8 Years of Modi Government: ನೋಟು ಅಮಾನ್ಯೀಕರಣದಿಂದ ಡಿಜಿಟಲ್ ಇಂಡಿಯಾವರೆಗೆ; ಪ್ರಧಾನಿ ನರೇಂದ್ರ ಮೋದಿಯ 10 ಮಹತ್ವದ ನಿರ್ಧಾರಗಳಿವು

Narendra Modi Government Landmark Decisions: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ 8 ವರ್ಷಗಳನ್ನು ಪೂರೈಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ 8 ವರ್ಷಗಳಲ್ಲಿ ತೆಗೆದುಕೊಂಡಿರುವ 10 ಮಹತ್ವದ ನಿರ್ಧಾರಗಳು ಇಲ್ಲಿವೆ...

8 Years of Modi Government: ನೋಟು ಅಮಾನ್ಯೀಕರಣದಿಂದ ಡಿಜಿಟಲ್ ಇಂಡಿಯಾವರೆಗೆ; ಪ್ರಧಾನಿ ನರೇಂದ್ರ ಮೋದಿಯ 10 ಮಹತ್ವದ ನಿರ್ಧಾರಗಳಿವು
ನರೇಂದ್ರ ಮೋದಿImage Credit source: Deccan Herald
Follow us
| Updated By: ಸುಷ್ಮಾ ಚಕ್ರೆ

Updated on:May 25, 2022 | 8:06 PM

ನವದೆಹಲಿ: ನೀವು ಅವರನ್ನು ಪ್ರೀತಿಸಿ ಅಥವಾ ದ್ವೇಷಿಸಿ. ಆದರೆ, ನೀವು ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬ ಮಾತು ಪ್ರಧಾನಿ ನರೇಂದ್ರ ಮೋದಿಯವರಿಗೆ (PM Modi) ಸರಿಯಾಗಿ ಅನ್ವಯಿಸುತ್ತದೆ. ಪ್ರಧಾನಿ ಮೋದಿಯವರನ್ನು (PM Narendra Modi) ಹೀಗಳೆಯುವವರು, ಟೀಕಿಸುವವರ ಮಧ್ಯೆಯೇ 8 ವರ್ಷಗಳ ಕಾಲ ಯಶಸ್ವಿಯಾಗಿ ದೇಶವನ್ನು ಮುನ್ನಡೆಸಿರುವುದು ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನಮಾನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಕೀರ್ತಿ ಮೋದಿಯವರದ್ದು. 2ನೇ ಅವಧಿಗೆ ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೋದಿಯವರು ಇದೀಗ ಪ್ರಧಾನಮಂತ್ರಿಯಾಗಿ 8 ವರ್ಷಗಳನ್ನು (8 Years of Narendra Modi Government) ಪೂರೈಸಿದ್ದಾರೆ. 2001ರಿಂದ 2014ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಬಳಿಕ ಭಾರತದ ಪ್ರಧಾನ ಮಂತ್ರಿಯಾದರು. ಪ್ರಧಾನಮಂತ್ರಿ ನರೇಂದ್ರ ಮೋದಿ  ಕಳೆದ 8 ವರ್ಷಗಳಲ್ಲಿ ತೆಗೆದುಕೊಂಡಿರುವ 10 ಮಹತ್ವದ ನಿರ್ಧಾರಗಳು ಇಲ್ಲಿವೆ…

1. ಸ್ವಚ್ಛ ಭಾರತ ಅಭಿಯಾನ: ಸ್ವಚ್ಛ ಭಾರತ ಅಭಿಯಾನ (ಸ್ವಚ್ಛ ಭಾರತ ಮಿಷನ್) ಭಾರತ ಸರ್ಕಾರದ ಅತ್ಯಂತ ಮಹತ್ವದ ಸ್ವಚ್ಛತಾ ಅಭಿಯಾನಗಳಲ್ಲಿ ಒಂದಾಗಿದೆ. ಇದು ರಾಷ್ಟ್ರವ್ಯಾಪಿ ಅಭಿಯಾನವಾಗಿದ್ದು, ಬಯಲು ಶೌಚವನ್ನು ತೊಡೆದುಹಾಕಲು ಮತ್ತು ಘನ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯನ್ನು ಸುಧಾರಿಸಲು 2014ರಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಲಾಯಿತು. 2014ರ ಅಕ್ಟೋಬರ್ 2ರಂದು ರಾಜ್‌ಘಾಟ್‌ನಲ್ಲಿ ಗಾಂಧಿ ಜಯಂತಿಯಂದು ಈ ಅಭಿಯಾನವನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು.

2. ನೋಟು ಅಮಾನ್ಯೀಕರಣ: ಕೇಂದ್ರ ಸರ್ಕಾರವು 500 ರೂ. ಹಾಗೂ 1,000 ರೂ.ಗಳ ನೋಟುಗಳನ್ನು ಭಾರತದಲ್ಲಿ ಅಮಾನ್ಯೀಕರಣ ಮಾಡಿ ಇಂದಿಗೆ 5 ವರ್ಷಗಳು ಆಗಿದೆ. 2016ರ ನವೆಂಬರ್‌ 8ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 500 ರೂ. ಹಾಗೂ 1,000 ರೂ. ನೋಟುಗಳನ್ನು ದೇಶದಲ್ಲಿ ಅಮಾನ್ಯೀಕರಣ ಮಾಡಲಾಗಿದ್ದು, ಬಳಿಕ 500 ರೂ.ಗಳ ಹೊಸ ನೋಟು ಹಾಗೂ 2,000 ರೂ.ಗಳ ಹೊಸ ನೋಟನ್ನು ಚಲಾವಣೆಗೆ ತರಲಾಗಿದೆ. ಈ ಹಠಾತ್‌ ಬೆಳವಣಿಗೆಯಿಂದಾಗಿ ದೇಶದಲ್ಲಿ ಭಾರೀ ಸಂಚಲನ ಮೂಡಿತ್ತು.

ಇದನ್ನೂ ಓದಿ
Image
8 Years of Modi Government: ಪ್ರಧಾನಿ ನರೇಂದ್ರ ಮೋದಿಯಿಂದ ವಿಶ್ವನಾಯಕರಿಗೆ ಅಮೂಲ್ಯ ಗಿಫ್ಟ್: ಇದುವರೆಗೆ ಯಾವೆಲ್ಲಾ ಉಡುಗೊರೆ ನೀಡಿದ್ದಾರೆ ಗೊತ್ತಾ?
Image
8 Years of Modi Government: ಏಕರೂಪ ನಾಗರಿಕ ಸಂಹಿತೆ: ಮೋದಿ ಸರ್ಕಾರದ ಎದುರು ಹಲವು ಸವಾಲುಗಳು
Image
8 Years of Modi Government: ಸಾಮಾಜಿಕ ಕ್ರಾಂತಿ ಸೃಷ್ಟಿಸಿರುವ ‘ಮನ್ ಕಿ ಬಾತ್’ ಐಡಿಯಾ ಪ್ರಧಾನಿ ಮೋದಿಯವರಿಗೆ ಹೊಳೆದಿದ್ದು 1998ರಲ್ಲಿ!
Image
8 Years of Modi Government: ದೇಶಗಳನ್ನು ಬೆಸೆದ ಲಸಿಕಾ ಮೈತ್ರಿ; ಪ್ರಧಾನಿ ನರೇಂದ್ರ ಮೋದಿ ಇಟ್ಟ ಚಾಣಾಕ್ಷ ಹೆಜ್ಜೆ

3. ಬಾಲಾಕೋಟ್ ವೈಮಾನಿಕ ದಾಳಿ: 2019ರ ಫೆಬ್ರವರಿ 26ರ ಮುಂಜಾನೆ ಭಾರತ ಬಾಲಾಕೋಟ್ ವೈಮಾನಿಕ ದಾಳಿಯನ್ನು ನಡೆಸಿತು. ಭಯೋತ್ಪಾದಕರ ತರಬೇತಿ ಶಿಬಿರದ ವಿರುದ್ಧ ಭಾರತವು ವೈಮಾನಿಕ ದಾಳಿಯನ್ನು ನಡೆಸಿತು. ಇದರಿಂದ ಭಾರೀ ಪ್ರಮಾಣದ ಉಗ್ರರು ಸಾವಿಗೀಡಾದರು. ಭಾರತದ ಪಾಲಿಗೆ ಈ ಸರ್ಜಿಕಲ್ ಸ್ಟ್ರೈಕ್ ಮರೆಯಲಾಗದ ಘಟನೆಗಳಲ್ಲೊಂದು.

4. 370 ನೇ ವಿಧಿಯ ರದ್ದು: 2016ರ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಅದರ ವಿಶೇಷ ಸ್ಥಾನಮಾನ ಮತ್ತು ಅದರ ವಾಸಸ್ಥಳ ನಿಯಮಗಳನ್ನು ವ್ಯಾಖ್ಯಾನಿಸುವ ಆದೇಶವನ್ನು ನೀಡುವ 370 ಮತ್ತು 35(A) ವಿಧಿಗಳನ್ನು ರದ್ದುಗೊಳಿಸಲಾಯಿತು. ಇದು ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತೀಯ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ನೀಡಲಾದ ತಾತ್ಕಾಲಿಕ ವಿಶೇಷ ಸ್ಥಾನಮಾನ ಅಥವಾ ಸ್ವಾಯತ್ತತೆಯನ್ನು ರದ್ದುಗೊಳಿಸಿತು. ಮೋದಿ ಸರ್ಕಾರದ ಅಡಿಯಲ್ಲಿ ಕೇಂದ್ರವು ಸಂವಿಧಾನದ 370 ಮತ್ತು 35A ವಿಧಿಗಳನ್ನು ರದ್ದುಗೊಳಿಸಿದ ಒಂದು ವರ್ಷದ ನಂತರ ಹಲವಾರು ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಹೊರಗಿನ ಜನರಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಭೂಮಿಯನ್ನು ಖರೀದಿಸಲು ದಾರಿ ಮಾಡಿಕೊಟ್ಟಿತು.

ಇದನ್ನೂ ಓದಿ: 8 Years of Modi Government: ಪ್ರಧಾನಿ ನರೇಂದ್ರ ಮೋದಿಯಿಂದ ವಿಶ್ವನಾಯಕರಿಗೆ ಅಮೂಲ್ಯ ಗಿಫ್ಟ್: ಇದುವರೆಗೆ ಯಾವೆಲ್ಲಾ ಉಡುಗೊರೆ ನೀಡಿದ್ದಾರೆ ಗೊತ್ತಾ?

5. COVID-19 ವಿರುದ್ಧ ಹೋರಾಟ: ಇಡೀ ವಿಶ್ವಾದ್ಯಂತ ಸಾವಿನ ಭೀತಿಯನ್ನು ಸೃಷ್ಟಿಸಿದ ಕೊವಿಡ್-19 2020ರಲ್ಲಿ ಭಾರತಕ್ಕೂ ಕಾಲಿಟ್ಟಿತು. ಇದರ ಪರಿಣಾಮವಾಗಿ 2020 ಮಾರ್ಚ್​ ಅಂತ್ಯದಲ್ಲಿ ದೇಶಾದ್ಯಂತ ಮೊಟ್ಟ ಮೊದಲ ಬಾರಿಗೆ ಲಾಕ್​ಡೌನ್ ಘೋಷಿಸಲಾಯಿತು. ಬಳಿಕ ಇಡೀ ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನ ಶುರು ಮಾಡಲಾಯಿತು. ಆಗಸ್ಟ್ ಅಂತ್ಯದ ವೇಳೆಗೆ ಒಂದೇ ದಿನದಲ್ಲಿ 1 ಕೋಟಿ ಜನರು ಲಸಿಕೆಯನ್ನು ಪಡೆದ ದಾಖಲೆಗೆ ಭಾರತ ಸಾಕ್ಷಿಯಾಗಿದೆ.

6. ಜಿಎಸ್​ಟಿ ಜಾರಿ: ಅಬಕಾರಿ ಸುಂಕ, ಸೇವಾ ತೆರಿಗೆ ಮತ್ತು ವ್ಯಾಟ್ ಮತ್ತು 13 ಸೆಸ್‌ಗಳಂತಹ ಅಸ್ತಿತ್ವದಲ್ಲಿರುವ 17 ಪರೋಕ್ಷ ತೆರಿಗೆಗಳನ್ನು ಬದಲಿಸಲು ರಾಷ್ಟ್ರವ್ಯಾಪಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆಡಳಿತವನ್ನು 2017ರಲ್ಲಿ ಹೊರತರಲಾಯಿತು. 5 ವರ್ಷಗಳ ಹಿಂದೆ ಸಂಸತ್ತಿನ ವಿಶೇಷ ಅಧಿವೇಶನದ ಮೂಲಕ ಜಿಎಸ್‌ಟಿ ಜಾರಿ ಮಾಡಿದ್ದು ಮೋದಿ ಸರ್ಕಾರದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ.

7. ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ: ಎನ್‌ಡಿಎ ಸರ್ಕಾರವು 2019ರ ಆಗಸ್ಟ್ 1ರಂದು ತ್ರಿವಳಿ ತಲಾಖ್ ಕಾನೂನನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಯಿತು. ಇದರ ಅಡಿಯಲ್ಲಿ ಮುಸ್ಲಿಂ ಪುರುಷರು ಮಹಿಳೆಯರಿಗೆ ತ್ವರಿತ ವಿಚ್ಛೇದನ ನೀಡುವುದನ್ನು ಶಿಕ್ಷಾರ್ಹ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗಿದೆ. ಇದಕ್ಕೂ ಮೊದಲು, ತ್ವರಿತ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ಪಡೆದ ಶಾಯರಾ ಬಾನೋ ಅವರು ಸಲ್ಲಿಸಿದ ಅರ್ಜಿಯ ನಂತರ ಭಾರತದ ಸುಪ್ರೀಂ ಕೋರ್ಟ್ ಆಗಸ್ಟ್ 2017ರಲ್ಲಿ ತ್ವರಿತ ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸಿತು. ಅನೇಕ ವಿರೋಧ ಪಕ್ಷಗಳು ಪ್ರಧಾನಿ ಮತ್ತು ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದರೂ ಇದು ಮೋದಿ ಸರ್ಕಾರದ ಪ್ರಮುಖ ಗೆಲುವು ಎಂದು ಪರಿಗಣಿಸಲಾಗಿದೆ. ಮುಸ್ಲಿಂ ಪುರುಷರು ತ್ರಿವಳಿ ತಲಾಖ್ ನೀಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ನೀಡಲಾಗುತ್ತದೆ.

8. ಡಿಜಿಟಲ್ ಇಂಡಿಯಾಗೆ ಚಾಲನೆ: ಭಾರತವನ್ನು ಡಿಜಿಟಲೀಕರಣಗೊಳಿಸಬೇಕೆಂಬ ಮಹದಾಸೆಯಿಂದ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಯೋಜನೆಗೆ ಚಾಲನೆ ನೀಡಿದರು. ಈ ದಶಕವು ಡಿಜಿಟಲ್ ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯಗಳನ್ನು ಮತ್ತು ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಅದರ ಪಾಲನ್ನು ಹೆಚ್ಚಿಸಲಿದೆ. ಅದಕ್ಕಾಗಿಯೇ ಉನ್ನತ ತಜ್ಞರು ಈ ದಶಕವನ್ನು ‘ಭಾರತದ ಟೆಕ್ಡೇಡ್’ ಎಂದು ಹೇಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಇದನ್ನೂ ಓದಿ: 8 Years Of Modi Government: ಚಿಕ್ಕ ವಯಸ್ಸಲ್ಲೆ RSS​ ಪ್ರಚಾರಕನಾಗಿ ಸಮಾಜಮುಖಿಯಾದ ನರೇಂದ್ರ ಮೋದಿ, ಮುಂದೆ ದೇಶ ಸೇವೆಯಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ!

9. ಕೃಷಿ ಕಾಯ್ದೆ ಜಾರಿ ಮತ್ತು ವಾಪಾಸ್: ಭಾರತದಲ್ಲಿ ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತಂದಿದ್ದ ನೂತನ ಕೃಷಿ ತಿದ್ದುಪಡಿ ಕಾಯ್ದೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಕೃಷಿ ಕಾಯ್ದೆ ಜಾರಿಗೊಳಿಸಿದ್ದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೊನೆಗೆ ದೆಹಲಿ ಗಡಿಭಾಗದಲ್ಲಿ ಹೋರಾಟ ನಡೆಸುತ್ತಿದ್ದ, ದೇಶದ ಹಲವು ರಾಜ್ಯಗಳ ರೈತರ ಒತ್ತಾಯಕ್ಕೆ ಮಣಿದು ಮೂರು ನೂತನ ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೇಂದ್ರ ಸರ್ಕಾರ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಅನುಕೂಲ) ಕಾಯಿದೆ, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆಯನ್ನು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು. ಆದರೆ ಅದಕ್ಕೆ ಪಂಜಾಬ್, ಹರ್ಯಾಣ ಸೇರಿದಂತೆ ಕೆಲ ಭಾಗಗಳ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಲೇ ಬಂದಿದ್ದರು.

10. ಟೆಲಿಕಾಂ ವಲಯಕ್ಕೆ ಶೇ. 100ರಷ್ಟು ಎಫ್​ಡಿಐ: ಕೇಂದ್ರ ಸರ್ಕಾರವು ಟೆಲಿಕಾಂ ಉದ್ಯಮವನ್ನು ಹೊಸ ಯುಗಕ್ಕೆ ಪರಿಚಯಿಸುವ ಪ್ರಮುಖ ಸುಧಾರಣೆಗಳನ್ನು ಘೋಷಿಸಿತು. ಕೇಂದ್ರ ಸಚಿವ ಸಂಪುಟ ಟೆಲಿಕಾಂ ವಲಯಕ್ಕೆ ಬೃಹತ್ ಪರಿಹಾರ ಪ್ಯಾಕೇಜ್ ಅನ್ನು ಅನುಮೋದಿಸಿತ್ತು. ದೇಶದ ದೂರ ಸಂಪರ್ಕ ವಲಯದ ಸುಧಾರಣೆಗಾಗಿ ಟೆಲಿಕಾಂ ಕಂಪನಿಗಳಿಗೆ ಬಾಕಿ ಮೊತ್ತ ಪಾವತಿಗೆ 4 ವರ್ಷಗಳ ಗಡುವು, ಶೇ 100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:05 pm, Wed, 25 May 22

ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ