AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Master Card: ಮಾಸ್ಟರ್‌ಕಾರ್ಡ್‌ನ ಹೊಸ ‘ಪೇ ವಿತ್ ಸ್ಮೈಲ್ ಅಥವಾ ವೇವ್’ ಪಾವತಿ ವ್ಯವಸ್ಥೆ ಬಗ್ಗೆ ನಿಮಗೆಷ್ಟು ಗೊತ್ತು?

ಮಾಸ್ಟರ್​ಕಾರ್ಡ್​ನ ಪೇ ವಿಥ್ ಸ್ಮೈಲ್ ಅಥವಾ ವೇವ್ ಬಗ್ಗೆ ನಿಮಗೆಷ್ಟು ಗೊತ್ತಿದೆ? ಅದರ ಬಗ್ಗೆ ವಿವರಗಳು ಈ ಲೇಖನದಲ್ಲಿ ದೊರೆಯಲಿದೆ.

Master Card: ಮಾಸ್ಟರ್‌ಕಾರ್ಡ್‌ನ ಹೊಸ 'ಪೇ ವಿತ್ ಸ್ಮೈಲ್ ಅಥವಾ ವೇವ್' ಪಾವತಿ ವ್ಯವಸ್ಥೆ ಬಗ್ಗೆ ನಿಮಗೆಷ್ಟು ಗೊತ್ತು?
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:May 25, 2022 | 7:23 PM

Share

ಕಳೆದ ವಾರ ಮಾಸ್ಟರ್​ ಕಾರ್ಡ್​ನ (Master Card) “ಸ್ಮೈಲ್ ಟು ಪೇ” ವ್ಯವಸ್ಥೆಯನ್ನು ಘೋಷಣೆ ಮಾಡಲಾಗಿದೆ. ಚೆಕ್​ಔಟ್​ನಲ್ಲಿ ಇದರಿಂದ ಗ್ರಾಹಕರ ಸಮಯ ಉಳಿತಾಯ ಆಗುತ್ತದೆ. ಇದನ್ನು ಬ್ರೆಜಿಲ್​ನಲ್ಲಿ ಪ್ರಯೋಗ ಮಾಡಲಾಗಿದೆ. ಇನ್ನು ಮುಂದೆ ಮಧ್ಯಪ್ರಾಚ್ಯ ಹಾಗೂ ಏಷ್ಯಾದಲ್ಲಿ ಇದರ ಪ್ರಯೋಗ ನಡೆಯಲಿದೆ. ಟಚ್​-ಲೆಸ್ ತಂತ್ರಜ್ಞಾನವು ವಹಿವಾಟು ವೇಗದಿಂದ ಮಾಡುವುದಕ್ಕೆ ನೆರವಾಗುತ್ತದೆ ಎಂಬುದು ಕಂಪೆನಿಯ ವಾದ. ಅಷ್ಟೇ ಅಲ್ಲ, ಇದರಿಂದ ಮಳಿಗೆಗಳಲ್ಲಿ ಸರತಿ ಸಾಲು ತಗ್ಗುತ್ತದೆ, ಭದ್ರತೆ ಹೆಚ್ಚುತ್ತದೆ ಮತ್ತು ಉದ್ಯಮದ ಸ್ವದ್ಛತೆ ಕೂಡ ಸುಧಾರಿಸುತ್ತದೆ. ಆದರೆ ಇದರಿಂದ ಗ್ರಾಹಕರ ಖಾಸಗಿತನ, ದತ್ತಾಂಶ ಸಂಗ್ರಹ, ಅಪರಾಧ ಅಪಾಯ ಮತ್ತು ಪೂರ್ವಗ್ರಹಗಳ ಬಗ್ಗೆ ಆತಂಕ ವ್ಯಕ್ತವಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಮಾಸ್ಟರ್​ಕಾರ್ಡ್​ನ ಬಯೋಮೆಟ್ರಿಕ್ ಚೆಕ್​ಔಟ್ ವ್ಯವಸ್ಥೆಯು ಗ್ರಾಹಕರಿಗೆ ಫೇಶಿಯಲ್ ರೆಕಗ್ನಿಷನ್ ಆಧಾರಿತ ಪಾವತಿಯನ್ನು ಒದಗಿಸುತ್ತದೆ, ಅದು ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯನ್ನು ಹಲವು ಥರ್ಡ್​ಪಾರ್ಟಿ ಕಂಪೆನಿಗಳ ಜತೆಗೆ ಮಾಸ್ಟರ್​ಕಾರ್ಡ್​ನ ಸ್ವಂತ ಪಾವತಿ ವ್ಯವಸ್ಥೆ ಜತೆ ಜೋಡಣೆ ಮಾಡುತ್ತದೆ. ಮಾಸ್ಟರ್​ಕಾರ್ಡ್ ವಕ್ತಾರರು ಹೇಳಿರುವಂತೆ, ಅದು ಈಗಾಗಲೇ ಎನ್​ಇಸಿ, ಪೇಫೇಸ್, ಔರಸ್, ಫ್ಯೂಜಿಟ್ಸು ಲಿಮಿಟೆಡ್, ಪಾಪ್​ಐಡಿ, ಪೇಬೈಫೇಸ್ ಇನ್ನಷ್ಟು ಪೂರೈಕೆದಾರರ ಜತೆಗೆ ಸಹಭಾಗಿತ್ವ ವಹಿಸಿದೆ. ಪೂರೈಕೆದಾರರು ಸ್ವತಂತ್ರ ಪ್ರಯೋಗಾಲಯ ಸರ್ಟಿಫಿಕೇಷನ್ ವಿರುದ್ಧ ಕಾರ್ಯಕ್ರಮ ಮಾನದಂಡಗಳನ್ನು ಪರಿಗಣಿಸಬೇಕಾಗುತ್ತದೆ- ಆದರೆ ಮಾನದಂಡಗಳ ಬಗೆಗಿನ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾಗಿಲ್ಲ.

ಮಾಧ್ಯಮ ವರದಿಗಳ ಪ್ರಕಾರ, ಗ್ರಾಹಕರು ಆ್ಯಪ್ ಇನ್​ಸ್ಟಾಲ್ ಮಾಡಿಕೊಳ್ಳಬೇಕು, ಅದು ಅವರ ಫೋಟೋ ಮತ್ತು ಪಾವತಿ ಮಾಹಿತಿಯನ್ನು ತೆಗೆದುಕೊಳ್ಳುತ್ತದೆ. ಈ ಮಾಹಿತಿಯನ್ನು ಥರ್ಡ್​ ಪಾರ್ಟಿ ಪೂರೈಕೆದಾರರ ಸರ್ವರ್​​ಗಳಲ್ಲಿ ಮಾಹಿತಿಗಳನ್ನು ಉಳಿಸಲಾಗುತ್ತದೆ ಮತ್ತು ಸಂಗ್ರಹಿಸಲಾಗುತ್ತದೆ. ಚೆಕ್​ಔಟ್​ನಲ್ಲಿ ಗ್ರಾಹಕರ ಮುಖವನ್ನು ಸಂಗ್ರಹಿಸಿದ ಡೇಟಾ ಜತೆಗೆ ಹೊಂದಿಸಲಾಗುತ್ತದೆ. ಒಂದು ಸಲ ಅವರ ಗುರುತು ದೃಢೀಕರಣ ಆದ ಮೇಲೆ ಹಣವು ತಾನಾಗಿಯೇ ಕಡಿತಗೊಳ್ಳುತ್ತದೆ. “ವೇವ್” ಆಯ್ಕೆ ಎಂಬುದು ಒಂದು ಸ್ವಲ್ಪ ಮಟ್ಟಿಗೆ ಟ್ರಿಕ್: ವೇವಿಂಗ್ ಆಗುವಾಗ ಗ್ರಾಹಕರು ಕ್ಯಾಮೆರಾ ನೋಡುತ್ತಾರೆ, ಕ್ಯಾಮೆರಾವು ಅವರ ಮುಖವನ್ನು ಸ್ಕ್ಯಾನ್ ಮಾಡುತ್ತದೆ- ಅವರ ಕೈನಲ್ಲ.

ಇದೇ ರೀತಿಯ ದೃಢೀಕರಣ ತಂತ್ರಜ್ಞಾನವು ಸ್ಮಾರ್ಟ್​ಫೋನ್​ಗಳಲ್ಲಿ (ಫೇಸ್​ ಐಡಿ) ಬಳಸಲಾಗುತ್ತದೆ ಮತ್ತು ಆಸ್ಟ್ರೇಲಿಯಾದ “ಸ್ಮಾರ್ಟ್​ಗೇಟ್ಸ್​” ಸೇರಿ ವಿಶ್ವದಾದ್ಯಂತ ಹಲವು ವಿಮಾನ ನಿಲ್ದಾಣಗಳಲ್ಲಿ ಇದೆ. ಇನ್ನು ಚೀನಾ ಬಯೋಮೆಟ್ರಿಕ್ ಚೆಕ್​ಔಟ್ ತಂತ್ರಜ್ಞಾನವನ್ನು 2017ರಲ್ಲೇ ಆರಂಭಿಸಿದೆ. ಆದರೆ ಇಂಥ ವ್ಯವಸ್ಥೆಯನ್ನು ಪಾಶ್ಚಾತ್ಯ ಮಾರುಕಟ್ಟೆಯಲ್ಲಿ ಮೊದಲಿಗೆ ತಂದಿದ್ದು ಮಾಸ್ಟರ್​ ಕಾರ್ಡ್. ಇದು “ಪೇ ವಿಥ್ ಯುವರ್ ಪಾಮ್” ವ್ಯವಸ್ಥೆ ಬಳಸುವ ಕ್ಯಾಷಿಯರ್ ಇಲ್ಲದ ಅಮೆಜಾನ್ ಗೋ ಮತ್ತು ಅಮೆರಿಕದಲ್ಲಿ ಹೋಲ್ ಫುಡ್ಸ್ ಬ್ರಿಕ್ಸ್ ಮತ್ತು ಮಾರ್ಟರ್ಸ್ ಜತೆಗೆ ಸ್ಪರ್ಧಿಸುತ್ತದೆ.

ನಮಗೆ ಗೊತ್ತಿಲ್ಲದ್ದು ಏನು

ಸೂಕ್ಷ್ಮವಾಗಿ ಮಾಸ್ಟರ್​ಕಾರ್ಡ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಫೇಶಿಯಲ್ ರೆಕಗ್ನಿಷನ್ ಎಷ್ಟು ನಿಖರ, ಬಯೋಮೆಟ್ರಿಕ್ ಡೇಟಾ ಇರುವ ಡೇಟಾ ಬೇಸ್​ಗೆ ಯಾರಿಗೆ ಸಂಪರ್ಕ ಇರುತ್ತದೆ ಎಂಬುದು ಗೊತ್ತಿಲ್ಲ. ಮಾಸ್ಟರ್​ಕಾರ್ಡ್ ವಕ್ತಾರರು ಮಾತನಾಡಿ, ಗ್ರಾಹಕರ ಡೇಟಾವನ್ನು ಸಂಬಂಧಿಸಿದ ಬಯೋಮೆಟ್ರಿಕ್ ಸೇವಾ ಪೂರೈಕರದಾರರ ಬಳಿ ಎನ್​ಕ್ರಿಪ್ಟೆಡ್ ಸ್ವರೂಪದಲ್ಲಿ ಸಂಗ್ರಹಿಸಲಾಗಿತ್ತದೆ. ತಮ್ಮ ನೋಂದಣಿಯನ್ನು ಗ್ರಾಹಕರು ಕೊನೆಗೊಳಿಸಲು ಬಯಸಿದಾಗ ತೆಗೆಯಲಾಗುವುದು. ಆದರೆ ಮಾಸ್ಟರ್​ಕಾರ್ಡ್​ಗೆ ಸಂಪರ್ಕ ಸಾಧ್ಯವಿಲ್ಲ ಎಂದಾದಲ್ಲಿ ಡೇಟಾವನ್ನು ಯಾರು ತೆಗೆಯುವುದಕ್ಕೆ ಸಾಧ್ಯ?

ಖಂಡಿತಾ, ಖಾಸಗಿತನದ ಸಂರಕ್ಷಣೆ ಎಂಬುದು ಪ್ರಮುಖ ಆತಂಕ. ಅದರಲ್ಲೂ ವಿಶೇಷವಾಗಿ ಸಾಮರ್ಥ್ಯ ಇರುವ ಹಲವು ಮಂದಿ ಥರ್ಡ್​ ಪಾರ್ಟಿ ಪೂರೈಕೆದಾರರು ಒಳಗೊಂಡಾಗ. ಆದರೆ ಬೆಳಕು ಮೂಡುವ ಅಂಶ ಏನೆಂದರೆ, ಮಾಸ್ಟರ್​ಕಾರ್ಡ್ ಗ್ರಾಹಕರು ಚೆಕ್​ಔಟ್ ವ್ಯವಸ್ಥೆಗೆ ಬಯೋಮೆಟ್ರಿಕ್ಸ್ ಬಳಸಬೇಕೋ ಬೇಡವೋ ಎಂಬ ಆಯ್ಕೆ ಗ್ರಾಹಕರಿಗೆ ಇರುತ್ತದೆ. ಆದರೆ ಇದು ರೀಟೇಲರ್​ಗಳ ವಿವೇಚನೆಗೆ ಬಿಟ್ಟಿದ್ದು. ಇದರ ಆಫರ್ ನೀಡಬಹುದು ಅಥವಾ ಪಾವತಿ ಆಯ್ಕೆಗೆ ಮಾತ್ರ ಎಕ್ಸ್​ಕ್ಲೂಸಿವ್ ಆಫರ್ ನೀಡಬಹುದು.

ಅದೇ ಫೇಸ್ ರೆಕಗ್ನಿಷನ್ ತಂತ್ರಜ್ಞಾನಗಳು ವಿಮಾನ ನಿಲ್ದಾಣ ಮತ್ತು ಪೊಲೀಸ್ ಬಳಸುತ್ತಾರೆ. ನಾವು ಏನಂದುಕೊಳ್ಳಬಹುದು ಅಂದರೆ, ಮಾಸ್ಟರ್ ಕಾರ್ಡ್ ಹಾಗೂ ಬಯೋಮೆಟ್ರಿಕ್ ಸೇವಾ ಪೂರೈಕೆದಾರರು ಒಟ್ಟುಗೂಡಿ, ಗ್ರಾಹಕರ ಸಮ್ಮತಿ ಪಡೆಯಬೇಕಾಗುತ್ತದೆ, ಅದು ಬಹುತೇಕ ಖಾಸಗಿತನದ ಕಾನೂನುಗಳ ಪ್ರಕಾರ. ಆದರೆ ಗ್ರಾಹಕರಿಗೆ ತಾವು ಯಾವುದಕ್ಕೆ ಸಹಮತಿ ನೀಡುತ್ತಾರೆ ಎಂಬುದು ಗೊತ್ತಿರುತ್ತದೆಯೇ? ಅಂತಿಮವಾಗಿ ಬಯೋಮೆಟ್ರಿಕ್ ಸೇವಾ ಪೂರೈಕೆದಾರರು ಮಾಸ್ಟರ್​ಕಾರ್ಡ್​ ಜತೆಯಾಗಿ, ಡೇಟಾ ಹೇಗೆ ಬಳಸಬೇಕು ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ. ಎಷ್ಟು ಸಮಯ ಸಂಗ್ರಹಿಸಲಾಗುತ್ತದೆ, ಎಲ್ಲಿ ಸಂಗ್ರಹಿಸುತ್ತಾರೆ, ಇದನ್ನು ಯಾರು ಸಂಪರ್ಕಿಸುತ್ತಾರೆ ಎಂಬುದನ್ನು ತೀರ್ಮಾನಿಸಲಾಗುತ್ತದೆ. ಪಾಲುದಾರರಾಗಿ ಯಾವುದು ಉತ್ತಮ ಎಂಬುದರ ಬಗ್ಗೆ ಮಾಸ್ಟರ್​ಕಾರ್ಡ್​ನಿಂದ ನಿರ್ಧರಿಸುತ್ತದೆ, ಕನಿಷ್ಠ ಗುಣಮಟ್ಟವನ್ನು ಅನುಸರಿಸಬೇಕಾಗುತ್ತದೆ. ​

ನಿಖರತೆ ಕೂಡ ಈ ತಂತ್ರಜ್ಞಾನದ ಸಮಸ್ಯೆ ಆಗಿದೆ. ಈ ಹಿಂದೆ ಫೆಸ್ ರೆಕಗ್ನಿಷನ್ ಈ ಹಿಂದೆ ಸವಾಲಾಗಿತ್ತು. ಆಲ್ಗರಿದಂಗಳ ತಪ್ಪು ಕೇವಲ ಶೇ 0.08ರಷ್ಟಿತ್ತು. ಎಂದು ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ಸ್ ಅಂಡ್ ಟೆಕ್ನಾಲಜಿಯ ಪರೀಕ್ಷೆಯಲ್ಲಿ ಗೊತ್ತಾಗಿದೆ. ಕೆಲವು ದೇಶಗಳಲ್ಲಿ ಬ್ಯಾಂಕ್​ಗಳು ತಮ್ಮ ಖಾತೆಗಳಿಗೆ ಲಾಗ್​ ಆನ್​ ಮಾಡುವುದಕ್ಕೆ ಇಇದು ಆರಾಮದಾಯಕವಾಗಿದೆ. ಆದರೂ ಮಾಸ್ಟರ್​ಕಾರ್ಡ್​ನ ಬಯೋಮೆಟ್ರಿಕ್​ನ ಚೆಕ್​ ಔಟ್​ ವ್ಯವಸ್ಥೆಯಲ್ಲಿ ತಂತ್ರಜ್ಞಾನವು ಅದೆಷ್ಟು ನಿಖರ ಎಂಬುದು ಗೊತ್ತಾಗಿಲ್ಲ. ಲ್ಯಾಬ್​ಗಳಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುವುದು ನಿಜ ಜೀವನದಲ್ಲಿ ಸಾಧ್ಯವಿಲ್ಲದೆ ಹೋಗಬಹುದು.

ಕೆಲವು ಕಡೆಗಳಲ್ಲಿ ಸಾಫ್ಟ್​ವೇರ್​ ವಿಫಲವಾಗಿ, ಫೇಶಿಯಲ್ ರೆಕಗ್ನಿಷನ್ ವಿಫಲ ಆಗಬಹುದು ಎನ್ನಲಾಗಿದೆ. ಒಂದು ವೇಳೆ ಅವಳಿಗಳನ್ನು ಗುರುತಿಸಲು ವಿಫಲವಾದರೆ, ಒಬ್ಬರ ಬದಲು ಮತ್ತೊಬ್ಬರನ್ನು ಗುರುತಿಸಿದರೆ ತಪ್ಪಾಗುತ್ತದೆ. ಎಷ್ಟೋ ಪ್ರಕರಣಗಳಲ್ಲಿ ತಂತ್ರಜ್ಞಾನ ಸುರಕ್ಷಿತ ಅಲ್ಲ ಎಂಬ ಭಾವನೆ ಇದೆ. ಲಕ್ಷಾಂತರ ಜನರ ಬಯೋಮೆಟ್ರಿಕ್ ಡೇಟಾ ಕಳುವಾಗುವ, ಹ್ಯಾಕ್ ಆಗುವ ಸಾಧ್ಯತೆಗಳಿವೆ. ತಪ್ಪಾದ ವ್ಯಕ್ತಿಗಳ ಬಳಿ ಡೇಟಾ ಇದ್ದಲ್ಲಿ ಅದು ಅಪಾಯಕ್ಕೆ ಸಿಲುಕಿದಂತೆಯೇ ಸರಿ. ಇದರಿಂದಲೇ ನಾನಾ ಬಗೆಯ ಅಪರಾಧ ಹಾಗೂ ಹಣಕಾಸು ವಂಚನೆ ನಡೆಯುತ್ತಿದೆ.

ಮಾಸ್ಟರ್​ಕಾರ್ಡ್​ ಹೇಳುವ ಪ್ರಕಾರ, ಶೇ 74ರಷ್ಟು ಗ್ರಾಹಕರು ಇಂಥ ತಂತ್ರಜ್ಞಾನ ಬಳಕೆ ಪರವಾಗಿದ್ದಾರೆ. ಆದರೆ ಬೇರೆ ಅಧ್ಯಯನ ಬೇರೆ ರೀತಿಯ ಫಲಿತಾಂಶಗಳನ್ನು ತೋರಿಸಿವೆ. ಉದಹಾರಣೆಗೆ, ಒಂದು ವರದಿಯ ಪ್ರಕಾರ, ಶೇ 69ರಷ್ಟು ಗ್ರಾಹಕರು ರೀಟೇಲ್ ಸೆಟ್ಟಿಂಗ್​ನಲ್ಲಿ ಫೇಸ್ ರೆಕಗ್ನಿಷನ್ ಬಳಸುವುದಕ್ಕೆ ಆರಾಮವಾಗಿಲ್ಲ ಎಂದಿದ್ದಾರೆ. ಮತ್ತು ಶೇ 16ರಷ್ಟು ಮಂದಿ ಮಾತ್ರ ನಂಬಿಕಸ್ತ ತಂತ್ರಜ್ಞಾನ ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:21 pm, Wed, 25 May 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!