ಬಿಎಸ್ವೈ ಕುಟುಂಬವನ್ನೇ ವನವಾಸಕ್ಕೆ ಕಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ; ಬಿಜೆಪಿ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಟ್ವೀಟ್

ಬಿಎಸ್ವೈರನ್ನ ಸಿಎಂ ಕುರ್ಚಿಯಿಂದ ಇಳಿಸುವಾಗ ಕಣ್ಣೀರು, ಬಿ.ವೈ.ವಿಜಯೇಂದ್ರಗೆ ಟಿಕೆಟ್ ನಿರಾಕರಿಸುವಾಗ ರಕ್ತಕಣ್ಣೀರು. ಇದು ಬಿಜೆಪಿ BSYಗೆ ನೀಡ್ತಿರುವ ಋಣಸಂದಾಯದ ಗಿಫ್ಟ್. ಬಿಜೆಪಿಯಲ್ಲಿನ ‘ಸಂತೋಷ ಕೂಟ’ ಯಶಸ್ವಿಯಾಗಿದೆ.

ಬಿಎಸ್ವೈ ಕುಟುಂಬವನ್ನೇ ವನವಾಸಕ್ಕೆ ಕಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ; ಬಿಜೆಪಿ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಟ್ವೀಟ್
ಬಿ.ಎಸ್. ಯಡಿಯೂರಪ್ಪ
Follow us
TV9 Web
| Updated By: ಆಯೇಷಾ ಬಾನು

Updated on: May 24, 2022 | 6:59 PM

ಬೆಂಗಳೂರು: ಬಿ.ವೈ.ವಿಜಯೇಂದ್ರಗೆ ಪರಿಷತ್ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ. ಬಿಎಸ್ವೈರನ್ನ ಸಿಎಂ ಕುರ್ಚಿಯಿಂದ ಇಳಿಸುವಾಗ ಕಣ್ಣೀರು, ಬಿ.ವೈ.ವಿಜಯೇಂದ್ರಗೆ ಟಿಕೆಟ್ ನಿರಾಕರಿಸುವಾಗ ರಕ್ತಕಣ್ಣೀರು. ಇದು ಬಿಜೆಪಿ BSYಗೆ ನೀಡ್ತಿರುವ ಋಣಸಂದಾಯದ ಗಿಫ್ಟ್. ಬಿಜೆಪಿಯಲ್ಲಿನ ‘ಸಂತೋಷ ಕೂಟ’ ಯಶಸ್ವಿಯಾಗಿದೆ. ಬಿಎಸ್ವೈ ಕುಟುಂಬವನ್ನೇ ವನವಾಸಕ್ಕೆ ಕಳಿಸುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ VS ಬಿಜೆಪಿ ಯುದ್ಧ ಕಣ ರಂಗೇರಲಿದೆ ಎಂದು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಮಂಡ್ಯದ ಖಾಸಗಿ ಸಮುದಾಯ ಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘ ಮೋದಿಗೆ ಪತ್ರ ಬರೆದಿದೆ. ಇಂಥ ಭ್ರಷ್ಟ ಸರ್ಕಾರ ಇರಬೇಕಾ? ಇಂಥವರಿಗೆ ಮತ ಹಾಕಬೇಕಾ? ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ನವರು. ಸಂವಿಧಾನ ರಚನೆ ಮಾಡಿ ಕೊಟ್ಟವರು ಕಾಂಗ್ರೆಸ್ ಪಕ್ಷದವರು. ಬಿಜೆಪಿಯವರು ಸ್ವಾತಂತ್ರ್ಯಕ್ಕೆ ಹೋರಾಡಿದ ಒಬ್ಬರನ್ನು ತೋರಿಸಿ. ಆರ್ಎಸ್ಎಸ್ ಕ್ವಿಟ್ ಇಂಡಿಯಾ ಚಳವಳಿ ಹತ್ತಿಕ್ಕಿ ಎಂದಿತ್ತು. ದೇಶ ಭಕ್ತಿ ಕಾಂಗ್ರೆಸ್ ಪಕ್ಷದ ರಕ್ತದಲ್ಲೇ ಬಂದಿದೆ. ಮಧು.ಜಿ ಮಾದೇಗೌಡರನ್ನ ಒಮ್ಮತದಿಂದ ಆಯ್ಕೆ ಮಾಡಿದ್ದೇವೆ. ಸೋಲುವ ಭಯದಿಂದ ಜೆಡಿಎಸ್ ಡಮ್ಮಿ ಕ್ಯಾಂಡಿಡೇಟ್ ಹಾಕಿದೆ. ಜೆಡಿಎಸ್, ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ನ ಮಧುರನ್ನ ಗೆಲ್ಲಿಸಿ ಎಂದು ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ರು. ಇದನ್ನೂ ಓದಿ: ಮಕ್ಕಳ ಅಕ್ರಮ ಸಾಗಾಟ ಪ್ರಕರಣ: ಆರೋಪಿ ಸ್ಟಾಪ್ ನರ್ಸ್ ಅರೆಸ್ಟ್, ಇಂದು ಮತ್ತೊಂದು ಮಗುವಿನ ರಕ್ಷಣೆ

ಪಕೋಡ ಮಾರಿ ಪಕೋಡ ಎಂದು ಭಾಷಣದ ವೇಳೆ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಒಂದು ವರ್ಷಕ್ಕೆ ಎರೆಡುವರೆ ಕೋಟಿ ಉದ್ಯೋಗ ಸೃಷ್ಠಿಸುತ್ತೇವೆ ಎಂದು ಮಾತು ಕೊಟ್ರು. ಎಲ್ಲಿದೆ ಕೆಲಸ ಎಷ್ಟು ಮಂದಿ ನಿರುದ್ಯೋಗಿಗಳಿಗೆ ಮೋದಿ ಕೆಲಸ ಕೊಟ್ಟಿದ್ದಾರೆ ತೋರ್ಸಿ ಎಂದು ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಾಜ್ಯ ಸರ್ಕಾರ 40 ಪರ್ಸೆಂಟ್ ಭ್ರಷ್ಟಾಚಾರದಿಂದ ಕೂಡಿದೆ ಇನ್ನು ಮತ್ತೊಂದು ಕಡೆ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. PSI ಅಕ್ರಮ ಪ್ರಕರಣದ ಕುರಿತು ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ 40 ಪರ್ಸೆಂಟ್ ಭ್ರಷ್ಟಾಚಾರದಿಂದ ಕೂಡಿದೆ. ಅಕ್ರಮದಲ್ಲಿ ಮಂತ್ರಿಗಳು, ಅಧಿಕಾರಿಗಳು ಭಾಗಿಯಾಗಿದ್ದಾರೆ. ಸರ್ಕಾರ ಅವರನ್ನ ಬಂಧಿಸುವ ಬದಲು ರಕ್ಷಣೆ ಮಾಡುತ್ತಿದೆ ಎಂದು ಮಂಡ್ಯದಲ್ಲಿ ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಕೆಎಸ್​ಆರ್​ಟಿಸಿಯಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡುವ ಪಾಶವೀ ಮನಸ್ಥಿತಿಯ ಕಂಡಕ್ಟರ್​ಗಳೂ ಇದ್ದಾರೆ!

ಜೆಡಿಎಸ್ಗೆ ಮತ ಹಾಕಿ ವೋಟನ್ನ ವೆಸ್ಟ್ ಮಾಡ್ಕೊಬೇಡಿ. ಜೆಡಿಎಸ್ ನವರು ಏನೋ ಒಂದು ಪ್ರಯತ್ನ ಮಾಡ್ಬೇಕು ಅದನ್ನ ಮಾಡ್ತಾಯಿದ್ದಾರೆ. ಬಿಜೆಪಿ ಸ್ವಲ್ಪ ಕಷ್ಟ ಪಟ್ಟು ಹೋರಾಟ ಮಾಡುತ್ತಿದೆ. ಏನೇ ಆಗ್ಲಿ ಮಧು ಜಿ ಮಾದೇಗೌಡರನ್ನ ಗೆಲ್ಲಿಸಬೇಕು. ಮಧು ಗೆದ್ದರೆ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರಕ್ಕೆ ಒಂದು ಸಂದೇಶ ಕಳಿಹಿಸಿದಂತಾಗುತ್ತೆ. ಈ ಬಾರಿ ಮಧು ಜಿ ಮಾದೇಗೌಡರನ್ನ ಗೆಲ್ಲಿಸಲೇ ಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.