IPL 2022: ಇಂದಿನ ಪಂದ್ಯದಲ್ಲಿ ಗೆಲ್ಲುವ ಫೇವರೇಟ್ ತಂಡ RCB, ಯಾಕೆಂದರೆ…

IPL 2022 Rcb vs Lsg: ಐಪಿಎಲ್ 15ನೇ ಸೀಸನ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ 14 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿ ಮೂರನೇ ಸ್ಥಾನ ಗಳಿಸಿದೆ. ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ ನಾಲ್ಕನೇ ಸ್ಥಾನ ಅಲಂಕರಿಸಿದೆ.

IPL 2022: ಇಂದಿನ ಪಂದ್ಯದಲ್ಲಿ ಗೆಲ್ಲುವ ಫೇವರೇಟ್ ತಂಡ RCB, ಯಾಕೆಂದರೆ...
RCB
Follow us
TV9 Web
| Updated By: ಝಾಹಿರ್ ಯೂಸುಫ್

Updated on: May 25, 2022 | 6:17 PM

IPL 2022: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ (RCB vs LSG) ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಸೋತ ತಂಡ ಐಪಿಎಲ್​ನಿಂದ ಹೊರಬೀಳಲಿದೆ. ಹೀಗಾಗಿ ಇದು ಉಭಯ ತಂಡಗಳಿಗೂ ನಿರ್ಣಾಯಕ ಪಂದ್ಯ. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳಿಂದ ಭರ್ಜರಿ ಪೈಪೋಟಿಯನ್ನಂತು ಕಂಡು ಬರಲಿದೆ. ಇಲ್ಲಿ ಯಾವ ತಂಡ ಬಲಿಷ್ಠ ಎಂದು ನೋಡುವುದಾದರೆ, ಸಮಬಲ ಹೊಂದಿದೆ ಎನ್ನಬಹುದು. ಇದಾಗ್ಯೂ ಆರ್​ಸಿಬಿ ತಂಡ ತುಸು ಮೇಲುಗೈ ಹೊಂದಿದೆ.

ಏಕೆಂದರೆ ಐಪಿಎಲ್ 15ನೇ ಸೀಸನ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ 14 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿ ಮೂರನೇ ಸ್ಥಾನ ಗಳಿಸಿದೆ. ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ ನಾಲ್ಕನೇ ಸ್ಥಾನ ಅಲಂಕರಿಸಿದೆ. ಲಕ್ನೋ ತಂಡವು ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರೂ ಆರ್​ಸಿಬಿ ವಿರುದ್ದ ಮಾತ್ರ ಮುಗ್ಗರಿಸಿದೆ.

ಲೀಗ್ ಹಂತದಲ್ಲಿ ಉಭಯ ತಂಡಗಳು ಒಂದು ಪಂದ್ಯವನ್ನಾಡಿದೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಟಾಸ್ ಗೆದ್ದ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಇತ್ತ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್​ ಕೇವಲ 64 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 11 ಬೌಂಡರಿಯೊಂದಿಗೆ 96 ರನ್ ಬಾರಿಸಿದ್ದರು. ಈ ಮೂಲಕ ಆರ್​ಸಿಬಿ 6 ವಿಕೆಟ್ ನಷ್ಟಕ್ಕೆ 181 ರನ್​ ಕಲೆಹಾಕಿತ್ತು.

ಇದನ್ನೂ ಓದಿ
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು
Image
Virat Kohli: ಕೊಹ್ಲಿ ಕಡೆಯಿಂದ ರಶೀದ್ ಖಾನ್​​ಗೆ ಸ್ಪೆಷಲ್ ಗಿಫ್ಟ್​: ಸೇಫ್ ಆಗಿ ಇಟ್ಟಿರಿ ಎಂದ ಸೌತ್ ಆಫ್ರಿಕಾ ಕ್ರಿಕೆಟಿಗ
Image
KL Rahul: ಐಪಿಎಲ್​ನಲ್ಲಿ ರಾಹುಲ್ ಅಬ್ಬರ: ಸತತ 5ನೇ ಬಾರಿ ಕೆಎಲ್ ಕಿಂಗ್
Image
IPL 2022: ಬುಮ್ರಾ ದಾಖಲೆ ಮುರಿದ ಉಮ್ರಾನ್ ಮಲಿಕ್

ಚೇಸಿಂಗ್ ಪಿಚ್​ನಲ್ಲಿ ಟಾರ್ಗೆಟ್ ಬೆನ್ನತ್ತುವ ವಿಶ್ವಾಸದೊಂದಿಗೆ ಇನಿಂಗ್ಸ್ ಆರಂಭಿಸಿದ ಲಕ್ನೋ ತಂಡಕ್ಕೆ ಆರ್​ಸಿಬಿ ಬೌಲರ್​ಗಳು ಯಶಸ್ವಿಯಾಗಿದ್ದರು. ಅದರಲ್ಲೂ ಮಾರಕ ದಾಳಿ ಸಂಘಟಿಸಿದ ಜೋಶ್ ಹ್ಯಾಝಲ್​ವುಡ್​ 4 ಓವರ್​ಗಳಲ್ಲಿ ಕೇವಲ 25 ರನ್ ನೀಡಿ 4 ವಿಕೆಟ್ ಉರುಳಿಸಿದ್ದರು. ಇನ್ನು ಉಳಿದ ಬೌಲರ್​ಗಳು ಕೂಡ ಉತ್ತಮ ಪ್ರದರ್ಶನ ನೀಡಿದ್ದರು. ಪರಿಣಾಮ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಆರ್​ಸಿಬಿ 18 ರನ್​ಗಳಿಂದ ಕೆಎಲ್ ರಾಹುಲ್ ಪಡೆಗೆ ಸೋಲುಣಿಸಿತ್ತು.

ಅಂದರೆ ಇಲ್ಲಿ ಆರ್​ಸಿಬಿ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಆಡಿದ್ದ ಮೊದಲ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿತ್ತು. ಅದರಲ್ಲೂ ಟಾಸ್ ಸೋತರೂ ಆರ್​ಸಿಬಿ ಬೌಲಿಂಗ್ ಮೂಲಕ ಗೆಲುವನ್ನು ತನ್ನದಾಗಿಸಿಕೊಂಡಿತು. ಇಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ವಿರುದ್ದದ ಮೊದಲ ಪಂದ್ಯದಲ್ಲಿ ಆರ್​ಸಿಬಿ ತಂಡದ ಒಟ್ಟಾರೆ ಪ್ರದರ್ಶನ ಅತ್ಯುತ್ತಮವಾಗಿತ್ತು. ಹೀಗಾಗಿಯೇ ಇಂದಿನ ಪಂದ್ಯದಲ್ಲಿ ಉಭಯ ತಂಡಗಳು ಸಮಬಲ ಹೊಂದಿದ್ದರೂ ಆರ್​ಸಿಬಿ ತಂಡ ಗೆಲ್ಲುವ ಚಾನ್ಸ್ ಹೆಚ್ಚಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.