AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶಾದ್ಯಂತ ಇಂದು ಶುರುವಾಗಿಲ್ಲ 3ನೇ ಹಂತದ ಕೊರೊನಾ ಲಸಿಕೆ ವಿತರಣೆ; ವ್ಯಾಕ್ಸಿನ್ ಇಲ್ಲ ಅಂದ್ರೂ ಕರ್ನಾಟಕದಲ್ಲಿ ಕ್ಯೂ ನಿಂತ ಜನ !

ಗುಜರಾತ್​, ಮಹಾರಾಷ್ಟ್ರ, ಚತ್ತೀಸ್​ಗಢ್​ಗಳು ತಮ್ಮಲ್ಲಿರುವ ಲಸಿಕೆ ಲಭ್ಯತೆಯನ್ನು ಆಧರಿಸಿ ಇಂದಿನಿಂದ ಲಸಿಕೆ ವಿತರಣೆ ಅಭಿಯಾನ ಪ್ರಾರಂಭಿಸುವುದಾಗಿ ಹೇಳಿವೆ.

ದೇಶಾದ್ಯಂತ ಇಂದು ಶುರುವಾಗಿಲ್ಲ 3ನೇ ಹಂತದ ಕೊರೊನಾ ಲಸಿಕೆ ವಿತರಣೆ; ವ್ಯಾಕ್ಸಿನ್ ಇಲ್ಲ ಅಂದ್ರೂ ಕರ್ನಾಟಕದಲ್ಲಿ ಕ್ಯೂ ನಿಂತ ಜನ !
ಕೊರೊನಾ ಲಸಿಕೆ ಹಾಕಿಸಿಕೊಳ್ಳುತ್ತಿರುವುದು
Lakshmi Hegde
|

Updated on:May 01, 2021 | 9:28 AM

Share

ದೆಹಲಿ: ಇಂದು ದೇಶಾದ್ಯಂತ ಮೂರನೇ ಹಂತದ ಕೊರೊನಾ ಲಸಿಕೆ ವಿತರಣೆ ಅಭಿಯಾನ ಪ್ರಾರಂಭವಾಗಬೇಕಿತ್ತು. ಈ ಹಂತದಲ್ಲಿ 18-45ವರ್ಷದವರೆಗಿನ ಎಲ್ಲರಿಗೂ ಲಸಿಕೆ ಪಡೆಯುವ ಅವಕಾಶ ಇತ್ತು. ಆದರೆ ಇದೀಗ ದೇಶದ ಹಲವು ರಾಜ್ಯಗಳಲ್ಲಿ ಲಸಿಕೆ ಅಭಾವ ಉಂಟಾಗಿದೆ. ಹಾಗಾಗಿ ಎಲ್ಲ ರಾಜ್ಯಗಳಲ್ಲೂ ಇಂದಿನಿಂದಲೇ ಕೊವಿಡ್​ ಲಸಿಕೆ ಡ್ರೈವ್​ ಶುರು ಮಾಡಲು ಸಾಧ್ಯವಾಗುತ್ತಿಲ್ಲ.

ಗುಜರಾತ್​, ಮಹಾರಾಷ್ಟ್ರ, ಚತ್ತೀಸ್​ಗಢ್​ಗಳು ತಮ್ಮಲ್ಲಿರುವ ಲಸಿಕೆ ಲಭ್ಯತೆಯನ್ನು ಆಧರಿಸಿ ಇಂದಿನಿಂದ ಲಸಿಕೆ ವಿತರಣೆ ಅಭಿಯಾನ ಪ್ರಾರಂಭಿಸುವುದಾಗಿ ಹೇಳಿವೆ. ಆದರೆ ಈ ರಾಜ್ಯಗಳಲ್ಲೂ ಲಸಿಕೆ ಸೀಮಿತ ಪ್ರಮಾಣದಲ್ಲಿರುವುದಾಗಿ ತಿಳಿಸಿವೆ.

ಇನ್ನು ಕರ್ನಾಟಕ, ಪಂಜಾಬ್​, ಪಶ್ಚಿಮ ಬಂಗಾಳ, ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗೋವಾ, ಜಮ್ಮುಕಾಶ್ಮೀರ ಸೇರಿ ಇನ್ನಿತರ ರಾಜ್ಯಗಳಲ್ಲಿ ಇಂದಿನಿಂದ ಜನರಿಗೆ ಲಸಿಕೆ ನೀಡಲಾಗುತ್ತಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಸಿಕ್ಕ ಬಳಿಕವಷ್ಟೇ ವಿತರಿಸಲಾಗುವುದು ಎಂದು ತಿಳಿಸಿವೆ. ಎಲ್ಲ ರಾಜ್ಯಗಳ ​45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ನಾವು ಪೂರೈಸುತ್ತೇವೆ. ಆದರೆ 18-45 ವರ್ಷದವರೆಗಿನವರಿಗೆ ನೀಡಲು ಆಯಾ ರಾಜ್ಯಸರ್ಕಾರಗಳೇ ಲಸಿಕೆ ಖರೀದಿಸಬೇಕು. ಸಂಗ್ರಹ ಮಾಡಿಟ್ಟುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಮೇ 1ರೊಳಗೆ ಅಗತ್ಯ ಇರುವಷ್ಟು ಲಸಿಕೆಯನ್ನು ಖರೀದಿಸಲು ಹಲವು ರಾಜ್ಯಗಳಿಗೆ ಸಾಧ್ಯವಾಗಿಲ್ಲ.

ಕರ್ನಾಟಕದಲ್ಲಿ ಕ್ಯೂ ನಿಲ್ಲುತ್ತಿದ್ದಾರೆ ಜನ ನಾವು ನಾಳೆಯಿಂದ 18-44 ವಯಸ್ಸಿನವರಿಗೆ ಲಸಿಕೆ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಗೋವಾ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕಗಳು ನಿನ್ನೆಯೇ ತಿಳಿಸಿದ್ದು, ಸಾಕಷ್ಟು ಪ್ರಮಾಣದಲ್ಲಿ ಕೊರೊನಾ ಲಸಿಕೆ ಸಂಗ್ರಹವಾದ ಬಳಿಕವಷ್ಟೇ ಲಸಿಕೆ ಡ್ರೈವ್ ಶುರು ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಇಷ್ಟಾದರೂ ಕರ್ನಾಟಕದಲ್ಲಿ ಕೆಲವೆಡೆ ಜನರು ಇಂದು ಬೆಳಗ್ಗೆಯೇ ಲಸಿಕೆ ಪಡೆಯಲು ಕ್ಯೂ ನಿಂತ ಘಟನೆ ನಡೆದಿದೆ. ರಾಜ್ಯದಲ್ಲಿ ಕೊವಿಡ್​ 19 ಲಸಿಕೆ ಇಲ್ಲದ ಕಾರಣ ಮೇ 1ರಿಂದ ಅಭಿಯಾನ ಶುರು ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ ಎರಡು ದಿನಗಳ ಹಿಂದಿನಿಂದಲೂ ತಿಳಿಸುತ್ತಲೇ ಬಂದಿದ್ದರೂ, ಇಂದು ಧಾರವಾಡ ಸೇರಿ ಕೆಲವು ರಾಜ್ಯಗಳಲ್ಲಿ ಜನರು ಲಸಿಕೆ ಪಡೆಯಲು ರಸ್ತೆಗೆ ಇಳಿದಿದ್ದರು. ಲಾಕ್​ಡೌನ್​ ಇದ್ದರೂ ಸಹ ತಾವು ಲಸಿಕೆ ಪಡೆಯಬೇಕು ಎಂದು ಮುಗಿಬಿದ್ದಿದ್ದರು. ಧಾರವಾಡದ ರೆಡ್​ಕ್ರಾಸ್ ಸಂಸ್ಥೆಯ ಬಳಿ ಇಂದು ಬೆಳಗ್ಗೆಯೇ ಸರತಿ ಸಾಲು ಕಂಡುಬಂದಿತ್ತು.

ಇದನ್ನೂ ಓದಿ: ಇದಿನ್ನೂ ಕೆಟ್ಟದಾಗಿ ಕಾಣಿಸುತ್ತಿದೆ; ಪ್ರಶಾಂತ್​ ಸಂಬರಗಿ ಗುಣಗಳು ಚಕ್ರವರ್ತಿಗೆ ಅಸಹ್ಯ ಮೂಡಿಸುತ್ತಿವೆ

ಹೆಂಡತಿ ಎದುರು ನಾನು ಅಸಮರ್ಥ; ನಟ ಮಾಧವನ್​ ಬಹಿರಂಗವಾಗಿ ಹೀಗೆ ಹೇಳಲು ಕಾರಣ ಏನು?

Published On - 9:14 am, Sat, 1 May 21