Zomato IPO: ಝೊಮ್ಯಾಟೋ ಕಂಪೆನಿ ಐಪಿಒ ಜುಲೈ 14ರಿಂದ ಶುರು; ದರ, ಲಿಸ್ಟಿಂಗ್ ಮತ್ತಿತರ ವಿವರ ಇಲ್ಲಿದೆ
ಗುರ್ಗ್ರಾಮ್ ಮೂಲದ ಝೊಮ್ಯಾಟೋ ಕಂಪೆನಿ ಝೊಮ್ಯಾಟೋ (Zomato)ದ 9375 ಕೋಟಿ ರೂಪಾಯಿಯ ಐಪಿಒ ಜುಲೈ 14ರಂದು ಆರಂಭವಾಗಲಿದೆ. ಝೊಮ್ಯಾಟೋ ಐಪಿಒಗೆ ಸಂಬಂಧಿಸಿದಂತೆ ಪ್ರಶ್ನೋತ್ತರ ಮಾದರಿಯಲ್ಲಿ ವಿವರಗಳಿವೆ.
ಝೊಮ್ಯಾಟೋ (Zomato) ಕಂಪೆನಿಯ 9375 ಕೋಟಿ ರೂಪಾಯಿಯ ಐಪಿಒ ಜುಲೈ 14ರಂದು ಆರಂಭವಾಗಲಿದೆ. 2020ರ ಮಾರ್ಚ್ನಲ್ಲಿ ಎಸ್ಬಿಐ ಕಾರ್ಡ್ಸ್ ಅಂಡ್ ಪೇಮೆಂಟ್ ಸರ್ವೀಸಸ್ 10,341 ಕೋಟಿ ರೂಪಾಯಿಯನ್ನು ಕೊವಿಡ್- 19 ಬಿಕ್ಕಟ್ಟಿಗೆ ಮುಂಚೆ ಸಂಗ್ರಹ ಮಾಡಿದ್ದು, ಐಪಿಒ ಮೂಲಕ ಸಂಗ್ರಹ ಮಾಡಿದ ಮೊತ್ತದಲ್ಲಿ ಮೊದಲ ಸ್ಥಾನದಲ್ಲಿದೆ. ಆ ನಂತರದ ಸ್ಥಾನ ಈಗ ಝೊಮ್ಯಾಟೋದ್ದಾಗಿದೆ. ಗುರ್ಗ್ರಾಮ್ ಮೂಲದ ಝೊಮ್ಯಾಟೋ ಕಂಪೆನಿ ಐಪಿಒ ಬಿಡುಗಡೆ ಮಾಡುತ್ತಿರುವ ಮೊದಲ ಸ್ಟಾರ್ಟ್ ಅಪ್ ಆಗಿದೆ. ಜತೆಗೆ ಭಾರತೀಯ ಆನ್ಲೈನ್ ಫುಡ್ ಅಗ್ರಿಗೇಟರ್ಸ್ ಆಗಿ ಐಪಿಒ ಬಿಡುಗಡೆ ಮಾಡುತ್ತಿರುವ ಮೊದಲ ಕಂಪೆನಿ ಕೂಡ ಝೊಮ್ಯಾಟೋ. ಈ ಐಪಿಒ ಮೂಲಕ ಝೊಮ್ಯಾಟೋದ ಮೌಲ್ಯಮಾಪನವು 900 ಕೋಟಿ ಅಮೆರಿಕನ್ ಆಗುವಂತೆ ಮಾಡುತ್ತದೆ. ಝೊಮ್ಯಾಟೋ ಐಪಿಒಗೆ ಸಂಬಂಧಿಸಿದಂತೆ ಪ್ರಶ್ನೋತ್ತರ ಮಾದರಿಯಲ್ಲಿ ವಿವರಗಳಿವೆ.
* ಝೊಮ್ಯಾಟೋ ಐಪಿಒ ಸಬ್ಸ್ಕ್ರಿಪ್ಷನ್ ಯಾವಾಗಿನಿಂದ ಶುರುವಾಗುತ್ತದೆ? ಐಪಿಒ ಸಬ್ಸ್ಕ್ರಿಪ್ಷನ್ ಜುಲೈ 14 (ಬುಧವಾರ) ಆರಂಭವಾಗುತ್ತದೆ.
* ಐಪಿಒ ಮುಕ್ತಾಯ ದಿನಾಂಕ ಯಾವಾಗ? ಐಪಿಒ ಸಬ್ಸ್ಕ್ರಿಪ್ಷನ್ ಜುಲೈ 16 (ಶುಕ್ರವಾರ) ಕೊನೆಯಾಗುತ್ತದೆ.
* ಈ ಷೇರು ವಿತರಣೆಯ ಉದ್ದೇಶ ಏನು? ಸಾಮಾನ್ಯ ಕಾರ್ಯ ನಿರ್ವಹಣೆ ಉದ್ದೇಶಗಳು ಹಾಗೂ ಬೆಳವಣಿಗೆಯ ಆರ್ಗಾನಿಕ್ ಮತ್ತು ಇನ್ ಆರ್ಗಾನಿಕ್ ಅಭಿಯಾನಗಳಿಗೆ (6750 ಕೋಟಿ ರೂಪಾಯಿ) ಹಣವನ್ನು ಬಳಸಲಾಗುವುದು.
* ವಿತರಣೆಯ ಗಾತ್ರ ಏನು? ಹೊಸದಾಗಿ ಷೇರು ವಿತರಣೆ ಮಾಡುವ ಮೂಲಕ 9000 ಕೋಟಿ ರೂಪಾಯಿ ಸಂಗ್ರಹಿಸಲು ಮುಂದಾಗಿದೆ. ಸದ್ಯದ ಷೇರುದಾರರಿಂದ 375 ಕೋಟಿ ರೂಪಾಯಿ ತನಕ ಆಫರ್ ಫಾರ್ ಸೇಲ್ (ಒಎಫ್ಎಸ್) ಆಗಲಿದೆ.
* ಐಪಿಒ ದರದ ಬ್ಯಾಂಡ್ ಏನು? ಐಪಿಒ ದರ ಬ್ಯಾಂಡ್ 72ರಿಂದ 76 ರೂಪಾಯಿ ನಿಗದಿ ಮಾಡಲಾಗಿದೆ.
* ಲಾಟ್ ಗಾತ್ರ ಏನು? ಹೂಡಿಕೆದಾರರು ಕನಿಷ್ಠ 195 ಷೇರುಗಳಿಗಾಗಿ (1 ಲಾಟ್) ಅರ್ಜಿ ಹಾಕಬೇಕು. ಅದಕ್ಕಿಂತ ಹೆಚ್ಚಿನ ಷೇರುಗಳಿಗಾಗಿ 195ರ ಗುಣಕದಲ್ಲಿ (195+195 ಹೀಗೆ) ಅರ್ಜಿ ಹಾಕಿಕೊಳ್ಳಬೇಕು. ರೀಟೇಲ್ ಹೂಡಿಕೆದಾರರು ಗರಿಷ್ಠ 13 ಲಾಟ್ಗೆ ಅಪ್ಲೈ ಮಾಡಬಹುದು.
* ರೀಟೇಲ್ ಹೂಡಿಕೆದಾರರಿಗೆ ಎಷ್ಟನ್ನು ಮೀಸಲಿರಿಸಲಾಗಿದೆ? ನಿವ್ವಳ ಆಫರ್ನಲ್ಲಿ ಶೇ 10ರಷ್ಟು ರೀಟೇಲ್ ಹೂಡಿಕೆದಾರರಿಗೆ ಮೀಸಲಾಗಿದೆ. ಕ್ವಾಲಿಫೈಡ್ ಇನ್ಸ್ಟಿಟ್ಯೂಷನಲ್ ಖರೀದಿದಾರರಿಗೆ (QIB) ಶೇ 75ರಷ್ಟು ಮತ್ತು ನಾನ್- ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ಗೆ ಶೇ 15ರಷ್ಟು ಮೀಸಲಾಗಿದೆ.
* ಉದ್ಯೋಗಿಗಳಿಗೆ ಎಷ್ಟು ಮೀಸಲಾಗಿದೆ? ಅರ್ಹ ಸಿಬ್ಬಂದಿಗೆ 65 ಲಕ್ಷ ಈಕ್ವಿಟಿ ಷೇರುಗಳನ್ನು ಮೀಸಲಿಡಲಾಗಿದೆ.
* ವಿತರಣೆ ಯಾವಾಗ ಅಂತಿಮಗೊಳ್ಳುತ್ತದೆ? ಜುಲೈ 22ನೇ ತಾರೀಕಿಗೆ ವಿತರಣೆ ಅಂತಿಮವಾಗುತ್ತದೆ. ಜುಲೈ 23ಕ್ಕೆ ರೀಫಂಡ್ ಆರಂಭವಾಗುತ್ತದೆ. ಜುಲೈ 26ನೇ ತಾರೀಕಿಗೆ ಡಿಮ್ಯಾಟ್ ಖಾತೆಗೆ ಷೇರುಗಳು ಜಮೆ ಆಗುತ್ತವೆ.
* ಝೊಮ್ಯಾಟೋ ಷೇರು ಲಿಸ್ಟಿಂಗ್ ಯಾವಾಗ? ಜುಲೈ 27ನೇ ತಾರೀಕಿನಂದು ಝೊಮ್ಯಾಟೋ ಕಂಪೆನಿ ಷೇರು ಲಿಸ್ಟಿಂಗ್ ಆಗುತ್ತದೆ.
ಇದನ್ನೂ ಓದಿ: Paytm IPO: ಭಾರತದ ಅತಿದೊಡ್ಡ ಐಪಿಒಗೆ ಪೇಟಿಎಂ ಸಿದ್ಧತೆ; 21 ಸಾವಿರ ಕೋಟಿ ರೂ.ಗೂ ಹೆಚ್ಚು ಸಂಗ್ರಹಕ್ಕೆ ಇಂದು ತೀರ್ಮಾನ
(India’s food aggregator Zomato’s IPO subscription starts from July 14, 2021. Here is the FAQ’s regarding issue)
Published On - 4:41 pm, Mon, 12 July 21