ಕೊರೊನಾ ಲಸಿಕೆ ಹಾಕಿಸಿಕೊಳ್ಳಲು 7 ಕಿ.ಮೀ. ನಡೆದುಕೊಂಡು ಬಂದ ವ್ಯಕ್ತಿ, ಆದರೆ ಲಸಿಕೆನೇ ಇಲ್ಲ ಎಂದ ಸಿಬ್ಬಂದಿ

ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಕಟ್ಟನಿಟ್ಟಿನ ನಿರ್ಬಂಧನೆಗಳನ್ನು ಹೇರಿ ಲಾಕ್ಡೌನ್ ಮಾಡಿದೆ. ಹೀಗಾಗಿ ಬೈಕ್‌ನಲ್ಲಿ ಬಂದರೆ ಪೊಲೀಸರು ಹೊಡೆಯುವ ಭಯಕ್ಕೆ ವ್ಯಕ್ತಿಯೊಬ್ಬರು ಕೊರೊನಾ ಲಸಿಕೆ ಪಡೆಯಲು 7 ಕಿ.ಮೀ ನಡೆದುಕೊಂಡೇ ಬೆಂಗಳೂರಿನ ಯಲಹಂಕದಲ್ಲಿರುವ ಲಸಿಕಾ ಕೇಂದ್ರಕ್ಕೆ ಬಂದಿದ್ದಾರೆ. ಆದರೆ ಕೊವ್ಯಾಕ್ಸಿನ್ ಲಸಿಕೆ ಇಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಿದ್ದಾರಂತೆ.

ಕೊರೊನಾ ಲಸಿಕೆ ಹಾಕಿಸಿಕೊಳ್ಳಲು 7 ಕಿ.ಮೀ. ನಡೆದುಕೊಂಡು ಬಂದ ವ್ಯಕ್ತಿ, ಆದರೆ ಲಸಿಕೆನೇ ಇಲ್ಲ ಎಂದ ಸಿಬ್ಬಂದಿ
ವ್ಯಾಕ್ಸಿನ್ ಬಗ್ಗೆ ಮಾಹಿತಿ ನೀಡುತ್ತಿರುವ ಸಿಬ್ಬಂದಿ
Follow us
ಆಯೇಷಾ ಬಾನು
|

Updated on: May 13, 2021 | 12:08 PM

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಾವ ಹೆಚ್ಚಾಗಿದೆ. ಎಲ್ಲಿ ನೋಡಿದರೂ ನೋ ವ್ಯಾಕ್ಸಿನ್ ಬೋರ್ಡ್ ಕಂಡು ಬರುತ್ತಿದೆ. ಹೀಗಾಗಿ ಸದ್ಯ ರಾಜ್ಯದಲ್ಲಿ 18ರಿಂದ 45 ವರ್ಷದೊಳಗಿನವರ ಲಸಿಕಾ ಅಭಿಯಾನಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಆದರೆ ಈ ಮೊದಲು ಮೊದಲ ಡೋಸ್ ಪಡೆದ 45 ವರ್ಷ ಮೇಲ್ಪಟ್ಟವರು ಎರಡನೇ ಡೋಸ್ ಪಡೆಯಲು ಪರದಾಡುತ್ತಿದ್ದಾರೆ. ಇದರ ನಡುವೆ ಕೊರೊನಾ ಲಸಿಕೆ ಪಡೆಯಲು ವ್ಯಕ್ತಿಯೊಬ್ಬ 7 ಕಿ.ಮೀ. ನಡೆದುಕೊಂಡು ಬಂದಿದ್ದು ಲಸಿಕೆ ಇಲ್ಲದೆ ಕಂಗಾಲಾಗಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಕಟ್ಟನಿಟ್ಟಿನ ನಿರ್ಬಂಧನೆಗಳನ್ನು ಹೇರಿ ಲಾಕ್ಡೌನ್ ಮಾಡಿದೆ. ಹೀಗಾಗಿ ಬೈಕ್‌ನಲ್ಲಿ ಬಂದರೆ ಪೊಲೀಸರು ಹೊಡೆಯುವ ಭಯಕ್ಕೆ ವ್ಯಕ್ತಿಯೊಬ್ಬರು ಕೊರೊನಾ ಲಸಿಕೆ ಪಡೆಯಲು 7 ಕಿ.ಮೀ ನಡೆದುಕೊಂಡೇ ಬೆಂಗಳೂರಿನ ಯಲಹಂಕದಲ್ಲಿರುವ ಲಸಿಕಾ ಕೇಂದ್ರಕ್ಕೆ ಬಂದಿದ್ದಾರೆ. ಆದರೆ ಕೊವ್ಯಾಕ್ಸಿನ್ ಲಸಿಕೆ ಇಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಿದ್ದಾರಂತೆ. ಹೀಗಾಗಿ ಲಸಿಕೆ ಪಡೆಯದೆ ಈಗ ಮತ್ತೆ 7 ಕಿ.ಮೀ. ವಾಪಸಾಗಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವ್ಯಾಕ್ಸಿನ್ ಪಡೆದಿದ್ದರೆ ಮೆಸೇಜ್ ತೋರಿಸಿ ಬೈಕ್‌ನಲ್ಲಿ ಹೋಗಬಹುದಾಗಿತ್ತು. ಆದರೆ ಈಗ ನಾನು ನಡೆದುಕೊಂಡು ಹೋಗಬೇಕಾಗಿದೆ. ಈ ಅವಾಂತರಕ್ಕೆ ಸರ್ಕಾರವೇ ಕಾರಣ. ಕೊರೊನಾ ಮೂರನೇ ಅಲೆ ಬರ್ತಿದೆ, ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದ್ರೆ ಮತ್ತಷ್ಟು ಅನಾಹುತ ಆಗುತ್ತೆ. ಹಂತ ಹಂತವಾಗಿ ಲಸಿಕೆ ಪೂರೈಕೆ ಮಾಡುವಲ್ಲಿ ಸರ್ಕಾರ ಫೇಲ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ಇಂದು ಶುರುವಾಗಿಲ್ಲ 3ನೇ ಹಂತದ ಕೊರೊನಾ ಲಸಿಕೆ ವಿತರಣೆ; ವ್ಯಾಕ್ಸಿನ್ ಇಲ್ಲ ಅಂದ್ರೂ ಕರ್ನಾಟಕದಲ್ಲಿ ಕ್ಯೂ ನಿಂತ ಜನ !

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ