AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಮ್​ ಐಸೊಲೇಶನ್​ ಇರುವವರಿಗೆ ಕೇಂದ್ರ ಆರೋಗ್ಯ ಇಲಾಖೆಯ ಪರಿಷ್ಕೃತ ಮಾರ್ಗಸೂಚಿಗಳು

ಸೋಂಕಿತರು ತಮ್ಮ ಜ್ವರ, ಎದೆಬಡಿತ, ಆಮ್ಲಜನಕ, ಉಸಿರಾಟದ ಸಮಸ್ಯೆ ಮೊದಲಾವುಗಳ ಗಮನ ಹರಿಸುವ ಹಾಗೆಯೇ ಸಾಕಷ್ಟು ಪ್ರಮಾಣದಲ್ಲಿ ನೀರು ಮತ್ತು ಹಣ್ಣಿನ ಜ್ಯೂಸ್​ಗಳನ್ನು ಕುಡಿಯುತ್ತಿರಬೇಕು.

ಹೋಮ್​ ಐಸೊಲೇಶನ್​ ಇರುವವರಿಗೆ ಕೇಂದ್ರ ಆರೋಗ್ಯ ಇಲಾಖೆಯ ಪರಿಷ್ಕೃತ ಮಾರ್ಗಸೂಚಿಗಳು
ಕೊವಿಡ್​ ಪರೀಕ್ಷಣೆ
ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk|

Updated on:Apr 30, 2021 | 9:18 AM

Share

ಕೇಂದ್ರ ಆರೋಗ್ಯ ಸಚಿವಾಲಯವು ಹೋಮ್ ಕ್ವಾರಂಟೈನ್​ನಲ್ಲಿರುವ ಕೊವಿಡ್​-19 ರೋಗಿಗಳಿಗೆ ಬಿಡುಗಡೆ ಮಾಡಿದ್ದ ಮಾರ್ಗಸೂಚಿಗಳನ್ನು ಪರಿಷ್ಕರಿಸಿದ್ದು ಸೋಂಕು ಬೇರೆಯವರಿಗೆ ಹರಡದಂತೆ ಅವರೇನು ಮಾಡಬೇಕು, ಏನು ಮಾಡಬಾರದು ಮತ್ತು ಆಹಾರ ಕ್ರಮ ಹೇಗಿರಬೇಕು ಎನ್ನುವುದನ್ನು ವಿವರಿಸಿದೆ. ಹೋಮ್ ಐಸೊಲೇಷನ್​ನಲ್ಲಿರುವ ರೋಗಿಯ ರೂಮಿನಲ್ಲಿ ಸಾಕಷ್ಟು ಗಾಳಿ ಬೆಳಕು ಇರುವ ಹಾಗೆ ಎಲ್ಲಿ ಕಿಟಕಿಗಳನ್ನು ತೆರೆದಿಡಬೇಕು. ರೋಗಿಯು ಸದಾ ಕಾಲ ಮೂರು ಪದರಿನ ವೈದ್ಯಕೀಯ ಮಾಸ್ಕ್ ಧರಿಸಿರಬೇಕು ಎಂದು ಮಾರ್ಗಸೂಚಿ ಹೇಳುತ್ತದೆ. ಮಾಸ್ಕನ್ನು 8ಗಂಟೆಗಳ ಕಾಲ ಉಪಯೋಗಿಸಿದ ನಂತರ ಇಲ್ಲವೆ ಅದು ಒದ್ದೆಯಾಗಿದೆ ಅಂತೆನಿಸಿದರೆ ತೆಗೆದುಬಿಡಬೇಕು.ರೋಗಿಯ ಆರೈಕೆ ಮಾಡುತ್ತಿರುವವರು ರೂಮು ಪ್ರವೇಶಿಸುವಾಗ ರೋಗಿಯೊಂದಿಗೆ ಅವರು ಸಹ ಎನ್ 95 ಮಾಸ್ಕ್​ ಧರಿಸುವುದನ್ನು ಪರಿಗಣಿಸಬೇಕು. ಮಾಸ್ಕ್​ಗಳನ್ನು 1% ಸೋಡಿಯಂ ಹೈಡ್ರೋಕ್ಲೋರೈಡ್​ನಲ್ಲಿ ಡಿಸ್​ಇನ್ಪೆಕ್ಟ್​ ಮಾಡಿದ ನಂತರವೇ ದೂರ ಬಿಸಾಡಬೇಕು.

ಸೋಂಕಿತರು ತಮ್ಮ ಜ್ವರ, ಎದೆಬಡಿತ, ಆಮ್ಲಜನಕ, ಉಸಿರಾಟದ ಸಮಸ್ಯೆ ಮೊದಲಾವುಗಳ ಗಮನ ಹರಿಸುವ ಹಾಗೆಯೇ ಸಾಕಷ್ಟು ಪ್ರಮಾಣದಲ್ಲಿ ನೀರು ಮತ್ತು ಹಣ್ಣಿನ ಜ್ಯೂಸ್​ಗಳನ್ನು ಕುಡಿಯುತ್ತಿರಬೇಕು.

60 ವರ್ಷಕ್ಕಿಂತ ಜಾಸ್ತಿ ವಯಸ್ಸಿನ ಸೋಂಕಿತರು ಇತರ ಕಾಯಿಲೆಗಳಾದ ಡಯಾಬಿಟಿಸ್, ಹೃದ್ರೋಗ, ದೀರ್ಘಕಾಲದ ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ ಮತ್ತು ಮೆದುಳಿನ ಸಮಸ್ಯೆಯಿಂದ ಬಳಲುತ್ತಿದ್ದು ಅವರಿಗೆ ಹೋಮ್​ ಐಸೋಲೇಶನ್​ನಲ್ಲಿ ಇಡಬೇಕಾದರೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆ ಪಡೆದ ನಂತರವೇ ಮುಂದುವರಿಯಬೇಕು,’ ಎಂದು ಮಾರ್ಗಸೂಚಿ ಹೇಳುತ್ತದೆ.

ಸೋಂಕಿತರು ತೆಗೆದುಕೊಳ್ಳಬೇಕಾದ ಔಷಧಿಗಳು ಮತ್ತು ಮನೆಯಲ್ಲಿ ಕಂಡೊಕೊಳ್ಳುವ ಪರಿಹಾರಗಳು ಕೊವಿಡ್ ಸೋಂಕಿನ ಪ್ರಕರಣಗಳು ಮಿತಿಮೀರಿ ಏರುತ್ತಿರುವುದರಿಂದ ರಾಜ್ಯಗಳು ಆಮ್ಲಜನಕದ ಕೊರತೆಯನ್ನು ತೀವ್ರ ಸ್ವರೂಪದಲ್ಲಿ ಅನುಭವಿಸುತ್ತಿವೆ ಮತ್ತು ದೇಶದಲ್ಲಿನ ಆರೋಗ್ಯ ವ್ಯವಸ್ಥೆಯ ಮೇಲೆ ಭಾರೀ ಒತ್ತಡ ಬಿದ್ದಿದೆ. ಈ ಹಿನ್ನೆಲೆಯಲ್ಲೇ ರೆಮಿಡೆಸಿವಿರ್ ಮತ್ತಿ ಆಮ್ಲಜನಕದ ಅಗತ್ಯವಿರದ ಸೋಂಕಿತರು ತಮ್ಮ ಮನೆಗಳಲ್ಲ್ಲೇ ಚಿಕಿತ್ಸೆ ಪಡೆಯಲು ಕೇಂದ್ರ ಸರ್ಕಾರ ಹೇಳುತ್ತಿದೆ.

ಕೊವಿಡ್​ ರೋಗಿ ಮನೆಗಳಲ್ಲಿ ಏನು ಮಾಡಬೇಕು? -ಬಿಸಿನೀರಿನಿಂದ ಗಾರ್ಗಲ್ ಮಾಡಬೇಕು. ದಿಕ್ಕೆರಡು ಬಾರಿ ಬಿಸಿನೀರಿನ ಹಬೆ ತೆಗೆದುಕೊಳ್ಳಬೇಕು (steam inhalation).

-ದಿನಕ್ಕೆ 4 ಬಾರಿ 650 ಎಮ್​ಜಿ ಪ್ಯಾರಾಸಿಟಮೋಲ್ ತೆಗೆದುಕೊಂಡಾಲೂ ಜ್ವರ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಅವರು ಎನ್​ಎಸ್​ಎಐಡಿ (ಸ್ಟಿರಾಯ್ಡ್​​-ರಹಿತ ಉರಿ ಶಮನಗೊಳಿಸುವ) ಮಾತ್ರೆ ಬರೆದುಕೊಡುತ್ತಾರೆ

-ಟ್ಯಾಬ್ ಐವರ್​ಮೆಸ್ಟಿನ್ (200 ಎಮ್​ಸಿಜಿ/ಕೆಜಿ, ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು) 3ರಿಂದ 5 ದಿನಗಳವರೆಗೆ ತೆಗೆದುಕೊಳ್ಳಬೇಕು.

-ಸೋಂಕು ತಾಕಿದ 5 ದಿನಗಳ ನಂತರವೂ ಜ್ವರ ಮತ್ತು ಕೆಮ್ಮು ಕಡಿಮೆಯಾಗದ ಪಕ್ಷದಲ್ಲಿ ಬ್ಯೂಡ್​ಸೊನೈಡ್ ಇನಹೇಲ್ (ಇದನ್ನು ಇನ್​ಹೇಲರ್​ಗಳ ಮೂಲಕವೇ 800 ಎಮ್​ಸಿಜಿ, ದಿನಕ್ಕೆರಡು ಬಾರಿ) ಮಾಡಿಸಬೇಕು.

-ಮನೆಯಲ್ಲಿ ರೆಮಿಡೆಸಿವಿರ್ ಮತ್ತು ಓರಲ್ ಸ್ಟಿರಾಯ್ಡ್​ಗಳನ್ನು ನೀಡಬಾರದು.

ಕನಿಷ್ಟ 10 ದಿನಗಳ ಐಸೋಲೇಷನ್ ನಂತರ ಹಿಂದಿನ 3 ದಿನಗಳಲ್ಲಿ ಜ್ವರ ಕಾಣಿಸಿರದಿದ್ದರೆ, ರೋಗಿಯು ಔಷಧಿಯನ್ನು ನಿಲ್ಲಿಸಿಬಿಡಬಹುದು. ಅದಾದ ನಂತರ ಮತ್ತೊಮ್ಮೆ ಟೆಸ್ಟ್​ ಮಾಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ಎಂದು ಗೈಡ್​ಲೈನ್​ ಹೇಳುತ್ತದೆ.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಇಂದು 35,024 ಮಂದಿಗೆ ಕೊರೊನಾ ಸೋಂಕು, 270 ಸಾವು

Published On - 9:29 pm, Thu, 29 April 21

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?