Cooking oil: ಅಡುಗೆಗೆ ಬಳಸುವ ಎಣ್ಣೆ ಬೆಲೆಯಲ್ಲಿ ವರ್ಷದಲ್ಲಿ ಶೇ 62ರಷ್ಟು ಏರಿಕೆ; ಒಂದಲ್ಲ, ಎರಡರಲ್ಲೂ ಇದು ಎಲ್ಲದರ ಕಥೆ

Edible oil price: ಕಳೆದ ಒಂದು ವರ್ಷದಲ್ಲಿ ಅಡುಗೆಗೆ ಬಳಸುವ ಎಣ್ಣೆ ದರದಲ್ಲಿ ಶೇ 62ರಷ್ಟು ಏರಿಕೆ ಆಗಿದೆ. ಈ ಬೆಲೆ ಹೆಚ್ಚಳಕ್ಕೆ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.

Cooking oil: ಅಡುಗೆಗೆ ಬಳಸುವ ಎಣ್ಣೆ ಬೆಲೆಯಲ್ಲಿ ವರ್ಷದಲ್ಲಿ ಶೇ 62ರಷ್ಟು ಏರಿಕೆ; ಒಂದಲ್ಲ, ಎರಡರಲ್ಲೂ ಇದು ಎಲ್ಲದರ ಕಥೆ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 27, 2021 | 11:05 PM

ಮನೆಯಲ್ಲಿ ಅಡುಗೆಗೆ ಬಳಸುವ ಸಾಸಿವೆ ಎಣ್ಣೆ, ವನಸ್ಪತಿ, ಸೋಯಾ, ತಾಳೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಕಡಲೇಕಾಯಿಎಣ್ಣೆ ಹೀಗೆ ಇನ್ನಷ್ಟು ಎಣ್ಣೆಗಳ ಬೆಲೆಯು ದಶಕದಲ್ಲೇ ಅತಿ ಹೆಚ್ಚು ದರವನ್ನು ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 62ರಷ್ಟು ಏರಿಕೆ ಆಗಿದೆ ಎಂದು ಈಚೆಗೆ ಈ ಬಗ್ಗೆ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದರು. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ಅಂಕಿ-ಅಂಶಗಳು 2020ರ ಮೇ ತಿಂಗಳಲ್ಲಿ ಇದ್ದ ಬೆಲೆಯೊಂದಿಗೆ ಹೋಲಿಕೆ ಮಾಡಿರುವುದನ್ನು ತೋರಿಸಿದೆ. ಸಾಸಿವೆ ಎಣ್ಣೆ ವರ್ಷದ ಹಿಂದೆ ಕೇಜಿಗೆ 115 ರೂಪಾಯಿ ಇತ್ತು. ಅದೀಗ 170 ರೂಪಾಯಿಗೆ ಏರಿದೆ. ತಾಳೆ ಎಣ್ಣೆ ರೂ. 85ರಿಂದ ರೂ. 138 ತಲುಪಿದೆ. ಸೂರ್ಯಕಾಂತಿ ಎಣ್ಣೆ ರೂ. 110ರಿಂದ 175 ಮುಟ್ಟಿದೆ. ಉನ್ನು ವನಸ್ಪತಿ ರೂ. 90 ಇದ್ದದ್ದು ರೂ. 140 ಆಗಿದೆ. ಸೋಯಾ ಎಣ್ಣೆ ಬೆಲೆ ರೂ. 100ರಿಂದ ರೂ. 155ಕ್ಕೆ ಜಿಗಿದಿದೆ.

ಏರಿಕೆಗೆ ಕಾರಣ ಏನು? ಭಾರತಕ್ಕೆ ಇರುವ ವಾರ್ಷಿಕ ಅಗತ್ಯವಾದ 14.5 ಮಿಲಿಯನ್​ ಟನ್ ಅಡುಗೆ ಅನಿಲದಲ್ಲಿ ಶೇ 65ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ತಯಾರಕ ದೇಶಗಳಾದ ಇಂಡೋನೇಷ್ಯಾ, ಮಲೇಷ್ಯಾ, ಅರ್ಜೆಂಟೀನಾ, ಉಕ್ರೇನ್ ಮತ್ತು ರಷ್ಯಾದಲ್ಲಿ ಹವಾಮಾನ ವೈಪರೀತ್ಯದ ಕಾರಣಕ್ಕೆ ಉತ್ಪಾದನೆ ಸರಿಯಾಗಿ ಆಗಿಲ್ಲ. ಇದರಿಂದ ಬೆಲೆಯಲ್ಲಿ ಹೆಚ್ಚಳವಾಗಿದೆ. ತಾಳೆ ಎಣ್ಣೆಯಲ್ಲಿ ಕೊರತೆ ಆಗಲು ಕಾರಣ ಆಗಿದ್ದು ಮಲೇಷ್ಯಾದಲ್ಲಿ ಎದುರಾದ ಕಾರ್ಮಿಕರ ಸಮಸ್ಯೆ (ಕೊರತೆ). ಅಂದಹಾಗೆ ಈ ದೇಶ ವಿಶ್ವದಲ್ಲೇ ಎರಡನೇ ಅತಿದೊಡ್ಡ ತೈಲ ಉತ್ಪಾದಕ ದೇಶ. ಅದೇ ರೀತಿ ಇಂಡೋನೇಷ್ಯಾ, ಮಲೇಷ್ಯಾದಲ್ಲಿ ಬಿ30 ಮತ್ತು ಬಿ20 ಜೈವಿಕ ಇಂಧನ, ಇದು ಇಂಧನದಲ್ಲಿ ವೆಜಿಟೆಬಲ್ ತೈಲ ಮಿಶ್ರಣವನ್ನು ಇಂಧನದಲ್ಲಿ ಹೆಚ್ಚಿಸಿದೆ. ಇದರಿಂದ ಸ್ಥಳೀಯ ಬಳಕೆ ಜಾಸ್ತಿಯಾಗಿದೆ. ರಫ್ತು ಮಾಡುವುದಕ್ಕೆ ಹೆಚ್ಚುವರಿ ತೈಲ ಉಳಿಯುತ್ತಿಲ್ಲ ಎನ್ನುತ್ತಾರೆ ತಜ್ಞರು.

ಭಾರತದ ತಾಳೆ ಎಣ್ಣೆ ಅಗತ್ಯವನ್ನು ಸಂಪೂರ್ಣವಾಗಿ ಇಂಡೋನೇಷ್ಯಾ ಮತ್ತು ಮಲೇಷ್ಯಾ ದೇಶಗಳು ಪೂರ್ತಿ ಮಾಡುತ್ತವೆ. ಭಾರತದ ಒಟ್ಟು ಬಳಕೆಯಲ್ಲಿ ಶೇ 40ರಷ್ಟು ತಾಳೆ ಎಣ್ಣೆ ಇದ್ದು ಮತ್ತು ಶೇ 60ರಷ್ಟು ಆಮದು ಮಾಡಿಕೊಳ್ಳಲಾಗುತ್ತದೆ. ಅರ್ಜೆಂಟಿನಾದಲ್ಲಿ ಒಣ ವಾತಾವರಣ ಇರುವುದರಿಂದ ಸೋಯಾಬಿನ್ ಎಣ್ಣೆಯ ಬೆಲೆ ಏರಿದೆ. ಅತಿ ದೊಡ್ಡ ರಫ್ತುದಾರ ದೇಶ ಅದು. ಪ್ರಮುಖ ಬಳಕೆ ದೇಶಗಳು ಭಾರತ ಮತ್ತು ಚೀನಾ. ಅದೇ ರೀತಿ ಸೂರ್ಯಕಾಂತಿ ಎಣ್ಣೆ ಬೆಲೆಯಲ್ಲಿ ಬೆಲೆ ಏರಿಕೆಗೆ ಕಾರಣ ಆಗಿರುವುದು ಉಕ್ರೇನ್ ಮತ್ತು ರಷ್ಯಾದಲ್ಲಿ ಬರದಂಥ ಸನ್ನಿವೇಶ. ಅತಿ ದೊಡ್ಡ ರಫ್ತುದಾರ ಹಾಗೂ ಉತ್ಪಾದನೆ ಮಾಡುವ ದೇಶಗಳವು.

ಕಡಿಮೆ ಇಳುವರಿಯ ಪ್ರಭಾವ ಶೇ 85ರಷ್ಟು ಸೋಯಾಬಿನ್ ತೈಲ ಅರ್ಜೆಂಟಿನಾ ಮತ್ತು ಬ್ರೆಜಿಲ್​ನಿಂದ ಹಾಗೂ ಶೇ 90ರಷ್ಟು ಸೂರ್ಯಕಾಂತಿ ಎಣ್ಣೆ ಉಕ್ರೇನ್ ಮತ್ತು ರಷ್ಯಾದಿಂದ ಭಾರತಕ್ಕೆ ಬರುತ್ತದೆ. ಇನ್ನು ತಾಳೆ ಎಣ್ಣೆ ಮೇಲೆ ಹಾಕುತ್ತಿರುವ ಶೇ 32.5ರಷ್ಟು ಆಮದು ಸುಂಕ ಕೂಡ ಬೆಲೆ ಏರಿಕೆಗೆ ಕಾರಣ ಆಗಿದೆ. ದೇಶೀಯವಾಗಿ ಎಣ್ಣೆ ಬೀಜದ ಉತ್ಪಾದನೆಯಲ್ಲೂ ಇಳಿಕೆ ಆಗಿದೆ. ತೈಲ ವರ್ಷ20 (ನವೆಂಬರ್​ನಿಂದ ಅಕ್ಟೋಬರ್) ಸೋಯಾಬಿನ್, ಶೇಂಗಾ, ಸಾಸಿವೆ, ಹತ್ತಿಬೀಜದ ಎಣ್ಣೆ ಮೇಲೆ ಬೆಳೆ ಹಾನಿ ಹಾಗೂ ಕಡಿಮೆ ಇಳುವರಿಯ ಪ್ರಭಾವ ಆಗಿದೆ.

ಹಲವು ಬ್ರ್ಯಾಂಡೆಡ್ ಎಣ್ಣೆಗಳಾದ ಅದಾನಿ ವಿಲ್ಮರ್ ಒಡೆತನದ ಫಾರ್ಚೂನ್, ಮಾರಿಕೋದ ಸಫೋಲಾ ಮತ್ತು ಮದರ್ ಡೇರಿಯ ಧಾರ ಎಲ್ಲವೂ ಹೆಚ್ಚಿನ ದರಕ್ಕೆ ಮಾರಲಾಗುತ್ತಿದೆ. ಮಾರಿಕೋದಿಂದ ಕಳೆದ ಎರಡು ತ್ರೈಮಾಸಿಕದಲ್ಲಿ ಶೇ 50ರಷ್ಟು ಬೆಲೆ ಏರಿಕೆ ಮಾಡಲಾಗಿದೆ. ಸಗಟು ದರದ ಅಡುಗೆ ಎಣ್ಣೆ ಬ್ರ್ಯಾಂಡ್ ತಯಾರಕ ಕಂಪೆನಿಗಳಾದ ಎಚ್​ಯುಎಲ್​, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್, ಇಮಾಮಿ, ಕೋಲ್ಗೇಟ್ ಪಾಮೊಲಿವ್, ವಿಪ್ರೋ ಕನ್ಸ್ಯೂಮರ್ ಕೇರ್, ಐಟಿಸಿ ಕೂಡ ಬೆಲೆಯಿಂದ ಪರಿಣಾಮ ಎದುರಿಸುತ್ತಿವೆ. ಏಕೆಂದರೆ ತಾಳೆ ಎಣ್ಣೆಯೇ ಅವುಗಳ ಪ್ರಮುಖ ಪದಾರ್ಥವಾಗಿದೆ. ತಜ್ಞರು ಹೇಳುವಂತೆ ತೈಲ ವರ್ಷ21 (ನವೆಂಬರ್20ರಿಂದ ಅಕ್ಟೋಬರ್21) ದ್ವಿತೀಯಾರ್ಧದಲ್ಲಿ ಬೆಲೆ ಕಡಿಮೆ ಆಗಬಹುದು. ಆದರೆ ಆಗುತ್ತದೋ ಇಲ್ಲವೋ ಕಾದುನೋಡೋಣ.

ಇದನ್ನೂ ಓದಿ: Wholesale Price Index Inflation: ಹಣದುಬ್ಬರದ ಎಫೆಕ್ಟ್​ಗೆ ಏಪ್ರಿಲ್​ನಲ್ಲಿ ಮಾಂಸಾಹಾರಿಗಳಿಗೆ ದುಬಾರಿ, ಸಸ್ಯಾಹಾರಿ ಸಸ್ತಾ ರೀ

(Cooking oil price hits more than 11 years. Why price of edible oil reached that price, explained here)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ