IPL 2022: ಐಪಿಎಲ್ ಸೀಸನ್ 15 ರ ಎಲಿಮಿನೇಟರ್ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಬೇಕಿರುವ ಆರ್ಸಿಬಿ-ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯವು ತುಂತುರು ಮಳೆಯ ಕಾರಣ ವಿಳಂಬವಾಗಿದೆ. ಟಾಸ್ ವೇಳೆ ತುಂತುರು ಮಳೆ ಬರಲಾಂಭಿಸಿದ್ದು, ಹೀಗಾಗಿ ಟಾಸ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಇತ್ತ ಪಿಚ್ ಸೇರಿದಂತೆ ಮೈದಾನದ ಭಾಗವನ್ನು ಕವರ್ ಮಾಡಲಾಗಿದ್ದು, ಉತ್ತಮ ಗಾಳಿ ಬೀಸುತ್ತಿರುವ ಕಾರಣ ಪಂದ್ಯದ ವೇಳೆ ಮಳೆ ಬರಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇನ್ನು ಮಳೆ ಬಂದರೂ ಪಂದ್ಯವನ್ನು ಮುಂದುವರೆಸಲು ಈಗಾಗಲೇ ಬಿಸಿಸಿಐ ವಿಶೇಷ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಅದರಂತೆ ಎಲಿಮಿನೇಟರ್ ಹಾಗೂ 2ನೇ ಕ್ವಾಲಿಫೈಯರ್ ಪಂದ್ಯಗಳಿಗೆ ಮೀಸಲು ದಿನದಾಟ ನೀಡಲಾಗುವುದಿಲ್ಲ. ಬದಲಾಗಿ ಆಯಾ ದಿನವೇ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಇದಕ್ಕಾಗಿ ಹೆಚ್ಚುವರಿ ಸಮಯವಕಾಶ ನೀಡಲಾಗಿದೆ.
ಬಿಸಿಸಿಐ ಪ್ರಕಟಿಸಿರುವ ಹೊಸ ಮಾರ್ಗಸೂಚಿ ಹೀಗಿದೆ:
ಉದಾಹರಣೆಗೆ: ಆರ್ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯದ ವೇಳೆ ಮಳೆ ಬಂದು, ಅಂತಿಮವಾಗಿ ಸೂಪರ್ ಓವರ್ ಕೂಡ ಆಡಲು ಸಾಧ್ಯವಾಗದಿದ್ದರೆ, ಪಾಯಿಂಟ್ಸ್ ಟೇಬಲ್ನಲ್ಲಿ ಮೇಲಿರುವ ತಂಡ ಮುಂದಿನ ಹಂತಕ್ಕೇರಲಿದೆ. ಅಂದರೆ ಇಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ 3ನೇ ಸ್ಥಾನದಲ್ಲಿದೆ. ಹಾಗೆಯೇ ಆರ್ಸಿಬಿ 4ನೇ ಸ್ಥಾನದಲ್ಲಿದೆ. ಇಲ್ಲಿ ಆರ್ಸಿಬಿಗಿಂತ ಹೆಚ್ಚಿನ ಪಾಯಿಂಟ್ಸ್ (18) ಲಕ್ನೋ ತಂಡಕ್ಕಿದ್ದು, ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ 2ನೇ ಕ್ವಾಲಿಫೈಯರ್ಗೆ ಏರಲಿದೆ. ಹಾಗೆಯೇ ಆರ್ಸಿಬಿ ತಂಡವು ಪಂದ್ಯವಾಡದೆ ಐಪಿಎಲ್ನಿಂದ ಹೊರಬೀಳಲಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.