AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Infosys Q1 Results: ಶೇ 22.7ರಷ್ಟು ಹೆಚ್ಚಳವಾಗಿ ರೂ. 5195 ಕೋಟಿ ತಲುಪಿದ ಇನ್ಫೋಸಿಸ್ FY22 ಮೊದಲ ತ್ರೈಮಾಸಿಕ ಲಾಭ

ಕಳೆದ ವರ್ಷದ ಏಪ್ರಿಲ್​ನಿಂದ ಜೂನ್ ಅವಧಿಯಲ್ಲಿ ಇನ್ಫೋಸಿಸ್ ಕಂಪೆನಿಯು 4233 ಕೋಟಿ ರೂಪಾಯಿ ಲಾಭವನ್ನು ಗಳಿಸಿತ್ತು ಅದಕ್ಕೆ ಹೋಲಿಸಿದಲ್ಲಿ ವರ್ಷದಿಂದ ವರ್ಷಕ್ಕೆ ಶೇ 22.7ರಷ್ಟು ಹೆಚ್ಚು ಲಾಭವನ್ನು ಕಂಪೆನಿ ಗಳಿಸಿದೆ.

Infosys Q1 Results: ಶೇ 22.7ರಷ್ಟು ಹೆಚ್ಚಳವಾಗಿ ರೂ. 5195 ಕೋಟಿ ತಲುಪಿದ ಇನ್ಫೋಸಿಸ್ FY22 ಮೊದಲ ತ್ರೈಮಾಸಿಕ ಲಾಭ
ಇನ್ಫೋಸಿಸ್ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on:Jul 14, 2021 | 5:05 PM

Share

ದೇಶದ ಎರಡನೇ ಅತಿ ದೊಡ್ಡ ಸಾಫ್ಟ್​ವೇರ್ ಸೇವೆ ಒದಗಿಸುವ ಕಂಪೆನಿ, ಬೆಂಗಳೂರು ಮೂಲದ ಇನ್ಫೋಸಿಸ್ ಜುಲೈ 14ರಂದು FY22 ಮೊದಲ ತ್ರೈ,ಮಾಸಿಕವಾದ ಏಪ್ರಿಲ್​ನಿಂದ ಜೂನ್​ ತನಕದ ಹಣಕಾಸು ಫಲಿತಾಂಶವನ್ನು ಪ್ರಕಟಿಸಿದೆ. ಕನ್ಸಾಲಿಡೇಟೆಡ್ ಲಾಭ 5,195 ಕೋಟಿ ರೂಪಾಯಿಯನ್ನು ಗಳಿಸಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ ಕಂಪೆನಿಯು 5076 ಕೋಟಿ ರೂಪಾಯಿಯನ್ನು ಗಳಿಸಿತ್ತು. ರೂಪಾಯಿ ಲೆಕ್ಕದಲ್ಲಿ ಕನ್ಸಾಲಿಡೇಟೆಡ್ ಆದಾಯ 27,896 ಕೋಟಿ ರೂಪಾಯಿ ಗಳಿಸಿದ್ದರೆ, 2021ರ ಮಾರ್ಚ್ ತ್ರೈಮಾಸಿಕದಲ್ಲಿ 26,311 ಕೋಟಿ ಗಳಿಸಿತ್ತು. ಸಿಎನ್​ಬಿಸಿ-ಟಿವಿ18 ತಜ್ಞರ ಅಭಿಮತದ ಪ್ರಕಾರ, ಜೂನ್ ತ್ರೈಮಾಸಿಕದಲ್ಲಿ ಲಾಭ 5402 ಕೋಟಿ ರೂ. ಮತ್ತು ಆದಾಯ 27,718 ಕೋಟಿ ರೂ. ನಿರೀಕ್ಷೆ ಮಾಡಲಾಗಿತ್ತು. ಅಂದ ಹಾಗೆ ಜುಲೈ 14ನೇ ತಾರೀಕಿನ ದಿನದ ಕೊನೆಗೆ ಇನ್ಫೋಸಿಸ್ ಷೇರಿನ ಬೆಲೆ ಶೇ 2.07ರಷ್ಟು ಏರಿಕೆಯಾಗಿ, ರೂ. 1576.90ರಲ್ಲಿ ವಹಿವಾಟು ಮುಗಿದೆ. ಇನ್ನು 2021ನೇ ಇಸವಿಯಲ್ಲಿ ಇಲ್ಲಿಯ ತನಕ ಶೇ 26ರಷ್ಟು ಹೆಚ್ಚಳ ದಾಖಲಿಸಿದೆ.

ಈ ಹಣಕಾಸು ವರ್ಷದಲ್ಲಿ 35,000 ಕಾಲೇಜು ಪದವೀಧರರನ್ನು ನೇಮಕ ಮಾಡಿಕೊಳ್ಳಲು ಕಂಪೆನಿ ಘೋಷಿಸಿದೆ. “ಡಿಜಿಟಲ್ ಪ್ರತಿಭೆಗಳ ಬೇಡಿಕೆ ಸ್ಫೋಟಗೊಳ್ಳುತ್ತಿದ್ದಂತೆ, ಉದ್ಯಮದಲ್ಲಿ ಹೆಚ್ಚುತ್ತಿರುವ ಕೆಲಸ ಬಿಡುವ ಮನೋಭಾವವು ಸವಾಲನ್ನು ಒಡ್ಡುತ್ತದೆ. ಕಾಲೇಜು ಪದವೀಧರರ ನೇಮಕಾತಿ ಕಾರ್ಯಕ್ರಮವನ್ನು FY22ಕ್ಕೆ 35,000 ಕ್ಕೆ ವಿಸ್ತರಿಸುವ ಮೂಲಕ ಈ ಬೇಡಿಕೆಯನ್ನು ಈಡೇರಿಸಲು ನಾವು ಯೋಜಿಸಿದ್ದೇವೆ,” ಎಂದು ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ರಾವ್ ಹೇಳಿದ್ದಾರೆ.

ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಕಂಪೆನಿಯು 2.6 ಬಿಲಿಯನ್ ಅಮೆರಿಕನ್ ಮೌಲ್ಯದ ದೊಡ್ಡ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ತ್ರೈಮಾಸಿಕದಲ್ಲಿ ಆಪರೇಷನಲ್ ಮಾರ್ಜಿನ್ ಶೇ 23.7 ರಷ್ಟಿದ್ದು, ಹಣದ ಹರಿವು ವರ್ಷಕ್ಕೆ ಶೇ 18.5ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇನ್ಫೋಸಿಸ್ ಕಂಪೆನಿಯು 4233 ಕೋಟಿ ರೂಪಾಯಿ ಲಾಭವನ್ನು ಗಳಿಸಿತ್ತು ಅದಕ್ಕೆ ಹೋಲಿಸಿದಲ್ಲಿ ವರ್ಷದಿಂದ ವರ್ಷಕ್ಕೆ ಶೇ 22.7ರಷ್ಟು ಹೆಚ್ಚು ಲಾಭವನ್ನು ಕಂಪೆನಿ ಗಳಿಸಿದೆ.

ಇದನ್ನೂ ಓದಿ: Infosys- TCS recruitment 2021: ಇನ್ಫೋಸಿಸ್, ಟಿಸಿಎಸ್​ನಿಂದ 66,000 ಮಂದಿ ನೇಮಕಾತಿ ನಿರೀಕ್ಷೆ

(Bengaluru based software major Infosys announced FY22 Q1 results consolidated profit of Rs 5195 crore. Here is the details)

Published On - 5:05 pm, Wed, 14 July 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ