AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

West Bengal Assembly Elections Exit Poll: ದೀದಿ ವರ್ಸಸ್ ಮೋದಿ ಕದನದ ಕ್ಲೈಮಾಕ್ಸ್ ಮುಂಚಿನ ರಿಸಲ್ಟ್ಸ್

ಪಶ್ಚಿಮ ಬಂಗಾಲದ ವಿಧಾನಸಭಾ ಚುನಾವಣೆ 2021ರ ಮತದಾನ ಸಂಪೂರ್ಣವಾಗಿದ್ದು, ವಿವಿಧ ಮಾಧ್ಯಮಗಳು ಹಾಗೂ ಏಜೆನ್ಸಿಗಳು ನೀಡಿದ ಎಕ್ಸಿಟ್ ಪೋಲ್ ಸಮೀಕ್ಷೆ ಇಲ್ಲಿದೆ.

West Bengal Assembly Elections Exit Poll: ದೀದಿ ವರ್ಸಸ್ ಮೋದಿ ಕದನದ ಕ್ಲೈಮಾಕ್ಸ್ ಮುಂಚಿನ ರಿಸಲ್ಟ್ಸ್
ಮಮತಾ ಬ್ಯಾನರ್ಜಿ
Srinivas Mata
|

Updated on: Apr 29, 2021 | 8:32 PM

Share

ನವದೆಹಲಿ: ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರ್ಣಾಯಕ ಚುನಾವಣೆಯನ್ನು ಮುಗಿಸಿದ್ದಾರೆ. ಮಮತಾ ದೀದಿ ವರ್ಸಸ್ ಪ್ರಧಾನಿ ನರೇಂದ್ರ ಮೋದಿ ಕದನದ ಪ್ರೀ ಕ್ಲೈಮ್ಯಾಕ್ಸ್ ಫಲಿತಾಂಶ ಏಪ್ರಿಲ್ 29ಕ್ಕೆ ಬಂದಿದೆ. ಪಶ್ಚಿಮ ಬಂಗಾಲದಲ್ಲಿನ ಅಷ್ಟೂ ಹಂತದ ವಿಧಾನಸಭೆಯ ಚುನಾವಣೆ ಮತದಾನ ಬಹುತೇಕ ಮುಗಿದು, ಎಕ್ಸಿಟ್ ಪೋಲ್ ಫಲಿತಾಂಶವನ್ನು ಗುರುವಾರ ಪ್ರಕಟಿಸಲಾಗಿದೆ. ಈಗ ನಿಮ್ಮೆದುರು ಇಡುತ್ತಿರುವುದು ಆ ಎಲ್ಲ ಸಮೀಕ್ಷೆಗಳನ್ನು. ಅರ್ಥಾತ್ ವಿವಿಧ ಮಾಧ್ಯಮಗಳು ಪಶ್ಚಿಮ ಬಂಗಾಲದಲ್ಲಿ ಮಾಡಿರುವ ಸಮೀಕ್ಷೆಗಳ ಫಲಿತಾಂಶಗಳು ಏನು ಹೇಳುತ್ತಿವೆ ಎಂಬ ಬಗ್ಗೆ ಒಂದೇ ಗುಕ್ಕಿನಲ್ಲಿ ನಿಮಗೆ ಓದಲು ದೊರೆಯುತ್ತದೆ. ಪಶ್ಚಿಮ ಬಂಗಾಲದಲ್ಲಿ ಇರುವ ಒಟ್ಟು ವಿಧಾನಸಭಾ ಸ್ಥಾನಗಳ ಸಂಖ್ಯೆ 294. ಅಲ್ಲಿಗೆ 148 ಸ್ಥಾನಗಳನ್ನು ಗೆದ್ದಲ್ಲಿ ಸರಳ ಬಹುಮತ ದೊರಕಿದಂತಾಗುತ್ತದೆ. ಯಾವ ಪಕ್ಷ ಅಥವಾ ಮೈತ್ರಿಕೂಟ 148 ಸ್ಥಾನವನ್ನು ಗೆಲ್ಲುತ್ತದೋ ಆ ಪಕ್ಷ ಅಥವಾ ಆ ಮೈತ್ರಿಕೂಟ ಅಧಿಕಾರಕ್ಕೆ ಏರಿದಂತಾಗುತ್ತದೆ. ಸಮೀಕ್ಷೆಗಳನ್ನು ನೋಡುವ ಮುನ್ನ ಈ ಹಿಂದೆ, 2016ರಲ್ಲಿ ಬಂದಿದ್ದ ವಿಧಾನಸಭಾ ಚುನಾವಣೆ ಫಲಿತಾಂಶದ ಕಡೆಗೆ ನೋಡಿಕೊಂಡು ಬಂದುಬಿಡೋಣ.

ಪಶ್ಚಿಮ ಬಂಗಾಲದಲ್ಲಿ ಒಟ್ಟು ವಿಧಾನಸಭಾ ಸ್ಥಾನಗಳ ಸಂಖ್ಯೆ: 294 ಅಧಿಕಾರ ಹಿಡಿಯುವುದಕ್ಕೆ ಬೇಕಾದ ಸರಳ ಬಹುಮತ ಸಂಖ್ಯೆ: 148

2016ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗೆದ್ದಿದವು? ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ 199 ಗೂರ್ಖಾ ಜನಮುಕ್ತಿ ಮೋರ್ಚಾ 2 ಬಿಜೆಪಿ 34 ಕಾಂಗ್ರೆಸ್ 23 ಸಿಪಿಐ (ಎಂ) 19 ಎಐಎಫ್​ಬಿ 2 ಆರ್​ಎಸ್​ಪಿ 2 ಸ್ವತಂತ್ರ 2 ಖಾಲಿ ಇದ್ದದ್ದು 11

2021ರ ವಿಧಾನಸಭೆ ಚುನಾವಣೆಯಲ್ಲಿ ಏಜೆನ್ಸಿ ಅಥವಾ ಮಾಧ್ಯಮಗಳು ಪ.ಬಂಗಾಲದಲ್ಲಿ ನೀಡಿರುವ ಸಮೀಕ್ಷೆ ಫಲಿತಾಂಶ ಇಂತಿದೆ: Tv9-Polstrat ಟಿಎಂಸಿ 152-162 ಬಿಜೆಪಿ 115-125 ಎಡರಂಗ 16-26

ಎಬಿಪಿ ಸಿ-ವೋಟರ್ ಟಿಎಂಸಿ: ಶೇ 42.1 ಮತ, 152-165 ಸ್ಥಾನ ಬಿಜೆಪಿ: ಶೇ 39 ಮತ, 109-121 ಸ್ಥಾನ ಕಾಂಗ್ರೆಸ್+ಎಡಪಕ್ಷಗಳು: ಶೇ 15.4 ಮತ, 14-25 ಸ್ಥಾನ

ರಿಪಬ್ಲಿಕ್-ಸಿಎನ್​ಎಕ್ಸ್​ ಟಿಎಂಸಿ: 128-138 ಬಿಜೆಪಿ: 138-148 ಕಾಂಗ್ರೆಸ್+ಎಡಪಕ್ಷಗಳು: 11-21

ಇಟಿಜಿ ರೀಸರ್ಚ್​ ಟಿಎಂಸಿ: 164-176 ಬಿಜೆಪಿ: 105-115 ಕಾಂಗ್ರೆಸ್+ಎಡಪಕ್ಷಗಳು: 10-15

ಪಿ-ಮಾರ್ಕ್​​ ಟಿಎಂಸಿ: 152-172 ಬಿಜೆಪಿ: 112-132 ಕಾಂಗ್ರೆಸ್+ಎಡಪಕ್ಷಗಳು: 10-20

ಸಿಎನ್​ಎನ್​ ನ್ಯೂಸ್ 18 ಟಿಎಂಸಿ: 162 ಬಿಜೆಪಿ: 115 ಕಾಂಗ್ರೆಸ್+ಎಡಪಕ್ಷಗಳು: 15

ಅಂದಹಾಗೆ, ಈ ಮೇಲ್ಕಂಡ ಎಲ್ಲವೂ ಸಮೀಕ್ಷೆಗಳು. ಬಹುತೇಕ ಸಂದರ್ಭಗಳಲ್ಲಿ ಚುನಾವಣೆ ಫಲಿತಾಂಶಗಳು ಸಮೀಕ್ಷೆಗೆ ಹತ್ತಿರ ಇರುತ್ತವೆ. ಅದು ಹೌದು ಅಂತಾದಲ್ಲಿ. ಪ.ಬಂಗಾಲದಲ್ಲಿ ಮತ್ತೆ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಏರುತ್ತಾರೆ. ಹಾಗೂ ಬಿಜೆಪಿ ಮಹತ್ತರವಾದ ಸಾಧನೆ ಮಾಡಿದಂತಾಗುತ್ತದೆ.

ಇದನ್ನೂ ಓದಿ: ‘ದೀದೀ.. ಓ ದೀದಿ’ ಎಂದು ಕರೆದ ಪ್ರಧಾನಿ ಮೋದಿ; ‘ಒಂದೇ ಕಾಲಲ್ಲಿ ಪಶ್ಚಿಮ ಬಂಗಾಳವನ್ನು ಗೆಲ್ಲುತ್ತೇನೆಂದು’ ಗುಡುಗಿದ ಮಮತಾ ಬ್ಯಾನರ್ಜಿ

(Comprehensively exit poll 2021 results for West Bengal assembly elections showing simple majority for Mamata Banerjee led TMC)