IPL 2022 Eliminator: ಪ್ಲೇ ಆಫ್ ಪಂದ್ಯಗಳಲ್ಲಿ ಕೊಹ್ಲಿಯೇ ಕಿಂಗ್! ಲಕ್ನೋ ಎದುರು ಮತ್ತೆ ಅಬ್ಬರಿಸ್ತಾರಾ ವಿರಾಟ್?

IPL 2022 Eliminator: ವಿರಾಟ್ ಕೊಹ್ಲಿ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಬೆಂಗಳೂರು ಪರ ಗರಿಷ್ಠ 276 ರನ್ ಗಳಿಸಿದ್ದಾರೆ. ಈ ವಿಚಾರದಲ್ಲಿ ಅವರು ಬೆಂಗಳೂರಿನ ಇನ್ನಿಬ್ಬರು ದೊಡ್ಡ ದಿಗ್ಗಜರಾದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿದ್ದಾರೆ.

IPL 2022 Eliminator: ಪ್ಲೇ ಆಫ್ ಪಂದ್ಯಗಳಲ್ಲಿ ಕೊಹ್ಲಿಯೇ ಕಿಂಗ್! ಲಕ್ನೋ ಎದುರು ಮತ್ತೆ ಅಬ್ಬರಿಸ್ತಾರಾ ವಿರಾಟ್?
ವಿರಾಟ್ ಕೊಹ್ಲಿ
Follow us
TV9 Web
| Updated By: ಪೃಥ್ವಿಶಂಕರ

Updated on:May 25, 2022 | 6:16 PM

14 ಸೀಸನ್‌ಗಳು ಕಳೆದಿವೆ. 15ನೇ ಸೀಸನ್​ ಕೂಡ ಇನ್ನೇನೂ ಮುಗಿಯಲಿದೆ, ಆದರೆ ಅದೊಂದು ಬೇಡಿಕೆ ಮಾತ್ರ ಇನ್ನೂ ಮುಗಿದಿಲ್ಲ. ಆ ಬೇಡಿಕೆ ಈಡೇರಿಕೆಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಕಾಯುತ್ತಿದೆ. ಐಪಿಎಲ್‌ನ ಅತ್ಯಂತ ಪ್ರಸಿದ್ಧ ತಂಡಗಳಲ್ಲಿ ಒಂದಾಗಿರುವ ಬೆಂಗಳೂರು ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿಯಾದರೂ ಕಪ್ ಗೆಲ್ಲುವ ಬಯಕೆ ಆರ್​ಸಿಬಿ ಪಾಳಯದಲ್ಲಿದೆ. ಐಪಿಎಲ್ 2022 (IPL 2022) ರಲ್ಲಿ ಆರ್​ಸಿಬಿ ಪ್ಲೇಆಫ್‌ ತಲುಪುತ್ತೆ ಎಂದು ಯಾರು ಕೂಡ ಬಾವಿಸಿರಲಿಲ್ಲ. ಜೊತೆಗೆ ಅದನ್ನು ದೊಡ್ಡ ಸ್ಪರ್ಧಿ ಎಂದು ಪರಿಗಣಿಸಲಾಗಿರಲಿಲ್ಲ. ಆದಾಗ್ಯೂ, ಆರ್​ಸಿಬಿ ಅದ್ಭುತ ಪ್ರದರ್ಶನ ನೀಡಿ ಪ್ಲೇ ಆಫ್​ಗೇರಿದೆ. ಮೇ 25 ರ ಬುಧವಾರದಂದು ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಎಲ್ಲರ ಕಣ್ಣು ಕಿಂಗ್ ಕೊಹ್ಲಿ ಮೇಲಿರಲಿದೆ. ಏಕೆಂದರೆ ಕೊಹ್ಲಿ (Virat Kohli) ಪ್ಲೇಆಫ್‌ನಲ್ಲಿ ಬೆಂಗಳೂರಿನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಆಗಿದ್ದಾರೆ.

2008 ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ವಿರಾಟ್ ಕೊಹ್ಲಿ ಬೆಂಗಳೂರಿನ ಭಾಗವಾಗಿದ್ದಾರೆ. ತಂಡದ ಪರ ಎಲ್ಲಾ ಮೂರು ಫೈನಲ್‌ಗಳ ಜೊತೆಗೆ ಪ್ರತಿ ಪ್ಲೇಆಫ್ ಪಂದ್ಯವನ್ನು ಆಡಿದ್ದಾರೆ. ಅವರು ಯಶಸ್ಸನ್ನು ಪಡೆಯದಿದ್ದರೂ, ಬ್ಯಾಟ್‌ನೊಂದಿಗೆ ಅವರ ಪ್ರದರ್ಶನ ಇನ್ನೂ ಉತ್ತಮವಾಗಿದೆ. ಐಪಿಎಲ್ ಪ್ಲೇಆಫ್ ಪಂದ್ಯಗಳಲ್ಲಿ ಬೆಂಗಳೂರು ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಇದೇ ಕಾರಣ.

ಪ್ಲೇ ಆಫ್‌ನಲ್ಲಿ ಕೊಹ್ಲಿಯ ಪ್ರದರ್ಶನವೇ ಅಂಥದ್ದು ವಿರಾಟ್ ಕೊಹ್ಲಿ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಬೆಂಗಳೂರು ಪರ ಗರಿಷ್ಠ 276 ರನ್ ಗಳಿಸಿದ್ದಾರೆ. ಈ ವಿಚಾರದಲ್ಲಿ ಅವರು ಬೆಂಗಳೂರಿನ ಇನ್ನಿಬ್ಬರು ದೊಡ್ಡ ದಿಗ್ಗಜರಾದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿದ್ದಾರೆ. ಡಿವಿಲಿಯರ್ಸ್ 268 ರನ್ ಗಳಿಸಿದ್ದರೆ, ಗೇಲ್ 250 ರನ್ ಗಳಿಸಿದ್ದಾರೆ. ಆದರೆ, ಕಳೆದ ಎರಡು ಪ್ಲೇಆಫ್ ಪಂದ್ಯಗಳಲ್ಲಿ ಕೊಹ್ಲಿ ಕೂಡ ಅಷ್ಟೇನೂ ಯಶಸ್ಸು ಕಂಡಿರಲಿಲ್ಲ. 2020 ರ ಎಲಿಮಿನೇಟರ್‌ನಲ್ಲಿ, ಅವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 6 ರನ್ ಗಳಿಸಿದ್ದರೆ, 2021 ರ ಎಲಿಮಿನೇಟರ್‌ನಲ್ಲಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 39 ರನ್ ಗಳಿಸಿದರು.

ಇದನ್ನೂ ಓದಿ
Image
IPL 2022: ಸತತ 2 ವರ್ಷಗಳಿಂದ ಬೆಂಚ್ ಕಾಯುತ್ತಿರುವ ಮಗ ಅರ್ಜುನ್​ಗೆ ಸಚಿನ್ ನೀಡಿದ ಸಲಹೆ ಏನು ಗೊತ್ತಾ?
Image
IPL 2022: ಈ ಸೀಸನ್​ನ ಉದಯೋನ್ಮುಖ ಆಟಗಾರ ಪ್ರಶಸ್ತಿ ಗೆಲ್ಲುವವರು ಯಾರು? ರೇಸ್​ನಲ್ಲಿರುವವರ ಪಟ್ಟಿ ಹೀಗಿದೆ
Image
IPL 2022 Playoffs: ಪ್ಲೇಆಫ್‌ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 5 ಕ್ರಿಕೆಟಿಗರು ಇವರೇ..!

ಕೊಹ್ಲಿಯ ಲಯ ಹಾಗೇ ಇರುತ್ತದೆಯೇ? ಕಳೆದ ಎರಡು ಸತತ ಸೀಸನ್‌ಗಳಲ್ಲಿ ಎಲಿಮಿನೇಟರ್ ಹರ್ಡಲ್ ಅನ್ನು ದಾಟಲು ಬೆಂಗಳೂರು ತಂಡಕ್ಕೆ ಸಾಧ್ಯವಾಗಲಿಲ್ಲ. ಎರಡೂ ಸಂದರ್ಭಗಳಲ್ಲಿ ಸಣ್ಣ ಸ್ಕೋರ್‌ ಕಲೆ ಹಾಕಿ ಸೋಲನುಭವಿಸಿತ್ತು. ಈ ಬಾರಿ ಬೆಂಗಳೂರು ಅದನ್ನು ತಪ್ಪಿಸಬೇಕಾಗಿದ್ದು, ತಂಡದ ಬ್ಯಾಟ್ಸ್​ಮನ್​ಗಳು ಉತ್ತಮ ಪ್ರದರ್ಶನ ನೀಡಬೇಕಿದೆ. ಇದಕ್ಕಾಗಿ ವಿರಾಟ್ ಕೊಹ್ಲಿ ಕೂಡ ಓಪನಿಂಗ್​ನಲ್ಲಿ ದೊಡ್ಡ ಜವಾಬ್ದಾರಿ ಹೊರಲಿದ್ದಾರೆ. ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದ ಕೊಹ್ಲಿ ಅವರ ಬ್ಯಾಟ್ ಕೇವಲ 306 ರನ್ ಗಳಿಸಿದ್ದರೂ, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 73 ರನ್‌ಗಳ ಉತ್ತಮ ಇನ್ನಿಂಗ್ಸ್ ಆಡಿದರು. ಇಂದಿನ ಪಂದ್ಯದಲ್ಲಿ ಕೊಹ್ಲಿ ಈ ಲಯವನ್ನು ಮುಂದುವರಿಸಿದರೆ, ಆರ್​ಸಿಬಿ ಮುಂದಿನ ಹಂತ ತಲುಪುವುದಂತ್ತೂ ಖಚಿತ.

Published On - 6:16 pm, Wed, 25 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್