ಕೋನಸೀಮಾ ಜಿಲ್ಲೆಯ ಮರುನಾಮಕರಣ ವಿಚಾರ: ಅಮಲಾಪುರಂನಲ್ಲಿ ಭುಗಿಲೆದ್ದ ಹಿಂಸಾಚಾರ; ಸಚಿವರ ಮನೆಗೆ ಬೆಂಕಿ, 20 ಪೊಲೀಸರಿಗೆ ಗಾಯ
ಹೊಸದಾಗಿ ರಚಿಸಲಾದ ಕೋನಸೀಮಾ ಜಿಲ್ಲೆಯನ್ನು ಬಿಆರ್ ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡುವುದನ್ನು ವಿರೋಧಿಸಿ ಪ್ರತಿಭಟಿಸಿದ ಜನರ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ನಂತರ ಆಂಧ್ರಪ್ರದೇಶದ...
ಹೈದರಾಬಾದ್: ಕೋನಸೀಮಾ ಜಿಲ್ಲೆಯ (Konaseema district) ಮರುನಾಮಕರಣ ವಿಚಾರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಆಂಧ್ರ ಪ್ರದೇಶದ ಸಾರಿಗೆ ಸಚಿವ ಪಿನಿಪೆ ವಿಶ್ವರೂಪು (Pinipe Viswarupu) ಅವರ ಮನೆಗೆ ಮಂಗಳವಾರ ಕೆಲವು ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಹೊಸದಾಗಿ ರಚಿಸಲಾದ ಕೋನಸೀಮಾ ಜಿಲ್ಲೆಯನ್ನು ಬಿಆರ್ ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡುವುದನ್ನು ವಿರೋಧಿಸಿ ಪ್ರತಿಭಟಿಸಿದ ಜನರ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ನಂತರ ಆಂಧ್ರಪ್ರದೇಶದ ಅಮಲಾಪುರಂ (Amalapuram) ನಗರದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಹಿಂಸಾಚಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕೋನಸೀಮಾ ಸಾಧನಾ ಸಮಿತಿ (KSS) ಸದಸ್ಯರು ಸಾರಿಗೆ ಸಚಿವ ಪಿನಿಪೆ ವಿಶ್ವರೂಪು ಅವರ ಮನೆಗೆ ಬೆಂಕಿ ಹಚ್ಚಿದ್ದು ಸಚಿವರು ಮತ್ತು ಅವರ ಕುಟುಂಬ ಸದಸ್ಯರನ್ನು ಪೊಲೀಸರು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ಇದಲ್ಲದೇ ಪೊಲೀಸ್ ವಾಹನ ಹಾಗೂ ಶಿಕ್ಷಣ ಸಂಸ್ಥೆಯ ಬಸ್‌ಗೂ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ವರದಿಗಳ ಪ್ರಕಾರ, ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವುದು ದುರದೃಷ್ಟಕರ. ನಾವು ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
#WATCH | People staged a protest in Andhra Pradesh over renaming the Konaseema district.
ಇದನ್ನೂ ಓದಿSeverals resorted to stone-pelting and set fire to vehicles targeting police, 20 police personal injured. pic.twitter.com/3pHqcB0PBC
— ANI (@ANI) May 24, 2022
ಹೊಸ ಕೋನಸೀಮಾ ಜಿಲ್ಲೆಯನ್ನು ಏಪ್ರಿಲ್ 4 ರಂದು ಪೂರ್ವ ಗೋದಾವರಿಯಿಂದ ರಚಿಸಲಾಗಿತ್ತು. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಕೋನಸೀಮಾ ಜಿಲ್ಲೆಯನ್ನು ಬಿಆರ್ ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡುವಂತೆ ಪೂರ್ವಭಾವಿ ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆಗಳಿದ್ದಲ್ಲಿ ಜನರು ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದಿತ್ತು.
ಕಳೆದ ವಾರ ಜಿಲ್ಲೆಯ ಮರುನಾಮಕರಣದ ಪ್ರಸ್ತಾಪದ ವಿರುದ್ಧ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕೋನಸೀಮಾ ಜಿಲ್ಲೆಯಲ್ಲಿ ಸೆಕ್ಷನ್ 144 ವಿಧಿಸಲಾಗಿತ್ತು.
ಘರ್ಷಣೆಯಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದು ಕೋನಸೀಮಾ ಎಸ್ಪಿ ಕೆ.ಎಸ್.ಎಸ್.ವಿ. ಸುಬ್ಬಾ ರೆಡ್ಡಿ ಹೇಳಿದ್ದಾರೆ. “ಘರ್ಷಣೆಯಲ್ಲಿ ಗಾಯಗೊಂಡ ಸಿಬ್ಬಂದಿಗಳ ನಿಖರವಾದ ಸಂಖ್ಯೆ ನಮಗೆ ತಿಳಿದಿಲ್ಲ. ಜಿಲ್ಲೆಯನ್ನು ಮರುನಾಮಕರಣ ಮಾಡುವ ಪ್ರಸ್ತಾವನೆಯ ಮೇಲೆ ವಿವಿಧ ವರ್ಗದ ಜನರು ಮತ್ತು ಗುಂಪುಗಳು ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸಿದ ನಂತರ ಈ ಘರ್ಷಣೆ ಉಂಟಾಗಿದೆ ಎಂದು ಅವರು ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ.
ಮಧ್ಯಾಹ್ನದ ಹೊತ್ತಿಗೆ ಪ್ರತಿಭಟನಾಕಾರರು ವಿವಿಧ ದಿಕ್ಕುಗಳಿಂದ ಪಟ್ಟಣದ ಗಡಿಯಾರ ಗೋಪುರದ ಮೂಲಕ ಅಮಲಾಪುರಂನ ಕಲೆಕ್ಟರೇಟ್ ಕಡೆಗೆ ತೆರಳಲು ಪ್ರಯತ್ನಿಸಿದರು. ಅಲ್ಲಿ ಪೊಲೀಸರು ಅವರನ್ನು ತಡೆದರು. ನಂತರ ಎಸ್ಪಿ ಮತ್ತು ಅಮಲಾಪುರಂ ಡಿಎಸ್ಪಿ ಅವರ ವಾಹನಗಳನ್ನು ಗುರಿಯಾಗಿಸಿಕೊಂಡು ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಘರ್ಷಣೆ ವೇಳೆ ಡಿಎಸ್ಪಿ ವೈ.ಮಾಧವ ರೆಡ್ಡಿ ಪ್ರಜ್ಞಾಹೀನರಾಗಿ ಬಿದ್ದರು ಎನ್ನಲಾಗಿದೆ.
Shocking pictures from Andhra Pradesh. Protesters set fire to state Minister Vishwaroop’s house in Amalapuram. The renaming of Kosaseema district as Ambedkar district has led to violent protests in the region #AndhraPradesh @ysjagan pic.twitter.com/ZuufQKaI6r
— Neha Khanna (@nehakhanna_07) May 24, 2022
ಪ್ರತಿಭಟನಾಕಾರರು ಅವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಲ್ಲಾ ದಿಕ್ಕುಗಳಿಂದ ಕಲ್ಲು ತೂರಾಟ ನಡೆಸಿದ್ದ್ದು ಪೊಲೀಸರು ಓಡಿ ತಪ್ಪಿಸಿಕೊಂಡರು. ಪ್ರತಿಭಟನಾ ಸ್ಥಳದಲ್ಲಿ ನಿಂತಿದ್ದ ಖಾಸಗಿ ಬಸ್‌ಗೆ ಉದ್ರಿಕ್ತ ಗುಂಪು ಬೆಂಕಿ ಹಚ್ಚಿದೆ. ಸಂಜೆ 5 ಗಂಟೆಯ ಹೊತ್ತಿಗೆ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು. ಘರ್ಷಣೆಯಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ನೆರವು ನೀಡುವತ್ತ ನಾವು ಗಮನಹರಿಸುತ್ತಿದ್ದೇವೆ” ಎಂದು ಸುಬ್ಬಾ ರೆಡ್ಡಿ ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 8:39 pm, Tue, 24 May 22