AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm IPO: ಭಾರತದ ಅತಿದೊಡ್ಡ ಐಪಿಒಗೆ ಪೇಟಿಎಂ ಸಿದ್ಧತೆ; 21 ಸಾವಿರ ಕೋಟಿ ರೂ.ಗೂ ಹೆಚ್ಚು ಸಂಗ್ರಹಕ್ಕೆ ಇಂದು ತೀರ್ಮಾನ

ಪೇಟಿಎಂ ಆಡಳಿತ ಮಂಡಳಿಯಿಂದ ಮೇ 28ರ ಶುಕ್ರವಾರದಂದು ಸಭೆ ಸೇರುತ್ತಿದ್ದು, ಭಾರತದ ಅತಿದೊಡ್ಡ ಐಪಿಒ ಸಂಗ್ರಹಕ್ಕೆ ಮುಂದಾಗಿರುವ ಸಂಬಂಧಕ್ಕೆ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ.

Paytm IPO: ಭಾರತದ ಅತಿದೊಡ್ಡ ಐಪಿಒಗೆ ಪೇಟಿಎಂ ಸಿದ್ಧತೆ; 21 ಸಾವಿರ ಕೋಟಿ ರೂ.ಗೂ ಹೆಚ್ಚು ಸಂಗ್ರಹಕ್ಕೆ ಇಂದು ತೀರ್ಮಾನ
ಪೇಟಿಎಮ್​ (ಪ್ರಾತಿನಿಧಿಕ ಚಿತ್ರ)
Srinivas Mata
|

Updated on: May 28, 2021 | 11:25 AM

Share

ಪೇಟಿಎಂನ ಮಾತೃಸಂಸ್ಥೆಯಾದ One97 ಕಮ್ಯುನಿಕೇಷನ್ಸ್​ನ ಮಂಡಳಿಯು ಮೇ 28ರ ಶುಕ್ರವಾರದಂದು ಸಭೆ ಸೇರುತ್ತಿದೆ. ದೇಶದ ಅತಿ ದೊಡ್ಡ ಐಪಿಒ (ಸಾರ್ವಜನಿಕ ಆರಂಭಿಕ ಕೊಡುಗೆ) ಎನಿಸಿಕೊಳ್ಳಬಹುದಾದ ಬಂಡವಾಳ ಸಂಗ್ರಹಕ್ಕೆ ಚಾಲನೆ ನೀಡುವ ಬಗ್ಗೆ ಚರ್ಚೆ ನಡೆಸಲಿದೆ ಎಂದು ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಮೂಲಗಳು ತಿಳಿಸಿವೆ. ಎಂಟು ಸದಸ್ಯರನ್ನು ಒಳಗೊಂಡ ಮಂಡಳಿಯು ವರ್ಚುವಲ್ ಆಗಿ ಸಭೆ ನಡೆಸಲಿದ್ದು, 300 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಐಪಿಒಗೆ ಹೋಗುವ ಬಗ್ಗೆ ತಮ್ಮ ತೀರ್ಮಾನ ಕೈಗೊಳ್ಳಲಿದ್ದಾರೆ. 300 ಕೋಟಿ ಅಮೆರಿಕನ್ ಡಾಲರ್ ಅಂದರೆ, ಭಾರತದ ರೂಪಾಯಿ ಲೆಕ್ಕದಲ್ಲಿ 21,600 ಕೋಟಿಗೂ ಹೆಚ್ಚಾಗುತ್ತದೆ. ಒಂದು ವೇಳೆ ಇಷ್ಟು ಮೊತ್ತದ ಐಪಿಒಗೆ ಮುಂದಾದರೆ ಭಾರತದ ಇತಿಹಾಸದಲ್ಲಿ ಅತಿ ದೊಡ್ಡದು ಎನಿಸಿಕೊಳ್ಳಲಿದೆ. ಸದ್ಯಕ್ಕೆ ಕಂಪೆನಿಯ ಮೌಲ್ಯ 1600 ಕೋಟಿ ಅಮೆರಿಕನ್ ಡಾಲರ್ (1.15 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು) ಇದೆ.

ನವೆಂಬರ್​ನಲ್ಲಿ ಲಿಸ್ಟಿಂಗ್​ಗೆ ಕಂಪೆನಿ ಯೋಜನೆ ಹಾಕಿಕೊಂಡಿದೆ ಎಂದು ಬ್ಲೂಮ್​ಬರ್ಗ್​ನಿಂದ ಈ ಹಿಂದೆ ವರದಿ ಆಗಿತ್ತು. ವಿತರಣೆಗೆ ಸಂಬಂಧಿಸಿದಂತೆ ಬ್ಯಾಂಕರ್​ ಜತೆಗಿನ ಅಂತಿಮ ಪ್ರಕ್ರಿಯೆ ನಡೆಸುತ್ತಿದೆ ಅಂತಲೂ ವರದಿಯಾಗಿತ್ತು. ಮೋರ್ಗನ್ ಸ್ಟ್ಯಾನ್ಲಿ ಬ್ಯಾಂಕರ್ ಆಗುವ ಸಾಧ್ಯತೆ ಹೆಚ್ಚಿದೆ. ಈ ಕಂಪೆನಿಯು ಭಾರತದ ಪೇಮೆಂಟ್ಸ್ ಮಾರುಕಟ್ಟೆಯಲ್ಲಿ ಪಾರಮ್ಯವನ್ನು ಹೊಂದಿದೆ. 2010ರಲ್ಲಿ ಮೊದಲಿಗೆ ಬಿಲ್​ ಪಾವತಿ, ಮೊಬೈಲ್ ರೀಚಾರ್ಜ್ ಪ್ಲಾಟ್​ಫಾರ್ಮ್​ ಆಗಿ ಬಂದ ಕಂಪೆನಿ, 2014ರಲ್ಲಿ ಮೊಬೈಲ್ ವ್ಯಾಲೆಟ್ ಆರಂಭಿಸಿತು. ಮ್ಯೂಚುವಲ್ ಫಂಡ್​ಗಳ ಆರಂಭ, ವೆಲ್ತ್ ಮ್ಯಾನೇಜ್​ಮೆಂಟ್​, ಸ್ಟಾಕ್ ಟ್ರೇಡಿಂಗ್ ಮತ್ತು ಇನ್ಷೂರೆನ್ಸ್ ಸರ್ವೀಸಸ್ ತನಕ ವಿಸ್ತರಣೆ ಆಯಿತು.

2020ರಲ್ಲಿ ಕಂಪೆನಿಯ ಆದಾಯ ರೂ. 3280 ಕೋಟಿ: ಓಲಾ. ಇಂಡಸ್​ಇಂಡ್ ಬ್ಯಾಂಕ್, ಝೆಟಾ, ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಮತ್ತಿತರ ಎಲ್ಲವನ್ನೂ ಒಗ್ಗೂಡಿಸಿಕೊಂಡು ನ್ಯೂ ಅಂಬ್ರೆಲ್ಲಾ ಯೂನಿಟಿ (ಎನ್​ಯುಇ)ಗೆ ಕೂಡ ಅಪ್ಲೈ ಮಾಡಿದೆ ಪೇಟಿಎಂ. ಇದರ ಜತೆಗೆ ಪೇಟಿಎಂನಿಂದ ಜನರಲ್ ಇನ್ಷೂರೆನ್ಸ್​ಗೂ ಅಪ್ಲೈ ಮಾಡಲಾಗಿದೆ. ಅಂದಹಾಗೆ ಹಣಕಾಸು ವರ್ಷ 2020ರಲ್ಲಿ ಕಂಪೆನಿಯ ಆದಾಯ ರೂ. 3280 ಕೋಟಿ ಇದೆ. ನಷ್ಟವಯ ಶೇ 30ರಷ್ಟು ಕಡಿಮೆಯಾಗಿ, ರೂ. 2942 ಕೋಟಿಗೆ ಬಂದಿದೆ. ಪೇಟಿಎಂನ ಆದಾಯ 2023ರ ಹಣಕಾಸು ವರ್ಷದ ಹೊತ್ತಿಗೆ 100 ಕೋಟಿ ಅಮೆರಿಕನ್​ ಡಾಲರ್​ಗೆ ದುಪ್ಪಟ್ಟಾಗುವ ಸಾಧ್ಯತೆ ಇದೆ. ಅದರಲ್ಲಿ ಪಾವತಿಯೇತರ ಆದಾಯದ ಕೊಡುಗೆ ಶೇ 33ರಷ್ಟು ಇರಲಿದೆ.

ತಿಂಗಳ ವಹಿವಾಟು 120 ಕೋಟಿ ದಾಟಿದೆ: ಯುಪಿಐ ಪಾವತಿಯಲ್ಲಿ ಪೇಟಿಎಂ ಶೇ 12ರಷ್ಟು ಪಾಲು ಹೊಂದಿದ್ದು, ನಾಲ್ಕನೇ ಸ್ಥಾನದಲ್ಲಿದೆ. ಆದರೆ ಇಂಟಿಗ್ರೇಟೆಡ್ ಮರ್ಚೆಂಟ್ ಪಾವತಿಯಲ್ಲಿ ಮುಂಚೂಣಿಯಲ್ಲಿದೆ. 35 ಕೋಟಿ ಬಳಕೆದಾರರು ಪೇಟಿಎಂ ಇನ್​ಸ್ಟಾಲ್ ಮಾಡಿಕೊಂಡಿದ್ದಾರೆ. 2 ಕೋಟಿ ವರ್ತಕರು ಪೇಟಿಎಂ ಪ್ಲಾಟ್​ಫಾರ್ಮ್​ನಲ್ಲಿದ್ದಾರೆ. ಕಂಪೆನಿಯು ವಾಲ್​ಮಾರ್ಟ್ ಒಡೆತನದ ಫೋನ್​ಪೇ ಮತ್ತು ಗೂಗಲ್​ ಪೇ ಜತೆಗೆ ಸ್ಪರ್ಧೆ ನಡೆಸುತ್ತಿದೆ. ಮಾರ್ಚ್​ನಲ್ಲಿ ಪೇಟಿಎಂ ಹೇಳಿಕೊಂಡ ಪ್ರಕಾರ, ತಿಂಗಳ ವಹಿವಾಟು 120 ಕೋಟಿ ದಾಟಿದೆ. ಅದರಲ್ಲಿ ವ್ಯಾಲೆಟ್, ಯುಪಿಐ, ಕಾರ್ಡ್ಸ್, ಇಂಟರ್​ನೆಟ್​ ಬ್ಯಾಂಕಿಂಗ ಎಲ್ಲ ಸೇರಿದೆ. ಫೋನ್​ಪೇ 100 ಕೋಟಿ 7 ಲಕ್ಷ ವಹಿವಾಟು ನಡೆಸಿದೆ. ಭಾರತದಲ್ಲಿ ತಿಂಗಳಿಗೆ ಸರಾಸರಿ 330 ಕೋಟಿ ಡಿಜಿಟಲ್ ವಹಿವಾಟು ಆಗುತ್ತದೆ. ಅದರಲ್ಲಿ ಯುಪಿಐ, ಕ್ರೆಡಿಟ್​ ಕಾರ್ಡ್​ಗಳು, ಡೆಬಿಟ್​ ಕಾರ್ಡ್​ಗಳು, ವ್ಯಾಲೆಟ್​​ಗಳು ಎಲ್ಲ ಒಳಗೊಂಡಿರುತ್ತವೆ.

ಕಂಪೆನಿಯ ಮೌಲ್ಯ 16 ಬಿಲಿಯನ್ ಅಮೆರಿಕನ್ ಡಾಲರ್: ಪೇಟಿಎಂದ ಕೊನೆಯದಾಗಿ 100 ಕೋಟಿ ಅಮೆರಿಕನ್ ಡಾಲರ್ ಸಂಗ್ರಹದ ಬಗ್ಗೆ ಘೋಷಣೆ ಮಾಡಿತು. ಅದು ನಡೆದಿದ್ದು ಅಮೆರಿಕ ಮೂಲದ ಅಸೆಟ್ ಮ್ಯಾನೇಜರ್ ಟಿ ರೋವ್ ಪ್ರೈಸ್. ಸದ್ಯಕ್ಕೆ ಆ್ಯಂಟ್ ಫೈನಾನ್ಷಿಯಲ್, ಸಾಫ್ಟ್ ಬ್ಯಾಂಕ್ ವಿಷನ್ ಮತ್ತು ಡಿಸ್ಕವರಿ ಕ್ಯಾಪಿಟಲ್ ಕೂಡ ಈ ಸುತ್ತಿನಲ್ಲಿ ಭಾಗವಹಿಸುತ್ತಿವೆ. ಈ ಸುತ್ತಿನಲ್ಲಿ ಕಂಪೆನಿಯ ಮೌಲ್ಯ 16 ಬಿಲಿಯನ್ ಅಮೆರಿಕನ್ ಡಾಲರ್ ಎನ್ನಲಾಗಿತ್ತು.

ಇದನ್ನೂ ಓದಿ: Paytm Instant Personal Loan| ಪೇಟಿಎಂ ಮೂಲಕ ರೂ. 2 ಲಕ್ಷದ ತನಕ ತಕ್ಷಣದ ಪರ್ಸನಲ್ ಲೋನ್

(Paytm parent company One97 Communications board take decision avout India’s biggest IPO in today virtual meeting)

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!