“ರೆಡ್ ಲೇಡಿ” ಎಂಬ ತೈವಾನ್ ಪಪ್ಪಾಯಿ ತಳಿ ಪರಿಚಯಿಸಿದ ಮಾಜಿ ಸಚಿವ ಪ್ರಗತಿಪರ ರೈತ ಹೆಚ್ ಏಕಾಂತಯ್ಯಗೆ ಗೌರವ ಡಾಕ್ಟರೇಟ್

ತೋಟಗಾರಿಕೆ ವಿವಿಯ ಹನ್ನೊಂದನೇ ಘಟಿಕೋತ್ಸವದ ಸಂಭ್ರಮದಲ್ಲಿ ಈ ಬಾರಿ ಪ್ರಗತಿಪರ ರೈತ, ತೋಟಗಾರಿಕೆ ಬೆಳೆಗಾರ ಹೆಚ್ ಏಕಾಂತಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತೋಟಗಾರಿಕೆ ವಿವಿ ಆಡಳಿತ ಮಂಡಳಿ ತೀರ್ಮಾನಿಸಿದೆ.

ರೆಡ್ ಲೇಡಿ ಎಂಬ ತೈವಾನ್ ಪಪ್ಪಾಯಿ ತಳಿ ಪರಿಚಯಿಸಿದ ಮಾಜಿ ಸಚಿವ ಪ್ರಗತಿಪರ ರೈತ ಹೆಚ್ ಏಕಾಂತಯ್ಯಗೆ ಗೌರವ ಡಾಕ್ಟರೇಟ್
ಮಾಜಿ ಸಚಿವ ಪ್ರಗತಿಪರ ರೈತ ಹೆಚ್ ಏಕಾಂತಯ್ಯ ಮತ್ತು ಕೆ ಎಮ್ ಇಂದಿರೇಶ್ ,ಕುಲಪತಿ ತೋಟಗಾರಿಕೆ ವಿವಿ ಬಾಗಲಕೋಟೆ
Follow us
TV9 Web
| Updated By: ಆಯೇಷಾ ಬಾನು

Updated on:May 24, 2022 | 7:36 PM

ಬಾಗಲಕೋಟೆ: ತೋಟಗಾರಿಕೆ ವಿವಿ ಪ್ರತಿ ವರ್ಷ ತೋಟಗಾರಿಕೆ ಮೇಳ, ಆಯೋಜಿಸುತ್ತಿದ್ದು ಕಳೆದ ಒಂದು ದಶಕದ ಹಿಂದೆ ಆರಂಭವಾದ ವಿವಿ ವತಿಯಿಂದ ಸಂಶೋಧನೆ, ಪ್ರಯೋಗ ನಡೆಯುತ್ತಲಿದೆ. ಇನ್ನು ಕೃಷಿ ಮೇಳದಂತ ಜನೋಪಯೋಗಿ ಕಾರ್ಯಕ್ರಮಗಳು ನಡೆಯುತ್ತಲೇ ಬಂದಿವೆ. ಇನ್ನು ಪ್ರತಿ ವರ್ಷವೂ ತೋಟಗಾರಿಕೆ ವಿವಿ ಪ್ರಗತಿ ಪರ ರೈತರನ್ನು ಹುಡುಕುತ್ತಾ ಸನ್ಮಾನಿಸುತ್ತಿದೆ. ಪ್ರತಿ ವರ್ಷ ವಿವಿಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಉತ್ತಮ ಹುದ್ದೆ ಸಾಧನೆ, ಸಂಶೋಧನೆ, ಪಿಹೆಚ್ ಡಿ, ಕೃಷಿ ಮಾಡುವಲ್ಲಿ ನಿರತರಾಗಿರುತ್ತಾರೆ. ಇದೆಲ್ಲ ತೋಟಗಾರಿಕೆ ವಿವಿಯ ಒಂದು ಭಾಗ .ಇನ್ನು ಬಾಗಲಕೋಟೆ ತೋಟಗಾರಿಕೆ ಈ ಬಾರಿ ಮತ್ತೊಂದು ಹೆಜ್ಜೆ ಇಟ್ಟಿದೆ‌. ಅದು ಕೃಷಿ ಸಾಧಕರನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡುವ ಮಹತ್ತರ ಹೆಜ್ಜೆ.

ಮಾಜಿ ಸಚಿವ ಪ್ರಗತಿಪರ ರೈತ ತೋಟಗಾರಿಕೆ ಬೆಳೆಗಾರ ಹೆಚ್ ಏಕಾಂತಯ್ಯಗೆ ಗೌರವ ಡಾಕ್ಟರೇಟ್ ತೋಟಗಾರಿಕೆ ವಿವಿಯ ಹನ್ನೊಂದನೇ ಘಟಿಕೋತ್ಸವದ ಸಂಭ್ರಮದಲ್ಲಿ ಈ ಬಾರಿ ಪ್ರಗತಿಪರ ರೈತ, ತೋಟಗಾರಿಕೆ ಬೆಳೆಗಾರ ಹೆಚ್ ಏಕಾಂತಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತೋಟಗಾರಿಕೆ ವಿವಿ ಆಡಳಿತ ಮಂಡಳಿ ತೀರ್ಮಾನಿಸಿದೆ. ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಹೆಚ್ ಏಕಾಂತಯ್ಯ ಅವರಿಗೆ ನೀಡುತ್ತಿದೆ. ಇದನ್ನೂ ಓದಿ: Viral Video: ಫೋಟೋ ತೆಗೆಯುತ್ತಿದ್ದಾಗ ಬಾಲಕಿಗೆ ಸೊಂಡಿಲಿನಿಂದ ಹೊಡೆದ ಆಫ್ರಿಕನ್ ಆನೆ, ವಿಡಿಯೋ ವೈರಲ್

ನಾಳೆ ತೋ.ವಿವಿ 11 ನೇ ಘಟಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಏಕಾಂತಯ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ. ಈ ಬಗ್ಗೆ ಮಾತನಾಡಿದ ತೋಟಗಾರಿಕೆ ವಿವಿ ಕುಲಪತಿ ಕೆ ಎಮ್ ಇಂದಿರೇಶ್ ಅವರು ಹೆಚ್ ಏಕಾಂತಯ್ಯ ಅವರ ಕೃಷಿ ಜೀವನ ಪರಿಚಯ ಮಾಡಿಕೊಟ್ಟರು. ಏಕಾಂತಯ್ಯ ಅವರನ್ನು ಕೃಷಿಋಷಿ ಅಂತ ಕರೆಯುತ್ತಾರೆ. ಅವರ ಕೃಷಿ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಇದ್ದ ಹಾಗೆ ,ಅಂತಹ ಮಹಾನ್ ಕೃಷಿ ಸಾಧಕರಿಗೆ ನಮ್ಮ ತೋಟಗಾರಿಕೆ ವಿವಿಯಿಂದ ಮೊಟ್ಟ ಮೊದಲ ಗೌರವ ಡಾಕ್ಟರೇಟ್ ನೀಡುತ್ತಿದ್ದೇವೆ ಇದು ನಮ್ಮ ಉತ್ತಮ ಆಯ್ಕೆ ಅಷ್ಟೇ ಅಲ್ಲದೆ ಅಂತಹ ವ್ಯಕ್ತಿಗೆ ಗೌರವ ಡಾಕ್ಟರೇಟ್ ನೀಡುತ್ತಿರೋದು ನಮ್ಮ ವಿವಿಗೆ ಒಂದು ಹೆಮ್ಮೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹೆಚ್ ಏಕಾಂತಯ್ಯ ಪರಿಚಯ ಹೆಚ್ ಏಕಾಂತಯ್ಯ ನವರು 1935 ರ ಫೆಬ್ರವರಿ 1 ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೈಲಾಲು ಎಂಬ ಗ್ರಾಮದಲ್ಲಿ ಜನಿಸಿದರು. ಇವರು ಬಿಎಸ್ಸಿ ಮತ್ತು ಬಿಎಎಲ್ಎಲ್ಬಿ ಪದವೀಧರರಾಗಿದ್ದು 1957 ರಿಂದ 88 ರವರೆಗೆ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ರಾಜಕೀಯ ಕೃಷಿ ಎರಡರಲ್ಲೂ ತೊಡಗಿಕೊಂಡರು. ಹೆಚ್ ಏಕಾಂತಯ್ಯ ಅವರು 1985 ರಿಂದ 89 ರ ಅವಧಿಯಲ್ಲಿ ಚಿತ್ರದುರ್ಗದಿಂದ ಎರಡು ಬಾರಿ ಶಾಸನ ಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು ಇವರು ಕರ್ನಾಟಕ ಸರ್ಕಾರದ ಸಹಕಾರ ಹಾಗೂ ಲೋಕೋಪಯೋಗಿ ಇಲಾಖೆಯ ಮಂತ್ರಿಯಾಗಿ ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಮಹನೀಯರು ಸಾರ್ವಜನಿಕ ಲೆಕ್ಕಪತ್ರ ರಾಜ್ಯ ಶಾಸಕಾಂಗದ ಮತ್ತು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರೋದನ್ನು ಸ್ಮರಿಸಬಹುದಾಗಿದೆ.

ಇವರು ಕೃಷಿ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು 1992ರಿಂದ ತಮ್ಮ ಐವತ್ತು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಗಳನ್ನು ಅಳವಡಿಸಿ ಇತರರಿಗೆ ಮಾದರಿಯಾಗಿದ್ದಾರೆ 1995 ರಲ್ಲಿ “ರೆಡ್ ಲೇಡಿ” ಎಂಬ ತೈವಾನ್ ಪಪ್ಪಾಯಿ ತಳಿಯನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಹೆಗ್ಗಳಿಕೆ ಇವರದ್ದಾಗಿದೆ‌. ಬಾಗಲಕೋಟೆ ತೋಟಗಾರಿಕೆ ವಿವಿತೋಟಗಾರಿಕೆ ವಿವಿ ಅಭಿವೃದ್ದಿ ಪಡಿಸಿದ ಧುಪದಾಲ ನೇರಳೆ,ತಳಿಗಳನ್ನು ತಮ್ಮ ತೋಟದಲ್ಲಿ ನಾಡಿ ಮಾಡಿ ಇತರರಿಗೆ ಮಾರ್ಗದರ್ಶಕರಾದರು.ದಾಳಿಂಬೆ ಬೆಳೆಯಲ್ಲಿ ಭಗುವಾ ತಳಿಯ ಅಂಗಾಂಶಗಳನ್ನು ಸಸಿ ನಾಟಿ ಮಾಡಿ ನವೀಬ ತಂತ್ರಜ್ಞಾನ ಅಳವಡಿಸುವಲ್ಲಿ ರೈತರಿಗೆ ಅಭಿವೃದ್ಧಿಯ ಧಿಕ್ಷೂಚಿಯಾದವರು ಏಕಾಂತಯ್ಯ. ಇದನ್ನೂ ಓದಿ: GT vs RR, IPL 2022 Qualifier 1 Live Score: ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್ ಆರಂಭ

ಇವರು ವಿದೇಶಿ ಮತ್ತು ದೇಶಿ ಆಕಳುಗಳು ಸುಧಾರಿತ ತಳಿಗಳನ್ನು ಅಳವಡಿಸಿ ಹೊಸ ತಂತ್ರಜ್ಞಾನಗಳಿಂದ ಅಭಿವೃದ್ಧಿಪಡಿಸಲ್ಪಟ್ಟ ಡೈರಿಯು ಈ ಭಾಗದ ಹೈನುಗಾರಿಕೆ ರೈತರಿಗೆ ಆದಾಯ ಹೆಚ್ಚಿಸುವಲ್ಲಿ ಆಶಾಕಿರಣ ಮೂಡಿಸಿದೆ‌. ಭಾರಿ ಪ್ರಮಾಣದ ಹಾಲಿನ ಶೀತಲೀಕರಣ ಸುಮಾರು 250 ಟನ್ ಸಾಮರ್ಥ್ಯ ಹೊಂದಿರುವ ಎರೆಹುಳು ಗೊಬ್ಬರ ಘಟಕ, ಉತ್ತಮ ಗುಣಮಟ್ಟದ ತೋಟಗಾರಿಕೆ ಸಸ್ಯೋತ್ಪಾದಕಗಳ ಘಟಕ, ಮೇವು ಬೆಳೆಗಳ ವಾಣಿಜ್ಯಾಧಾರಿತ ಹೈಡ್ರೊಫೋನಿಕ್ಷ್ ಸೌಲಭ್ಯಗಳು,ಉತ್ಕೃಷ್ಟ ಮೌಲ್ಯದ ತೋಟಗಾರಿಕೆ ಬೆಳೆಗಳು,ಸಾವಯವ ತೆಂಗಿನತೋಟ, ಕೃಷಿ ಸಂರಕ್ಷಣೆ ಸುಸಜ್ಜಿತ ಕೃಷಿಹೊಂಡ ಇವರು ಕೈಗೊಂಡ ವಿಶೇಷ ಸಾಧನೆಯ ಮೈಲಿಗಲ್ಲುಗಳಾಗಿವೆ. ಮೈದಾನ ಪ್ರದೇಶ ಹಾಗೂ ತೆಂಗಿನ ತೋಟಗಳಲ್ಲಿ ಕಾಫಿಯನ್ನು ಅಂತರಬೆಳೆಯಾಗಿ ಬೆಳೆದು ಪ್ರಾತ್ಯಕ್ಷಿಕೆಯ ಮೂಲಕ ಸಾದರಪಡಿಸಿದ ಅವರ ಸಾಧನೆ ಇನ್ನಿತರರಿಗೆ ಸ್ಪೂರ್ತಿಯಾಗಿದೆ. ಸಾಮಾಜಿಕ ಕ್ಷೇತ್ರದಲ್ಲಿ ಏಕಾಂತಯ್ಯ ಅವರ ಅಧ್ವಿತಿಯ ಸಾಧನೆಗೆ 2021ರಲ್ಲಿ ಪ್ರತಿಷ್ಟಿತ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Published On - 7:36 pm, Tue, 24 May 22

ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​