Paytm Instant Personal Loan| ಪೇಟಿಎಂ ಮೂಲಕ ರೂ. 2 ಲಕ್ಷದ ತನಕ ತಕ್ಷಣದ ಪರ್ಸನಲ್ ಲೋನ್

ಪೇಟಿಎಂ ಮೂಲಕ ಗ್ರಾಹಕರಿಗೆ ರೂ. 2 ಲಕ್ಷದ ತನಕ ತಕ್ಷಣದ ಪರ್ಸನಲ್ ಲೋನ್ ಸಿಗಲಿದೆ. ಇದಕ್ಕಾಗಿ ಎನ್​ಬಿಎಫ್​ಸಿ ಮತ್ತು ಬ್ಯಾಂಕ್​​ಗಳ ಜತೆಗೆ ಪೇಟಿಎಂ ಸಹಭಾಗಿತ್ವವನ್ನು ವಹಿಸಿದೆ.

Paytm Instant Personal Loan| ಪೇಟಿಎಂ ಮೂಲಕ ರೂ. 2 ಲಕ್ಷದ ತನಕ ತಕ್ಷಣದ ಪರ್ಸನಲ್ ಲೋನ್
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: Apr 06, 2021 | 7:51 PM

ದೇಶದಲ್ಲಿ ಡಿಜಿಟಲ್ ಹಣಕಾಸು ಸೇವೆ ಒದಗಿಸುತ್ತಿರುವ ಪೇಟಿಎಂನಿಂದ “ತಕ್ಷಣ ಪರ್ಸನಲ್ ಸಾಲ” ಒದಗಿಸುವ ಫೀಚರ್ ಅನ್ನು ಪರಿಚಯಿಸಲಾಗಿದೆ. 24X7, ವರ್ಷದ ಎಲ್ಲ ದಿನವೂ, ಸಾರ್ವಜನಿಕ ರಜಾ ದಿನಗಳಲ್ಲೂ ಮತ್ತು ವಾರಾಂತ್ಯಗಳಲ್ಲೂ ಈ ಸೇವೆಯು ದೊರೆಯುತ್ತದೆ ಎಂದು ಪೇಟಿಎಂ ಹೇಳಿದೆ. “ಎನ್​ಬಿಎಫ್​ಸಿಗಳಿಗೆ ಪೇಟಿಎಂ ಈಗ ತಾಂತ್ರಿಕ ಹಾಗೂ ವಿತರಣೆ ಸಹಭಾಗಿ ಆಗಿದೆ. ಅವುಗಳು ತಲುಪುವ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಜತೆಗೆ ವೇತನದಾರರಿಗೆ, ಸಣ್ಣ ಉದ್ಯಮಗಳ ಮಾಲೀಕರಿಗೆ ಮತ್ತು ವೃತ್ತಿಪರರಿಗೆ ಸಾಲ ಒದಗಿಸುವ ಸೇವೆ ನೀಡುತ್ತದೆ. ಸಾಲದ ಪ್ರಕ್ರಿಯೆ ಹಾಗೂ ವಿತರಣೆಯನ್ನು ಎನ್​ಬಿಎಫ್​ಸಿಗಳು ಮತ್ತು ಬ್ಯಾಂಕ್​ಗಳು ಮಾಡುತ್ತವೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಸೇವೆಗೆ ಅಗತ್ಯ ಇರುವುದು ಪೇಟಿಎಂ ಟೆಕ್ ಪ್ಲಾಟ್​ಫಾರ್ಮ್​ನಲ್ಲೇ ಒಳಗೊಂಡಿದೆ. ಗ್ರಾಹಕರಿಗೆ 2 ಲಕ್ಷ ರೂಪಾಯಿ ತನಕ ಸಾಲ ನೀಡಲಾಗುತ್ತದೆ. ಇನ್ನು ಸಾಲ ಪ್ರಕ್ರಿಯೆಯ ಆರಂಭದಿಂದ ಕೊನೆಯ ತನಕ ಎರಡು ನಿಮಿಷದೊಳಗೆ ಪೂರ್ಣಗೊಳಿಸಲು ಇದರಿಂದ ಸಹಾಯ ಆಗುತ್ತದೆ ಎಂದು ತಿಳಿಸಲಾಗಿದೆ. “ತಕ್ಷಣದ ಪರ್ಸನಲ್ ಲೋನ್” ವೈಶಿಷ್ಟ್ಯ ಏನೆಂದರೆ, ಸುಲಭವಾದ ಮರುಪಾವತಿ ಅವಧಿಯಾದ 18ರಿಂದ 36 ತಿಂಗಳ ಸಮಯದ ಜತೆಗೆ ಬರುತ್ತದೆ. ಮರುಪಾವತಿಗೆ ಎಷ್ಟು ಸಮಯ ಎಂಬುದರ ಆಧಾರದಲ್ಲಿ ಇಎಂಐ (ಸಮಾನ ಮಾಸಿಕ ಕಂತುಗಳು) ನಿರ್ಧಾರ ಆಗುತ್ತದೆ.

ಈ ಸೇವೆಯನ್ನು ಪಡೆಯುವುದಕ್ಕೆ ಅರ್ಹ ಗ್ರಾಹಕರು “ಫೈನಾನ್ಷಿಯಲ್ ಸರ್ವೀಸಸ್” ಅಡಿಯಲ್ಲಿ ಬರುವ “ಪರ್ಸನಲ್ ಲೋನ್” ವಿಭಾಗಕ್ಕೆ ಭೇಟಿ ನೀಡಬೇಕು. ಪೇಟಿಎಂ ಆ್ಯಪ್ ಮೂಲಕವಾಗಿ ಸಾಲದ ಖಾತೆಯನ್ನು ನೇರವಾಗಿ ನಿರ್ವಹಿಸಬೇಕು. ಈ ಸಾಲ ಸೇವೆ ಒದಗಿಸುವ ಸಲುವಾಗಿಯೇ ಪೇಟಿಎಂ ಕಂಪೆನಿಯು ವಿವಿಧ ಎನ್​ಬಿಎಫ್​ಸಿಗಳು ಮತ್ತು ಬ್ಯಾಂಕ್​ಗಳ ಹತೆಗೆ ಸಹಭಾಗಿತ್ವ ವಹಿಸಿದೆ. ಸಾಲ ಪಡೆದುಕೊಳ್ಳುವವರ ಕ್ರೆಡಿಟ್ ಸ್ಕೋರ್ ಎಷ್ಟಿದೆ, ಸಾಲ ಪಡೆಯುವವರ ಇತರ ಮಾಹಿತಿಗಳನ್ನು ಪಡೆದುಕೊಂಡ ನಂತರ ಅರ್ಹತಾ ಮಾನದಂಡ ಏನು ಎಂಬುದರ ಆಧಾರದಲ್ಲಿ ಸಾಲವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Collateral free loan: ಪೇಪಾಲ್- ಫ್ಲೆಕ್ಸಿಲೋನ್ಸ್ ಸೇರಿ ನೀಡಲಿವೆ 50,000 ರೂ.ನಿಂದ 1,00,00,000 ತನಕ ಟರ್ಮ್ ಸಾಲ

(Paytm provides instant personal loans up to Rs 2 lakhs. Know how?)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ