AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇ- ಕಾಮರ್ಸ್ ಕಂಪೆನಿ ಅಮೆಜಾನ್ ಸಿಇಒ ಆಗಿ ಜುಲೈ 5ಕ್ಕೆ ಆ್ಯಂಡಿ ಜಸ್ಸಿ ಅಧಿಕಾರ; ಹೊಸ ಸೂತ್ರಧಾರನ ಬಗ್ಗೆ 10 ಮುಖ್ಯ ಸಂಗತಿ

E- Commerce giant Amazon new CEO Andy Jassy: ಅಮೆಜಾನ್ ಕಂಪೆನಿಯ ಹೊಸ ಸಿಇಒ ಆಗಿ ಆ್ಯಂಡಿ ಜಸ್ಸಿ ಜುಲೈ 5ಕ್ಕೆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಅವರ ಬಗ್ಗೆ 10 ಆಸಕ್ತಿಕರ ಸಂಗತಿಗಳು ಇಲ್ಲಿವೆ.

ಇ- ಕಾಮರ್ಸ್ ಕಂಪೆನಿ ಅಮೆಜಾನ್ ಸಿಇಒ ಆಗಿ ಜುಲೈ 5ಕ್ಕೆ ಆ್ಯಂಡಿ ಜಸ್ಸಿ ಅಧಿಕಾರ; ಹೊಸ ಸೂತ್ರಧಾರನ ಬಗ್ಗೆ 10 ಮುಖ್ಯ ಸಂಗತಿ
ಜೆಫ್ ಬೆಜೋಸ್ (ಎಡಚಿತ್ರ) ಮತ್ತು ಆ್ಯಂಡಿ ಜಸ್ಸಿ (ಬಲಕ್ಕೆ)
Srinivas Mata
|

Updated on: May 27, 2021 | 6:31 PM

Share

ಇ- ಕಾಮರ್ಸ್ ಕಂಪೆನಿ ಅಮೆಜಾನ್ ಸಿಇಒ ಆಗಿರುವ ಜೆಫ್​ ಬೆಜೋಸ್​ ಸ್ಥಾನಕ್ಕೆ ಆ್ಯಂಡಿ ಜಸ್ಸಿ ಬರುವುದು ಅಧಿಕೃತವಾಗಿದೆ. ಜುಲೈ 5ನೇ ತಾರೀಕಿನಂದು ಜಸ್ಸಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಈ ದಿನದ ವಿಶೇಷ ಏನೆಂದರೆ, 27 ವರ್ಷಗಳ ಹಿಂದೆ ಜೆಫ್​ ಬೆಜೋಸ್ ಅವರು ಅಮೆರಿಕದ ವಾಷ್ಟಿಂಗ್ಟ್​ನಲ್ಲಿನ ಬೆಲ್ಲೆವ್ಯೂ ಗ್ಯಾರೇಜ್​ನಲ್ಲಿ ಇದ್ದ್ದದ್ದನ್ನು ಆನ್​ಲೈನ್ ಬುಕ್​ಸ್ಟೋರ್​ ಆಗಿ, ಕಂಪೆನಿ ಇನ್​ಕಾರ್ಪೊರೇಟ್ ಮಾಡಿದ್ದರು. ಅಂದ ಹಾಗೆ ಆ್ಯಂಡಿ ಜಸ್ಸಿ ವಿಶ್ವದ ಅತಿ ದೊಡ್ಡ ಇ-ಕಾಮರ್ಸ್ ಕಂಪೆನಿಯಯನ್ನು ಮುನ್ನಡೆಸಲಿದ್ದಾರೆ. ಅವರ ಬಗ್ಗೆ ಮನಿಕಂಟ್ರೋಲ್​ನಲ್ಲಿ ಪ್ರಕಟಿಸಿರುವ 10 ಸಂಗತಿಗಳನ್ನು ಇಲ್ಲಿ ನೀಡಲಾಗುತ್ತಿದೆ.

1) ಯಹೂದಿ ಕುಟುಂಬದಲ್ಲಿ ಜನಿಸಿದ ಜಸ್ಸಿ, ಬೆಳೆದಿದ್ದು ನ್ಯೂಯಾರ್ಕ್​ನ ಸ್ಕಾರ್ಸ್​ಡೇಲ್​ನಲ್ಲಿ. 2) 1997ರಲ್ಲಿ ಜಸ್ಸಿ ಹಾರ್ವರ್ಡ್ ಬಿಜಿನೆಸ್ ಸ್ಕೂಲ್​ನಲ್ಲಿ ಎಂಬಿಎ ಮುಗಿಸಿದ ತಕ್ಷಣ ಅವರು ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಅಮೆಜಾನ್ ಸೇರಿದರು. 2003 ಅಮೆಜಾನ್ ವೆಬ್​ಸರ್ವೀಸಸ್ ಸ್ಥಾಪಿಸಿದ ಅವರು, 2016ರಲ್ಲಿ ಅದರ ಸಿಇಒ ಆದರು. 3) ಅಮೆಜಾನ್​ನಲ್ಲಿ ಸೀನಿಯರ್ ಟೀಮ್ ಅಥವಾ ಎಸ್​- ಟೀಮ್ ಎಂದು ಕರೆಯುವ ಉನ್ನತ ಮಟ್ಟದ ಗುಂಪಿಗೆ ಸೇರಿದವರು ಈತ. 4) ಗ್ರಾಹಕರು ಮೊದಲು ಎಂಬ ಧೋರಣೆಗೆ ಜಸ್ಸಿ ಬಹಳ ಖ್ಯಾತರು ಮತ್ತು ಅಮೆಜಾನ್​ನ ಅತಿ ಮುಖ್ಯ ಅಂಶ ಅದು. 5) ಅಮೆಜಾನ್​ನಲ್ಲಿ ಜೆಫ್​ ಬೆಜೋಸ್​ಗೆ ಸೂಕ್ತ ಉತ್ತರಾಧಿಕಾರಿ ಎಂಬ ಮಾನ್ಯತೆ ಜಸ್ಸಿ ಅವರಿಗೆ ಇದೆ. ಈ ಹಿಂದೆ ಜೆಫ್ರಿ ಎ. ವಿಲ್ಕೆ ಅವರನ್ನು ಸಮರ್ಥ ಅಭ್ಯರ್ಥಿ ಎನ್ನಲಾಗಿತ್ತು. ಆದರೆ ಅವರು 2020ರ ಆಗಸ್ಟ್​ನಲ್ಲಿ ನಿವೃತ್ತಿ ಘೋಷಣೆ ಮಾಡಿದರು. 6) ಅಮೆರಿಕದ ಹೊರಗೆ ಅಮೆಜಾನ್ ಪಾಲಿನ ಅತಿ ದೊಡ್ಡ ಮಾರುಕಟ್ಟೆ ಅಂದರೆ ಅದು ಭಾರತ. ಆದರೆ ಜಸ್ಸಿ ಭಾರತಕ್ಕೆ ಪದೇಪದೇ ನೀಡುವವರೇನೂ ಅಲ್ಲ. ಆದರೆ ಕಂಪೆನಿಯ ಇಂಡಿಯಾ ಕಸ್ಟಮರ್ಸ್ ಆನ್​ಲೈನ್​ನಿಂದ ನೇರವಾಗಿ ವಿಮರ್ಶೆಗಳನ್ನು ತೆಗೆದುಕೊಳ್ಳುತ್ತಾರೆ. 7) ತಮ್ಮ ಹಾಸ್ಯ ಪ್ರವೃತ್ತಿ, ತಮಾಷೆ ಮಾತುಗಳಿಗೆ ಜಸ್ಸಿ ಬಹಳ ಖ್ಯಾತಿ ಪಡೆದಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ನಲ್ಲಿ ತಮ್ಮ ಪ್ರತಿಸ್ಪರ್ಧಿಗಳಾದ ಐಬಿಎಂ ಮತ್ತು ಒರಾಕಲ್ ವಿರುದ್ಧ ಟೀಕೆ ಮಾಡಿದ್ದು ಸಹ ಉಂಟು. 8) ಕ್ರೀಡಾಭಿಮಾನಿಯಾದ ಅವರು ನ್ಯಾಷನಲ್ ಹಾಕಿ ಲೀಗ್​ನಲ್ಲಿನ ಸೀಟಲ್ ಕ್ರಾಕೆನ್​ನಲ್ಲಿ ಅಲ್ಪ ಪ್ರಮಾಣದ ಷೇರನ್ನು ಹೊಂದಿದ್ದಾರೆ. 9) ಮಾಧ್ಯಮ ವರದಿಗಳ ಪ್ರಕಾರ, ಅಮೆಜಾನ್​ನಿಂದ ಜಸ್ಸಿಗೆ 2019ರಕ್ಕು 3,48,409 ಅಮೆರಿಕನ್ ಡಾಲರ್ ಪಾವತಿಸಲಾಗಿದೆ. 2018ರಲ್ಲಿ 19.7 ಮಿಲಿಯನ್ ಡಾಲರ್ ಪಾವತಿಸಲಾಗಿತ್ತು, 19 ಮಿಲಿಯನ್ ಡಾಲರ್ ಸ್ಟಾಕ್ ನೀಡಲಾಗಿತ್ತು. 10) ಜಸ್ಸಿ ಕೂಡ ಬೆಜೋಸ್​ರಂತೆಯೇ ವರ್ಣರಂಜಿತ ವ್ಯಕ್ತಿತ್ವದವರು. ಹೇಗೆ ತಮ್ಮ ಮುಖ್ಯ ಭಾಷಣದ ಸಲುವಾಗಿ ಅಮೆಜಾನ್ ಪ್ರಚಾರ ಕಾರ್ಯಕ್ರಮಕ್ಕೆ ಭಾರತದಲ್ಲಿ ಬೆಜೋಸ್ ಟ್ರಕ್ ಚಲಾಯಿಸಿದ್ದರೋ ಅದೇ ರೀತಿ ವೇದಿಕೆ ಮೇಲೆ ಪ್ರದರ್ಶನಕ್ಕೆ ಜಸ್ಸಿ 18 ಚಕ್ರದ ಟ್ರಕ್- ಸ್ನೋಮೊಬೈಲ್ ಅನ್ನು ವೇದಿಕೆ ಮೇಲೆ ಪ್ರದರ್ಶನಕ್ಕೆ ತಂದಿದ್ದರು.

ಇದನ್ನೂ ಓದಿ: Amazon One: ಅಂಗೈ ತೋರಿಸಿ ಏನನ್ನಾದರೂ ಖರೀದಿಸುವ ಅವಕಾಶ; ಹಬ್ಬುತ್ತಿದೆ ಹೊಸ ಅಮೆಜಾನ್ ಒನ್ ಟೆಕ್ನಾಲಜಿ

(Andy Jassi will be the new CEO of Amazon company from July 5th, 2021. And He is the replacement to Jeff Bezos)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ