Exit Poll Results 2021: ಪುದುಚೇರಿಯಲ್ಲಿಅಧಿಕಾರಕ್ಕೇರಲಿದೆ ಎನ್ಡಿಎ; Tv9-Polstrat ಸಮೀಕ್ಷೆ
Puducherry Exit Poll Result 2021: ಒಟ್ಟು 30 ಸೀಟುಗಳಿರುವ ವಿಧಾನಸಭೆಯಲ್ಲಿ ಯುಪಿಎ 11-13 ಸೀಟುಗಳನ್ನು ಗೆಲ್ಲಲಿದೆ. ಇತರ ಪಕ್ಷಗಳು ಖಾತೆ ತೆರೆಯುವುದಿಲ್ಲ ಎಂದು ಇಲ್ಲಿನ ಮತದಾರರು ಅಭಿಪ್ರಾಯಪಟ್ಟಿದ್ದಾರೆ.
ಪುದುಚೇರಿ: ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ವಿಧಾನಸಭೆ ಬಗ್ಗೆ Tv9-Polstra ಮತಗಟ್ಟೆ ಸಮೀಕ್ಷೆಗಳಲ್ಲಿ (ಎಕ್ಸಿಟ್ ಪೋಲ್) ಸಂಗ್ರಹಿಸಿದ ಅಭಿಪ್ರಾಯ ಮತ್ತು ಅಂಕಿಆಂಶಗಳನ್ನು ವಿಶ್ಲೇಷಿಸಿದಾಗ ಈ ಬಾರಿ ಎನ್ ಡಿಎ ಮೈತ್ರಿಕೂಟ 17ರಿಂದ 19 ಸೀಟುಗಳನ್ನು ಗೆದ್ದು ಅಧಿಕಾರಕ್ಕೇರಲಿದೆ. ಒಟ್ಟು 30 ಸೀಟುಗಳಿರುವ ವಿಧಾನಸಭೆಯಲ್ಲಿ ಯುಪಿಎ 11-13 ಸೀಟುಗಳನ್ನು ಗೆಲ್ಲಲಿದೆ. ಇತರ ಪಕ್ಷಗಳು ಖಾತೆ ತೆರೆಯುವುದಿಲ್ಲ ಎಂದು ಇಲ್ಲಿನ ಮತದಾರರು ಅಭಿಪ್ರಾಯಪಟ್ಟಿದ್ದಾರೆ.
ಪುದುಚೇರಿಯ ಮತದಾರರ ಪ್ರಕಾರ ಎನ್ ಡಿಎಗೆ ಶೇ 51.80,ಯುಪಿಎಗೆ ಶೇ38.30, ಇತರೆ ಪಕ್ಷಗಳೆ ಶೇ9.90 ಮತಗಳು ಲಭಿಸಲಿವೆ.
2016ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 17 ,ಎಐಎನ್‌ಆರ್‌ಸಿ -8, ಎಐಎಡಿಎಂಕೆ-4 ಮತ್ತು ಇತರ ಪಕ್ಷಗಳು ಒಂದು ಸೀಟು ಗಳಿಸಿತ್ತು.
ಪ್ರಮುಖ ಕ್ಷೇತ್ರಗಳಿವು ಪುದುಚೇರಿಯ ಇಂದಿರಾ ನಗರ ವಿಧಾನಸಭಾ ಕ್ಷೇತ್ರ 2016 ರ ಕೊನೆಯ ವಿಧಾನಸಭಾ ಚುನಾವಣೆಯಲ್ಲಿ, ಅಖಿಲ ಭಾರತ ಎನ್ಆರ್ ಕಾಂಗ್ರೆಸ್ನ ಎನ್. ರಂಗಸಾಮಿ ಗೆದ್ದಿದ್ದರು. ಇಂದಿರಾ ನಗರ ವಿಧಾನಸಭಾ ಸ್ಥಾನದಲ್ಲಿ ಒಟ್ಟು ಮತದಾರರ ಸಂಖ್ಯೆ 34,534 ಆಗಿದೆ.
ಕಾಮರಾಜ್ ನಗರ ವಿಧಾನಸಭಾ ಕ್ಷೇತ್ರ – 2016 ರ ವಿಧಾನಸಭಾ ಚುನಾವಣೆಯ ಪ್ರಕಾರ ಇಲ್ಲಿ ಒಟ್ಟು ನೋಂದಾಯಿತ ಮತದಾರರ ಸಂಖ್ಯೆ 33,299 ಆಗಿದೆ. ಅವರಲ್ಲಿ 16,380 ಪುರುಷರು ಮತ್ತು 16,917 ಮಹಿಳೆಯರು ಇದ್ದರು. ಇಬ್ಬರು ತೃತೀಯ ಲಿಂಗಿಗಳು ಇದ್ದಾರೆ. 2016 ರ ವಿಧಾನಸಭಾ ಚುನಾವಣೆಯಲ್ಲಿ 25,774 ಮತದಾರರು ಇಲ್ಲಿ ಮತ ಚಲಾಯಿಸಿದ್ದರು. ಈ ವಿಧಾನಸಭಾ ಕ್ಷೇತ್ರದ ಮತದಾನದ ಶೇಕಡಾ 77.40 ಆಗಿತ್ತು. 2016 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ವೈತಿಲಿಂಗಂ ಈ ಕ್ಷೇತ್ರದಿಂದ ಎಐಡಿಎಂಕೆ ಪಕ್ಷದ ಪಿ.ಗಣೇಶನ್ ಅವರನ್ನು ಪರಾಭವಗೊಳಿಸಿದರು. ವೈತಿಲಿಂಗಂ ಅವರಿಗೆ 11,618 ಮತಗಳು ಲಭಿಸಿದ್ದು, ಗಣೇಶನ್ ಅವರು ಕೇವಲ 6,512 ಮತಗಳನ್ನು ಪಡೆದರು.
ಪುದುಚೇರಿಯ ಮಾಹೆ ವಿಧಾನಸಭಾ ಕ್ಷೇತ್ರ- 2016 ರ ವಿಧಾನಸಭಾ ಚುನಾವಣೆಯಲ್ಲಿ ಮಾಹೆ ಚುನಾವಣಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಡಾ.ವಿ.ರಾಮಚಂದ್ರನ್ ಅವರು ಗೆದ್ದರು. ಅವರು ಕಾಂಗ್ರೆಸ್ ಅಭ್ಯರ್ಥಿ ಇ.ವಲ್ಸರಾಜ್ ಅವರನ್ನು 2139 ಮತಗಳಿಂದ ಸೋಲಿಸಿದರು. ಕಳೆದ ಚುನಾವಣೆಯಲ್ಲಿ ಶೇಕಡಾ 77.83 ರಷ್ಟು ಮತದಾನ ಮಾಡಲಾಗಿದೆ. 2021ರಲ್ಲಿ ಇಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 2 ರಂದು ಮತಗಳನ್ನು ಎಣಿಸಲಾಗುವುದು. ಪುದುಚೇರಿ ವಿಧಾನಸಭಾ ಸ್ಥಾನದಲ್ಲಿ ಒಟ್ಟು ಮತದಾರರ ಸಂಖ್ಯೆ 30181. ಇಲ್ಲಿ ಪುರುಷರಿಗಿಂತ ಹೆಚ್ಚು ಮಹಿಳಾ ಮತದಾರರಿದ್ದಾರೆ. ಪುರುಷ ಮತದಾರರ ಸಂಖ್ಯೆ 13597 ಮತ್ತು ಮಹಿಳಾ ಮತದಾರರ ಸಂಖ್ಯೆ 16584 ಆಗಿದೆ.
ಪುದುಚೇರಿಯ ಕಾರೈಕಲ್ ಉತ್ತರ ವಿಧಾನಸಭಾ ಕ್ಷೇತ್ರ- 2016 ರ ವಿಧಾನಸಭಾ ಚುನಾವಣೆಯಲ್ಲಿ ಎಐಎನ್‌ಆರ್‌ಸಿಯ ಪಿ.ಆರ್. ಎನ್. ತಿರುಮುರುಗನ್ ಗೆದ್ದಿದ್ದರು. ಎಡಿಎಂಕೆ ಅಭ್ಯರ್ಥಿಯ ಎಂ.ವಿ.ಓಮಲಿಂಗಂ ಅವರನ್ನು 3000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು. ಈ ಕ್ಷೇತ್ರಕ್ಕೆ ನಾಮನಿರ್ದೇಶನಗೊಳ್ಳುವ ಕೊನೆಯ ದಿನಾಂಕ ಮಾರ್ಚ್ 19 ಮತ್ತು ನಾಮಪತ್ರಗಳನ್ನು ಹಿಂಪಡೆಯುವ ಕೊನೆಯ ದಿನಾಂಕ ಮಾರ್ಚ್ 22 ಆಗಿದೆ. ಮೇ 2 ರಂದು ಮತಗಳನ್ನು ಎಣಿಸಲಾಗುವುದು. ಈ ಕ್ಷೇತ್ರದಲ್ಲಿರುವ ಒಟ್ಟು ಮತದಾರರು 32666, ಅದರಲ್ಲಿ ಪುರುಷ ಮತದಾರರಿಗಿಂತ (15337) ಮಹಿಳಾ ಮತದಾರರು (17311) ಹೆಚ್ಚು ಇದ್ದಾರೆ.
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಮಹಿಳೆಯರು ಪ್ರತಿನಿಧಿಸುವ ನಾಲ್ಕು ಕ್ಷೇತ್ರಗಳಲ್ಲಿ ನೆಟ್ಟಪಕ್ಕಂ ವಿಧಾನಸಭೆ ಕ್ಷೇತ್ರವೂ ಒಂದು. ಈ ಚುನಾವಣಾ ಕ್ಷೇತ್ರವನ್ನು ಪರಿಶಿಷ್ಟ ಜಾತಿಗೆ ಕಾಯ್ದಿರಿಸಲಾಗಿದೆ. ಕಾಂಗ್ರೆಸ್ ಪಕ್ಷದ ವಿ.ವಿಜಯವೇಣಿ ಇಲ್ಲಿನ ಶಾಸಕಿಯಾಗಿದ್ದಾರೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, 2016 ರ ವಿಧಾನಸಭಾ ಚುನಾವಣೆಯಲ್ಲಿ ನೆಟ್ಟಪಕ್ಕಂನಲ್ಲಿ ಒಟ್ಟು ನೋಂದಾಯಿತ ಮತದಾರರು 30,665 ಆಗಿದ್ದು, 14,223 ಪುರುಷರು ಮತ್ತು 16,441 ಮಹಿಳೆಯರು ಮತ್ತು ಒಬ್ಬರು ತೃತೀಯ ಲಿಂಗಿ ಮತದಾರರು ಇದ್ದಾರೆ.
ಪುದುಚೇರಿಯ ತಿರುನಲ್ಲಾರ್ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿಕಾಂಗ್ರೆಸ್ ಗೆದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ. ಕಮಲಕಣ್ಣನ್ ಅವರು ಎಐಎನ್‌ಆರ್‌ಸಿ ಅಭ್ಯರ್ಥಿ ಪಿ.ಆರ್. ಶಿವನನ್ನು 2875 ಮತಗಳಿಂದ ಪರಾಭವಗೊಳಿಸಿದರು. ಈ ಚುನಾವಣೆಯಲ್ಲಿ ಶೇಕಡಾ 84.89 ರಷ್ಟು ಮತದಾನ ದಾಖಲಾಗಿದೆ. ಈ ಕ್ಷೇತ್ರದಲ್ಲಿರುವ ಒಟ್ಟು ಮತದಾರರ ಸಂಖ್ಯೆ 30169. ಪುರುಷ ಮತದಾರರ ಸಂಖ್ಯೆ 14080 ಆಗಿದ್ದು ಮಹಿಳಾ ಮತದಾರರ ಸಂಖ್ಯೆ 16089 ಆಗಿದೆ.
ಇದನ್ನೂ ಓದಿ: Exit Poll Results 2021: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್ ಸಾಧ್ಯತೆ; Tv9-Polstrat ಸಮೀಕ್ಷೆ
Exit Poll Result 2021: ಕೇರಳದಲ್ಲಿ ಮತ್ತೊಮ್ಮೆ ಎಲ್ಡಿಎಫ್ Tv9-Polstrat ಸಮೀಕ್ಷೆ