Amazon One: ಅಂಗೈ ತೋರಿಸಿ ಏನನ್ನಾದರೂ ಖರೀದಿಸುವ ಅವಕಾಶ; ಹಬ್ಬುತ್ತಿದೆ ಹೊಸ ಅಮೆಜಾನ್ ಒನ್ ಟೆಕ್ನಾಲಜಿ

ಅಮೆರಿಕದ ಮ್ಯಾನ್​ಹಟನ್​ನಲ್ಲಿ ಅಮೆಜಾನ್ ಸ್ಟೋರ್​ವೊಂದರಲ್ಲಿ ಅಮೆಜಾನ್ ಒನ್ ವಿಸ್ತರಣೆ ಮಾಡಲಾಗಿದೆ. ಏನಿದು, ಪ್ರಯೋಜನ ಏನು ಇತ್ಯಾದಿ ವಿವರಗಳು ಇಲ್ಲಿವೆ.

Amazon One: ಅಂಗೈ ತೋರಿಸಿ ಏನನ್ನಾದರೂ ಖರೀದಿಸುವ ಅವಕಾಶ; ಹಬ್ಬುತ್ತಿದೆ ಹೊಸ ಅಮೆಜಾನ್ ಒನ್ ಟೆಕ್ನಾಲಜಿ
ಅಮೆಜಾನ್ ಒನ್ (ಚಿತ್ರಕೃಪೆ: ಅಮೆಜಾನ್)
Follow us
Srinivas Mata
|

Updated on: May 11, 2021 | 2:23 PM

ಅಮೆಜಾನ್​ನಿಂದ ಪಾಮ್ ರೀಡಿಂಗ್ (ಅಂಗೈ ಓದುವ) ಅಮೆಜಾನ್ ಒನ್ ಅನ್ನು ಸೋಮವಾರ ಅಮೆರಿಕದ ಈಸ್ಟ್​ ಕೋಸ್ಟ್​ಗೆ ಪರಿಚಯಿಸಲಾಗಿದೆ. ಬಯೋಮೆಟ್ರಿಕ್ ಮೂಲಕ ದೃಢೀಕರಿಸುವ ವ್ಯವಸ್ಥೆಯಡಿ ಮ್ಯಾನ್​ಹಟನ್​ನಲ್ಲಿನ ಮಿಡ್​ಟೌನ್ 42ನೇ ಸ್ಟ್ರೀಟ್ ಅಮೆಜಾನ್ ಗೋ ಸ್ಟೋರ್​ನಲ್ಲಿ ತರಲಾಗಿದೆ. ಕಳೆದ ವರ್ಷ ಇದನ್ನು ಪರಿಚಯಿಸಲಾಗಿದೆ. ಈ ಹಿಂದೆ ಸ್ಕ್ಯಾನರ್ ಸೀಟಲ್- ಪ್ರದೇಶದ ಅಮೆಜಾನ್ ಮತ್ತು ಹೋಲ್ ಫುಡ್ ಸ್ಟೋರ್ಸ್​ನಲ್ಲಿ ಲಭ್ಯವಿತ್ತು. ಯಾರು ಖರೀದಿ ಮಾಡಬೇಕು ಅಂತಿರುತ್ತಾರೋ ಅವರ ಅಂಗೈ ಸ್ಕ್ಯಾನ್ ಮಾಡಬೇಕು ಮತ್ತು ವಿಶಿಷ್ಟ ಅಂಗೈ ಸಹಿಯನ್ನು ಕ್ರೆಡಿಟ್ ಕಾರ್ಡ್ ಅಥವಾ ಅಮೆಜಾನ್ ಅಕೌಂಟ್​ಗೆ ಮಾಡಬೇಕು.

ವಿಮರ್ಶಕರು ಈ ವ್ಯವಸ್ಥೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಇದರಿಂದ ಖಾಸಗಿತನದ ಸಮಸ್ಯೆ ಎದುರಾಗಬಹುದು ಎಂದಿದ್ದಾರೆ. ಆದರೆ ಅಮೆಜಾನ್ ಈ ಬಗ್ಗೆ ತಿಳಿಸಿದ್ದು, ಮಾಹಿತಿಯನ್ನು ಕ್ಲೌಡ್​ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುವುದು ಮತ್ತು ಗ್ರಾಹಕರು ಯಾವುದೇ ಸಮಯದಲ್ಲಿ ಅಮೆಜಾನ್ ಒನ್​ ಡೇಟಾ ಡಿಲೀಟ್ ಮಾಡಬಹುದು ಎಂದು ತಿಳಿಸಲಾಗಿದೆ. ಕಳೆದ ಸೆಪ್ಟೆಂಬರ್​ನಲ್ಲಿ ಸೀಟಲ್​ನಲ್ಲಿನ ಅಮೆಜಾನ್ ಗೋನಲ್ಲಿ ಮೊದಲ ಬಾರಿಗೆ ಅಮೆಜಾನ್ ಒನ್ ಆರಂಭಿಸಲಾಗಿತ್ತು. ಆ ನಂತರ ಈ ತಂತ್ರಜ್ಞಾನವನ್ನು ಗ್ರೇಟರ್ ಸೀಟಲ್ ಪ್ರದೇಶದಲ್ಲಿನ ಅಮೆಜಾನ್​ ಮಾಲೀಕತ್ವದ 20 ಕಡೆಗಳಲ್ಲಿ ಜಾರಿಗೆ ತರಲಾಗಿದೆ. ಅಮೆಜಾನ್ ಗೋ, ಅಮೆಜಾನ್ ಬುಕ್ಸ್, ಅಮೆಜಾನ್ ಪಾಪ್ ಅಪ್ ಮತ್ತು ಹೋಲ್ ಫುಡ್ಸ್ ಸ್ಟೋರ್ಸ್​ನಲ್ಲೂ ತರಲಾಗಿದೆ.

ಈಗಿನದರ ವಿಶೇಷ ಏನೆಂದರೆ, 42 ಸ್ಟ್ರೀಟ್ ಶಾಪ್ ಬ್ರಯಂಟ್ ಪಾರ್ಕ್ ಬಳಿ ಇದ್ದು, ಈಸ್ಟ್ ಕೋಸ್ಟ್ ಪ್ರದೇಶದಲ್ಲಿ ಅಮೆಜಾನ್​ ಒನ್ ಅಳವಡಿಸಿಕೊಂಡ ಮೊದಲ ಮಳಿಗೆ ಇದಾಗಿದೆ. ಸಾವಿರಾರು ಗ್ರಾಹಕರು ಈಗಾಗಲೇ ಈ ಸೇವೆಗೆ ಸಹಿ ಹಾಕಿದ್ದಾರೆ ಎಂದು ಅಮೆಜಾನ್ ಹೇಳಿದೆ. ಆದರೆ ನಿರ್ದಿಷ್ಟ ಸಂಖ್ಯೆಯನ್ನು ತಿಳಿಸಿಲ್ಲ. ಇದರಿಂದಾಗಿ ಸಮಯದ ಉಳಿತಾಯ ಮಾತ್ರ ಅಲ್ಲ, ಗ್ರಾಹಕರ ಮಧ್ಯೆ ಹಾಗೂ ಕ್ಯಾಶಿಯರ್ ಜತೆಗೆ ಬ್ಯಾಕ್ಟಿರೀಯಾ ಅಥವಾ ವೈರಸ್ ಹರಡುವುದನ್ನು ನಿಯಂತ್ರಿಸುತ್ತದೆ. ಅಮೆಜಾನ್ ಕಂಪೆನಿಯ ದಿಲೀಪ್ ಕುಮಾರ್​ ಮಾತನಾಡಿ, ಉದ್ದೇಶಪೂರ್ವಕವಾಗಿ ಆ ಡಿವೈಸ್ ಮೇಲೆ ಗ್ರಾಹಕ ಅಂಗೈ ಇಡದ ಹೊರತು ಅದು ಕೆಲಸ ಮಾಡುವುದಿಲ್ಲ. ಇನ್ನು ಅಂಗೈಯನ್ನು ಬಯೋಮೆಟ್ರಿಕ್ ಗುರುತಿನಂತೆ ಬಳಸಿಕೊಳ್ಳುವುದರಿಂದ ಈ ಸೇವೆ ಎಲ್ಲಿ ಮತ್ತು ಯಾವಾಗ ಬಳಸಬೇಕು ಎಂಬ ಬಗ್ಗೆ ಗ್ರಾಹಕರಿಗೆ ನಿಯಂತ್ರಣ ಇರುತ್ತದೆ ಎಂದಿದ್ದಾರೆ.

ಚೆಕ್​ಔಟ್​ನಲ್ಲಿ ಅಮೆಜಾನ್ ಒನ್​ಗೆ ಈಗಲೂ ಪದಾರ್ಥಗಳ ಸ್ಕ್ಯಾನಿಂಗ್ ಅಗತ್ಯ ಇದೆ. ಇದು ಹೋಲ್ ಫುಡ್ಸ್ ಕೆಲಸಗಳ ಮೇಲೆ ಪರಿಣಾಮ ಆಗಲ್ಲ ಎಂದು ಕಂಪೆನಿ ಹೇಳಿಕೊಂಡಿದೆ. ಅಮೆಜಾನ್ ಒನ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಅಂದರೆ, ಯಾವ ಸ್ಟೋರ್​ನಲ್ಲಿ ಖರೀದಿ ಮಾಡುತ್ತೀರೋ ಅಲ್ಲಿನ ಅಮೆಜಾನ್ ಒನ್ ಕಿಯೋಸ್ಕ್​ದಲ್ಲಿ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಪ್ರಕ್ರಿಯೆ ಮುಗಿಸಬಹುದು. ಕ್ರೆಡಿಟ್ ಕಾರ್ಡ್ ಇನ್​ಸರ್ಟ್ ಮಾಡಿದ ಮೇಲೆ ಸಾಧನದ ಮೇಲೆ ಅಂಗೈ ತರುವಂತೆ ಸೂಚನೆ ಬರುತ್ತದೆ. ತಂತ್ರಜ್ಞಾನದ ಮೂಲಕ ಕೈಯನ್ನು ಮೌಲ್ಯಮಾಪನ ಮಾಡಿದ ಮೇಲೆ ವಿಶಿಷ್ಟವಾದ ಗುರುತೊಂದನ್ನು ಆಯ್ಕೆ ಮಾಡಿ, ಅದನ್ನು ಸಹಿಯೊಂದಿಗೆ ಜೋಡಣೆ ಮಾಡಲಾಗುತ್ತದೆ. ಹಾಗೂ ಅದನ್ನು ಕಾರ್ಡ್ ಜತೆಗೆ ಸೇರಿಸಲಾಗುತ್ತದೆ. ಒಂದು ಅಥವಾ ಎರಡೂ ಕೈ ಅಂಗೈಯನ್ನು ಬಳಸುವುದಕ್ಕೆ ಅವಕಾಶ ಇದೆ. ಅಮೆಜಾನ್ ಪ್ರೈಮ್ ಖಾತೆಗೆ ಕೂಡ ಜೋಡಣೆ ಆಗುತ್ತದೆ ಮತ್ತು ಅದಕ್ಕೆ ರಿಯಾಯಿತಿ ಸಿಗುತ್ತದೆ. ​

ಇದನ್ನೂ ಓದಿ: ಇ-ಕಾಮರ್ಸ್ ಕಂಪೆನಿ ಅಮೆಜಾನ್ ಇಂಡಿಯಾದಿಂದ ಸಣ್ಣ ಉದ್ಯಮಗಳಿಗೆ ಶುಭ ಸುದ್ದಿ

(Amazon rolls out ‘pay-by-palm’ in New York City Go Store that lets customers purchase items with a simple wave of a hand)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್