8 Years Of Modi Government: ಚಿಕ್ಕ ವಯಸ್ಸಲ್ಲೆ RSS​ ಪ್ರಚಾರಕನಾಗಿ ಸಮಾಜಮುಖಿಯಾದ ನರೇಂದ್ರ ಮೋದಿ, ಮುಂದೆ ದೇಶ ಸೇವೆಯಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ!

8 Years Of Modi Government:  ಚಿಕ್ಕ ವಯಸ್ಸಲ್ಲೆ RSS​ ಪ್ರಚಾರಕನಾಗಿ ಸಮಾಜಮುಖಿಯಾದ ನರೇಂದ್ರ ಮೋದಿ, ಮುಂದೆ ದೇಶ ಸೇವೆಯಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ!
ನರೇಂದ್ರ ಮೋದಿ

PM Narendra Modi: ಗುಜರಾತಿನಲ್ಲಿ ಪಕ್ಷವನ್ನು ಸ್ಥಾಪಿಸಿದ ವಸಂತ ಗಜೇಂದ್ರ ಗಡ್ಕರ್ ಮತ್ತು ನಾಥಲಾಲ್ ಜಘ್​​ದಾ ಎಂಬಿಬ್ಬರು ಜನಸಂಘದ ನಾಯಕರ ಆಶ್ರಯದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕತ್ವ ಲಕ್ಷಣಗಳನ್ನು ಮೈಗೂಡಿಸಿಕೊಂಡರು. 1987ರ ವೇಳೆಗೆ ಜನಸಂಘ/ ಆರ್​ ಎಸ್​ ಎಸ್ ಮೋದಿಯನ್ನು ಬಿಜೆಪಿ ಮೂಲಕ ಸಕ್ರಿಯ ರಾಜಕಾರಣಕ್ಕೆ ಎಳೆತಂದಿತು.

TV9kannada Web Team

| Edited By: sadhu srinath

May 25, 2022 | 5:27 PM

ಮಹಾದೇವನ ಕ್ಷೇತ್ರವಾದ ವಾರಾಣಾಸಿಯ (Varanasi) ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನರೇಂದ್ರ ದಾಮೋದರದಾಸ್ ಮೋದಿ ಪ್ರಧಾನ ಮಂತ್ರಿಯಾಗಿ ಭಾರತ ದೇಶವನ್ನೂ ಯಶಸ್ವಿಯಾಗಿ ಪ್ರತಿನಿಧಿಸುತ್ತಿದ್ದಾರೆ. ಮೋದಿ, ಭಾರತೀಯ ಜನತಾ ಪಕ್ಷದ ಅತ್ಯಂತ ಸಕ್ರಿಯ ಸದಸ್ಯರೂ ಹೌದು. ವಾರಾಣಅಸಿ-ಪ್ರಧಾನಿ-ಬಿಜೆಪಿ ಈ ಪದಪುಂಜಗಳಿಂದ ನರೇಂದ್ರ ಮೋದಿ (Prime Minister Narendra Modi) ಅವರ ರಾಜಕೀಯ ಕಥನ ಆರಂಭಿಸಬೇಕಾದರೆ ಅವರ ಮೂಲವನ್ನು ಆಮೂಲಾಗ್ರವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಾಗುತ್ತದೆ. ಗುಜರಾತಿನ ಮುಖ್ಯಮಂತ್ರಿಯಾಗಿ 4 ಬಾರಿ ಆ ರಾಜ್ಯವನ್ನು ಮುನ್ನಡೆಸಿದ್ದ ಮೋದಿ, ಆಡಳಿತಾರೂಢ ಬಿಜೆಪಿ ಪಕ್ಷದ ಮಾಸ್ಟರ್​ ಸ್ಟ್ರಾಟೆಜಿಸ್ಟ್​ ಎಂದೇ ಹೇಳಬಹುದು (8 Years Of Modi Government).

ಅಮ್ಮ ಹೀರಾಬೆನ್ ಮೋದಿ ಅವರ ಊರಾದ ಗುಜರಾತಿನ ಮೆಹಸಾಣಾ ಜಿಲ್ಲೆಯ ವಾಡನಗರದಲ್ಲಿ (ಸೆಪ್ಟೆಂಬರ್ 17, 1950) ಜನಿಸಿದ ಮೋದಿ ಎಳೆಯ ಮಗುವಾಗಿದ್ದ ಕಾಲದಿಂದಲೂ ಜೀವನದುದ್ದಕ್ಕೂ ಕಷ್ಟಗಳನ್ನು ದಾಟಿ ಬಂದವರೇ. ಅಮ್ಮನ ಊರಲ್ಲಿಯೇ ಶಾಲಾ ವಿದ್ಯಾಭ್ಯಾಸ ಮಾಡಿದ ಮೋದಿ ಸಾಮಾನ್ಯ ಬುದ್ಧಿಮತ್ತೆಯ ವಿದ್ಯಾರ್ಥಿಯಾಗಿದ್ದ ಆದರೆ ಚತುರ ಚರ್ಚಾಪಟು ಆಗಿದ್ದ. ಶಾಲಾ ವಿದ್ಯಾಭ್ಯಾಸ ದಾಟುತ್ತಿದ್ದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya Swayamsevak Sangh -RSS pracharak) ಪ್ರಚಾರಕ್ ಆಗಿ ಸಮಾಜಮುಖಿಯಾದರು.

ತುಂಬು ಹದಿಹರೆಯದಲ್ಲಿ ಮನೆ ಬಿಟ್ಟು, ದೇಶ ಸುತ್ತ ತೊಡಗಿದ ಮೋದಿ 90ರ ದಶಕದಲ್ಲಿ ದೆಹಲಿ ಪ್ರವೇಶಿಸಿ, ಬಿಜೆಪಿ ಅಧಿಕೃತ ವಕ್ತಾರರಾದರು. ನರೇಂದ್ರ ಮೋದಿ ಅವರಲ್ಲಿರುವ ಅಗಾಧ ಎದೆ ಛಾತಿ, ಅದಮ್ಯ ಉತ್ಸಾಹ ಅವರನ್ನು ರಾಜಕೀಯ ಪಡಸಾಲೆಯಲ್ಲಿ ಮುನ್ನುಗ್ಗುವಂತೆ ಮಾಡಿತು. ಈ ಮಧ್ಯೆ ಅವರು ಆರ್​ ಎಸ್​ ಎಸ್​ ಪ್ರಚಾರಕರಾಗಿ ಸಂಕಷ್ಟಕ್ಕೆ ಸಿಲುಕಿದ ಜನರ ಕೈಹಿಡಿದರು. ಮುಂದೆ ಆರ್​ ಎಸ್​ ಎಸ್ ಪ್ರಧಾನ ಕಚೇರಿ ನಾಗಪುರ ತಲುಪಿದರು. ಅಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚುಕ್ಕಾಣಿ ಹಿಡಿಯುವಂತೆ ಮೋದಿಗೆ ಸೂಚಿಸಲಾಯಿತು. ಅದೇ ಕಾಲದಲ್ಲಿ ದೇಶದಲ್ಲಿ ಧುತ್ತನೆ ಎದುರಾಗಿದ್ದು ತುರ್ತು ಪರಿಸ್ಥಿತಿ.

ಇದನ್ನೂ ಓದಿ: 8 Years Of Modi Government: ಸಹೋದರ ಮೋದಿ ಪ್ರಧಾನಿಯೇ ಆದರೂ ಕುಟುಂಬದವರಿಗೆ ರಾಜಕೀಯದ ಗಂಧಗಾಳಿ ತಾಕಿಲ್ಲ! ಮೋದಿ ಸಹೋದರಿ ಏನ್ಮಾಡ್ತಿದ್ದಾರೆ?

ಆ ದುರ್ಭರ ಪರಿಸ್ಥಿತಿಯಲ್ಲಿ ಯುವ ಮೋದಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು. ಆ ವೇಳೆ ಅವರು ಗುಜರಾತಿನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಭಾರತೀಯ ಜನತಾ ಪಕ್ಷದ ಪ್ರಾದೇಶಿಕ ಸಂಚಾಲಕರಾದರು. ಆ ಚಿಕ್ಕ ವಯಸ್ಸಿನಿಂದಲೇ ಪ್ರಾದೇಶಿಕವಾಗಿ ಅವರು ಬಿಜೆಪಿಯನ್ನು ಮುನ್ನಡೆಸತೊಡಗಿದರು. ಗುಜರಾತಿನಲ್ಲಿ ಪಕ್ಷವನ್ನು ಸ್ಥಾಪಿಸಿದ ವಸಂತ ಗಜೇಂದ್ರ ಗಡ್ಕರ್ ಮತ್ತು ನಾಥಲಾಲ್ ಜಘ್​​ದಾ ಎಂಬಿಬ್ಬರು ಜನಸಂಘದ ನಾಯಕರ ಆಶ್ರಯದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕತ್ವ ಲಕ್ಷಣಗಳನ್ನು ಮೈಗೂಡಿಸಿಕೊಂಡರು. 1987ರ ವೇಳೆಗೆ ಜನಸಂಘ/ ಆರ್​ ಎಸ್​ ಎಸ್ ಮೋದಿಯನ್ನು ಬಿಜೆಪಿ ಮೂಲಕ ಸಕ್ರಿಯ ರಾಜಕಾರಣಕ್ಕೆ ಎಳೆತಂದಿತು.

ಮುರಳಿ ಮನೋಹರ ಜೋಶಿ ಅವರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಏಕ್ತಾ ಯಾತ್ರೆಯನ್ನು ಕರಾರುವಕ್ಕಾಗಿ ಮ್ಯಾನೇಜ್ ಮಾಡಿದರು. 1988ರಲ್ಲಿ ಗುಜರಾತ್​​ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾದರು. 1995 ಮತ್ತು 1998 ರಲ್ಲಿ ಬಿಜೆಪಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ, ಗುಜರಾತಿನಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಮುಂದೆ, ಎಲ್​ ಕೆ ಅಡ್ವಾಣಿ ಅವರ ಸೋಮನಾಥ ಟು ಅಯೋಧ್ಯೆ ರಥ ಯಾತ್ರೆಯ ಸಾರಥ್ಯ ವಹಿಸಿದರು ಮೋದಿ. 1998ರಲ್ಲಿ ದೆಹಲಿಯಲ್ಲಿ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದಿದ್ದೇ ಈ ರಥಯಾತ್ರೆಗಳು!

ಅದೇ ಸಮಯದಲ್ಲಿ ನರೇಂದ್ರ ಮೋದಿ ರಾಷ್ಟ್ರೀಯ ಬಿಜೆಪಿಯ ಸೆಕ್ರೆಟರಿ ಆದರು. ಇದು ನರೇಂದ್ರ ಮೋದಿ ಅವರ ಬಿರುಸಿನ ರಾಜಕೀಯ ಏಳಿಗೆಗೆ ಸಾಕ್ಷಿಯಾಗಿತ್ತು. ಮುಂದೆ ಪಕ್ಷದ ಪ್ರಧಾನ ಕಾರ್ಯದರ್ಶಿ ಆದರು 2001ರವರೆಗೂ ಆ ಸ್ಥಾನದಲ್ಲಿ ತಮ್ಮ ಸತ್ವ ಸಾಬೀತುಪಡಿಸಿದರು. 2001ರ ಅಕ್ಟೋಬರ್ ತಿಂಗಳಲ್ಲಿ ಮೊದಲ ಬಾರಿಗೆ ಗುಜರಾತಿನ ಮುಖ್ಯಮಂತ್ರಿಯಾದರು. ಸತತವಾಗಿ 3 ಬಾರಿ ಗುಜರಾತ್​ ಮುಖ್ಯಮಂತ್ರಿಯಾದ ಬಳಿಕ, 2014ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ದೇಶದ ಪ್ರಜಾಪ್ರಭುತ್ವದ ದೇಗುಲ ಸಂಸತ್ತಿಗೆ ಶಿರಬಾಗಿ ಪ್ರವೇಶ ಮಾಡಿದರು. ದೇಶವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ… ಎರಡನೆಯ ಬಾರಿಗೂ ಪ್ರಧಾನ ಮಂತ್ರಿಯಾಗಿ ದೇಶ ಸೇವೆಯಲ್ಲಿ ತೊಡಗಿದ್ದಾರೆ ನರೇಂದ್ರ ಮೋದಿ.

ಇದನ್ನೂ ಓದಿ: ಬಿಎಸ್ವೈ ಕುಟುಂಬವನ್ನೇ ವನವಾಸಕ್ಕೆ ಕಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ; ಬಿಜೆಪಿ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಟ್ವೀಟ್

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada