Rajeev Chandrasekhar: ಸೈಬರ್ ಭದ್ರತೆ ನಿರ್ದೇಶನದ ಫ್ರೀಕ್ವೆಂಟ್ಲಿ ಆಸ್ಕಡ್ ಕ್ವೆಶ್ಚನ್​ಗಳ ಬಿಡುಗಡೆ ಮಾಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ಸೈಬರ್​ ಭದ್ರತೆಗೆ ಸಂಬಂಧಿಸಿದಂತೆ ನಿರ್ದೇಶನಗಳ ಮಹತ್ತರವಾದ FAQಗಳನ್ನು ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಬುಧವಾರದಂದು ದೆಹಲಿಯಲ್ಲಿ ಬಿಡುಗಡೆ ಮಾಡಿದರು.

Rajeev Chandrasekhar: ಸೈಬರ್ ಭದ್ರತೆ ನಿರ್ದೇಶನದ ಫ್ರೀಕ್ವೆಂಟ್ಲಿ ಆಸ್ಕಡ್ ಕ್ವೆಶ್ಚನ್​ಗಳ ಬಿಡುಗಡೆ ಮಾಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
Follow us
| Updated By: Srinivas Mata

Updated on:May 18, 2022 | 1:57 PM

ದೆಹಲಿ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ವತಿಯಿಂದ ಮೇ 18ನೇ ತಾರೀಕಿನ ಬುಧವಾರದಂದು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಸೈಬರ್ ಭದ್ರತೆ ನಿರ್ದೇಶನಗಳ ಬಗ್ಗೆ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಏಪ್ರಿಲ್ 28ರಂದು ವಿತರಿಸಿದ್ದ ಫ್ರೀಕ್ವೆಂಟ್ಲಿ ಆಸ್ಕಡ್ ಕ್ವೆಶ್ಚನ್​ಗಳನ್ನು MEiTS ರಾಜ್ಯ ಖಾತೆ ಸಚಿವರಾದ ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರು ಬಿಡುಗಡೆ ಮಾಡಿದರು. ಆ ನಂತರ ಮಾತನಾಡಿದ ಸಚಿವರು, ಸೈಬರ್ ಭದ್ರತೆ ಎಂಬುದು ಜಾಗತಿಕವಾಗಿಯೇ ಬಹಳ ಸಂಕೀರ್ಣವಾದ ವಿಚಾರ. ಆದ್ದರಿಂದ ಇಂಟರ್​ನೆಟ್​ ಸುರಕ್ಷಿತ ಎಂಬುದನ್ನು ನಾವು ಖಾತ್ರಿ ಪಡಿಸಬೇಕಾಗುತ್ತದೆ ಎಂದು ಹೇಳಿದರು.

ಡಿಜಿಟಲ್ ಆರ್ಥಿಕತೆ ಬೆಳೆಯುತ್ತಿದ್ದಂತೆ, ಡಿಜಿಟಲ್ ಆರ್ಥಿಕತೆ ಜತೆಗೆ ಅವಕಾಶಗಳು ಸಹ ಬೆಳೆಯುತ್ತಿವೆ. ಇದರ ಜತೆಗೆ ಯುನಿಕಾರ್ನ್​ಗಳ ಯಶಸ್ಸಿನ ಬಗ್ಗೆ ಮತ್ತೆ ಪ್ರತ್ಯೇಕವಾಗಿ ಹೇಳಬೇಕು ಎಂದಿಲ್ಲ. ಕಳೆದ ಕೆಲವು ಸಮಯದಿಂದ ಸರ್ಕಾರವು ಸಾಕಷ್ಟು ಹಣವನ್ನು, ಅಂದರೆ 2019-20ರಲ್ಲಿ 809 ಕೋಟಿ, 2022-23ರಲ್ಲಿ 550 ಕೋಟಿ ರೂಪಾಯಿಯನ್ನು ಸೈಬರ್ ಸುರಕ್ಷತೆಗೆ ಸಂಬಂಧಿಸಿದ ಮೂಲಸೌಕರ್ಯಕ್ಕಾಗಿ ಖರ್ಚು ಮಾಡಲಾಗಿದೆ. ಸೈಬರ್ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು 100 ಕೋಟಿಯಷ್ಟು ಖರ್ಚು ಮಾಡಲಾಗಿದೆ ಎಂದರು.

1360 ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದರಲ್ಲಿ 2,50,000ದಷ್ಟು ಮಂದಿ ಭಾಗವಹಿಸಿದ್ದರು ಎಂದರು. ಭಾರತದಲ್ಲಿ ನಂಬಿಕಸ್ತ, ಸುರಕ್ಷಿತ ಹಾಗೂ ಭದ್ರತೆ ಇರುವ ಇಂಟರ್​ನೆಟ್​ ಒದಗಿಸುವ ನಮ್ಮ ಗುರಿ. ಇದೇ ಮೊದಲ ಬಾರಿಗೆ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.

ಸೈಬರ್ ಭದ್ರತೆ ಉಲ್ಲಂಘನೆ ಕಂಡುಬಂದ ಆರು ಗಂಟೆಯೊಳಗೆ ಸರಿಪಡಿಸುವ ಬಗ್ಗೆ ಉತ್ತರ ನೀಡಿದ ರಾಜೀವ್ ಚಂದ್ರಶೇಖರ್, ಸುರಕ್ಷಿತ ಹಾಗೂ ಭದ್ರವಾದ ಇಂಟರ್​ನೆಟ್​ ಬಗ್ಗೆ ಗ್ರಾಹಕರಿಗೆ ಖಾತ್ರಿ ನೀಡಬೇಕಾದ ಜವಾಬ್ದಾರಿ ಇ-ಕಾಮರ್ಸ್​ ಕಂಪೆನಿಗಳೋ, ಬ್ಯಾಂಕ್ ಅಥವಾ ಸಂಬಂಧಪಟ್ಟವರ ಜವಾಬ್ದಾರಿಯೂ ಇರುತ್ತದೆ ಎಂದರು.

ಇನ್ನು ವಿಪಿಎನ್​ ಸೇವೆ ಒದಗಿಸುವವರ ಕುರಿತು ಮಾತನಾಡಿ, ನೀವು ವಿಪಿಎನ್ ಸೇವೆ ಒದಗಿಸುವವರು, ಡೇಟಾ ಸೆಂಟರ್ ಅಥವಾ ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುವವರಾಗಿದ್ದಲ್ಲಿ ಯಾರು ನಿಮ್ಮ ಸೇವೆಯನ್ನು ಬಳಸುತ್ತಿದ್ದಾರೆ ಹಾಗೂ ಯಾವುದಕ್ಕಾಗಿ ಬಳಸುತ್ತಿದ್ದಾರೆ ಎಂಬುದನ್ನು ತಿಳಿಯಬೇಕು ಎಂದು ಹೇಳಿದರು. ಒಂದು ವೇಳೆ ಈ ನಿಯಮಗಳು ನಮಗೆ ಅಲ್ಲ ಎನ್ನುವುದಾದರೆ, ಈ ಸ್ಥಳವೂ ನಿಮ್ಮ ಉದ್ಯಮಕ್ಕೆ ಅಲ್ಲ ಎಂದರು.

ಇದನ್ನೂ ಓದಿ: ಕರ್ನಾಟಕದ ಜಿಲ್ಲೆಗಳಲ್ಲಿ ಇಂಟರ್​ನೆಟ್​ ವೇಗ, ಸಂಪರ್ಕಕ್ಕೆ ಕಾರ್ಯಪಡೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ವೈಯಕ್ತಿಕ ಬಳಕೆದಾರರ ಖಾಸಗಿತನವನ್ನು ರಕ್ಷಿಸುವ ಉದ್ದೇಶಕ್ಕೆ ನಾವು ಡೇಟಾ ಸುರಕ್ಷತೆ ಕಾನೂನು ಮಾಡುದ್ದೇವೆ. ಕಾನೂನು ಅಡಿಯಲ್ಲಿ ಏನಾದರೂ ಉಲ್ಲಂಘನೆ ಮಾಡಿದಲ್ಲಿ ಅದಕ್ಕೆ ತಕ್ಕ ಕ್ರಮ ಕೈಗೊಳ್ಳಲಿದ್ದೇವೆ. ಸೈಬರ್ ಭದ್ರತೆ ಉಲ್ಲಂಘನೆ ಎಲ್ಲಿಂದ ಆಗಿದೆ ಎಂಬುದನ್ನು ಪರಿಶೀಲಿಸುತ್ತೇವೆ. ತಪ್ಪಿನ ಮೂಲ ಎಲ್ಲಿದೆ ಎಂಬುದನ್ನು ಗಮನಿಸುತ್ತೇವೆ. ನಿಯಮ ಉಲ್ಲಂಘನಟ ಆಗಿದ್ದಲ್ಲಿ 60 ದಿನದೊಳಗಾಗಿ ವರದಿ ಮಾಡಬೇಕು. ಹಾಗೆ ನೋಡಿದಲ್ಲಿ ಬಹಳ ಬೇಗ ವರದಿ ಮಾಡಬೇಕಾಗುತ್ತದೆ. ಇದಕ್ಕೆ ಹೆಚ್ಚಿನ ಮೂಲಸೌಕರ್ಯ ಬೇಕಾಗುವುದಿಲ್ಲ. ಆದರೂ ಹೆಚ್ಚಿನ ಸಮಯ ನೀಡಿದ್ದೇವೆ ಎಂದರು.

ಇಡೀ ಪತ್ರಿಕಾಗೋಷ್ಠಿಯಲ್ಲಿ ಇಂಗ್ಲಿಷ್​ನಲ್ಲಿ ಪ್ರಶ್ನೆಗಳು ಕೇಳಿಬಂದವು. ಕೊನೆಯಲ್ಲಿ ಮಲಯಾಳಂ, ಕನ್ನಡದಲ್ಲಿ ಕೇಳುವವರು ಇದ್ದೀರಾ ಎಂದು ಕೇಳುವ ಮೂಲಕ ಸಚಿವರು ಅಚ್ಚರಿಗೆ ಗುರಿ ಮಾಡಿದರು.

ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:55 pm, Wed, 18 May 22