IPL 2022: ಈ ಸೀಸನ್​ನ ಉದಯೋನ್ಮುಖ ಆಟಗಾರ ಪ್ರಶಸ್ತಿ ಗೆಲ್ಲುವವರು ಯಾರು? ರೇಸ್​ನಲ್ಲಿರುವವರ ಪಟ್ಟಿ ಹೀಗಿದೆ

TV9 Digital Desk

| Edited By: ಪೃಥ್ವಿಶಂಕರ

Updated on:May 25, 2022 | 4:26 PM

IPL 2022: ಉದಯೋನ್ಮುಖ ಆಟಗಾರ ಪ್ರಶಸ್ತಿಗಳ ವರ್ಗಕ್ಕೆ ಸೇರಲು ಕೆಲವು ನಿಯಮಗಳು ಮತ್ತು ಷರತ್ತುಗಳಿವೆ. ಆಟಗಾರನು ಏಪ್ರಿಲ್ 1, 1996 ರ ನಂತರ ಜನಿಸಿರಬೇಕು. ಅವನು 5 ಅಥವಾ ಕಡಿಮೆ ಟೆಸ್ಟ್ ಮತ್ತು 20 ಅಥವಾ ಕಡಿಮೆ ODIಗಳನ್ನು ಆಡಿರಬೇಕು.

IPL 2022: ಈ ಸೀಸನ್​ನ ಉದಯೋನ್ಮುಖ ಆಟಗಾರ ಪ್ರಶಸ್ತಿ ಗೆಲ್ಲುವವರು ಯಾರು? ರೇಸ್​ನಲ್ಲಿರುವವರ ಪಟ್ಟಿ ಹೀಗಿದೆ
ಉಮ್ರಾನ್ ಮಲಿಕ್‌

ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ನ 15 ನೇ ಸೀಸನ್ ಈಗ ಅಂತಿಮ ಹಂತವನ್ನು ತಲುಪಿದೆ. ಐಪಿಎಲ್ ಫೈನಲ್ ಮೇ 29 ರಂದು ನಡೆಯಲಿದೆ. ಇದರೊಂದಿಗೆ 2 ತಿಂಗಳಿನಿಂದ ನಡೆಯುತ್ತಿದ್ದ ಐಪಿಎಲ್ 2022 ಮುಕ್ತಾಯವಾಗಲಿದೆ. ಭಾನುವಾರ (IPL Champion) ನಡೆಯುವ ಫೈನಲ್ ಪಂದ್ಯದಲ್ಲಿ ಹೊಸ ಚಾಂಪಿಯನ್ ತಂಡ ಕೂಡ ಫಿಕ್ಸ್ ಆಗಲಿದೆ. ಈ ಟಿ20 ಪಂದ್ಯಾವಳಿಯಲ್ಲಿ ಆರೆಂಜ್ ಮತ್ತು ಪರ್ಪಲ್ ಕ್ಯಾಪ್‌ಗಳ ಜೊತೆಗೆ, ಪ್ರತಿ ವರ್ಷ ಯುವ ಆಟಗಾರನಿಗೆ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿ ಗೆಲ್ಲುವವರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭವಿಷ್ಯದ ತಾರೆಯಾಗುವ ಸಾಮರ್ಥ್ಯವೂ ಕಂಡುಬರುತ್ತದೆ. ಉದಯೋನ್ಮುಖ ಆಟಗಾರ ಪ್ರಶಸ್ತಿಗಳ ವರ್ಗಕ್ಕೆ ಸೇರಲು ಕೆಲವು ನಿಯಮಗಳು ಮತ್ತು ಷರತ್ತುಗಳಿವೆ. ಆಟಗಾರನು ಏಪ್ರಿಲ್ 1, 1996 ರ ನಂತರ ಜನಿಸಿರಬೇಕು. ಅವನು 5 ಅಥವಾ ಕಡಿಮೆ ಟೆಸ್ಟ್ ಮತ್ತು 20 ಅಥವಾ ಕಡಿಮೆ ODIಗಳನ್ನು ಆಡಿರಬೇಕು. ಐಪಿಎಲ್‌ನಲ್ಲಿ 25 ಅಥವಾ ಅದಕ್ಕಿಂತ ಕಡಿಮೆ ಪಂದ್ಯಗಳನ್ನು ಆಡಿರಬೇಕು. ಈ ಪ್ರಶಸ್ತಿಗೆ ಆಯ್ಕೆಯಾಗುವವರು ಇದಕ್ಕೂ ಮುಂಚೆ ಐಪಿಎಲ್‌ನಲ್ಲಿ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಗೆದ್ದಿರಬಾರದು.

ಈ ಪ್ರಶಸ್ತಿ ರೇಸ್​ನಲ್ಲಿರುವ ಆಟಗಾರರಿವರು

  1. ಬಲಗೈ ವೇಗಿ ಉಮ್ರಾನ್ ಮಲಿಕ್ ಐಪಿಎಲ್ 15ನೇ ಸೀಸನ್​ನಲ್ಲಿ 14 ಪಂದ್ಯಗಳನ್ನು ಆಡಿದ್ದು, 22 ವಿಕೆಟ್ ಕಬಳಿಸಿದ್ದಾರೆ. ಈ ಪ್ರದರ್ಶನದ ಮೂಲಕ ಉಮ್ರಾನ್ ಉದಯೋನ್ಮುಖ ಆಟಗಾರನಾಗುವ ರೇಸ್​ನಲ್ಲಿ ಮುಂದಿದ್ದಾರೆ. ಉಮ್ರಾನ್ ತನ್ನ ವೇಗದ ಬೌಲಿಂಗ್‌ನಿಂದ ಬ್ಯಾಟ್ಸ್‌ಮನ್‌ಗಳನ್ನು ತಲ್ಲಣಗೊಳಿಸುವುದನ್ನು ಮುಂದುವರೆಸಿದ್ದಾರೆ. ಉತ್ತಮ ಬ್ಯಾಟ್ಸ್‌ಮನ್‌ಗಳು ಕೂಡ ಅವರ ಎಸೆತಗಳ ಮುಂದೆ ರನ್‌ಗಾಗಿ ಪರದಾಡುತ್ತಿದ್ದಾರೆ.
  2. ಮುಂಬೈ ಇಂಡಿಯನ್ಸ್ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಐಪಿಎಲ್ ಚೊಚ್ಚಲ ಋತುವಿನಲ್ಲಿ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದ್ದಾರೆ. ಐಪಿಎಲ್‌ನ 15 ನೇ ಸೀಸನ್ ಮುಂಬೈ ಇಂಡಿಯನ್ಸ್‌ಗೆ ಸರಿಯಾಗಿ ನಡೆಯದಿರಬಹುದು, ಆದರೆ 19 ವರ್ಷದ ತಿಲಕ್ ತಮ್ಮ ಬ್ಯಾಟಿಂಗ್‌ನಿಂದ ಎಲ್ಲರನ್ನೂ ಮೆಚ್ಚಿಸಿದ್ದಾರೆ.
  3. ಇದನ್ನೂ ಓದಿ

  4. ಮುಂಬೈ ಇಂಡಿಯನ್ಸ್‌ಗೆ ಡೆವಾಲ್ಡ್ ಬ್ರಾವಿಸ್ ರೂಪದಲ್ಲಿ ಯುವ ಬ್ಯಾಟ್ಸ್‌ಮನ್ ಸಿಕ್ಕಿದ್ದಾರೆ. ಬ್ರಾವಿಸ್ ತನ್ನ ಪವರ್ ಹಿಟ್ಟಿಂಗ್ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ಈ ಯುವ ಆಫ್ರಿಕನ್ ಬ್ಯಾಟ್ಸ್‌ಮನ್‌ನನ್ನು ಐಪಿಎಲ್ 2023 ರಲ್ಲಿ ಉಳಿಸಿಕೊಳ್ಳಬಹುದು.
  5. ಲಕ್ನೋ ಸೂಪರ್ ಜೈಂಟ್ಸ್ ವೇಗದ ಬೌಲರ್ ಮೊಹ್ಸಿನ್ ಖಾನ್ ತಮ್ಮ ಬೌಲಿಂಗ್ ಮೂಲಕ ಅನುಭವಿಗಳನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಉತ್ತರ ಪ್ರದೇಶದವರಾದ ಮೊಹ್ಸಿನ್ 2017-18ರಲ್ಲಿ ವಿಜಯ್ ಹಜಾರೆ ಟ್ರೋಫಿಯೊಂದಿಗೆ ತಮ್ಮ ಲಿಸ್ಟ್ A ಗೆ ಪಾದಾರ್ಪಣೆ ಮಾಡಿದರು. 23ರ ಹರೆಯದ ಎಡಗೈ ವೇಗಿ ಈ ಋತುವಿನಲ್ಲಿ ಎಂಟು ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ. 16 ರನ್‌ಗಳಿಗೆ ನಾಲ್ಕು ವಿಕೆಟ್‌ಗಳು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
  6. ಅರ್ಷದೀಪ್ ಸಿಂಗ್ ಕಳೆದ ಎರಡು ವರ್ಷಗಳಿಂದ ಐಪಿಎಲ್‌ನಲ್ಲಿ ಸತತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಅರ್ಷದೀಪ್ ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಮೂಲಕ ಎಲ್ಲರನ್ನೂ ಆಕರ್ಷಿಸಿದ್ದಾರೆ. ಎಡಗೈ ವೇಗಿ ಅರ್ಶ್ದೀಪ್ ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ತವರಿನಲ್ಲಿ ನಡೆಯಲಿರುವ ಟಿ20 ಸರಣಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada