ಐಪಿಎಲ್ ಬೆಟ್ಟಿಂಗ್​​ನಲ್ಲಿ ₹1ಕೋಟಿ ಕಳೆದುಕೊಂಡ ಪೋಸ್ಟ್ ಮಾಸ್ಟರ್; ಬೆಟ್ಟಿಂಗ್​​ಗೆ ಬಳಸಿದ್ದು 24 ಕುಟುಂಬಗಳ ಸ್ಥಿರ ಠೇವಣಿ

ಐಪಿಎಲ್ ಬೆಟ್ಟಿಂಗ್​​ನಲ್ಲಿ ₹1ಕೋಟಿ ಕಳೆದುಕೊಂಡ ಪೋಸ್ಟ್ ಮಾಸ್ಟರ್; ಬೆಟ್ಟಿಂಗ್​​ಗೆ ಬಳಸಿದ್ದು 24 ಕುಟುಂಬಗಳ ಸ್ಥಿರ ಠೇವಣಿ
ಪ್ರಾತಿನಿಧಿಕ ಚಿತ್ರ

ಬಿನಾ ಸಬ್ ಪೋಸ್ಟ್ ಆಫೀಸ್ ಪೋಸ್ಟ್ ಮಾಸ್ಟರ್ ವಿಶಾಲ್ ಅಹಿರ್ವಾರ್ ಅವರನ್ನು ಮೇ 20 ರಂದು ಬಿನಾ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಬಂಧಿಸಿದ್ದಾರೆ. ಈತ ಪೊಲೀಸರ ಮುಂದೆ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

TV9kannada Web Team

| Edited By: Rashmi Kallakatta

May 25, 2022 | 7:58 PM

ಭೋಪಾಲ್: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ಪಂದ್ಯಗಳ ಬೆಟ್ಟಿಂಗ್​​ನಲ್ಲಿ(Betting) ಮಧ್ಯಪ್ರದೇಶದ (Madhya Pradesh) ಪೋಸ್ಟ್ ಮಾಸ್ಟರ್ ಒಬ್ಬರು ₹1 ಕೋಟಿ ಕಳೆದು ಕೊಂಡಿದ್ದಾರೆ. ಈ ಒಂದು ಕೋಟಿ ರೂಪಾಯಿ 24 ಕುಟುಂಬಗಳ ಉಳಿತಾಯದ ಹಣವಾಗಿತ್ತು ಎಂದು ಆರೋಪಿಸಲಾಗಿದೆ. ಈ ಕುಟುಂಬಗಳು ಹಣವನ್ನು ಸಾಗರ ಜಿಲ್ಲೆಯ ಉಪ ಅಂಚೆ ಕಚೇರಿಯಲ್ಲಿ ಸ್ಥಿರ ಠೇವಣಿ (Fixed Deposits) ಇಟ್ಟಿದ್ದರು. ಬಿನಾ ಸಬ್ ಪೋಸ್ಟ್ ಆಫೀಸ್ ಪೋಸ್ಟ್ ಮಾಸ್ಟರ್ ವಿಶಾಲ್ ಅಹಿರ್ವಾರ್ ಅವರನ್ನು ಮೇ 20 ರಂದು ಬಿನಾ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಬಂಧಿಸಿದ್ದಾರೆ. ಈತ ಪೊಲೀಸರ ಮುಂದೆ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಆರೋಪಿ ಪೋಸ್ಟ್‌ಮಾಸ್ಟರ್ ನಕಲಿ ಎಫ್‌ಡಿ ಖಾತೆಗಳಿಗಾಗಿ ಅಸಲಿ ಪಾಸ್‌ಬುಕ್‌ಗಳನ್ನು ನೀಡಿದ್ದಾನೆ. ಕಳೆದ ಎರಡು ವರ್ಷಗಳಿಂದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ಗೆ ಸಂಪೂರ್ಣ ಹಣವನ್ನು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

“ಬಂಧಿತ ಸಬ್ ಪೋಸ್ಟ್ ಮಾಸ್ಟರ್ ವಿಶಾಲ್ ಅಹಿರ್ವಾರ್ ವಿರುದ್ಧ ಇದೀಗ u/s 420 IPC (ವಂಚನೆ) ಮತ್ತು 408 IPC (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಪ್ರಕರಣವನ್ನು ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಳ ಫಲಿತಾಂಶದ ಆಧಾರದ ಮೇಲೆ ಪ್ರಕರಣದಲ್ಲಿ ಹೆಚ್ಚಿನ ಸೆಕ್ಷನ್‌ಗಳನ್ನು ಸೇರಿಸಬಹುದು” ಎಂದು ಬೀನಾ-ಜಿಆರ್ ಪಿ ಪೊಲೀಸ್ ಠಾಣೆ ಪ್ರಭಾರಿ ಅಜಯ್ ಧುರ್ವೆ ತಿಳಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada