Maruti Cars: ಮಾರುತಿ ಸ್ವಿಫ್ಟ್, ಸಿಎನ್ಜಿ ಕಾರುಗಳ ಬೆಲೆಯಲ್ಲಿ ಇಂದಿನಿಂದ ಏರಿಕೆ
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ನಿಂದ ಇಂದಿನಿಂದ ಅನ್ವಯ ಆಗುವಂತೆ ಸ್ವಿಫ್ಟ್ ಹಾಗೂ ಸಿಎನ್ಜಿಯ ಎಲ್ಲ ವೇರಿಯಂಟ್ಗಳ ದರದಲ್ಲಿ ಏರಿಕೆ ಮಾಡಲಾಗಿದೆ. ಔಟ್ಪುಟ್ ವೆಚ್ಚದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮಾರುತಿ ಸುಜುಕಿ ಮುಂದಾಗಿದೆ.
ನೀವೇನಾದರೂ ಮಾರುತಿ ಕಾರು (Maruti Suzuki Cars) ಖರೀದಿಸಬೇಕು ಅಂತಿದ್ದೀರಾ? ಹಾಗಿದ್ದಲ್ಲಿ ಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ನಿಂದ ಇಂದಿನಿಂದ ಅನ್ವಯ ಆಗುವಂತೆ ಸ್ವಿಫ್ಟ್ ಹಾಗೂ ಸಿಎನ್ಜಿಯ ಎಲ್ಲ ವೇರಿಯಂಟ್ಗಳ ದರದಲ್ಲಿ ಏರಿಕೆ ಮಾಡಲಾಗಿದೆ. ಔಟ್ಪುಟ್ ವೆಚ್ಚದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮಾರುತಿ ಸುಜುಕಿ ಮುಂದಾಗಿದೆ. ಹೊಸ ದರಗಳು ಜುಲೈ 12, 2021ರಿಂದ ಜಾರಿಗೆ ಬರುತ್ತವೆ. ಪಿಟಿಐ ವರದಿ ಪ್ರಕಾರ, ಜೂನ್ 21, 2021ರ ರೆಗ್ಯುಲೇಟರಿ ಫೈಲಿಂಗ್ನಲ್ಲಿ ಮಾರುತಿ ಸುಜುಕಿ ಈ ಬಗ್ಗೆ ತಿಳಿಸಿದ್ದು, ಕಳೆದ ಒಂದು ವರ್ಷದಿಂದ ಕಂಪೆನಿಯ ವಾಹನ ತಯಾರಿಕೆ ವೆಚ್ಚದಲ್ಲಿ ನಿರಂತರವಾಗಿ ಏರಿಕೆ ಆಗುತ್ತಿದ್ದು, ಇದರಿಂದಾಗಿ ವಿವಿಧ ಇನ್ಪುಟ್ ವೆಚ್ಚದಲ್ಲಿ ಹೆಚ್ಚಳವಾಗಿದೆ. ಆ ಕಾರಣಕ್ಕೆ ಹೆಚ್ಚುವರಿ ವೆಚ್ಚದ ಸ್ವಲ್ಪ ಭಾಗವನ್ನು ಬೆಲೆ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ವರ್ಗಾಯಿಸಬೇಕಿದೆ ಎಂದು ಮಾರುತಿ ತಿಳಿಸಿದೆ.
ವರದಿಯ ಪ್ರಕಾರ, ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಲೆ ಏರಿಕೆ ಜಾರಿಗೆ ಬರಲಿದೆ ಎಂದು ಮಾರುತಿ ಸುಜುಕಿ ತಿಳಿಸಿತ್ತು. ಅಂದಹಾಗೆ ವಿವಿಧ ಮಾಡೆಲ್ಗಳಿಗೆ ಬೇರ ಬೇರೆ ಬಗೆಯಲ್ಲಿ ದರ ಏರಿಕೆ ಆಗಲಿದೆ. ಇವತ್ತು (ಜುಲೈ 12, 2021) ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಎಲ್ಲ ಸಿಎನ್ಜಿ ವೇರಿಯಂಟ್ಗಳ ದರ ಹೆಚ್ಚಿಸಲಾಗಿದೆ. ದೆಹಲಿಯಲ್ಲಿನ ಎಕ್ಸ್ ಶೋರೂಮ್ ದರಗಳಿಗೆ ಅನ್ವಯ ಆಗುವಂತೆ 15,000 ರೂಪಾಯಿ ತನಕ ಹೆಚ್ಚಳ ಆಗಲಿದೆ. ಸದ್ಯದಲ್ಲೇ ಇತರ ಮಾಡೆಲ್ಗಳ ಬೆಲೆಗಳಲ್ಲಿ ಸಹ ಏರಿಕೆ ಆಗಲಿದೆ ಎಂದು ಮಾರುತಿ ಸುಜುಕಿ ಕಂಪೆನಿಯು ಮಾಹಿತಿ ನೀಡಿದೆ.
ಏಪ್ರಿಲ್ 16, 2021ರಂದು, ವೇಯ್ಟೆಡ್ ಸರಾಸರಿ ಬೆಲೆ ದೆಹಲಿಗೆ (ಎಕ್ಸ್ ಶೋ ರೂಂ) ಅನ್ವಯ ಆಗುವಂತೆ ಎಲ್ಲ ಮಾಡೆಲ್ಗಳ ಮೇಲೆ ಶೇ 16ರಷ್ಟು ಏರಿಕೆಯನ್ನು ಮಾರುತಿ ಸುಜುಕಿ ಘೋಷಣೆ ಮಾಡಿತ್ತು. ಈ ವರ್ಷದ ಜನವರಿ 18, 2021ರಂದು ತಿಳಿಸಿದ್ದಂತೆ, ಇನ್ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಮಾರುತಿ ಸುಜುಕಿಯ ಆಯ್ದ ಮಾಡೆಲ್ಗಳ ಮೇಲೆ ರೂ. 34,000 ತನಕ ಏರಿಕೆ ಮಾಡುವುದಾಗಿ ಮಾಹಿತಿ ನೀಡಿತ್ತು.
ಇದನ್ನೂ ಓದಿ: ಮಾರುತಿ ಸುಜುಕಿ ಆಯ್ದ ಕಾರಿನ ಮಾಡೆಲ್ಗಳ ಬೆಲೆಯಲ್ಲಿ ತಕ್ಷಣದಿಂದಲೇ ರೂ. 22,500 ತನಕ ಹೆಚ್ಚಳ
(Due to increase in input cost Maruti Suzuki India Limited announced price hike Swift and CNG all variants from July 12th 2021)