Tomato Flu: ಒಡಿಶಾದಲ್ಲಿ 26 ಮಕ್ಕಳಿಗೆ ಟೊಮ್ಯಾಟೋ ಜ್ವರ ಪತ್ತೆ; ಈ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?

Tomato Fever Symptoms: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜ್ವರ, ಬಾಯಿಯಲ್ಲಿ ಹುಣ್ಣುಗಳು, ಕೈಗಳು, ಪಾದಗಳು ಮತ್ತು ಪೃಷ್ಠದ ಮೇಲೆ ಗುಳ್ಳೆಗಳು ಉಂಟಾಗುವುದು ಟೊಮ್ಯಾಟೋ ಜ್ವರದ ಲಕ್ಷಣಗಳಾಗಿವೆ.

Tomato Flu: ಒಡಿಶಾದಲ್ಲಿ 26 ಮಕ್ಕಳಿಗೆ ಟೊಮ್ಯಾಟೋ ಜ್ವರ ಪತ್ತೆ; ಈ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?
ಟೊಮ್ಯಾಟೋ ಜ್ವರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:May 25, 2022 | 4:58 PM

ಒಡಿಶಾ: ಒಡಿಶಾದಲ್ಲಿ ಟೊಮ್ಯಾಟೊ ಜ್ವರ ಕಾಣಿಸಿಕೊಂಡಿದ್ದು, 26 ಮಕ್ಕಳಿಗೆ ಕೈ, ಕಾಲು ಮತ್ತು ಬಾಯಿ ಕಾಯಿಲೆ (HFMD) ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಮಕ್ಕಳ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಟೊಮ್ಯಾಟೊ ಜ್ವರ (Tomato Flu) ಕರುಳಿನ ವೈರಸ್‌ಗಳಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ.

ಭುವನೇಶ್ವರದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 36 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದ್ದು, 26 ಎಚ್‌ಎಫ್‌ಎಂಡಿ ಪಾಸಿಟಿವ್ ಎಂದು ಕಂಡುಬಂದಿದೆ ಎಂದು ಆರೋಗ್ಯ ಸೇವೆಗಳ ನಿರ್ದೇಶಕ ವಿಜಯ್ ಮೊಹಾಪಾತ್ರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಎಚ್‌ಎಫ್‌ಎಂಡಿ ಸೋಂಕಿಗೆ ಒಳಗಾದ 26 ಮಕ್ಕಳಲ್ಲಿ 19 ಮಂದಿ ಭುವನೇಶ್ವರ, ಮೂವರು ಪುರಿ ಮತ್ತು ತಲಾ ಇಬ್ಬರು ಕಟಕ್ ಮತ್ತು ಪುರಿಯಿಂದ ಬಂದವರು ಎಂದು ಮೊಹಾಪಾತ್ರ ಹೇಳಿದ್ದಾರೆ.

ಸೋಂಕಿತರು 1ರಿಂದ 9 ವರ್ಷ ವಯಸ್ಸಿನವರಾಗಿದ್ದಾರೆ. ಅವರನ್ನು ಐದರಿಂದ ಏಳು ದಿನಗಳ ಕಾಲ ಪ್ರತ್ಯೇಕವಾಗಿರಿಸಲು ಸೂಚಿಸಲಾಗಿದೆ ಎಂದು ಅಧಿಕಾರಿ ಮೊಹಾಪಾತ್ರ ಹೇಳಿದ್ದಾರೆ. ವಯಸ್ಕರು ಸಾಮಾನ್ಯವಾಗಿ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು, ಅವರು ರೋಗದಿಂದ ಚೇತರಿಸಿಕೊಳ್ಳುವಷ್ಟು ಪ್ರಬಲರಾಗಿರುತ್ತಾರೆ. ಈ ತಿಂಗಳ ಆರಂಭದಲ್ಲಿ ಕೇರಳದ ಕೊಲ್ಲಂ ಜಿಲ್ಲೆಯಿಂದ 80ಕ್ಕೂ ಹೆಚ್ಚು ಟೊಮ್ಯಾಟೊ ಜ್ವರ ಪ್ರಕರಣಗಳು ವರದಿಯಾಗಿದ್ದವು. (Source)

ಇದನ್ನೂ ಓದಿ
Image
8 Years of Modi Government: ಪ್ರಧಾನಿ ನರೇಂದ್ರ ಮೋದಿಯಿಂದ ವಿಶ್ವನಾಯಕರಿಗೆ ಅಮೂಲ್ಯ ಗಿಫ್ಟ್: ಇದುವರೆಗೆ ಯಾವೆಲ್ಲಾ ಉಡುಗೊರೆ ನೀಡಿದ್ದಾರೆ ಗೊತ್ತಾ?
Image
8 Years of Modi Government: ಏಕರೂಪ ನಾಗರಿಕ ಸಂಹಿತೆ: ಮೋದಿ ಸರ್ಕಾರದ ಎದುರು ಹಲವು ಸವಾಲುಗಳು
Image
ಟೊಮೆಟೊ ಜ್ವರ ಭೀತಿ: ಕೇರಳ ಗಡಿಯ ಚೆಕ್​ಪೋಸ್ಟ್​ನಲ್ಲಿ ಮಕ್ಕಳ ಪರೀಕ್ಷೆ, ಕೊವಿಡ್ ತಾಂತ್ರಿಕ ಸಮಿತಿ ನೆರವು

ಟೊಮ್ಯಾಟೊ ಜ್ವರ ಎಂದರೇನು?: 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ಟೊಮ್ಯಾಟೋ ಜ್ವರದ ಸೋಂಕು ಸಾಮಾನ್ಯವಾಗಿದೆ. ಸೋಂಕಿತ ವ್ಯಕ್ತಿಗೆ ಮೊದಲು ಜ್ವರ ಬರುತ್ತದೆ. ಈ ರೋಗಿಗಳಿಗೆ ಸಾಮಾನ್ಯವಾಗಿ ದದ್ದುಗಳು, ಚರ್ಮದ ಕಿರಿಕಿರಿ ಮತ್ತು ನಿರ್ಜಲೀಕರಣ ಉಂಟಾಗುತ್ತದೆ. ಟೊಮ್ಯಾಟೊ ಜ್ವರವು ಸೋಂಕಿತ ರೋಗಿಯ ದೇಹದ ಹಲವಾರು ಭಾಗಗಳಲ್ಲಿ ಗುಳ್ಳೆಗಳನ್ನು ಉಂಟುಮಾಡುತ್ತದೆ. ಅವುಗಳು ಕೆಂಪು ಬಣ್ಣವನ್ನು ಹೊಂದಿರುತ್ತವೆ. ಈ ಕೆಂಪು ಗುಳ್ಳೆಯ ಸುತ್ತಿನ ಆಕಾರ ಮತ್ತು ಕೆಂಪು ಬಣ್ಣದಿಂದಾಗಿ ಈ ಸೋಂಕಿಗೆ ಟೊಮ್ಯಾಟೊ ಜ್ವರ ಎಂದು ಹೆಸರು ಬಂದಿದೆ. ಈ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧವಿಲ್ಲ. ಟೊಮ್ಯಾಟೋ ಜ್ವರದ ಇತರ ಪ್ರಕರಣಗಳಂತೆ ಟೊಮ್ಯಾಟೊ ಜ್ವರವೂ ಸಹ ಸಾಂಕ್ರಾಮಿಕವಾಗಿದೆ. ಈ ಜ್ವರ ಬಂದ ಸೋಂಕಿತರು ಪ್ರತ್ಯೇಕವಾಗಿ ಇರಬೇಕಾಗುತ್ತದೆ. ಏಕೆಂದರೆ ಇದು ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತದೆ.

ಇದನ್ನೂ ಓದಿ: National Dengue Day: ಡೆಂಗ್ಯೂ ಜ್ವರದಿಂದ ಪಾರಾಗಲು ಏನು ತಿನ್ನಬೇಕು? ಯಾವ ಡಯಟ್ ಪ್ಲಾನ್ ಅನುಸರಿಸಬೇಕು?

ಟೊಮ್ಯಾಟೊ ಜ್ವರದ ಲಕ್ಷಣಗಳು: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜ್ವರ, ಬಾಯಿಯಲ್ಲಿ ಹುಣ್ಣುಗಳು, ಕೈಗಳು, ಪಾದಗಳು ಮತ್ತು ಪೃಷ್ಠದ ಮೇಲೆ ಗುಳ್ಳೆಗಳು ಉಂಟಾಗುವುದು ಟೊಮ್ಯಾಟೋ ಜ್ವರದ ಲಕ್ಷಣಗಳಾಗಿವೆ. ಹಲವಾರು ವರದಿಗಳ ಪ್ರಕಾರ, ಟೊಮ್ಯಾಟೋ ಜ್ವರವು ಆಯಾಸ, ಕೀಲು ನೋವು, ಹೊಟ್ಟೆ ಸೆಳೆತ, ವಾಕರಿಕೆ, ವಾಂತಿ, ಅತಿಸಾರ, ಕೆಮ್ಮು, ಸೀನುವಿಕೆ, ಮೂಗು ಸೋರುವಿಕೆ, ಅಧಿಕ ಜ್ವರ ಮತ್ತು ದೇಹದ ನೋವನ್ನು ಸಹ ಉಂಟುಮಾಡಬಹುದು. ಕೆಲವು ಸಂದರ್ಭಗಳಲ್ಲಿ ಇದು ಕಾಲುಗಳು ಮತ್ತು ಕೈಗಳ ಬಣ್ಣವನ್ನು ಬದಲಾಯಿಸಬಹುದು.

ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳಿವು: ಟೊಮ್ಯಾಟೋ ಜ್ವರದಿಂದ ಉಂಟಾಗುವ ಗುಳ್ಳೆಗಳನ್ನು ಮಕ್ಕಳು ತುರಿಸಿಕೊಳ್ಳದಂತೆ ತಡೆಯುವುದು ಅತ್ಯಗತ್ಯ. ಸರಿಯಾದ ವಿಶ್ರಾಂತಿ ಮತ್ತು ನೈರ್ಮಲ್ಯವನ್ನು ವಹಿಸಬೇಕು. ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಬೇಕು. ಸೋಂಕಿತ ಮಗುವನ್ನು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ. ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ಜ್ವರ ಹರಡುವುದನ್ನು ತಡೆಯಲು ಸೋಂಕಿತರು ಬಳಸುವ ಪಾತ್ರೆಗಳು, ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಸೋಂಕುರಹಿತಗೊಳಿಸಬೇಕು.

ದ್ರವ ಸೇವನೆಯು ನಿರ್ಜಲೀಕರಣವನ್ನು ಎದುರಿಸಲು ಸಹಾಯ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ನೀವು ಯಾವುದೇ ರೋಗಲಕ್ಷಣಗಳನ್ನು ಗಮನಿಸಿದರೆ ವೈದ್ಯರ ಸಲಹೆಯನ್ನು ಪಡೆಯಿರಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:56 pm, Wed, 25 May 22