Retail Inflation: ದೇಶದಲ್ಲಿನ ಚಿಲ್ಲರೆ ಹಣದುಬ್ಬರ ದರ ಜೂನ್ನಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡು ಶೇ 6.26ಕ್ಕೆ
ಜೂನ್ ತಿಂಗಳ ಚಿಲ್ಲರೆ ಹಣದುಬ್ಬರ ದರವು ಶೇ 6.26ಕ್ಕೆ ಇಳಿದಿದ್ದು, ಒಂದು ತಿಂಗಳ ಹಿಂದಿನ ಅವಧಿಯಾದ 2021ರ ಮೇ ತಿಂಗಳಿಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ.
ಭಾರತದ ಚಿಲ್ಲರೆ ಹಣದುಬ್ಬರ ದರವು (Retail Inflation) ಜೂನ್ ತಿಂಗಳಲ್ಲಿ ಶೇ 6.26ಕ್ಕೆ ಇಳಿದಿದ್ದು, ಸತತವಾಗಿ ಎರಡನೇ ತಿಂಗಳು ಆರ್ಬಿಐನ ಕಂಫರ್ಟ್ ಝೋನ್ಗಿಂತ ಹೆಚ್ಚಿಗೇ ಇದೆ. ಮೇ ತಿಂಗಳಲ್ಲಿ ಇದು ಶೇ 6.30 ಇತ್ತು. ಚಿಲ್ಲರೆ ಹಣದುಬ್ಬರ ದರವನ್ನು ಶೇ 4ಕ್ಕೆ ನಿಗದಿಪಡಿಸಿ, ಶೇ 2ರಷ್ಟು ಕೆಳ ಹಂತದಲ್ಲಿ ಅಥವಾ ಶೇ 2ರಷ್ಟು ಮೇಲ್ ಹಂತದಲ್ಲಿ ಕಾಯ್ದುಕೊಳ್ಳುವಂತೆ ಆರ್ಬಿಐಗೆ ಸರ್ಕಾರವು ಕಡ್ಡಾಯವಾಗಿ ಸೂಚಿಸಿತ್ತು. ಇನ್ನು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಜೂನ್ ತಿಂಗಳ ಆಹಾರ ಬ್ಯಾಸ್ಕೆಟ್ನ ಹಣದುಬ್ಬರ ಶೇ 5.15ರಷ್ಟಿದ್ದರೆ, ಮೇ ತಿಂಗಳಲ್ಲಿ ಇದು ಶೇ 5.01 ಇತ್ತು. ಜೂನ್ ತಿಂಗಳಲ್ಲಿ ಮೊಟ್ಟೆ, ಖಾದ್ಯ ತೈಲ, ಹಣ್ಣು ಇವುಗಳ ಬೆಲೆಯಲ್ಲಿ ಎರಡಂಕಿಯ ಏರಿಕೆ ದಾಖಲಾಗಿದೆ. ಪೆಟ್ರೋಲ್- ಡೀಸೆಲ್ ದರ ಏರಿಕೆಯೊಂದಿಗೆ ಇಂಧನ ಹಣದುಬ್ಬರವು ಶೇ 12.7ರಷ್ಟು ಬೆಳವಣಿಗೆ ಕಂಡಿದೆ.
ಈ ಮಧ್ಯೆ, ಒಂದು ವರ್ಷದ ಹಿಂದಿನ ಮೇ ತಿಂಗಳ ಅವಧಿಗೆ ಹೋಲಿಸಿದರೆ ದೇಶದ ಕೈಗಾರಿಕೆ ಉತ್ಪಾದನೆಯು ಈ ವರ್ಷದ ಮೇ ತಿಂಗಳಲ್ಲಿ ಶೇ 29.3ರಷ್ಟು ಏರಿಕೆ ಆಗಿದೆ ಎಂದು ಸರ್ಕಾರದ ದತ್ತಾಂಶಗಳಲ್ಲಿ ಕಂಡುಬಂದಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ದೇಶದಲ್ಲಿ ಕೊರೊನಾ ಕಾರಣಕ್ಕೆ ಕಠಿಣ ನಿರ್ಬಂಧ ಹೇರಲಾಗಿತ್ತು. ಆದ್ದರಿಂದ ಈ ವರ್ಷ ಮೇ ತಿಂಗಳಲ್ಲಿ ಹಣದುಬ್ಬರ ದರದಲ್ಲಿ ಏರಿಕೆ ಕಂಡಿದೆ. ಇನ್ನು ದೇಶದ ಹಲವು ರಾಜ್ಯಗಳಲ್ಲಿ ಹೇರಿದ್ದ ಕೊರೊನಾ ನಿರ್ಬಂಧವನ್ನು ಸಡಿಲಗೊಳಿಸಲಾಗಿದ್ದು, ಪೂರೈಕೆ ಜಾಲದ ವ್ಯತ್ಯಯ ಮುಂದುವರಿದಿದ್ದು, ಇದರಿಂದಾಗಿ ಹಣದುಬ್ಬರದ ಮೇಲಿನ ಒತ್ತಡವು ಹೆಚ್ಚಾಗಿದೆ.
ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದರಿಂದ ಜಾಗತಿಕ ಮಟ್ಟದಲ್ಲಿ ಬೇಡಿಕೆ ಚೇತರಿಸಿಕೊಳ್ಳಲು ಕಾರಣವಾಗಇದೆ. ಇದರಲ್ಲಿ ಕಚ್ಚಾ ತೈಲ ಬೆಲೆಯ ಕೊಡುಗೆಯಿದ್ದು, ಭಾರತದಲ್ಲಿ ದಾಖಲೆಯ ಮಟ್ಟದಲ್ಲಿ ತೈಲ ಬೆಲೆ ವಹಿವಾಟು ನಡೆಸುತ್ತಿದೆ. ಕಳೆದ ವರ್ಷದ ಮೇ ತಿಂಗಳಿಗಿಂತ ಪೆಟ್ರೋಲ್- ಡೀಸೆಲ್ ದರದಲ್ಲಿ ಶೇ 30ರಷ್ಟು ಹೆಚ್ಚಳವಾಗಿದೆ. ವಿಶ್ಲೇಷಕರು ನಿರೀಕ್ಷಿಸುವಂತೆ, ಹೆಚ್ಚಿನ ತೈಲ ದರ ಮತ್ತು ಇನ್ಪುಟ್ ವೆಚ್ಚ ಹೆಚ್ಚಳದ ಕಾರಣಕ್ಕೆ ಇನ್ನೂ ಕೆಲ ಕಾಲ ಹಣದುಬ್ಬರ ದರವು ಮೇಲ್ಮಟ್ಟದಲ್ಲಿಯೇ ಇರುತ್ತದೆ. ಹಣದುಬ್ಬರ ಏರಿಕೆ ಹಾಗೂ ಬೆಳವಣಿಗೆಯ ಸಮತೋಲನವನ್ನು ಸರಿತೂಗಿಸಿಕೊಂಡು ಹೋಗುವುದರಲ್ಲಿ ಆರ್ಬಿಐ ಸವಾಲು ಎದುರಿಸುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಗಮನ ಬೆಳವಣಿಗೆ ಕಡೆಗೆ ಇದೆ. ಜೂನ್ ತಿಂಗಳ ಸಭೆಯ ಪ್ರಮುಖಾಂಶಗಳು ತಿಳಿಸುವಂತೆ, ಹಣಕಾಸು ನೀತಿ ಸಮಿತಿಯು ಹಣದುಬ್ಬರದೆಡೆಗೆ ಗಮನವಿಟ್ಟಿದೆ.
ಇದನ್ನೂ ಓದಿ: Sunny leone: ಪೆಟ್ರೋಲ್ ಬೆಲೆಯಿಂದ ತತ್ತರಿಸಿರುವ ಜನರಿಗೆ ಆರೋಗ್ಯದ ಪಾಠ ಹೇಳಿದ ಸನ್ನಿ ಲಿಯೋನ್
(Retail inflation of the country eases in June 2021 comapare to May. Here is the details)