West Bengal Election Result 2021: ಟಿಎಂಸಿ 202, ಬಿಜೆಪಿ 77 ಸೀಟುಗಳಲ್ಲಿ ಮುನ್ನಡೆ; ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಹಿನ್ನಡೆ
West Bengal Assembly Election Result 2021: ಚುನಾವಣಾ ಆಯೋಗ ಪ್ರಕಟಿಸಿದ ಮಾಹಿತಿ ಪ್ರಕಾರ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 202 ಸೀಟುಗಳಲ್ಲಿ ಮುನ್ನಡೆ ಸಾಧಿಸಿದ್ದು ಬಿಜೆಪಿ 77 ಸೀಟುಗಳಲ್ಲಿ ಮುಂದಿದೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, ಚುನಾವಣಾ ಆಯೋಗ ಪ್ರಕಟಿಸಿದ ಮಾಹಿತಿ ಪ್ರಕಾರ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 202 ಸೀಟುಗಳಲ್ಲಿ ಮುನ್ನಡೆ ಸಾಧಿಸಿದ್ದು ಬಿಜೆಪಿ 77 ಸೀಟುಗಳಲ್ಲಿ ಮುಂದಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಸ್ಪರ್ಧಿಸಿದ್ದ ಮಮತಾ 3000ಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಹಿಂದೆ ಇದ್ದಾರೆ. ರಾಷ್ಟ್ರೀಯ ಸೆಕ್ಯುಲರ್ ಮಜಲಿಸ್ ಪಕ್ಷ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು ಇಬ್ಬರು ಪಕ್ಷೇತರರು ಮುಂದೆ ಇದ್ದಾರೆ.
ಬಿಜೆಪಿಯ ಮಿತ್ರ ಪಕ್ಷ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ ಪುರುಲಿಯಾ ಜಿಲ್ಲೆಯ ಬಾಘಮುಂಡಿಯಲ್ಲಿ ಮುನ್ನಡೆ ಸಾಧಿಸಿದೆ .ಇನ್ನುಳಿದಂತೆ ಟಿಎಂಸಿ ನಾಯಕ ಮದನ್ ಮಿತ್ರಾ ಅವರು ಕಮರ್ ಹಟಿ ಚುನಾವಣಾ ಕ್ಷೇತ್ರದಲ್ಲಿ 8,138 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ . ಬಿಜೆಪಿ ನೇತಾರ ಆನಿಂದ್ಯಾ ಬ್ಯಾನರ್ಜಿ ಈ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಡಾರ್ಜಲಿಂಗ್ನಲ್ಲಿ ಪಕ್ಷೇತರರು ಮುಂದು ಡಾರ್ಜಲಿಂಗ್ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಕೇಶವ್ ರಾಜ್ ಶರ್ಮಾ ಮುನ್ನಡೆ ಸಾಧಿಸಿದ್ದಾರೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಬಿಜೆಪಿ ಅಭ್ಯರ್ಥಿ ನೀರಜ್ ತಮಂಗ್ ಜಿಂಬ ನಿಧಾನವಾಗಿ ಮತಗಳ ಅಂತರ ಕಡಿಮೆ ಮಾಡುತ್ತಾ ಮುಂದೆ ಸಾಗುತ್ತಿದ್ದಾರೆ ಎಂದಿದೆ.
ಭಬಾನಿಪುರ್ ಕ್ಷೇತ್ರದಲ್ಲಿ ಟಿಎಂಸಿ ಪಕ್ಷದ ಶೋಭನ್ ದೇಬ್ ಚಟ್ಟೋಪಾಧ್ಯಾಯ್ ಮುನ್ನಡೆ ಭಬಾನಿಪುರ್ ಕ್ಷೇತ್ರದಲ್ಲಿ ಟಿಎಂಸಿ ಪಕ್ಷದ ಶೋಭನ್ ದೇಬ್ ಚಟ್ಟೋಪಾಧ್ಯಾಯ್ ಅವರು 10,000 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಕೊಲ್ಕತ್ತಾದಲ್ಲಿ ಟಿಎಂಸಿ ಸಂಭ್ರಮ 202 ಸೀಟುಗಳಲ್ಲಿ ಮುನ್ನಡೆ ಸಾಧಿಸಿರುವ ಟಿಎಂಸಿ ಪಕ್ಷದ ಕಾರ್ಯಕರ್ತರು ಕೊಲ್ಕತ್ತಾದಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ.
#WATCH TMC supporters celebrate at Kalighat, Kolkata as party leads on 202 seats as per official trends#WestBengalElections2021 pic.twitter.com/iiOyPhf8be
— ANI (@ANI) May 2, 2021
ಬಿಜೆಪಿಗೆ ಟಾಂಗ್ ನೀಡಿದ ಟಿಎಂಸಿ ಸಂಸದ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು ಟಿಎಂಸಿ 200ಕ್ಕಿಂಚಲೂ ಹೆಚ್ಚು ಸೀಟುಗಳಲ್ಲಿ ಮುನ್ನಡೆ ಸಾಧಿಸಿದಾಗ ಟಿಎಂಸಿ ಸಂಸದ ಡೆರಿಕ್ ಒ ಬ್ರೇನ್ ಅಮಿತ್ ಶಾ ಭಾಷಣದ ತುಣುಕೊಂದನ್ನು ಟ್ವೀಟ್ ಮಾಡಿ ಕಿಚಾಯಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 200 ಸೀಟು ದಾಟಲಿದೆ ಎಂದು ಭಾಷಣವೊಂದರಲ್ಲಿ ಅಮಿತ್ ಶಾ ಹೇಳುವ ವಿಡಿಯೊ ಇದಾಗಿದೆ.
— Derek O’Brien | ডেরেক ও’ব্রায়েন (@derekobrienmp) May 2, 2021
ಸ್ಪಪನ್ ದಾಸ್ ಗುಪ್ತಾ ಹಿನ್ನಡೆ ಲೇಖಕ, ಬಿಜೆಪಿ ನಾಯಕ ಸ್ವಪನ್ ದಾಸ್ ಗುಪ್ತಾ ಅವರು ಟಿಎಂಸಿ ರಾಮೇಂದು ಸಿನ್ಹಾರೇ ಅವರ ವಿರುದ್ಧ 5,000 ಮತಗಳ ಹಿನ್ನಡೆ ಅನುಭವಿಸಿದ್ದಾರೆ.
Too early to say anything because there are so many rounds. Situation will be clear only by evening. We had started from 3 & were challenged that we won’t get even 100, we have crossed that mark. We will cross the magic number too: Kailash Vijayvargiya, BJP#WestBengalPolls pic.twitter.com/ZS5LmrGcNF
— ANI (@ANI) May 2, 2021
ಫಲಿತಾಂಶದ ಬಗ್ಗೆ ಈಗಲೇ ಹೇಳಲಾಗದು. ಇನ್ನೂ ಹಲವು ಸುತ್ತುಗಳು ಬಾಕಿ ಇವೆ. ಸಂಜೆ ಹೊತ್ತಿಗೆ ಸ್ಪಷ್ಟ ಚಿತ್ರಣಸಿಗಲಿದೆ . ನಾವು ಮೂರು ಸೀಟುಗಳಿಂದ ಆರಂಭಿಸಿದ್ದೆವು. 100 ಸೀಟು ಕೂಡಾ ಸಿಗದು ಎಂದು ಟಿಎಂಸಿ ಸವಾಲೆಸೆದಿತ್ತು . ನಾವು 100ರ ಗಡಿ ದಾಟಿದ್ದೇವೆ. ನಾವು ಮ್ಯಾಜಿಕ್ ನಂಬರ್ ಕೂಡಾ ದಾಟುತ್ತೇವೆ ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯ್ವರ್ಗಿಯಾ ಹೇಳಿದ್ದಾರೆ.
ಇದನ್ನೂ ಓದಿ: West Bengal Assembly Elections Exit Poll: ದೀದಿ ವರ್ಸಸ್ ಮೋದಿ ಕದನದ ಕ್ಲೈಮಾಕ್ಸ್ ಮುಂಚಿನ ರಿಸಲ್ಟ್ಸ್
(West Bengal Election Results 2021 TMC leading in over 190 seats Mamata Banerjee trailing in Nandigram)
Published On - 12:46 pm, Sun, 2 May 21