Gold Silver Rate Today: ಗ್ರಾಹಕರಿಗೆ ಗುಡ್​ ನ್ಯೂಸ್​, ಚಿನ್ನದ ದರ ಇಳಿಕೆ; ಬೆಂಗಳೂರಿನಲ್ಲಿ ಚಿನ್ನ ಬೆಲೆ ಎಷ್ಟು ಇಳಿದಿದೆ? ಪರಿಶೀಲಿಸಿ

Gold Silver Price In Bangalore: ಬೆಂಗಳೂರು ನಗರದ ಜನರಿಗೆ ಖುಷಿ ಕೊಡುವ ವಿಚಾರವೆಂದರೆ ಚಿನ್ನ ದರ ಇಳಿಕೆಯತ್ತ ಮುಖ ಮಾಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 44,700 ರೂಪಾಯಿ ಇತ್ತು. ಇಂದು ದರ ಇಳಿಕೆಯ ಬಳಿಕ 44,500 ರೂಪಾಯಿ ಆಗಿದೆ.

Gold Silver Rate Today: ಗ್ರಾಹಕರಿಗೆ ಗುಡ್​ ನ್ಯೂಸ್​, ಚಿನ್ನದ ದರ ಇಳಿಕೆ; ಬೆಂಗಳೂರಿನಲ್ಲಿ ಚಿನ್ನ ಬೆಲೆ ಎಷ್ಟು ಇಳಿದಿದೆ? ಪರಿಶೀಲಿಸಿ
ಸಾಂದರ್ಭಿಕ ಚಿತ್ರ
Follow us
shruti hegde
|

Updated on:May 13, 2021 | 9:27 AM

ಬೆಂಗಳೂರು: ನಗರದ ಜನರಿಗೆ ಖುಷಿ ಕೊಡುವ ವಿಚಾರವೆಂದರೆ ಚಿನ್ನ ದರ ಇಳಿಕೆಯತ್ತ ಮುಖ ಮಾಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 44,700 ರೂಪಾಯಿ ಇತ್ತು. ಇಂದು ದರ ಇಳಿಕೆಯ ಬಳಿಕ 44,500 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 48,770 ರೂಪಾಯಿ ಇತ್ತು. ಇಂದು ದರ ಇಳಿಕೆಯ ನಂತರ 48,560 ರೂಪಾಯಿಗೆ ಕುಸಿತ ಕಂಡಿದೆ.

ನಗರದಲ್ಲಿ 22 ಕ್ಯಾರೆಟ್ 100 ಗ್ರಾಂ ಚಿನ್ನದ ದರ ನಿನ್ನೆ 4,47,000 ರೂಪಾಯಿ ಇತ್ತು. ಇಂದು 2,000 ರೂಪಾಯಿಯಷ್ಟು ಇಳಿಕೆ ಕಂಡ ನಂತರದಲ್ಲಿ 4,45,000 ರೂಪಾಯಿ ಆಗಿದೆ. ಅದೇ ರೀತಿ 24 ಕ್ಯಾರೆಟ್ 100 ಗ್ರಾಂ ಚಿನ್ನದ ದರ ನಿನ್ನೆ 4,87,700 ರೂಪಾಯಿ ಇತ್ತು. ಇಂದು 2,100 ರೂಪಾಯಿ ಇಳಿಕೆಯ ಬಳಿಕ 4,85,600 ರೂಪಾಯಿಗೆ ಕುಸಿತ ಕಂಡಿದೆ.

ನಗರದಲ್ಲಿ ಬೆಳ್ಳಿ ದರವೂ ಇಂದು ಕುಸಿತ ಕಂಡಿದ್ದು, 1 ಗ್ರಾಂ ಬೆಳ್ಳಿ ದರ 71.50 ರೂಪಾಯಿ ಆಗಿದೆ. ಹಾಗೂ 8 ಗ್ರಾಂ ಬೆಳ್ಳಿ ದರ 572 ರೂಪಾಯಿಗೆ ಇಳಿದಿದೆ. 10 ಗ್ರಾಂ ಬೆಳ್ಳಿ ದರ 715 ರೂಪಾಯಿ ಆಗಿದ್ದು, 100 ಗ್ರಾಂ ಬೆಳ್ಳಿ ದರ 7,150 ರೂಪಾಯಿಗೆ ಇಳಿಕೆ ಆಗಿದೆ. ಇನ್ನು, 1ಕೆಜಿ ಬೆಳ್ಳಿ ದರ ನಿನ್ನೆ 71,600 ರೂಪಾಯಿ ಇದ್ದು, 100 ರೂಪಾಯಿ ಇಳಿಕೆ ಬಳಿಕ 71,500 ರೂಪಾಯಿಗೆ ಕುಸಿತ ಕಂಡಿದೆ.

ವಿವಿಧ ನಗರಗಳಲ್ಲಿ ಚಿನ್ನದ ದರ ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,000 ರೂಪಾಯಿಗೆ ಇಳಿಕೆಯಾಗಿದೆ. ನಿನ್ನೆ 45,200 ರೂಪಾಯಿ ಇದ್ದು, ಇಂದು ಸುಮಾರು 200 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 49,310 ರೂಪಾಯಿ ಇತ್ತು. 220 ರೂಪಾಯಿ ಇಳಿಕೆ ಕಂಡು ಬಂದಿದ್ದು, ಇಂದು ದರ 49,090 ರೂಪಾಯಿ ಆಗಿದೆ.

ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,100 ರೂಪಾಯಿಯಿಂದ 45,900 ರೂಪಾಯಿಗೆ ಇಳಿಕೆಯಾಗಿದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,100 ರೂಪಾಯಿಯಿಂದ 49,900 ರೂಪಾಯಿಗೆ ಇಳಿಕೆ ಆಗಿದೆ. ಹೈದರಾಬಾದ್​ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,700 ರೂಪಾಯಿಯಿಂದ 44,500 ರೂಪಾಯಿಗೆ ಇಳಿಕೆಯಾಗಿದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನ 48,770 ರೂಪಾಯಿಯಿಂದ 48,560 ರೂಪಾಯಿಗೆ ಕುಸಿತ ಕಂಡು ಬಂದಿದೆ.

ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 44,910 ರೂಪಾಯಿ ಇತ್ತು. ಇಂದು 190 ರೂಪಾಯಿಯಷ್ಟು ಇಳಿಕೆ ಕಂಡು ಬಂದ ನಂತರ 44,720 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನ ನಿನ್ನೆ 45,910 ರೂಪಾಯಿಯಿಂದ 45,720 ರೂಪಾಯಿಗೆ ಇಳಿಕೆ ಆಗಿದೆ.

ಇದನ್ನೂ ಓದಿ: Gold Price Today: ಈ ವರ್ಷದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಚಿನ್ನದ ದರ ಇಳಿಕೆ

Gold Rate Today: ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನದ ದರ ಇಳಿಕೆ, ಹೈದರಾಬಾದ್​ನಲ್ಲಿ ಏರಿದ ಚಿನ್ನದ ಬೆಲೆ; ಸಂಪೂರ್ಣ ವಿವರ ಇಲ್ಲಿದೆ

Published On - 9:21 am, Thu, 13 May 21