Gold Price Today: ಈ ವರ್ಷದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಚಿನ್ನದ ದರ ಇಳಿಕೆ

Gold Price Today: ಈ ವರ್ಷದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಚಿನ್ನದ ದರ ಇಳಿಕೆ
ಚಿನ್ನಾಭರಣ (ಸಾಂದರ್ಭಿಕ ಚಿತ್ರ)

ಮೊದಲ ವಾರಕ್ಕೆ ಹೋಲಿಸಿದರೆ ಈ ವಾರದಲ್ಲಿ ವ್ಯಾಪಾರಸ್ಥರು 2 ಡಾಲರ್​ನಷ್ಟು ಚಿನ್ನಕ್ಕೆ ರಿಯಾಯತಿ ನೀಡಿದ್ದಾರೆ ಎಂದು ರಾಯಿಟರ್ಸ್​​ ಸುದ್ದಿ ಸಂಸ್ಥೆ ವರದಿ ಮಾಡಿದೆ.

shruti hegde

|

May 03, 2021 | 8:06 AM

ಕೊವಿಡ್​19 ಸಾಂಕ್ರಾಮಿಕ ಕಾಯಿಲೆ ದೇಶದಾದ್ಯಂತ ಹೆಚ್ಚಾಗಿ ಹರಡುತ್ತಿದ್ದಂತೆಯೇ ಕೊರೊನಾ ತಡೆಯಲು ಸರ್ಕಾರ ಕೆಲವು ನಿರ್ಬಂಧಗಳನ್ನು ಹೇರಿದೆ. ಇದು ಚಿನ್ನದ ಬೇಡಿಕೆಯ ಮೇಲೂ ಪರಿಣಾಮ ಬೀರಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಚಿನ್ನದ ದರ ಕಡಿಮೆಯಾಗಿದೆ.  ಮೇಲೆ ರಿಯಾಯತಿ ನೀಡಲಾಗಿದೆ. ಮೊದಲ ವಾರಕ್ಕೆ ಹೋಲಿಸಿದರೆ ಈ ವಾರದಲ್ಲಿ ವ್ಯಾಪಾರಸ್ಥರು 2 ಡಾಲರ್​ನಷ್ಟು ಚಿನ್ನದ ದರ ಕಡಿಮೆ ಮಾಡಿದ್ದಾರೆ ಎಂದು ರಾಯಿಟರ್ಸ್​​ ಸುದ್ದಿಸಂಸ್ಥೆ ವರದಿ ಮಾಡಿದೆ.

ಆಮದು ಮಾಡಿಕೊಳ್ಳುವ ಚಿನ್ನದ ಮೇಲೆ ಭಾರತದಲ್ಲಿ ಶೇ 10.57 ಆಮದು ಸುಂಕ ಮತ್ತು ಶೇ 3 ಜಿಎಸ್​ಟಿ ತೆರಿಗೆ ವಿಧಿಸಲಾಗುತ್ತದೆ. ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ಕೊವಿಡ್-​19 ನಿಯಂತ್ರಣಕ್ಕೆ ಸಂಬಂಧಿಸಿದ ನಿರ್ಬಂಧಗಳು ಇರುವುದಿಂದ ಚಿನ್ನಕ್ಕೆ ರಿಯಾಯತಿ ನೀಡಲಾಗಿದೆ ಎಂದು ಮುಂಬೈ ಮೂಲದ ವ್ಯಾಪರಿಯೊಬ್ಬರು ತಿಳಿಸಿದ್ದಾರೆ. ಕಳೆದ ಮಾರ್ಚ್​ ತಿಂಗಳಿನಲ್ಲಿ ಚಿನ್ನದ ಬೇಡಿಕೆಯು 140 ಟನ್​ಗಳಿಗೆ ಅಂದರೆ ಶೇ 37ರಷ್ಟು ಬೇಡಿಕೆ ಏರಿಕೆಯಾಗಿದೆ ಎಂದು ವರ್ಲ್ಡ್​ ಗೋಲ್ಡ್​ ಕೌನ್ಸಿಲ್​ ತಿಳಿಸಿದೆ.

ಮುಂಬರುವ ದಿನಗಳಲ್ಲಿ 10 ಗ್ರಾಂ ಚಿನ್ನದ ದರ ಶೇ 0.13ರಷ್ಟು ಹೆಚ್ಚಳವಾಗಿ, 46,785 ರೂಪಾಯಿ ಆಗುವ ಸಾಧ್ಯತೆ ಇದೆ. ಹಾಗೆಯೇ ಬೆಳ್ಳಿ ದರ 1 ಕೆಜಿಗೆ 68,423 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಪ್ರತಿ ತಿಂಗಳಿಗೂ ಭಾರತದಲ್ಲಿ 10 ಗ್ರಾಂ ಗೆ 1,800ರಂತೆ ದರ ಏರಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಎಂಸಿಎಕ್ಸ್​ ಗೋಲ್ಡ್​ 49,000 ವರೆಗೂ ತಲುಪಬಹುದು. ಚಿನ್ನದ ದರ ಏರಿಳಿಕೆ ಹೊಂದಿದ್ದರೂ ಕೂಡಾ ಟ್ರೇಡರ್ಸ್,​ ಚಿನ್ನ ಖರೀದಿಗೆ ಮುಂದಾಗುತ್ತಾರೆ ಎಂದು ಎಂಸಿಎಕ್ಸ್​ ಗೋಲ್ಡ್​ ತಿಳಿಸಿದೆ. ಚಿನ್ನದ ಬೇಡಿಕೆ ಪ್ರತಿದಿನದ ಏರಿಳಿತದ ಮೇಲೆ ಅವಲಂಬಿತವಾಗಿದೆ.

ಇದನ್ನೂ ಓದಿ: Gold Rate Today: ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನದ ದರ ಇಳಿಕೆ, ಹೈದರಾಬಾದ್​ನಲ್ಲಿ ಏರಿದ ಚಿನ್ನದ ಬೆಲೆ; ಸಂಪೂರ್ಣ ವಿವರ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada