೀನಾದ 25.4 ಬಿಲಿಯನ್‌ಗೆ ಹೋಲಿಸಿದರೆ ಭಾರತವು 25.5 ಬಿಲಿಯನ್ ರಿಯಲ್ ಟೈಮ್ ಡಿಜಿಟಲ್ ವಹಿವಾಟುಗಳನ್ನು ದಾಖಲಿಸಿದೆ

ಇದನ್ನೂ ಓದಿ: 8 Years of Modi Government ಎಂಟು ವರ್ಷಗಳ ಅಧಿಕಾರವಧಿಯಲ್ಲಿ ಜನಹಿತಕ್ಕಾಗಿ ಮೋದಿ ಸರ್ಕಾರ ತಂದ 8 ಪ್ರಮುಖ ಯೋಜನೆಗಳು

2021ರಲ್ಲಿ ಭಾರತವು 48.605 ಬಿಲಿಯನ್ ರಿಯಲ್ ಟೈಮ್ ಆನ್‌ಲೈನ್ ವಹಿವಾಟುಗಳನ್ನು ಮಾಡಿದೆ. ಇದು ಚೀನಾಕ್ಕಿಂತ 2.6 ಪಟ್ಟು ದೊಡ್ಡದಾಗಿದೆ.

2021ರಲ್ಲಿ ಶೇ 40ರಷ್ಟು ಜಾಗತಿಕ ರಿಯಲ್ ಟೈಮ್ ಆನ್‌ಲೈನ್ ವಹಿವಾಟುಗಳು ಭಾರತದಲ್ಲಿ ಆಗಿವೆ.

– ಅನೇಕ ಅಂದಾಜುಗಳು 2025ರ ವೇಳೆಗೆ ಭಾರತದಲ್ಲಿ ಪೂರ್ಣಗೊಂಡ ಒಟ್ಟು ವಹಿವಾಟುಗಳಲ್ಲಿ ಡಿಜಿಟಲ್ ಪಾವತಿಗಳ ಪಾಲು ಶೇ 71.7ಕ್ಕೆ ಬೆಳೆಯುತ್ತದೆ ಎಂದು ಹೇಳುತ್ತವೆ.

– ಈ ಆನ್‌ಲೈನ್ ಪಾವತಿಗಳಲ್ಲಿ ಹೆಚ್ಚಿನವು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ಮೂಲಕ 2016ರಲ್ಲಿ ಮೋದಿ ಸರ್ಕಾರವು ಹೊರತಂದಿದೆ

ಹಣಕಾಸು ವರ್ಷ 2018ರಲ್ಲಿ ಈ ವಹಿವಾಟುಗಳ ಮೌಲ್ಯವು ಕೇವಲ ರೂ. 1,098 ಶತಕೋಟಿ ಇದ್ದದ್ದು, ಇದು ಭಾರಿ ಪ್ರಮಾಣದಲ್ಲಿ ಬೆಳೆದು, ಹಣಕಾಸು ವರ್ಷ 2022ರಲ್ಲಿ 68,629 ಬಿಲಿಯನ್​ ರೂಪಾಯಿಗೆ ತಲುಪಿದೆ. ಯುಪಿಐ ಪ್ಲಾಟ್‌ಫಾರ್ಮ್‌ನಲ್ಲಿ 316 ಬ್ಯಾಂಕ್‌ಗಳು ಲೈವ್ ಆಗಿವೆ. 2022ರಲ್ಲಿ ಕೇವಲ ಏಪ್ರಿಲ್ ತಿಂಗಳಿನಲ್ಲಿ 5.58 ಬಿಲಿಯನ್ ಆನ್‌ಲೈನ್ ವಹಿವಾಟುಗಳು ರೂ. 9.83 ಟ್ರಿಲಿಯನ್ ಮೌಲ್ಯದ್ದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Rajeev Chandrasekhar: ಸೈಬರ್ ಭದ್ರತೆ ನಿರ್ದೇಶನದ ಫ್ರೀಕ್ವೆಂಟ್ಲಿ ಆಸ್ಕಡ್ ಕ್ವೆಶ್ಚನ್​ಗಳ ಬಿಡುಗಡೆ ಮಾಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್