Wholesale Price Index Inflation: ಹಣದುಬ್ಬರದ ಎಫೆಕ್ಟ್​ಗೆ ಏಪ್ರಿಲ್​ನಲ್ಲಿ ಮಾಂಸಾಹಾರಿಗಳಿಗೆ ದುಬಾರಿ, ಸಸ್ಯಾಹಾರಿ ಸಸ್ತಾ ರೀ

2021ರ ಏಪ್ರಿಲ್ ತಿಂಗಳಲ್ಲಿ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ದರ ಗರಿಷ್ಠ ಮಟ್ಟದಲ್ಲಿದೆ. ಜನ ಸಾಮಾನ್ಯರ ಮೇಲೆ ಈ ಅಂಕಿ- ಅಂಶಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.​

Wholesale Price Index Inflation: ಹಣದುಬ್ಬರದ ಎಫೆಕ್ಟ್​ಗೆ ಏಪ್ರಿಲ್​ನಲ್ಲಿ ಮಾಂಸಾಹಾರಿಗಳಿಗೆ ದುಬಾರಿ, ಸಸ್ಯಾಹಾರಿ ಸಸ್ತಾ ರೀ
ಮೊಟ್ಟೆಯಂಥ ಪ್ರೊಟೀನ್ ಯುಕ್ತ ವಸ್ತುಗಳ ಬೆಲೆ ಜಾಸ್ತಿ ಆಗಿದೆ.
Follow us
Srinivas Mata
|

Updated on:May 17, 2021 | 2:04 PM

ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ (Wholesale price-based inflation) ಏಪ್ರಿಲ್ ತಿಂಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಶೇ 10.49 ತಲುಪಿದೆ. ಇದಕ್ಕೆ ಕಾರಣ ಆಗಿದ್ದು ಏರಿಕೆ ಆಗುತ್ತಲೇ ಸಾಗಿದ ಕಚ್ಚಾ ತೈಲ ಮತ್ತು ಉತ್ಪಾದನಾ ಸಾಮಗ್ರಿಗಳು ಎಂಬ ಅಂಶ ತಿಳಿದುಬಂದಿದೆ. ಇದರ ಜತೆಗೆ ಕಳೆದ ವರ್ಷದಲ್ಲಿನ ಕಡಿಮೆ ಮೂಲಾಂಶ (ಬೇಸ್) ಕೂಡ ಈ ವರ್ಷದ, ಅಂದರೆ 2021ರ ಹಣದುಬ್ಬರಕ್ಕೆ ಕಾರಣ ಆಗಿದೆ. ಮೊದಲಿಗೆ ಸಗಟು ದರ ಸೂಚ್ಯಂಕ (WPI) ಆಧಾರಿತ ಹಣದುಬ್ಬರ ಅಂದರೆ ಏನು, ಅದು ಹೇಗೆ ನಮ್ಮ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಅದು ಜಾಸ್ತಿ ಆದಲ್ಲಿ ನಮಗೇನು ಮತ್ತು ಕಡಿಮೆ ಆದರೇನು ಎಂದು ತಿಳಿದುಕೊಳ್ಳೋಣ.

ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು? ಒಂದು ಉತ್ಪನ್ನ ಅಥವಾ ವಸ್ತು ಅಂತಿಮವಾಗಿ ಗ್ರಾಹಕರನ್ನು ತಲುಪುವುದಕ್ಕೆ ಮುಂಚೆ ವಿವಿಧ ಹಂತಗಳನ್ನು ದಾಟಿ ಬರುತ್ತದೆ. ಮೊದಲಿಗೆ ಉತ್ಪಾದಕರು, ಅಂದರೆ ಆ ವಸ್ತುವಿನ ತಯಾರಕರು. ಆ ನಂತರದಲ್ಲಿ ಹೋಲ್​ಸೇಲರ್ (ಸಗಟು ಮಾರಾಟಗಾರರು). ಅದಾದ ಮೇಲೆ ಚಿಲ್ಲರೆ ಮಾರಾಟಗಾರರು (ರೀಟೇಲರ್). ಕೊನೆಗೆ ಗ್ರಾಹಕರನ್ನು ತಲುಪುತ್ತದೆ. ಇದಕ್ಕೆ ಇನ್ನೂ ಒಂದೆರಡು ಪದರ ಸೇರ್ಪಡೆ ಕೂಡ ಆಗಬಹುದು. ಹೀಗೆ ವಿವಿಧ ಹಂತವನ್ನು ದಾಟುವಾಗ ವಿಧಿಸುವ ಶುಲ್ಕ ಅಥವಾ ದರ ಕೂಡ ಬದಲಾಗುತ್ತಾ ಹೋಗುತ್ತದೆ. ಇದನ್ನು ಸೂಚಿಸುವುದಕ್ಕೆ ಒಂದು ಮಾನದಂಡ ಬೇಕಲ್ಲಾ, ಅದನ್ನು ಸಗಟು ದರ ಸೂಚ್ಯಂಕ ಎನ್ನಲಾಗುತ್ತದೆ.

ಇನ್ನು ಉತ್ಪನ್ನಗಳು, ವಸ್ತು, ಸೇವೆಗಳ ದರ ಎಷ್ಟು ಏರಿಕೆ ಆಗಿದೆ ಎಂಬುದನ್ನು ಸೂಚಿಸುವುದಕ್ಕೆ ಹಣದುಬ್ಬರ ಎನ್ನಲಾಗುತ್ತದೆ. ಅಲ್ಲಿಗೆ ಈ ಎರಡು ವ್ಯಾಖ್ಯಾನವನ್ನು ಒಗ್ಗೂಡಿಸಿದರೆ ನಿಮಗೆ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು ಅಂತ ಗೊತ್ತಾಗುತ್ತದೆ. ಸರಿ, ಇದರಿಂದ ನಮ್ಮ ಮೇಲೆ ಏನು ಪರಿಣಾಮ ಅಂದರೆ, ದಿನ ಬಳಕೆಯ ವಸ್ತು, ಸೇವೆ, ಉತ್ಪನ್ನಗಳು ಸಿಕ್ಕಾಪಟ್ಟೆ ಜಾಸ್ತಿ ಆಗಿವೆ ಅಂತ ಅಂದುಕೊಳ್ಳುತ್ತಿರುತ್ತೇವಲ್ಲಾ ಅಥವಾ ಪರವಾಗಿಲ್ಲ ಮುಂಚೆಗಿಂತ ಈಗ ಸ್ವಲ್ಪ ಬೆಲೆ ಇಳಿದಿದೆ ಅಂತ ನಿರಾಳ ಆಗುತ್ತೇವಲ್ಲಾ ಅದಕ್ಕೆ ಕಾರಣ ತಿಳಿಯುವುದು ಈ ಅಂಕಿ- ಅಂಶದ ಮೂಲಕವಾಗಿ.

ಏಪ್ರಿಲ್​ನಲ್ಲಿ ಸತತ ನಾಲ್ಕನೇ ಬಾರಿಗೆ WPI ಹಣದುಬ್ಬರ ಏರಿಕೆ? ನಮ್ಮನ್ನು ತಲುಪಬೇಕಾದ ವಸ್ತು, ಉತ್ಪನ್ನ, ಸೇವೆಗಳ ದರಕ್ಕೆ ವಿವಿಧ ಹಂತಗಳಲ್ಲಿ (ಉತ್ಪಾದಕರು, ಸಗಟು ಮಾರಾಟಗಾರರು, ಚಿಲ್ಲರೆ ಮಾರಾಟಗಾರರು) ಶುಲ್ಕ ವಿಧಿಸುತ್ತಾ ಹೋದಲ್ಲಿ ದುಬಾರಿ ಆಗಿಯೇ ಆಗುತ್ತದೆ. ಅದೇ ಕಡಿಮೆಯಾದಲ್ಲಿ ನಮ್ಮನ್ನು ತಲುಪುವಾಗ ಬೆಲೆ ಕಡಿಮೆ ಇರುತ್ತದೆ. 2021ರ ಮಾರ್ಚ್​ನಲ್ಲಿ WPI ಹಣದುಬ್ಬರ ಶೇ 7.39 ಇತ್ತು. ಅದಕ್ಕೂ ವರ್ಷದ ಹಿಂದೆ ನೋಡಬೇಕು ಅಂದರೆ ಶೇ (-) 1.57 ಇತ್ತು. ಆದರೆ ಈ 2021ರ ಏಪ್ರಿಲ್​ನಲ್ಲಿ ಸತತ ನಾಲ್ಕನೇ ಬಾರಿಗೆ WPI ಹಣದುಬ್ಬರ ಏರಿಕೆ ಕಂಡಿದೆ.

2021ರ ಏಪ್ರಿಲ್​ನಲ್ಲಿ ಪದಾರ್ಥಗಳ ಬೆಲೆ ಇಷ್ಟೊಂದು ಜಾಸ್ತಿ ಆಗುವುದಕ್ಕೆ ಏನು ಕಾರಣ ಅಂತ ನೋಡುವುದಾದರೆ, ಮುಖ್ಯವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಡೆಗೆ ಬೊಟ್ಟು ಮಾಡಲಾಗುತ್ತದೆ. ಇದು ಸಹಜ ಕೂಡ. ಏಕೆಂದರೆ, ಇಡೀ ಸಾಗಾಟ ವ್ಯವಸ್ಥೆಯೇ ಅವಲಂಬಿಸಿರುವುದು ಇವೆರಡರ ಮೇಲೆ. ಉತ್ಪನ್ನಗಳು, ಸೇವೆ ದರಗಳ ನಿರ್ಧಾರ ಆಗುವುದರಲ್ಲಿ ಇವುಗಳ ಬೆಲೆ ಮುಖ್ಯವಾಗುತ್ತದೆ. ಉತ್ಪಾದನಾ ವಸ್ತುಗಳು, ಮಿನರಲ್ ಆಯಿಲ್, ಪೆಟ್ರೋಲ್, ಡೀಸೆಲ್ ಇವೆಲ್ಲವೂ ಕಳೆದ ವರ್ಷದ ಏಪ್ರಿಲ್​ಗಿಂತ ಸಿಕ್ಕಾಪಟ್ಟೆ ದುಬಾರಿ ಆಗಿದೆ ಎಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ತಿಳಿಸಿದೆ.

ಮೊಟ್ಟೆ, ಮಾಂಸ ಮತ್ತು ಮೀನು ದುಬಾರಿ ಆಹಾರ ಪದಾರ್ಥಗಳ ಹಣದುಬ್ಬರ ಶೇ 4.92 ಇತ್ತು. ಪ್ರೊಟೀನ್ ಹೆಚ್ಚಿರುವ ಮೊಟ್ಟೆ, ಮಾಂಸ, ಮೀನು ಇಂಥವುಗಳ ಬೆಲೆ ದುಬಾರಿ ಆಗಿತ್ತು. ಆಹಾರ ಪದಾರ್ಥಗಳ ಬೆಲೆಯ ಹಣದುಬ್ಬರವನ್ನು ಮತ್ತಷ್ಟು ಬಿಡಿಸಿ ಹೇಳಬೇಕೆಂದರೆ, ತರಕಾರಿಗಳ ಬೆಲೆಯಲ್ಲಿ ಮಾರ್ಚ್​ನಲ್ಲಿ ಶೇ (-) 5.19 ಇದ್ದರೆ, ಏಪ್ರಿಲ್​ನಲ್ಲಿ ಶೇ (-) 9.03 ಇದೆ. ಮೊಟ್ಟೆ, ಮಾಂಸ ಮತ್ತು ಮೀನು ಈ ಮೂರರ ಬ್ಯಾಸ್ಕೆಟ್ ಏಪ್ರಿಲ್​ನಲ್ಲಿ ಶೇ 10.88 ಇತ್ತು. ದ್ವಿದಳ ಧಾನ್ಯಗಳ ಹಣದುಬ್ಬರ ಏಪ್ರಿಲ್​ನಲ್ಲಿ ಶೇ 10.74 ಇದ್ದರೆ, ಹಣ್ಣುಗಳದು ಶೇ 27.43 ಇತ್ತು. ತೈಲ ಹಾಗೂ ವಿದ್ಯುತ್ ಶೇ 20.94 ಹಾಗೂ ಉತ್ಪಾದನೆ ಉತ್ಪನ್ನಗಳು ಶೇ 9.01 ಇತ್ತು.

ಇನ್ನು ಗ್ರಾಹಕ ದರ ಸೂಚ್ಯಂಕ ಆಧಾರಿತ ಹಣದುಬ್ಬರ, ಅಂದರೆ ಗ್ರಾಹಕರನ್ನು ತಲುಪುವ ಹಂತದಲ್ಲಿನ ಉತ್ಪನ್ನಗಳ ಬೆಲೆಯನ್ನು ಸೂಚಿಸುವ ಸೂಚ್ಯಂಕದ ಆಧಾರಿತ ಹಣದುಬ್ಬರ ಏಪ್ರಿಲ್​ನಲ್ಲಿ ಕಡಿಮೆಯಾಗಿ ಶೇ 4.29 ಆಗಿದೆ. ಆಹಾರದ ಬೆಲೆಯಲ್ಲಿನ ಇಳಿಕೆಯಿಂದಾಗಿ ಇಂತಹದ್ದೊಂದು ಬೆಳವಣಿಗೆ ಆಗಿದೆ ಎಂಬ ಅಂಶ ಕಳೆದ ವಾರ ಬಿಡುಗಡೆ ಮಾಡಿದ ಅಂಕಿ- ಅಂಶದಿಂದ ತಿಳಿದುಬಂತು. ಅಂದಹಾಗೆ ಪ್ರಸಕ್ತ ಹಣಕಾಸು ವರ್ಷದ ಬಾಕಿ ಅವಧಿಗೆ ಕೋವಿಡ್​- 19 ಸೋಂಕು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಹಾಗೂ ಅದರ ಪ್ರಭಾವ ಸಪ್ಲೈ ಚೈನ್ (ಪೂರೈಕೆ ಜಾಲ) ಮತ್ತು ಲಾಜಿಸ್ಟಿಕ್ಸ್ ಮೇಲೆ ಅವಲಂಬನೆ ಆಗಿರುತ್ತದೆ ಎನ್ನುತ್ತಾರೆ ವಿಶ್ಲೇಷಕರು.

ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು? ಈ ಮೇಲ್ಕಂಡ ಅಂಕಿಗಳಲ್ಲಿ (-) ಎಂದು ಬಳಸಿರುವುದು ಮೈನಸ್ ಅಂತ ಅರ್ಥ. ಅವುಗಳ ಬೆಲೆಯಲ್ಲಿ ಇಳಿಕೆ ಆಗಿದೆ ಎಂಬುದನ್ನು ಸೂಚಿಸುತ್ತದೆ. ಉಳಿದವುಗಳ ದರದಲ್ಲಿ ಹೆಚ್ಚಳವಾಗಿದೆ. ಆ ಏರಿಕೆಯನ್ನು ಶೇಕಡಾವಾರು ಲೆಕ್ಕದಲ್ಲಿ ವಿವರಿಸಲಾಗಿದೆ. ಆದರೆ ಒಟ್ಟಾರೆ ನೋಡಿದಾಗ ಬೆಲೆಗಳ ಏರಿಕೆ ದಾಖಲೆ ಮಟ್ಟವನ್ನು ಮುಟ್ಟಿದೆ.

ಇದನ್ನೂ ಓದಿ: Retail Inflation: ಏಪ್ರಿಲ್ ತಿಂಗಳ ಚಿಲ್ಲರೆ ಹಣದುಬ್ಬರ ದರ ಶೇ 4.29ರೊಂದಿಗೆ 3 ತಿಂಗಳ ಕನಿಷ್ಠ ಮಟ್ಟಕ್ಕೆ

(Wholesale Price Index based inflation at record high of 10.29% in 2021 April)

Published On - 2:03 pm, Mon, 17 May 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ