Gold Silver Rate Today: ಸ್ಥಿರತೆಯಲ್ಲಿ ಚಿನ್ನ, ಬೆಳ್ಳಿ ದರ! ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ದೆಹಲಿಯಲ್ಲಿ ಬೆಲೆ ಹೀಗಿದೆ
Gold Silver Price in Bangalore: ಇಂದು ಸೋಮವಾರ ಚಿನ್ನದ ದರ ಹೆಚ್ಚು- ಕಡಿಮೆ ಸ್ಥಿರತೆ ಕಾಪಾಡಿಕೊಂಡಿದೆ ಎಂದು ವಿಶ್ಲೇಷಿಸಬಹುದು. ಏಕೆಂದರೆ ಚಿನ್ನದ ದರ 10 ರೂಪಾಯಿಯ ಅಂತರದಲ್ಲಿ ಏರಿಕೆ ಕಾಣುವುದು ಅಥವಾ ಇಳಿಕೆಯತ್ತ ಸಾಗುವುದು ಸರ್ವೇ ಸಾಮಾನ್ಯ.
ಬೆಂಗಳೂರು: ಇಂದು ಸೋಮವಾರ ಚಿನ್ನದ ದರ ಹೆಚ್ಚು- ಕಡಿಮೆ ಸ್ಥಿರತೆ ಕಾಪಾಡಿಕೊಂಡಿದೆ ಎಂದು ವಿಶ್ಲೇಷಿಸಬಹುದು. ಏಕೆಂದರೆ ಚಿನ್ನದ ದರ 10 ರೂಪಾಯಿಯ ಅಂತರದಲ್ಲಿ ಏರಿಕೆ ಕಾಣುವುದು ಅಥವಾ ಇಳಿಕೆಯತ್ತ ಸಾಗುವುದು ಸರ್ವೇ ಸಾಮಾನ್ಯ. ದೈನಂದಿನ ದರ ಪರಿಶೀಲನೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಗಮನಿಸಿದಾಗ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ ಸುಮಾರು 10 ರೂ.ಗಳಷ್ಟು ಏರಿಕೆ ಕಂಡು ಬಂದಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 44,900 ರೂಪಾಯಿ ಇತ್ತು. ಇಂದು 10 ರೂಪಾಯಿಯ ದರ ಏರಿಕೆಯ ಬಳಿಕ 44,910 ರೂಪಾಯಿ ಆಗಿದೆ. ಹೆಚ್ಚು-ಕಡಿಮೆ ಸ್ಥಿರತೆಯಲ್ಲಿದೆ ಚಿನ್ನದ ದರ ಎಂದು ಹೇಳಬಹುದು. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 48,980 ರೂಪಾಯಿ ಇತ್ತು. ಇಂದು 48,990 ರೂಪಾಯಿ ಆಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 45,200 ರೂಪಾಯಿ ಇತ್ತು. ಇಂದು 45,210 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 49,310 ರೂಪಾಯಿ ಇದ್ದು, ಇಂದು ದರ ಏರಿಕೆಯ ಬಳಿಕ 49,320 ರೂ. ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ 46,200 ರೂಪಾಯಿ ಇದ್ದ ಚಿನ್ನದ ದರ ಇಂದು 46,210 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 50,200 ರೂಪಾಯಿ ಇದ್ದು, ಇಂದು 50,210 ರೂ. ಆಗಿದೆ.
ಇನ್ನು, ಹೈದರಾಬಾದ್ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 44,900 ರೂಪಾಯಿ ಇತ್ತು. ಇಂದು 44,910 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿಯೂ ಕೂಡಾ 10ರೂಪಾಯಿಯಷ್ಟು ಏರಿಕೆ ಕಂಡು ಬಂದಿದ್ದು, 48,980 ರೂಪಾಯಿ ಇದ್ದ ಚಿನ್ನದ ದರ 48,990 ರೂಪಾಯಿ ಆಗಿದೆ.
ವಿವಿಧ ನಗರಗಳಲ್ಲಿ ಬೆಳ್ಳಿ ದರ ನಿನ್ನೆಯ ಬೆಲೆಯನ್ನೇ ಕಾಯ್ದಿರಿಸಿಕೊಂಡ ಬೆಳ್ಳಿ ಇಂದು ಹೈದರಾಬಾದ್ನಲ್ಲಿ 1ಕೆಜಿಗೆ 76,000 ರೂಪಾಯಿ ಇದೆ. ಹಾಗೆಯೇ ದೆಹಲಿಯಲ್ಲಿ 1ಕೆಜಿ ಬೆಳ್ಳಿಗೆ 71,000 ರೂಪಾಯಿ ಇದೆ. ಚೆನ್ನೈನಲ್ಲಿ 1 ಕೆಜಿ ಬೆಳ್ಳಿ ದರ 76,000 ರೂಪಾಯಿ ಹೊಂದಿದ್ದು, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಬೆಳ್ಳಿ ದರ ಸಮವಾಗಿದೆ. ಇನ್ನು, ಬೆಂಗಳೂರಿನಲ್ಲಿಯೂ ಸಹ 1ಕೆಜಿ ಬೆಳ್ಳಿ ದರ 71,000 ರೂಪಾಯಿ ಇದೆ.