Closing bell: ಸೆನ್ಸೆಕ್ಸ್ 848 ಪಾಯಿಂಟ್, ನಿಫ್ಟಿ 245 ಪಾಯಿಂಟ್ ಭರ್ಜರಿ ಏರಿಕೆ
ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಮೇ 17, 2021 ಸೋಮವಾರ ಭರ್ಜರಿ ಏರಿಕೆ ಕಂಡಿದೆ. ಜಾಗತಿಕ ಪ್ರಭಾವ, ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿನ ಇಳಿಕೆ ಸೇರಿದಂತೆ ಮೊದಲಾದ ಕಾರಣಗಳಿಗೆ ಮಾರುಕಟ್ಟೆ ಏರಿದೆ.
ಭಾರತೀಯ ಷೇರು ಮಾರುಕಟ್ಟೆಯ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರ (ಮೇ 17, 2021) ಭರ್ಜರಿ ಏರಿಕೆ ಕಂಡಿದೆ. ಸೆನ್ಸೆಕ್ಸ್ 848.18 ಪಾಯಿಂಟ್ ಅಥವಾ ಶೇ 1.74ರಷ್ಟು ಮೇಲೇರಿ 49,580.73 ಪಾಯಿಂಟ್ನೊಂದಿಗೆ ವ್ಯವಹಾರ ಚುಕ್ತಾ ಮಾಡಿದರೆ, ನಿಫ್ಟಿ ಸೂಚ್ಯಂಕವು 245.35 ಪಾಯಿಂಟ್ಗಳು ಅಥವಾ ಶೇ 1.67 ಏರಿಕೆಯಾಗಿ, 14,923.15 ಪಾಯಿಂಟ್ನೊಂದಿಗೆ ದಿನಾಂತ್ಯ ಕಂಡಿದೆ. ವಲಯವಾರು ಹೇಳಬೇಕೆಂದರೆ, ನಿಫ್ಟಿ ಎನರ್ಜಿ, ಬ್ಯಾಂಕ್, ವಾಹನ, ಲೋಹ ಮತ್ತು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳ ಸೂಚ್ಯಂಕವು ಶೇ 1ರಿಂದ 4ರಷ್ಟು ಗಳಿಕೆಯನ್ನು ಕಂಡಿವೆ. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ತಲಾ ಶೇ 1.6ರಷ್ಟು ಸೇರ್ಪಡೆ ಮಾಡಿದೆ. ಅಂದಹಾಗೆ ಯುಪಿಎಲ್, ಗಾಮನ್ ಇನ್ಫ್ರಾ ಮತ್ತು ಕೆಪಿಐಟಿ ಟೆಕ್ನಾಲಜೀಸ್ ಸೇರಿದಂತೆ 250 ಸ್ಟಾಕ್ಗಳು ಬಿಎಸ್ಇಯಲ್ಲಿ ವಾರ್ಷಿಕ ಗರಿಷ್ಠ ಮಟ್ಟ ಮುಟ್ಟಿದವು.
ಜಾಗತಿಕ ಸಕಾರಾತ್ಮಕ ಪ್ರಭಾವ, ಉತ್ತಮ ಗಳಿಕೆ, ಕೊರೊನಾ ಸೋಂಕು ಪ್ರಕರಣಗಳಲ್ಲಿನ ಇಳಿಕೆ, ಬ್ಯಾಂಕಿಂಗ್ ಸ್ಟಾಕ್ಗಳಲ್ಲಿನ ಪ್ರಬಲ ಗಳಿಕೆ ಹಾಗೂ ತಾಂಂತ್ರಿಕ ದೃಷ್ಟಿಕೋನ (ಟೆಕ್ನಿಕಲ್ ವ್ಯೂ) ಈ ಎಲ್ಲದರ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ವಾರದ ಮೊದಲ ದಿನವಾದ ಸೋಮವಾರದಂದು ಭರ್ಜರಿಯಾದ ಏರಿಕೆಯನ್ನೇ ದಾಖಲಿಸಿದೆ.
ನಿಫ್ಟಿಯಲ್ಲಿ ಏರಿಕೆ ದಾಖಲಿಸಿದ ಪ್ರಮುಖ ಷೇರುಗಳು ಇಂಡಸ್ಇಂಡ್ ಬ್ಯಾಂಕ್ ಶೇ 7.36 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 6.28 ಐಸಿಐಸಿಐ ಬ್ಯಾಂಕ್ ಶೇ 4.40 ಎಚ್ಡಿಎಫ್ಸಿ ಬ್ಯಾಂಕ್ ಶೇ 3.85 ಯುಪಿಎಲ್ ಶೇ 3.69
ನಿಫ್ಟಿಯಲ್ಲಿ ಇಳಿಕೆ ದಾಖಲಿಸಿದ ಪ್ರಮುಖ ಷೇರುಗಳು ಸಿಪ್ಲಾ ಶೇ -2.53 ಲಾರ್ಸನ್ ಶೇ -2.03 ಭಾರ್ತಿ ಏರ್ಟೆಲ್ ಶೇ -1.92 ಎಸ್ಬಿಐ ಲೈಫ್ ಇನ್ಷೂರೆನ್ಸ್ ಶೇ -1.51 ನೆಸ್ಟ್ಲೆ ಶೇ -1.08
ಇದನ್ನೂ ಓದಿ: stock market investor: ವ್ಯಕ್ತಿಯ ಸಾವಿನ ನಂತರ ಷೇರು ವರ್ಗಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
(Closing bell: Sensex surge 848 points and nifty increased 245 points on May 17, 2021)
Published On - 6:05 pm, Mon, 17 May 21