ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ; ಕೊನೆಗೂ ಪೊಲೀಸರ ವಿಚಾರಣೆಗೆ ಹಾಜರಾದ ಸುಮಾ, ಆಡಿಯೋ ವೈರಲ್ ಬಗ್ಗೆ ಹೇಳಿದ್ದೇನು?

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ; ಕೊನೆಗೂ ಪೊಲೀಸರ ವಿಚಾರಣೆಗೆ ಹಾಜರಾದ ಸುಮಾ, ಆಡಿಯೋ ವೈರಲ್ ಬಗ್ಗೆ ಹೇಳಿದ್ದೇನು?
ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಬಿಜೆಪಿ ನಾಯಕ ಅನಂತರಾಜು

ಅನಂತರಾಜು ನೇಣು ಬಿಗಿದುಕೊಂಡಿದ್ದ ಬಟ್ಟೆ ನಾಪತ್ತೆಯಾಗಿತ್ತು. ನೇಣಿಗೆ ಹಾಕಿಕೊಂಡಿದ್ದ ಬಟ್ಟೆಯನ್ನ ಅಪಶಕುನ ಅಂತಾ ಸುಟ್ಟಿದ್ದೀವಿ ಎಂದು ಅವರ ಚಿಕ್ಕಮ್ಮ ಹೇಳಿದ್ದಾರೆ. ಒಟ್ನಲ್ಲಿ, ಸಾಕಷ್ಟು ಸಂಶಯ ಸೃಷ್ಟಿಸಿರುವ ಪ್ರಕರಣದಲ್ಲಿ, ಎಫ್ ಎಸ್ ಎಲ್ ರಿಪೋರ್ಟ್ ಗಾಗಿ ಪೊಲೀಸರು ಕಾಯ್ತಿದ್ದಾರೆ.

TV9kannada Web Team

| Edited By: Ayesha Banu

May 24, 2022 | 9:41 PM

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಸಾವಿನ ಪ್ರಕರಣ ದಿನಕ್ಕೊಂದು ದಿಕ್ಕಿಗೆ ತಿರುಗುತ್ತಿದೆ. ಅದ್ರಲ್ಲೂ, ಆಡಿಯೋವೊಂದು ವೈರಲ್ ಆದ ಬಳಿಕ, ಅನಂತರಾಜು ಪತ್ನಿಯತ್ತಲೇ ಎಲ್ಲರ ಗಮನ ಹರಿದಿದೆ. ಇದೀಗ ಅನಂತರಾಜು ಪತ್ನಿ ಸುಮಾ ಕೊನೆಗೂ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ. ಆದ್ರೆ, ಪೊಲೀಸರು ಸುಮಾ ವಿಷ್ಯದಲ್ಲಿ ತೋರುತ್ತಿರುವ ಸಾಫ್ಟ್ ಕಾರ್ನರ್, ಹತ್ತಾರು ಪ್ರಶ್ನೆಗಳನ್ನ ಹುಟ್ಟುಹಾಕಿದೆ.

ಪೊಲೀಸರ ವಿಚಾರಣೆಗೆ ಹಾಜರಾದ ಅನಂತರಾಜು ಪತ್ನಿ ಸುಮಾ ಸಚಿವ ಎಸ್.ಟಿ.ಸೋಮಶೇಖರ್ ಆಪ್ತ, ಬಿಜೆಪಿ ನಾಯಕ ಅನಂತ್ರಾಜು, ಮೇ.12ರ ರಾತ್ರಿ ಬ್ಯಾಡರಹಳ್ಳಿಯ ಮನೆಯಲ್ಲಿ ನೇಣಿಗೆ ಶರಣಾಗಿದ್ರು. ಇದಾದ ನಂತರ, ರೇಖಾ ಎಂಬಾಕೆಯನ್ನ ಹನಿಟ್ರ್ಯಾಪ್ ಆರೋಪದಡಿ ಬಂಧಿಸಲಾಗಿತ್ತು. ಆದ್ರೆ, ರೇಖಾ ಮತ್ತು ಅನಂತರಾಜು ಪತ್ನಿ ಸುಮಾ ಸಂಭಾಷಣೆ ವೈರಲ್ ಆಗ್ತಿದ್ದಂತೆ, ಪೊಲೀಸರು ಸುಮಾಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ರು. ಆದ್ರೆ, ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಬಾರದೇ ಏನೇನೊ ಕಾರಣ ಹೇಳಿ ತಪ್ಪಿಸಿಕೊಳ್ತಿದ್ದ ಸುಮಾ, ಇವತ್ತು(ಮೇ 24) ಪೊಲೀಸರ ಎದುರು ಹಾಜರಾಗಿದ್ದಾರೆ. ಇದನ್ನೂ ಓದಿ: ಕೋನಸೀಮಾ ಜಿಲ್ಲೆಯ ಮರುನಾಮಕರಣ ವಿಚಾರ: ಅಮಲಾಪುರಂನಲ್ಲಿ ಭುಗಿಲೆದ್ದ ಹಿಂಸಾಚಾರ; ಸಚಿವರ ಮನೆಗೆ ಬೆಂಕಿ, 20 ಪೊಲೀಸರಿಗೆ ಗಾಯ

ಪೊಲೀಸರ ಎದುರು ಹಾಜರಾದ ಸುಮಾಗೆ, ಹತ್ತಾರು ಪ್ರಶ್ನೆಗಳನ್ನ ಕೇಳಿದ್ರು. ಗಂಡ ಹೆಂಡತಿ ನಡುವಿನ ಸಂಬಂಧ ಹೇಗಿತ್ತು? ಆಗಾಗಾ ಮನೆಯಲ್ಲಿ ಜಗಳ ಆಗ್ತಿತ್ತಾ. ಮುಂಚೆ ಯಾಕೆ ಆತ್ಮಹತ್ಯೆ ಪ್ರಯತ್ನ ಮಾಡಿದ್ರು. ರೇಖಾಗೂ ಅನಂತರಾಜು ಗೂ ಏನ್ ಸಂಬಂಧ. ಅವರ ಪರಿಚಯ ನಿಮಗಿದ್ಯಾ? ವೈರಲ್ ಆಗಿರೋ ಆಡಿಯೋ ಏನು? ಅಂತೆಲ್ಲ ಸುಮಾಗೆ ಪೊಲೀಸರು ಪ್ರಶ್ನೆಗಳನ್ನ ಕೇಳಿದ್ದಾರೆ. ಇನ್ನು, ಎಲ್ಲಾ ಪ್ರಶ್ನೆಗಳಿಗೂ ಅನಂತರಾಜು ಪತ್ನಿ ಸುಮಾ ಗೊಂದಲದ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಹಾಗೆ, ವಿಚಾರಣೆ ನಡೆಸ್ತಿರುವ ಪೊಲೀಸರು ಕೂಡ ಯಾವುದೋ ಒತ್ತಡದಲ್ಲಿದ್ದಾರಾ ಅನ್ನೋ ಶಂಕೆ ವ್ಯಕ್ತವಾಗಿದೆ. ಹಾಗೇ, ತನಿಖೆ ರೀತಿ ನೋಡಿದ್ರೆ ಸುಮಾ ಮೇಲೆ ಪೊಲೀಸರಿಗೆ ಸಾಫ್ಟ್ ಕಾರ್ನರ್ ಇದೆಯಾ ಅನ್ನೋ ಶಂಕೆ ಎದ್ದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅಂದಹಾಗೇ, ಅನಂತರಾಜು ನೇಣು ಬಿಗಿದುಕೊಂಡಿದ್ದ ಬಟ್ಟೆ ನಾಪತ್ತೆಯಾಗಿತ್ತು. ನೇಣಿಗೆ ಹಾಕಿಕೊಂಡಿದ್ದ ಬಟ್ಟೆಯನ್ನ ಅಪಶಕುನ ಅಂತಾ ಸುಟ್ಟಿದ್ದೀವಿ ಎಂದು ಅವರ ಚಿಕ್ಕಮ್ಮ ಹೇಳಿದ್ದಾರೆ. ಒಟ್ನಲ್ಲಿ, ಸಾಕಷ್ಟು ಸಂಶಯ ಸೃಷ್ಟಿಸಿರುವ ಪ್ರಕರಣದಲ್ಲಿ, ಎಫ್ ಎಸ್ ಎಲ್ ರಿಪೋರ್ಟ್ ಗಾಗಿ ಪೊಲೀಸರು ಕಾಯ್ತಿದ್ದಾರೆ. ಈ ರಿಪೋರ್ಟ್ ಬಳಿಕ ಮತ್ಯಾವ ವಿಚಾರಗಳು ಹೊರ ಬೀಳ್ತವೆ ನೋಡ್ಬೇಕು. ಇದನ್ನೂ ಓದಿ: ಬಿಎಸ್ವೈ ಕುಟುಂಬವನ್ನೇ ವನವಾಸಕ್ಕೆ ಕಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ; ಬಿಜೆಪಿ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಟ್ವೀಟ್

ವರದಿ: ಶಿವಪ್ರಸಾದ್, ಟಿವಿ9 ಬೆಂಗಳೂರು

Follow us on

Related Stories

Most Read Stories

Click on your DTH Provider to Add TV9 Kannada