AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GR Infra IPO Allotment: ಜಿಆರ್​ ಇನ್​ಫ್ರಾ ಐಪಿಒ ವಿತರಣೆ ಅರ್ಜಿಯ ಸ್ಥಿತಿ ತಿಳಿದುಕೊಳ್ಳುವ ಹಂತಹಂತ ಮಾಹಿತಿ ಇಲ್ಲಿದೆ

ಜಿಆರ್​ ಇನ್​ಫ್ರಾಪ್ರಾಜೆಕ್ಟ್ಸ್​ ಐಪಿಒಗೆ ಅಪ್ಲೈ ಮಾಡಿದವರು ಷೇರು ವಿತರಣೆಯ ಅಂತಿಮ ಮಾಹಿತಿಗಾಗಿ ಕಾಯುತ್ತಿದ್ದಾರೆ. ಎರಡು ರೀತಿಯಲ್ಲಿ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು. ಆ ಬಗ್ಗೆ ವಿವರಗಳು ಇಲ್ಲಿವೆ.

GR Infra IPO Allotment: ಜಿಆರ್​ ಇನ್​ಫ್ರಾ ಐಪಿಒ ವಿತರಣೆ ಅರ್ಜಿಯ ಸ್ಥಿತಿ ತಿಳಿದುಕೊಳ್ಳುವ ಹಂತಹಂತ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Jul 14, 2021 | 1:52 PM

Share

ಜಿಆರ್​ ಇನ್​ಫ್ರಾಪ್ರಾಜೆಕ್ಟ್ಸ್​ ಐಪಿಒ(GR Infra IPO) ನೂರಕ್ಕೂ ಹೆಚ್ಚು ಪಟ್ಟು (102.58 ಪಟ್ಟು) ಸಬ್​ಸ್ಕ್ರೈಬ್ ಆಗಿದೆ. ಇದೀಗ ಐಪಿಒ ಷೇರುಗಳ ವಿತರಣೆ ದಿನಾಂಕವಾದ ಜುಲೈ 14, 2021ರ ಕಡೆಗೆ ಎಲ್ಲರ ಕಣ್ಣು ನೆಟ್ಟಿದೆ. ಐಪಿಒಗೆ ಅಪ್ಲೈ ಮಾಡಿದವರು ಷೇರು ವಿತರಣೆಯ ಅಂತಿಮ ಮಾಹಿತಿಗಾಗಿ ಕಾಯುತ್ತಿದ್ದಾರೆ. ತಜ್ಞರ ಅಭಿಪ್ರಾಯದ ಪ್ರಕಾರ, ಪ್ರಬಲವಾದ ಲಿಸ್ಟಿಂಗ್ ನಿರೀಕ್ಷಿಸುತ್ತಿದ್ದಾರೆ. 963 ಕೋಟಿ ರೂಪಾಯಿ ಈ ವಿತರಣೆಯು ಸಂಪೂರ್ಣ ಆಫರ್​ ಫಾರ್ ಸೇಲ್ (OFS) ಆಗಿದೆ. ಷೇರುದಾರರು ಕಂಪೆನಿಯಲ್ಲಿ ತಮ್ಮ ಪಾಲನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಂಗ್ರಹವಾಗುವ ಸಂಪೂರ್ಣ ಮೊತ್ತವು ಕಂಪೆನಿಯ ಷೇರುದಾರರಿಗೆ ಹೋಗುತ್ತದೆ. ಅಂದ ಹಾಗೆ ಕ್ಲೀನ್ ಸೈನ್ಸ್ ಐಪಿಒ ಕೂಡ ಅತ್ಯುತ್ತಮ ಸ್ಪಂದನೆ ಪಡೆದಿದೆ. ಅರ್ಜಿ ಕರೆದಿದ್ದಕ್ಕಿಂತ 93.41 ಪಟ್ಟು ಹೆಚ್ಚು ಬೇಡಿಕೆ ಬಂದಿದೆ. ಮಾಹಿತಿಯ ಪ್ರಕಾರ, ಕ್ಲೀನ್ ಸೈನ್ಸ್ ಐಪಿಒ ವಿತರಣೆ ದಿನಾಂಕ ಕೂಡ ಜುಲೈ 14, 2021 ಆಗಿದೆ.

ಜಿಆರ್​ ಇನ್​ಫ್ರಾ ಐಪಿಒ ವಿತರಣೆ ದಿನಾಂಕ ರೆಡ್ ಹೈರಿಂಗ್ ಪ್ರಾಸ್ಪೆಕ್ಟಸ್ (RHP) ಪ್ರಕಾರ, ಜಿಆರ್​ ಇನ್​ಫ್ರಾ ಐಪಿಒ ಷೇರು ವಿತರಣೆ ದಿನಾಂಕ ಜುಲೈ 14, 2021ಕ್ಕೆ ಅಂತಿಮವಾಗುತ್ತದೆ. ಯಾರಿಗೆ ಷೇರು ವಿತರಣೆ ಆಗಿಲ್ಲವೋ ಅಂಥವರಿಗೆ 15ನೇ ತಾರೀಕಿಗೆ ಹಣ ಮರುಪಾವತಿ ಶುರುವಾಗುತ್ತದೆ. 16ಕ್ಕೆ ಡಿಮ್ಯಾಟ್​ ಖಾತೆಗೆ ಷೇರುಗಳು ಬರುತ್ತವೆ. ಬಿಎಸ್​ಇ ವೆಬ್​ಸೈಟ್​ಗೆ (bseindia.com/investors/appli_check.aspx) ಅಥವಾ ಅಧಿಕೃತ ರಿಜಿಸ್ಟ್ರಾರ್ ವೆಬ್ ಲಿಂಕ್ kosmic.kfintech.com/ipostatus/ ಲಾಗ್ ಇನ್ ಆಗಿ, ಷೇರು ವಿತರಣೆಯ ಸ್ಥಿತಿಯನ್ನು ತಿಳಿದುಕೊಳ್ಳಬಹುದು.

GR Infra IPO ವಿತರಣೆ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ? ಎರಡು ರೀತಿಯಲ್ಲಿ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು. ಒಂದೋ ಬಿಎಸ್​ಇ ಲಿಂಕ್​ ಅಥವಾ KFintech ನೇರ ಲಿಂಕ್ ಲಾಗ್ ಇನ್ ಆಗಿ ಸ್ಥಿತಿಯನ್ನು ತಿಳಿಯಬಹುದು. ಕೆಲವು ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಅರ್ಜಿಯ ಸ್ಥಿತಿಗತಿ ತಿಳಿಯುತ್ತದೆ.

KFintech ಮೂಲಕ ಐಪಿಒ ವಿತರಣೆ ಸ್ಥಿತಿಯನ್ನು ತಿಳಿಯುವ ಹಂತ-ಹಂತವಾದ ವಿವರಣೆ ಇಲ್ಲಿದೆ: 1. KFintech ವೆಬ್​ಸೈಟ್​ಗೆ ಲಾಗ್​ ಇನ್​ ಆಗಿ kosmic.kfintech.com/ipostatus/ ತೆರಳಬೇಕು. 2. ಐಪಿಒ ಆಯ್ಕೆ ಮಾಡಿಕೊಳ್ಳಿ 3. ಅರ್ಜಿಯ ಸಂಖ್ಯೆ/ಡಿಪಿಐಡಿ/ ಗ್ರಾಹಕ ಐಡಿ/PAN (ಇಲ್ಲಿ ಅರ್ಜಿ ಸಂಖ್ಯೆಯನ್ನು ತೆಗೆದುಕೊಳ್ಳಲಾಗಿದೆ) 4. ಅರ್ಜಿಯ ಸಂಖ್ಯೆಯನ್ನು ನಮೂದಿಸಿ 5. Captcha Code ನಮೂದಿಸಿ 6. Submit ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. 7. ಐಪಿಒ ಅರ್ಜಿಯ ಸ್ಥಿತಿಯು ತೆರೆಯ ಮೇಲೆ ಕಾಣಿಸುತ್ತದೆ.

ಜಿಆರ್​ ಇನ್​ಫ್ರಾಪ್ರಾಜೆಕ್ಟ್ಸ್ ಐಪಿಒ ವಿತರಣೆ ಸ್ಥಿತಿಯನ್ನು ಬಿಎಸ್​ಇ ವೆಬ್​ಸೈಟ್​ ಮೂಲಕ ಪರಿಶೀಲಿಸುವುದು ಹೇಗೆ? 1. ನೇರ ಬಿಎಸ್‌ಇ ಲಿಂಕ್‌ನಲ್ಲಿ ಲಾಗಿನ್ ಮಾಡಿ – bseindia.com/investors/appli_check.aspx 2. ಈಕ್ವಿಟಿಯನ್ನು ಆಯ್ಕೆ ಮಾಡಿ 3. ಇಶ್ಯೂ ಹೆಸರನ್ನು ನಮೂದಿಸಿ 4. ಅಪ್ಲಿಕೇಶನ್ ಸಂಖ್ಯೆಯನ್ನು ನಮೂದಿಸಿ 5. ಪ್ಯಾನ್ ಸಂಖ್ಯೆಯನ್ನು ನಮೂದಿಸಿ 6. “A’m not a robot” ಎಂಬುದರ ಎದುರಿನ ಪಟ್ಟಿಯಲ್ಲಿ ಕ್ಲಿಕ್ ಮಾಡಿ 7. “Search” ಆಯ್ಕೆಯನ್ನು ಕ್ಲಿಕ್ ಮಾಡಿ; ಮತ್ತು 8. ಕಂಪ್ಯೂಟರ್ ಮಾನಿಟರ್ ಅಥವಾ ಸ್ಮಾರ್ಟ್​ಫೋನ್ ಪರದೆಯಲ್ಲಿ ಐಪಿಒ ಅಪ್ಲಿಕೇಶನ್ ಸ್ಥಿತಿ ಲಭ್ಯವಾಗುತ್ತದೆ.

ಜಿಆರ್ ಇನ್​ಫ್ರಾ ಐಪಿಒ ಹಂಚಿಕೆ ಸ್ಥಿತಿಯನ್ನು ಪ್ಯಾನ್ ಮೂಲಕ ಪರಿಶೀಲಿಸಿ ಯಾರಿಗೆ ಐಪಿಒ ಅಪ್ಲಿಕೇಷನ್ ಸಂಖ್ಯೆ ನೆನಪಿರುವುದಿಲ್ಲವೋ PAN ಬಳಸಿ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಇಲ್ಲಿದೆ ಆ ಬಗೆಗಿನ ಮಾಹಿತಿ ಇಲ್ಲಿದೆ: 1. KFintech ವೆಬ್​ಸೈಟ್​ಗೆ ಲಾಗ್​ ಇನ್​ ಆಗಿ kosmic.kfintech.com/ipostatus/ ತೆರಳಬೇಕು 2. ಐಪಿಒ ಆಯ್ಕೆ ಮಾಡಿ 3. ಪ್ಯಾನ್ ಆಯ್ಕೆ ಮಾಡಿ 4. ಪ್ಯಾನ್ ವಿವರಗಳನ್ನು ನಮೂದಿಸಿ 5. Captcha Code ನಮೂದಿಸಿ 6] Submit ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು 7] ಐಪಿಒ ಅಪ್ಲಿಕೇಶನ್ ಸ್ಥಿತಿ ನಿಮ್ಮ ಕಂಪ್ಯೂಟರ್ ಮಾನಿಟರ್ ಅಥವಾ ಸ್ಮಾರ್ಟ್​ಫೋನ್ ಸ್ಕ್ರೀನ್​ ಮೇಲೆ ಲಭ್ಯವಾಗುತ್ತದೆ.

ಇದನ್ನೂ ಓದಿ: Zomato IPO: ಝೊಮ್ಯಾಟೋ ಕಂಪೆನಿ ಐಪಿಒ ಜುಲೈ 14ರಿಂದ ಶುರು; ದರ, ಲಿಸ್ಟಿಂಗ್ ಮತ್ತಿತರ ವಿವರ ಇಲ್ಲಿದೆ

(How to check GR Infra IPO allotment status by applicants. Here is the step by step details)

Published On - 1:50 pm, Wed, 14 July 21

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ