Master Card: ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಮಾಸ್ಟರ್​ ಕಾರ್ಡ್​ಗೆ ನಿರ್ಬಂಧ ವಿಧಿಸಿದ ಆರ್​ಬಿಐ

ಅಗತ್ಯ ಪ್ರಮಾಣದ ಸಮಯ ನೀಡಿದರೂ ಮತ್ತು ಅವಕಾಶಗಳನ್ನು ನೀಡಲಾಗಿದ್ದರೂ ಪಾವತಿ ವ್ಯವಸ್ಥೆಯ ದತ್ತಾಂಶವನ್ನು ಶೇಖರಿಸಿಡುವ ನಿರ್ದೇಶನಗಳಿಗೆ ಬದ್ಧವಾಗಿಲ್ಲ ಎಂದು ಜುಲೈ 22ರಿಂದ ಭಾರತದಲ್ಲಿ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಮಾಸ್ಟರ್‌ಕಾರ್ಡ್‌ಗೆ ಆರ್‌ಬಿಐ ನಿರ್ಬಂಧ ವಿಧಿಸಿದೆ.

Master Card: ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಮಾಸ್ಟರ್​ ಕಾರ್ಡ್​ಗೆ ನಿರ್ಬಂಧ ವಿಧಿಸಿದ ಆರ್​ಬಿಐ
ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Srinivas Mata

Updated on: Jul 14, 2021 | 7:51 PM

ಸ್ಥಳೀಯ ಡೇಟಾ ಸ್ಟೋರೇಜ್ ಮಾನದಂಡಗಳನ್ನು ಪಾಲಿಸದ ಕಾರಣಕ್ಕೆ ಜುಲೈ 22ರಿಂದ ಭಾರತದಲ್ಲಿ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಮಾಸ್ಟರ್‌ಕಾರ್ಡ್‌ಗೆ ಆರ್‌ಬಿಐ ನಿರ್ಬಂಧ ವಿಧಿಸಿದೆ. ಅಗತ್ಯ ಪ್ರಮಾಣದ ಸಮಯ ನೀಡಿದರೂ ಮತ್ತು ಅವಕಾಶಗಳನ್ನು ನೀಡಲಾಗಿದ್ದರೂ ಪಾವತಿ ವ್ಯವಸ್ಥೆಯ ದತ್ತಾಂಶವನ್ನು ಶೇಖರಿಸಿಡುವ ನಿರ್ದೇಶನಗಳಿಗೆ ಈ ಸಂಸ್ಥೆಯು ಬದ್ಧವಾಗಿಲ್ಲ ಎಂಬುದು ಕಂಡುಬಂದಿದೆ ಎಂದು ಆರ್‌ಬಿಐ ತಿಳಿಸಿದೆ. ಈ ಆದೇಶವು ಮಾಸ್ಟರ್‌ಕಾರ್ಡ್‌ನ ಈಗಿರುವ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ನಿರ್ದೇಶನಗಳಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಕಾರ್ಡ್ ನೀಡುವ ಬ್ಯಾಂಕ್​ಗಳು ಮತ್ತು ಬ್ಯಾಂಕೇತರ ಸಂಸ್ಥೆಗಳಿಗೆ ಮಾಸ್ಟರ್ ಕಾರ್ಡ್ ಸಲಹೆ ನೀಡಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪಾವತಿ ಮತ್ತು ತೀರುವಳಿ ವ್ಯವಸ್ಥೆ ಕಾಯ್ದೆ 2007 (ಪಿಎಸ್‌ಎಸ್ ಕಾಯ್ದೆ) ಸೆಕ್ಷನ್ 17ರ ಅಡಿಯಲ್ಲಿ ಆರ್‌ಬಿಐಗೆ ಇರುವ ಅಧಿಕಾರವನ್ನು ಚಲಾಯಿಸಿ ಮೇಲ್ವಿಚಾರಣೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಮಾಸ್ಟರ್‌ಕಾರ್ಡ್ ಎನ್ನುವುದು ಪಿಎಸ್‌ಎಸ್ ಕಾಯ್ದೆಯಡಿ ದೇಶದಲ್ಲಿ ಕಾರ್ಡ್ ನೆಟ್‌ವರ್ಕ್ ನಿರ್ವಹಿಸಲು ಅಧಿಕಾರ ಹೊಂದಿರುವ ಪಾವತಿ ವ್ಯವಸ್ಥೆ ಆಪರೇಟರ್ ಆಗಿದೆ. ಏಪ್ರಿಲ್ 6, 2018ರ ದಿನದಂದು ಆರ್‌ಬಿಐ ಸುತ್ತೋಲೆಯ ಪ್ರಕಾರ, ಆಪರೇಟರ್​ಗಳು ನಿರ್ವಹಿಸುವ ಪಾವತಿ ವ್ಯವಸ್ಥೆಗಳಿಗೆ ಸಂಬಂಧಿಸಿದ ಸಂಪೂರ್ಣ ಡೇಟಾವನ್ನು ಭಾರತದಲ್ಲಿ ಮಾತ್ರ ಸಂಗ್ರಹಿಸುತ್ತಿರುವುದಾಗಿ ಎಲ್ಲ ಸಿಸ್ಟಮ್ ಪೂರೈಕೆದಾರರಿಗೆ ಆರು ತಿಂಗಳ ಅವಧಿಯಲ್ಲಿ ಖಚಿತಪಡಿಸುವಂತೆ ನಿರ್ದೇಶಿಸಲಾಗಿತ್ತು. .

ಇದರ ಜತೆಗೆ ಆರ್​ಬಿಐ ನಿಯಮಾವಳಿಗೆ ನಿಯಮಾವಳಿಗೆ ತಕ್ಕಂತೆ ನಡೆದುಕೊಳ್ಳುತ್ತಿರುವುದಾಗಿ ವರದಿ ಮಾಡಬೇಕಾಗಿತ್ತು ಮತ್ತು ಸಿಇಆರ್​ಟಿ-ಇನ್ ಎಂಪನೇಲ್ಡ್ ಆಡಿಟರ್ ನಡೆಸಿದ ಬೋರ್ಡ್-ಅನುಮೋದಿತ ಸಿಸ್ಟಮ್ ಆಡಿಟ್ ವರದಿಯನ್ನು ಅದರಲ್ಲಿ ನಿರ್ದಿಷ್ಟಪಡಿಸಿದ ಸಮಯದೊಳಗೆ ಸಲ್ಲಿಸಬೇಕಾಗಿತ್ತು. ಪೇಮೆಂಟ್ ಸಿಸ್ಟಮ್​ನಲ್ಲಿ ಡೇಟಾ ಸಂಗ್ರಹ ವ್ಯವಸ್ಥೆಯ ನಿಯಮಾವಳಿಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಈ ವರ್ಷದ ಏಪ್ರಿಲ್​ನಲ್ಲಿ ಆರ್​ಬಿಐನಿಂದ ಅಮೆರಿಕನ್ ಎಕ್ಸ್ ಪ್ರೆಸ್ ಬ್ಯಾಂಕಿಂಗ್ ಕಾರ್ಪ್ ಮತ್ತು ಡೈನರ್ಸ್ ಕ್ಲಬ್ ಇಂಟರ್​ನ್ಯಾಷನಲ್ ಲಿಮಿಟೆಡ್ ಮೇಲೆ ಹೊಸ ದೇಶೀಯ ಗ್ರಾಹಕರನ್ನು ತಮ್ಮ ಕಾರ್ಡ್ ನೆಟ್​ವರ್ಕ್​ಗಳಿಗೆ ಮೇ 1, 2021ರಿಂದ ಸೇರ್ಪಡೆ ಮಾಡಿಕೊಳ್ಳದಂತೆ ನಿರ್ಬಂಧಗಳನ್ನು ವಿಧಿಸಿತ್ತು. ಈ ಆದೇಶ ಕೂಡ ಅದಾಗಲೇ ಗ್ರಾಹಕರಾಗಿರುವವರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಲಾಗಿತ್ತು.

ಏಪ್ರಿಲ್ 6ನೇ ತಾರೀಕಿನ ಸುತ್ತೋಲೆ ಏನು ಹೇಳುತ್ತದೆ? ಏಪ್ರಿಲ್ 6, 2018ರಂದು ತಿಳಿಸಿರುವ ಪ್ರಕಾರ, ಎಲ್ಲಾ ಸಿಸ್ಟಮ್ ಪೂರೈಕೆದಾರರು ಭಾರತದಲ್ಲಿ ಪಾವತಿ ಡೇಟಾವನ್ನು ಸಂಗ್ರಹಿಸುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ, ದೇಶದ ಪೇಮೆಂಟ್ ಎಕೋ ಸಿಸ್ಟಮ್​ನಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದೆ. ಅಂತಹ ವ್ಯವಸ್ಥೆಗಳು ಹೆಚ್ಚು ತಂತ್ರಜ್ಞಾನ ಅವಲಂಬಿತವಾಗಿವೆ. ಆದ್ದರಿಂದ ಸುರಕ್ಷತೆ ಮತ್ತು ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ನಿರಂತರ ಆಧಾರದ ಮೇಲೆ ಇದು ಅತ್ಯುತ್ತಮವಾಗಿದೆ ಎಂದು ಆರ್​ಬಿಐ ಹೇಳಿದೆ. “ಉತ್ತಮ ಮೇಲ್ವಿಚಾರಣೆಯನ್ನು ಖಾತ್ರಿ ಪಡಿಸಲು ಈ ಸಿಸ್ಟಮ್ ಪೂರೈಕೆದಾರರೊಂದಿಗೆ ಮತ್ತು ಅವರ ಸೇವಾ ಪೂರೈಕೆದಾರರು/ಮಧ್ಯವರ್ತಿಗಳು/ ಥರ್ಡ್ ಪಾರ್ಟಿ ಪೂರೈಕೆದಾರರರು ಮತ್ತು ಪಾವತಿ ಪರಿಸರ ವ್ಯವಸ್ಥೆಯಲ್ಲಿನ ಇತರ ಘಟಕಗಳೊಂದಿಗೆ ಸಂಗ್ರಹಿಸಲಾದ ಡೇಟಾಗೆ ಅಡೆತಡೆಯಿಲ್ಲದ ಮೇಲ್ವಿಚಾರಣೆ ಸಂಪರ್ಕವನ್ನು ಹೊಂದಿರುವುದು ಬಹಳ ಮುಖ್ಯ,” ಎಂದು ಆರ್‌ಬಿಐ ಹೇಳಿದೆ.

ಆ ನಂತರ ಎಲ್ಲಾ ಸಿಸ್ಟಮ್ ಪೂರೈಕೆದಾರರು ತಾವು ನಿರ್ವಹಿಸುವ ಪಾವತಿ ವ್ಯವಸ್ಥೆಗಳಿಗೆ ಸಂಬಂಧಿಸಿದ ಸಂಪೂರ್ಣ ಡೇಟಾವನ್ನು ಭಾರತದಲ್ಲಿ ಮಾತ್ರ ಸಂಗ್ರಹಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಈ ದತ್ತಾಂಶವು ಸಂಪೂರ್ಣ ವಹಿವಾಟು ವಿವರಗಳು, ಸಂಗ್ರಹಿಸಿದ ಮಾಹಿತಿ, ಸಂದೇಶ ಮತ್ತು ಪಾವತಿ ಸೂಚನೆಯ ಭಾಗವಾಗಿ ಸಂಸ್ಕರಿಸಿದ ಮಾಹಿತಿ ಒಳಗೊಂಡಿರಬೇಕು ಎಂದು ಆರ್‌ಬಿಐ ಹೇಳಿದೆ. ವಿದೇಶಿ ವಹಿವಾಟಿಗೆ ಸಂಬಂಧಿಸಿದಂತೆ ಯಾವುದಾದರೂ ವಿವರ ಇದ್ದರೆ, ಡೇಟಾ ಅಗತ್ಯವಿದ್ದರೆ ವಿದೇಶದಲ್ಲಿ ಕೂಡ ಸಂಗ್ರಹಿಸಬಹುದು ಎಂದು ಆರ್​ಬಿಐ ಹೇಳಿದೆ.

ಇದನ್ನೂ ಓದಿ: ಎಸ್​ಬಿಐ ಸೇರಿದಂತೆ ಒಟ್ಟು 14 ಬ್ಯಾಂಕ್​ಗಳಿಗೆ ಒಂದೇ ದಿನದಲ್ಲಿ 50 ಲಕ್ಷದಿಂದ 2 ಕೋಟಿ ತನಕ ದಂಡ ವಿಧಿಸಿದ ಆರ್​ಬಿಐ

(Master Card company barred from RBI to add new customers in India from July 22nd. Here is the reason know why?)

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!