GT vs RR, IPL 2022 Qualifier 1: ಫೈನಲ್​ಗೆ ಎಂಟ್ರಿ ಕೊಟ್ಟ ಗುಜರಾತ್ ಟೈಟಾನ್ಸ್

TV9 Web
| Updated By: ಝಾಹಿರ್ ಯೂಸುಫ್

Updated on:May 24, 2022 | 11:51 PM

GT Vs RR IPL 2022 PlayOff: ಟಾಸ್ ಸೋತ ರಾಜಸ್ಥಾನ್ ರಾಯಲ್ಸ್​ ಮೊದಲು ಬ್ಯಾಟ್ ಮಾಡಿ ಜೋಸ್ ಬಟ್ಲರ್​ ಅವರ 89 ರನ್​ಗಳ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 188 ರನ್​ ಕಲೆಹಾಕಿದೆ.

GT vs RR, IPL 2022 Qualifier 1: ಫೈನಲ್​ಗೆ ಎಂಟ್ರಿ ಕೊಟ್ಟ ಗುಜರಾತ್ ಟೈಟಾನ್ಸ್
Gujarat Titans

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಗುಜರಾತ್ ಟೈಟಾನ್ಸ್ ತಂಡವು ಫೈನಲ್​ಗೆ ಪ್ರವೇಶಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ (47) ಅಬ್ಬರಿಸಿದ್ದರು. ಅದರಲ್ಲೂ ಅಂತಿಮ ಓವರ್​ವರೆಗೆ ಬ್ಯಾಟ್ ಬೀಸಿದ ಬಟ್ಲರ್ 89 ರನ್​ ಬಾರಿಸುವ ಮೂಲಕ 6 ವಿಕೆಟ್ ನಷ್ಟಕ್ಕೆ ರಾಜಸ್ಥಾನ್ ರಾಯಲ್ಸ್​ ತಂಡದ ಮೊತ್ತವನ್ನು 188 ಕ್ಕೆ ತಂದು ನಿಲ್ಲಿಸಿರು.

189 ರನ್​ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್​ ಪರ ಹಾರ್ದಿಕ್ ಪಾಂಡ್ಯ (40) ಹಾಗೂ ಡೇವಿಡ್ ಮಿಲ್ಲರ್ (68) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಇದಾಗ್ಯೂ ಅಂತಿಮ ಹಂತದಲ್ಲಿ ಪಂದ್ಯವು ರೋಚಕಘಟ್ಟದತ್ತ ಸಾಗಿತ್ತು. ಕೊನೆಯ ಓವರ್​ನಲ್ಲಿ ಗುಜರಾತ್ ತಂಡಕ್ಕೆ 16 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸುವ ಮೂಲಕ ಡೇವಿಡ್ ಮಿಲ್ಲರ್ ಗುಜರಾತ್ ತಂಡಕ್ಕೆ 7 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ಫೈನಲ್​ಗೆ ಪ್ರವೇಶಿಸಿದೆ. ಇನ್ನು ರಾಜಸ್ಥಾನ್ ರಾಯಲ್ಸ್​ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ.

RR 188/6 (20)

GT 191/3 (19.3)

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಹಾರ್ದಿಕ್ ಪಾಂಡ್ಯ (ನಾಯಕ), ಶುಭ್ಮನ್ ಗಿಲ್, ವೃದ್ಧಿಮಾನ್ ಸಾಹ, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಅಲ್ಝಾರಿ ಜೋಸೆಫ್, ಮೊಹಮ್ಮದ್ ಶಮಿ, ಯಶ್ ದಯಾಲ್.

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಪ್ರಸಿದ್ದ್ ಕೃಷ್ಣ, ಒಬೆಡ್​​ ಮೆಕಾಯ್.

LIVE NEWS & UPDATES

The liveblog has ended.
  • 24 May 2022 11:33 PM (IST)

    ಕೊನೆಯ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್

    ಕೊನೆಯ ಓವರ್​ನಲ್ಲಿ 16 ರನ್​ಗಳ ಅವಶ್ಯಕತೆ

    ಪ್ರಸಿದ್ದ್ ಕೃಷ್ಣ ಎಸೆದ ಕೊನೆಯ ಓವರ್​ನ ಮೊದಲ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿ ಗುಜರಾತ್ ತಂಡಕ್ಕೆ ಜಯ ತಂದುಕೊಟ್ಟ ಡೇವಿಡ್ ಮಿಲ್ಲರ್

    RR 188/6 (20)

    GT 191/3 (19.3)

  • 24 May 2022 11:31 PM (IST)

    ಗುಜರಾತ್ ಟೈಟಾನ್ಸ್ ತಂಡಕ್ಕೆ ಭರ್ಜರಿ ಜಯ

    RR 188/6 (20)

    GT 191/3 (19.3)

  • 24 May 2022 11:29 PM (IST)

    ಭರ್ಜರಿ ಸಿಕ್ಸ್

    ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ಮಿಲ್ಲರ್ ಮತ್ತೊಂದು ಸಿಕ್ಸ್

    GT 185/3 (19.2)

      

  • 24 May 2022 11:27 PM (IST)

    ಕಿಲ್ಲರ್ ಮಿಲ್ಲರ್

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಮಿಲ್ಲರ್ ಭರ್ಜರಿ ಸಿಕ್ಸ್

    GT 179/3 (19.1)

      

    5 ಎಸೆತಗಳಲ್ಲಿ 10 ರನ್​ಗಳ ಅವಶ್ಯಕತೆ

  • 24 May 2022 11:25 PM (IST)

    GT 173/3 (19)

    ಕೊನೆಯ ಓವರ್​ನಲ್ಲಿ 16 ರನ್​ಗಳ ಅವಶ್ಯಕತೆ

  • 24 May 2022 11:25 PM (IST)

    ಅರ್ಧಶತಕ ಪೂರೈಸಿದ ಮಿಲ್ಲರ್

    35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮಿಲ್ಲರ್

    GT 173/3 (19)

      

  • 24 May 2022 11:23 PM (IST)

    ಕಿಲ್ಲಿಂಗ್ ಶಾಟ್

    ಮೆಕಾಯ್ ಎಸೆತದಲ್ಲಿ ಲಾಂಗ್ ಆಫ್​ನತ್ತ ಬೌಂಡರಿ ಬಾರಿಸಿದ ಡೇವಿಡ್ ಮಿಲ್ಲರ್

    GT 172/3 (18.3)

      

  • 24 May 2022 11:20 PM (IST)

    ಕೊನೆಯ 2 ಓವರ್

    GT 166/3 (18)

    12 ಎಸೆತಗಳಲ್ಲಿ 23 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ಮಿಲ್ಲರ್-ಪಾಂಡ್ಯ ಬ್ಯಾಟಿಂಗ್

      

  • 24 May 2022 11:19 PM (IST)

    ಕಿಲ್ಲರ್ ಮಿಲ್ಲರ್

    ಚಹಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ಡೇವಿಡ್ ಮಿಲ್ಲರ್

    GT 165/3 (17.5)

      

  • 24 May 2022 11:14 PM (IST)

    GT 155/3 (17)

    18 ಎಸೆತಗಳಲ್ಲಿ 34 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ಮಿಲ್ಲರ್-ಪಾಂಡ್ಯ ಬ್ಯಾಟಿಂಗ್

    GT 155/3 (17)

      

  • 24 May 2022 11:10 PM (IST)

    ವೆಲ್ಕಂ ಬೌಂಡರಿ

    ಸ್ಲೋ ಬಾಲ್ ಎಸೆದ ಮೆಕಾಯ್…ಆಕರ್ಷಕ ಶಾಟ್ ಮೂಲಕ ಬೌಂಡರಿ ಬಾರಿಸಿದ ಮಿಲ್ಲರ್

    GT 150/3 (16.1)

      

  • 24 May 2022 11:07 PM (IST)

    43 ರನ್​ಗಳ ಅವಶ್ಯಕತೆ

    GT 146/3 (16)

    ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ-ಡೇವಿಡ್ ಮಿಲ್ಲರ್ ಬ್ಯಾಟಿಂಗ್

      

  • 24 May 2022 11:00 PM (IST)

    ಕಿಲ್ಲರ್ ಮಿಲ್ಲರ್

    ಚಹಾಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಡೇವಿಡ್ ಮಿಲ್ಲರ್

    GT 138/3 (14.4)

      

  • 24 May 2022 10:56 PM (IST)

    ಸ್ಟ್ರೈಟ್ ಹಿಟ್

    ಅಶ್ವಿನ್ ಎಸೆತದಲ್ಲಿ ಡೇವಿಡ್ ಮಿಲ್ಲರ್ ಸ್ಟ್ರೈಟ್ ಹಿಟ್…ಫೋರ್

    GT 129/3 (14)

      

  • 24 May 2022 10:55 PM (IST)

    ಪಾಂಡ್ಯ ಹಿಟ್

    ಅಶ್ವಿನ್ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಹಾರ್ದಿಕ್ ಪಾಂಡ್ಯ

    GT 123/3 (13.4)

      

  • 24 May 2022 10:53 PM (IST)

    13 ಓವರ್ ಮುಕ್ತಾಯ

    GT 115/3 (13)

      

    ಗುಜರಾತ್​ಗೆ ಗೆಲ್ಲಲು 7 ಓವರ್​ಗಳಲ್ಲಿ 72 ರನ್​ಗಳ ಅವಶ್ಯಕತೆ

  • 24 May 2022 10:47 PM (IST)

    GT 109/3 (12)

    ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ-ಡೇವಿಡ್ ಮಿಲ್ಲರ್ ಬ್ಯಾಟಿಂಗ್

  • 24 May 2022 10:42 PM (IST)

    ಪಾಂಡ್ಯ ಪವರ್

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಹಾರ್ದಿಕ್ ಪಾಂಡ್ಯ

    GT 102/3 (10.4)

      

  • 24 May 2022 10:39 PM (IST)

    10 ಓವರ್ ಮುಕ್ತಾಯ

    GT 97/3 (10)

      

    ವೃದ್ದಿಮಾನ್ ಸಾಹ

    ಶುಭ್​​ಮನ್ ಗಿಲ್

    ಮ್ಯಾಥ್ಯೂ ವೇಡ್ …ಔಟ್

  • 24 May 2022 10:23 PM (IST)

    ರನೌಟ್

    ಅನಾವಶ್ಯಕ ರನ್​ಗೆ ಮುಂದಾಗಿ ರನೌಟ್ ಆದ ಶುಭ್​ಮನ್ ಗಿಲ್…

    2ನೇ ರನ್​ ಕದಿಯಲು ಯತ್ನ…ಪಡಿಕ್ಕಲ್ ಉತ್ತಮ ಥ್ರೋ..2ನೇ ರನ್ ನಿರಾಕರಿಸಿದ ವೇಡ್

    ಅಷ್ಟರಲ್ಲಾಗಲೇ ಕ್ರೀಸ್ ಬಿಟ್ಟಿದ್ದ ಗಿಲ್ (35) ರನೌಟ್..

    GT 71/1 (7.3)

      

  • 24 May 2022 10:14 PM (IST)

    ಪವರ್​ಪ್ಲೇ ಮುಕ್ತಾಯ

    RR 188/6 (20)

    GT 64/1 (6)

     

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್-ವೇಡ್ ಬ್ಯಾಟಿಂಗ್
  • 24 May 2022 10:12 PM (IST)

    6,4,4,

    ಅಶ್ವಿನ್ ಓವರ್​ನಲ್ಲಿ ಶುಭ್​ಮನ್ ಗಿಲ್ ಅಬ್ಬರ…

    ಸಿಕ್ಸ್​, ಫೋರ್, ಫೋರ್ ಸಿಡಿಸಿದ ಗಿಲ್

    GT 62/1 (5.3)

      

  • 24 May 2022 10:08 PM (IST)

    ಗಿಲ್​ ಕಮಾಲ್

    ಟ್ರೆಂಟ್ ಬೌಲ್ಟ್​ ಓವರ್​ನಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಗಿಲ್

    GT 47/1 (5)

      

  • 24 May 2022 10:05 PM (IST)

    ವೇಡ್ ಹೊಡೆತ

    ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಆಕರ್ಷಕ ಲೆಗ್​ ಸೈಡ್​ ಬೌಂಡರಿ ಬಾರಿಸಿದ ವೇಡ್

    GT 35/1 (4.1)

      

  • 24 May 2022 10:04 PM (IST)

    4 ಓವರ್ ಮುಕ್ತಾಯ

    GT 31/1 (4)

      

    ಕ್ರೀಸ್​ನಲ್ಲಿ ಗಿಲ್-ವೇಡ್ ಬ್ಯಾಟಿಂಗ್

  • 24 May 2022 09:58 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಬೌಲ್ಟ್ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ವೇಡ್

    GT 29/1 (3)

      

  • 24 May 2022 09:53 PM (IST)

    ವೇಡ್ ಹಿಟ್

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಮ್ಯಾಥ್ಯೂ ವೇಡ್

    GT 18/1 (2)

      

  • 24 May 2022 09:53 PM (IST)

    ವೈಡ್+ಫೋರ್

    ಬಿಗ್ ವೈಡ್ ಎಸೆದ ಪ್ರಸಿದ್ದ್ ಕೃಷ್ಣ..ಕೀಪರ್​ನ ವಂಚಿಸಿ ಚೆಂಡು ಬೌಂಡರಿಗೆ…ಫೋರ್

    GT 14/1 (1.5)

      

  • 24 May 2022 09:49 PM (IST)

    ಗಿಲ್ ಹಿಟ್

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಶುಭ್​ಮನ್ ಗಿಲ್

    GT 9/1 (1.3)

      

  • 24 May 2022 09:48 PM (IST)

    ಮೊದಲ ಓವರ್ ಮುಕ್ತಾಯ

    GT 4/1 (1)

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್-ಮ್ಯಾಥ್ಯೂ ವೇಡ್ ಬ್ಯಾಟಿಂಗ್

      

  • 24 May 2022 09:45 PM (IST)

    ಮೊದಲ ಬೌಂಡರಿ

    ಬೌಲ್ಟ್ ಎಸೆತದಲ್ಲಿ ಆಫ್​ಸೈಡ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಎಡಗೈ ದಾಂಡಿಗ ಮ್ಯಾಥ್ಯೂ ವೇಡ್

    GT 4/1 (0.4)

      

  • 24 May 2022 09:43 PM (IST)

    ಗುಜರಾತ್ ಟೈಟಾನ್ಸ್ ಮೊದಲ ವಿಕೆಟ್ ಪತನ

    ಟ್ರೆಂಟ್ ಬೌಲ್ಟ್ ಮೊದಲ ಓವರ್​ನ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಸಾಹ (0)

    GT 0/1 (0.2)

     

  • 24 May 2022 09:33 PM (IST)

    ಟೈಟಾನ್ಸ್​ ಟಾರ್ಗೆಟ್- 189

  • 24 May 2022 09:32 PM (IST)

    ರಾಜಸ್ಥಾನ್ ರಾಯಲ್ಸ್- 188

  • 24 May 2022 09:32 PM (IST)

    ಬಟ್ಲರ್ ಮಿಂಚಿಂಗ್

  • 24 May 2022 09:24 PM (IST)

    ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್ ಅಂತ್ಯ

    RR 188/6 (20)

      

  • 24 May 2022 09:22 PM (IST)

    ಕೊನೆಯ ಎಸೆತ ನೋಬಾಲ್

    ಬಟ್ಲರ್ (89) ರನೌಟ್…ಕ್ರೀಸ್​ನಲ್ಲಿ ಅಶ್ವಿನ್

    RR 184/5

      

  • 24 May 2022 09:20 PM (IST)

    ಇನಿಂಗ್ಸ್​ನ ಅಂತಿಮ ಎಸೆತ- ನೋ ಬಾಲ್

    RR 184/5

      

  • 24 May 2022 09:18 PM (IST)

    ವಾಟ್ ಎ ಬಟ್ಲರ್

    ಯಶ್ ದಯಾಳ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಬಟ್ಲರ್

    RR 181/4 (19.3)

      

  • 24 May 2022 09:14 PM (IST)

    ಬಟ್ಲರ್ ಸ್ಪೆಷಲ್

    ಶಮಿ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಜೋಸ್ ಬಟ್ಲರ್

    RR 172/4 (19)

      

  • 24 May 2022 09:13 PM (IST)

    ಸರ್ವಂ ಬಟ್ಲರ್​ಮಯ

    ಶಮಿ ಎಸೆತದಲ್ಲಿ ಬ್ಯಾಟ್​ ಎಡ್ಜ್​..ಬಟ್ಲರ್ ಬ್ಯಾಟ್​ನಿಂದ ಫೋರ್

    RR 166/4 (18.5)

      

  • 24 May 2022 09:11 PM (IST)

    4ನೇ ವಿಕೆಟ್ ಪತನ

    ಶಮಿ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಶಿಮ್ರಾನ್ ಹೆಟ್ಮೆಯರ್ (4)

    RR 161/4 (18.3)

      

  • 24 May 2022 09:08 PM (IST)

    ಕೊನೆಯ 2 ಓವರ್ ಬಾಕಿ

    RR 159/3 (18)

      

    ಕ್ರೀಸ್​ನಲ್ಲಿ ಬಟ್ಲರ್-ಹೆಟ್ಮೆಯರ್ ಬ್ಯಾಟಿಂಗ್

  • 24 May 2022 09:07 PM (IST)

    ಬಟ್ಲರ್ ಅಬ್ಬರ

    ಜೋಸೆಫ್ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದ ಬಟ್ಲರ್

    RR 159/3 (17.5)

      

  • 24 May 2022 09:06 PM (IST)

    ಬಟ್ಲರ್ ರಾಕೆಟ್

    ಅಲ್ಝಾರಿ ಜೋಸೆಫ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಬಟ್ಲರ್

    RR 155/3 (17.4)

  • 24 May 2022 09:01 PM (IST)

    17 ಓವರ್ ಮುಕ್ತಾಯ

    RR 145/3 (17)

      

    ಕ್ರೀಸ್​ನಲ್ಲಿ ಬಟ್ಲರ್-ಹೆಟ್ಮೆಯರ್ ಬ್ಯಾಟಿಂಗ್

  • 24 May 2022 09:00 PM (IST)

    ಅರ್ಧಶತಕ ಪೂರೈಸಿದ ಬಟ್ಲರ್

    ದಯಾಳ್ ಎಸೆತದಲ್ಲಿ ಬಟ್ಲರ್ ಶಾಟ್…ಅಲ್ಝಾರಿ ಜೋಸೆಫ್ ಮಿಸ್ ಫೀಲ್ಡ್…ಫೋರ್

    42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಟ್ಲರ್

    RR 140/3 (16.4)

      

  • 24 May 2022 08:58 PM (IST)

    ಜಾರಿ ಬಿದ್ದ ಪಾಂಡ್ಯ

    ದಯಾಳ್ ಎಸೆತದಲ್ಲಿ ಬಟ್ಲರ್ ಭರ್ಜರಿ ಹೊಡೆತ…ಸುಲಭ ಕ್ಯಾಚ್..ಹಿಡಿಯಲು ಓಡಿ ಬಂದು ಜಾರಿಬಿದ್ದ ಹಾರ್ದಿಕ್ ಪಾಂಡ್ಯ

    RR 135/3 (16.2)

      

  • 24 May 2022 08:57 PM (IST)

    ಬಟ್ಲರ್ ಸ್ಪೆಷಲ್

    ಯಶ್ ದಯಾಳ್ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಜೋಸ್ ಬಟ್ಲರ್

    RR 131/3 (16.1)

      

  • 24 May 2022 08:51 PM (IST)

    15 ಓವರ್ ಮುಕ್ತಾಯ

    RR 124/3 (15)

      

    ಕ್ರೀಸ್​ನಲ್ಲಿ ಶಿಮ್ರಾನ್ ಹೆಟ್ಮೆಯರ್-ಜೋಸ್ ಬಟ್ಲರ್ ಬ್ಯಾಟಿಂಗ್

  • 24 May 2022 08:49 PM (IST)

    ಬಟ್ಲರ್ ಹಿಟ್

    ಪಾಂಡ್ಯ ಎಸೆತದಲ್ಲಿ ಲೆಗ್​ ಸೈಡ್​ನತ್ತ ಫೋರ್ ಬಾರಿಸಿದ ಜೋಸ್ ಬಟ್ಲರ್

    RR 121/3 (14.3)

      

  • 24 May 2022 08:46 PM (IST)

    ಪಡಿಕ್ಕಲ್ ಔಟ್

    ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ದೇವದತ್ ಪಡಿಕ್ಕಲ್ ಬ್ಯಾಟ್ ಎಡ್ಜ್…ಬೌಲ್ಡ್​

    RR 116/3 (14.1)

      

  • 24 May 2022 08:44 PM (IST)

    ಮತ್ತೊಂದು ಬೌಂಡರಿ

    ಕಿಶೋರ್ ಎಸೆತದಲ್ಲಿ ಆಫ್​ಸೈಡ್​ನತ್ತ ಮತ್ತೊಂದು ಬೌಂಡರಿ ಬಾರಿಸಿದ ಪಡಿಕ್ಕಲ್

    RR 115/2 (13.5)

      

  • 24 May 2022 08:43 PM (IST)

    ಫೋರ್​ರ್​ರ್​

    ಸಾಯಿ ಕಿಶೋರ್ ಎಸೆತದಲ್ಲಿ ಪಡಿಕ್ಕಲ್ ಬ್ಯಾಟ್ ಎಡ್ಜ್…ಹಿಂಬದಿಯತ್ತ ಫೋರ್​

    RR 111/2 (13.4)

      

  • 24 May 2022 08:41 PM (IST)

    ಪವರ್ ಪಡಿಕ್ಕಲ್

    ಸಾಯಿ ಕಿಶೋರ್ ಎಸೆತದಲ್ಲಿ  ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಪಡಿಕ್ಕಲ್

    RR 107/2 (13.3)

      

  • 24 May 2022 08:37 PM (IST)

    ರನ್​ಗಳಿಸಲು ಬಟ್ಲರ್ ಪರದಾಟ

    30 ಎಸೆತಗಳಲ್ಲಿ ಕೇವಲ 29 ರನ್​ಗಳಿಸಿದ ಜೋಸ್ ಬಟ್ಲರ್.

    ಕ್ರೀಸ್​ನಲ್ಲಿ ಬಟ್ಲರ್-ಪಡಿಕ್ಕಲ್ ಬ್ಯಾಟಿಂಗ್

    RR 98/2 (13)

      

  • 24 May 2022 08:31 PM (IST)

    12 ಓವರ್ ಮುಕ್ತಾಯ

    RR 92/2 (12)

      

    ಕ್ರೀಸ್​ನಲ್ಲಿ ದೇವದತ್ ಪಡಿಕ್ಕಲ್-ಜೋಸ್ ಬಟ್ಲರ್ ಬ್ಯಾಟಿಂಗ್

  • 24 May 2022 08:28 PM (IST)

    ಪಡಿಕ್ಕಲ್ ಪವರ್

    ಸಾಯಿ ಕಿಶೋರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಪಡಿಕ್ಕಲ್

    RR 89/2 (11.1)

      

  • 24 May 2022 08:23 PM (IST)

    ಗುಜರಾತ್ ತಂಡಕ್ಕೆ 2ನೇ ಯಶಸ್ಸು

    ಸಾಯಿ ಕಿಶೋರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್​ನಲ್ಲಿ ಕ್ಯಾಚ್

    26 ಎಸೆತಗಳಲ್ಲಿ 47 ರನ್​ ಬಾರಿಸಿ ಪೆವಿಲಿಯನ್ ಕಡೆ ಮುಖ ಮಾಡಿದ ಸ್ಯಾಮ್ಸನ್

    RR 79/2 (9.5)

      

  • 24 May 2022 08:19 PM (IST)

    ರಶೀದ್ ಖಾನ್ ಉತ್ತಮ ಬೌಲಿಂಗ್

    9ನೇ ಓವರ್​ನಲ್ಲಿ ಕೇವಲ 2 ರನ್​ ನೀಡಿದ ರಶೀದ್ ಖಾನ್

    RR 75/1 (9)

      

  • 24 May 2022 08:16 PM (IST)

    ಸ್ಯಾಮ್ಸನ್ ಅಬ್ಬರ

    ಸಾಯಿ ಕಿಶೋರ್ ಎಸೆತದಲ್ಲಿ ಆಫ್​ಸೈಡ್​ನಲ್ಲಿ ಸ್ಯಾಮ್ಸನ್ ಬ್ಯಾಟ್​ನಿಂದ ಮತ್ತೊಂದು ಫೋರ್

    RR 73/1 (8)

      

  • 24 May 2022 08:14 PM (IST)

    ವೆಲ್ಕಂ ಬೌಂಡರಿ

    ಸಾಯಿ ಕಿಶೋರ್ ಎಸೆತದಲ್ಲಿ ಆಫ್​ ಸೈಡ್​ನತ್ತ ಪೋರ್ ಬಾರಿಸಿದ ಸಂಜು ಸ್ಯಾಮ್ಸನ್

    RR 67/1 (7.3)

      

  • 24 May 2022 08:10 PM (IST)

    RR 61/1 (7)

    ಕ್ರೀಸ್​ನಲ್ಲಿ ಬಟ್ಲರ್-ಸ್ಯಾಮ್ಸನ್ ಬ್ಯಾಟಿಂಗ್

  • 24 May 2022 08:05 PM (IST)

    ಪವರ್​ಪ್ಲೇ ಮುಕ್ತಾಯ

    RR 55/1 (6)

      

    ಕ್ರೀಸ್​ನಲ್ಲಿ ಜೋಸ್ ಬಟ್ಲರ್ (16)-ಸಂಜು ಸ್ಯಾಮ್ಸನ್ (30) ಬ್ಯಾಟಿಂಗ್

  • 24 May 2022 08:03 PM (IST)

    ಅರ್ಧಶತಕ ಪೂರೈಸಿದ ಆರ್​ಆರ್​

    ಜೋಸೆಫ್​ ಎಸೆತದಲ್ಲಿ ಬ್ಯಾಕ್​ವರ್ಡ್​ ಸ್ಕ್ವೇರ್​ ಲೆಗ್​ನತ್ತ ಸಿಕ್ಸ್ ಸಿಡಿಸಿದ ಸಂಜು ಸ್ಯಾಮ್ಸನ್

    RR 55/1 (5.4)

      

  • 24 May 2022 08:01 PM (IST)

    ವಾಟ್ ಎ ಶಾಟ್

    ಅಲ್ಝಾರಿ ಜೋಸೆಫ್​ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಸ್ಯಾಮ್ಸನ್

    RR 49/1 (5.2)

      

  • 24 May 2022 08:00 PM (IST)

    ಬೌಲಿಂಗ್​ನಲ್ಲಿ ಬದಲಾವಣೆ

    ವೇಗಿ ಅಲ್ಝಾರಿ ಜೋಸೆಫ್​ಗೆ ಚೆಂಡು ನೀಡಿದ ಹಾರ್ದಿಕ್ ಪಾಂಡ್ಯ

    RR 43/1 (5.1)

      

  • 24 May 2022 07:59 PM (IST)

    ಸಂಜು ಅಬ್ಬರ

    ಶಮಿ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಫೋರ್ ಬಾರಿಸಿದ ಸ್ಯಾಮ್ಸನ್

    RR 42/1 (5)

      

  • 24 May 2022 07:58 PM (IST)

    ಸ್ಯಾಮ್ಸನ್ ಫೋರ್

    ಶಮಿ ಎಸೆತದಲ್ಲಿ ಲಾಂಗ್ ಆನ್​ನತ್ತ ಫೋರ್ ಬಾರಿಸಿದ ಸಂಜು ಸ್ಯಾಮ್ಸನ್

    RR 38/1 (4.5)

      

  • 24 May 2022 07:54 PM (IST)

    ವೈಡ್+ಫೋರ್

    ಶಮಿ ಇನ್​ ಸ್ವಿಂಗ್ ಎಸೆತ…ಲೈಗ್​ ಸೈಡ್​ನತ್ತ ವೈಡ್​…ಕೀಪರ್ ಹಿಡಿಯಲು ವಿಫಲ ಯತ್ನ..ಫೋರ್

    RR 33/1 (4)

      

  • 24 May 2022 07:52 PM (IST)

    4 ಓವರ್ ಮುಕ್ತಾಯ

    RR 28/1 (4)

      

    ಕ್ರೀಸ್​ನಲ್ಲಿ ಬಟ್ಲರ್-ಸ್ಯಾಮ್ಸನ್ ಬ್ಯಾಟಿಂಗ್

  • 24 May 2022 07:50 PM (IST)

    ಕವರ್ ಶಾಟ್

    ಯಶ್ ದಯಾಳ್ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಬೌಂಡರಿ ಬಾರಿಸಿದ ಸ್ಯಾಮ್ಸನ್

    RR 28/1 (3.3)

      

  • 24 May 2022 07:47 PM (IST)

    ಸ್ಯಾಮ್​​-ಸಿಕ್ಸ್

    ದಯಾಳ್ ಎಸೆತದಲ್ಲಿ ಲಾಂಗ್​ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸಂಜು ಸ್ಯಾಮ್ಸನ್

    RR 24/1 (3.1)

      

  • 24 May 2022 07:44 PM (IST)

    ಕವರ್ ಡ್ರೈವ್

    ಶಮಿ ಎಸೆತದಲ್ಲಿ  ಆಕರ್ಷಕ ಬಟ್ಲರ್ ಆಕರ್ಷಕ ಕವರ್ ಡ್ರೈವ್…ಫೋರ್

    RR 17/1 (2.4)

      

  • 24 May 2022 07:41 PM (IST)

    ಗುಜರಾತ್ ತಂಡಕ್ಕೆ ಮೊದಲ ಯಶಸ್ಸು

    ಯಶ್ ದಯಾಳ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಯಶಸ್ವಿ ಜೈಸ್ವಾಲ್ (3)

    RR 11/1 (2)

      

  • 24 May 2022 07:35 PM (IST)

    ಮತ್ತೊಂದು ಬೌಂಡರಿ

    ಶಮಿ ಎಸೆತದಲ್ಲಿ ಮತ್ತೊಮ್ಮೆ ಎಕ್ಸ್​ಟ್ರಾ ಡೀಪ್ ಕವರ್​ನತ್ತ ಫೋರ್ ಬಾರಿಸಿದ ಬಟ್ಲರ್

    RR 9/0 (1)

      

  • 24 May 2022 07:34 PM (IST)

    ಮೊದಲ ಬೌಂಡರಿ

    ಶಮಿ ಎಸೆತದಲ್ಲಿ ಎಕ್ಸ್​ಟ್ರಾ ಡೀಪ್ ಕವರ್​ನತ್ತ ಆಕರ್ಷಕ ಬೌಂಡರಿ ಬಾರಿಸಿ ಖಾತೆ ತೆರೆದ ಜೋಸ್ ಬಟ್ಲರ್

    RR 5/0 (0.4)

      

  • 24 May 2022 07:32 PM (IST)

    ಜೈಸ್ವಾಲ್ ಬ್ಯಾಟ್​ನಿಂದ ಮೊದಲ ರನ್

    RR 1/0 (0.2)

      

  • 24 May 2022 07:31 PM (IST)

    ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್​ ಆರಂಭ

    ಆರಂಭಿಕರು: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್

    ಮೊದಲ ಓವರ್: ಮೊಹಮ್ಮದ್ ಶಮಿ

  • 24 May 2022 07:16 PM (IST)

    ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11

    ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಪ್ರಸಿದ್ದ್ ಕೃಷ್ಣ, ಒಬೆಡ್​​ ಮೆಕಾಯ್.

  • 24 May 2022 07:14 PM (IST)

    ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11

    ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಹಾರ್ದಿಕ್ ಪಾಂಡ್ಯ (ನಾಯಕ), ಶುಭ್ಮನ್ ಗಿಲ್, ವೃದ್ಧಿಮಾನ್ ಸಾಹ, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಅಲ್ಝಾರಿ ಜೋಸೆಫ್, ಮೊಹಮ್ಮದ್ ಶಮಿ, ಯಶ್ ದಯಾಲ್.

  • 24 May 2022 07:04 PM (IST)

    ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11

    ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಪ್ರಸಿದ್ದ್ ಕೃಷ್ಣ, ಒಬೆಡ್​​ ಮೆಕಾಯ್.

  • 24 May 2022 07:03 PM (IST)

    ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11

    ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಹಾರ್ದಿಕ್ ಪಾಂಡ್ಯ (ನಾಯಕ), ಶುಭ್ಮನ್ ಗಿಲ್, ವೃದ್ಧಿಮಾನ್ ಸಾಹ, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಅಲ್ಝಾರಿ ಜೋಸೆಫ್, ಮೊಹಮ್ಮದ್ ಶಮಿ, ಯಶ್ ದಯಾಲ್.

  • 24 May 2022 07:02 PM (IST)

    ಟಾಸ್ ಗೆದ್ದ ಗುಜರಾತ್ ಟೈಟಾನ್ಸ್

    ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 24 May 2022 06:42 PM (IST)

    ಟಾರ್ಗೆಟ್​ಗೆ ಗುಜರಾತ್ ಟೈಟಾನ್ಸ್​ ರೆಡಿ

  • 24 May 2022 06:40 PM (IST)

    ರಾಜಸ್ಥಾನ್ ರಾಯಲ್ಸ್ ಎಂಟ್ರಿ

  • 24 May 2022 06:39 PM (IST)

    GT vs RR: ಗೆದ್ದರೆ ಫೈನಲ್​ಗೆ, ಸೋತರೆ ನೋ ಟೆನ್ಶನ್..!

  • 24 May 2022 06:37 PM (IST)

    ಕ್ವಾಲಿಟಿ ಟೀಮ್​ಗಳ ನಡುವೆ ಮೊದಲ ಕ್ವಾಲಿಫೈಯರ್

  • Published On - May 24,2022 6:34 PM

    Follow us
    ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
    ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
    ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
    ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
    ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
    ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
    ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
    ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
    ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
    ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
    ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
    ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
    ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
    ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
    ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
    ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
    ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
    ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
    ‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
    ‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು