IPL 2022: ಸತತ 2 ವರ್ಷಗಳಿಂದ ಬೆಂಚ್ ಕಾಯುತ್ತಿರುವ ಮಗ ಅರ್ಜುನ್​ಗೆ ಸಚಿನ್ ನೀಡಿದ ಸಲಹೆ ಏನು ಗೊತ್ತಾ?

IPL 2022: ಅರ್ಜುನ್ ತೆಂಡೂಲ್ಕರ್ ಕಳೆದ ಎರಡು ಸೀಸನ್‌ಗಳಲ್ಲಿ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದಾರೆ ಆದರೆ ಅವರಿಗೆ ಇನ್ನೂ ಚೊಚ್ಚಲ ಅವಕಾಶ ಸಿಕ್ಕಿಲ್ಲ. ತಂಡ ಉತ್ತಮ ಪ್ರದರ್ಶನ ನೀಡದ ಕಾರಣ ಅವರು ಈ ವರ್ಷ ಆಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅದು ಆಗಲಿಲ್ಲ. ಇದೀಗ ಸಚಿನ್ ತೆಂಡೂಲ್ಕರ್ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

IPL 2022: ಸತತ 2 ವರ್ಷಗಳಿಂದ ಬೆಂಚ್ ಕಾಯುತ್ತಿರುವ ಮಗ ಅರ್ಜುನ್​ಗೆ ಸಚಿನ್ ನೀಡಿದ ಸಲಹೆ ಏನು ಗೊತ್ತಾ?
ಅರ್ಜುನ್ ತೆಂಡೂಲ್ಕರ್, ಸಚಿನ್ ತೆಂಡೂಲ್ಕರ್
Follow us
TV9 Web
| Updated By: ಪೃಥ್ವಿಶಂಕರ

Updated on: May 25, 2022 | 5:24 PM

ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಅವರು ಐಪಿಎಲ್ (IPL 2022) 15 ನೇ ಸೀಸನ್‌ನಲ್ಲಿ ಮುಂಬೈ ಪರ ಪಾದಾರ್ಪಣೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಈಗ ಅವರು ತಮ್ಮ ಚೊಚ್ಚಲ ಪ್ರವೇಶಕ್ಕಾಗಿ ಇನ್ನೂ ಒಂದು ವರ್ಷ ಕಾಯಬೇಕಾಗಿದೆ. ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್, ಐಪಿಎಲ್ 2021 ರ ನಂತರ ಐಪಿಎಲ್ 2022 ರಲ್ಲೂ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಳ್ಳಲಿಲ್ಲ. ಅರ್ಜುನ್ ತೆಂಡೂಲ್ಕರ್ ಖಂಡಿತವಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡುತ್ತಾರೆ ಎಂದು ವದಂತಿಗಳಿದ್ದವು. ಏಕೆಂದರೆ, ರೋಹಿತ್ ಶರ್ಮಾ ಹಿಂದಿನ ಪಂದ್ಯದಲ್ಲಿ ಹೊಸ ಆಟಗಾರರನ್ನು ಪ್ರಯತ್ನಿಸುವುದಾಗಿ ಹೇಳಿದ್ದರು. ಆದರೆ ಇದು ಆಗಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅರ್ಜುನ್ ತೆಂಡೂಲ್ಕರ್ ಅವರ ಚೊಚ್ಚಲ ಪಂದ್ಯ ಖಚಿತವಾಗಿತ್ತು. ಆದರೆ ಅದು ಆಗಲಿಲ್ಲ. ಏಕೆಂದರೆ ಪಂದ್ಯ ಆರಂಭವಾಗುವ ಮುನ್ನ ಅರ್ಜುನ್ ತೆಂಡೂಲ್ಕರ್ ರನ್ ಅಪ್ ಎಣಿಸುತ್ತಿರುವುದನ್ನು ಟಿವಿಯಲ್ಲಿ ತೋರಿಸಲಾಗಿತ್ತು. ಆಗ ಅರ್ಜುನ್ ಈ ಪಂದ್ಯ ಆಡುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆದರೆ ಆ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ಇದೇ ವೇಳೆ ಅತೃಪ್ತ ಅರ್ಜುನ್​ಗೆ ತೆಂಡೂಲ್ಕರ್ ಅಮೂಲ್ಯ ಸಲಹೆ ನೀಡಿದ್ದಾರೆ.

ಅರ್ಜುನ್​ಗೆ ಸಚಿನ್ ಅಮೂಲ್ಯ ಸಲಹೆ ಸಚಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿರುವಾಗ ಅರ್ಜುನ್‌ಗೆ ನೀಡಿರುವ ಸಲಹೆಯನ್ನು ಹಂಚಿಕೊಂಡರು. ಈ ಋತುವಿನಲ್ಲಿ ನಿಮ್ಮ ಮಗ ಅರ್ಜುನ್ ಆಡುವುದನ್ನು ನೋಡಲು ಬಯಸುತ್ತೀದ್ರಾ ಎಂದು ಅಭಿಮಾನಿಯೊಬ್ಬರು ಸಚಿನ್ ಅವರನ್ನು ಕೇಳಿದರು. ಅದಕ್ಕೆ ಉತ್ತರಿಸಿದ ಸಚಿನ್, ನಾನು ಅರ್ಜುನ್‌ಗೆ ಕಷ್ಟಪಟ್ಟು ಕೆಲಸ ಮಾಡುವಂತೆ ಹೇಳಿದ್ದೇನೆ. ಅದುವೇ ಜೀವನದಲ್ಲಿ ಯಶಸ್ಸು ಗಳಿಸುವ ದಾರಿ. ಇದರಿಂದ ಭವಿಷ್ಯದಲ್ಲಿ ಅವರಿಗೆ ಅವಕಾಶ ಸಿಗಲಿದೆ. ಪ್ರಸ್ತುತ ಸೀಸನ್ ಮುಗಿದಿದೆ. ಕ್ರಿಕೆಟ್‌ಗೆ ಸಂಬಂಧಿಸಿದಂತೆ ನಾನು ಅರ್ಜುನ್‌ಗೆ ಈ ಹಾದಿ ಕಷ್ಟಕರವಾಗಿದೆ ಮತ್ತು ಹಾಗೆಯೇ ಇರುತ್ತದೆ ಎಂದು ಯಾವಾಗಲೂ ಹೇಳುತ್ತಿದ್ದೆ. ನೀವು ಕ್ರಿಕೆಟ್ ಅನ್ನು ಪ್ರೀತಿಸಲು ಪ್ರಾರಂಭಿಸಿದ್ದೀರಿ. ಕಷ್ಟಪಟ್ಟು ಕೆಲಸ ಮಾಡಿ ಮತ್ತು ಫಲಿತಾಂಶಗಳು ಬರುತ್ತಲೇ ಇರುತ್ತವೆ ಎಂಬ ಸಲಹೆ ನೀಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ:IPL 2022: ಇಡೀ ಸೀಸನ್​ನಲ್ಲಿ ಒಂದೇ ಒಂದು ಅವಕಾಶ ಪಡೆಯದ ಅರ್ಜುನ್ ತೆಂಡೂಲ್ಕರ್​ಗೆ ಅಕ್ಕನ ಭಾವನಾತ್ಮಕ ಸಾಂತ್ವನ

ಇದನ್ನೂ ಓದಿ
Image
IPL 2022: ಈ ಸೀಸನ್​ನ ಉದಯೋನ್ಮುಖ ಆಟಗಾರ ಪ್ರಶಸ್ತಿ ಗೆಲ್ಲುವವರು ಯಾರು? ರೇಸ್​ನಲ್ಲಿರುವವರ ಪಟ್ಟಿ ಹೀಗಿದೆ
Image
IPL 2022 Playoffs: ಪ್ಲೇಆಫ್‌ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 5 ಕ್ರಿಕೆಟಿಗರು ಇವರೇ..!

ಆಯ್ಕೆ ವಿಚಾರದಲ್ಲಿ ಮೂಗು ತೂರಿಸಲ್ಲ ಸಚಿನ್, ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಕೂಡ. ಹೀಗಿರುವಾಗ ಅರ್ಜುನ್‌ಗೆ ಏಕೆ ಅವಕಾಶ ಸಿಗುತ್ತಿಲ್ಲ ಎಂದು ಜನ ಕೇಳುತ್ತಾರೆ. ಆದರೆ ತಂಡದ ಆಯ್ಕೆಯಲ್ಲಿ ನಾನು ಎಂದಿಗೂ ಹಸ್ತಕ್ಷೇಪ ಮಾಡಿಲ್ಲ ಎಂದು ಸಚಿನ್ ಹೇಳಿದ್ದಾರೆ. ತಂಡದ ಆಯ್ಕೆಯ ವಿಷಯಕ್ಕೆ ಬಂದರೆ ನಾನು ಯಾವತ್ತೂ ಆಯ್ಕೆ ವಿಚಾರದಲ್ಲಿ ತಲೆಹಾಕುವುದಿಲ್ಲ ಎಂದರು. ಅಲ್ಲದೆ ನಾನು ಈ ಕೆಲಸವನ್ನು ತಂಡದ ನಿರ್ವಹಣೆಗೆ ಬಿಡುತ್ತೇನೆ ಎಂದು ಸಚಿನ್ ಹೇಳಿದ್ದಾರೆ

ಸತತವಾಗಿ ಎರಡನೇ ಸೀಸನ್ ಇದು ಮುಂಬೈ ಇಂಡಿಯನ್ಸ್‌ನಲ್ಲಿ ಅರ್ಜುನ್ ಅವರ ಸತತ ಎರಡನೇ ಋತುವಾಗಿತ್ತು. ಮುಂಬೈ ಇಂಡಿಯನ್ಸ್ 2022 ರ ಹರಾಜಿನಲ್ಲಿ ಅರ್ಜುನ್‌ಗಾಗಿ 30 ಲಕ್ಷ ರೂ. ಖರ್ಚು ಮಾಡಿತ್ತು. ಮುಂಬೈ ಇಂಡಿಯನ್ಸ್‌ನ ಸಂಪೂರ್ಣ ಋತುವಿನ ನಂತರವೂ ಅರ್ಜುನ್‌ಗೆ ಅವಕಾಶ ಸಿಕ್ಕಿರಲಿಲ್ಲ. ಅರ್ಜುನ್ ಎಡಗೈ ವೇಗದ ಬೌಲರ್ ಆಗಿದ್ದು, ಕೆಳ ಮಧ್ಯಮ ಕ್ರಮಾಂಕ ಕೂಡ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೂ ಅವರಿಗೆ ಅವಕಾಶ ಸಿಗಲಿಲ್ಲ.

ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನದ ನಡುವೆ ಭರವಸೆ ಐಪಿಎಲ್ 2022 ಮುಂಬೈ ಇಂಡಿಯನ್ಸ್‌ಗೆ ತುಂಬಾ ಕೆಟ್ಟದಾಗಿತ್ತು. ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಮುಂಬೈ ಇಂಡಿಯನ್ಸ್ ಕೇವಲ 4 ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಯಿತು ಜೊತೆಗೆ ಮುಂಬೈ ಮೊದಲ 8 ಪಂದ್ಯಗಳಲ್ಲಿ ಸೋಲು ಕಂಡಿತು. ತಿಲಕ್ ವರ್ಮಾ, ಹೃತಿಕ್ ಶೋಕೀನ್, ಡೆವಾಲ್ಡ್ ಬ್ರೆವಿಸ್, ರಮಣದೀಪ್ ಸಿಂಗ್ ಸೇರಿದಂತೆ ಹಲವು ಆಟಗಾರರಿಗೆ ತಂಡವು ಪದಾರ್ಪಣೆ ಮಾಡಲು ಅವಕಾಶ ನೀಡಿತು. ಹೀಗಾಗಿ ತಂಡದ ಕಳಪೆ ಪ್ರದರ್ಶನದ ನಡುವೆ ಅರ್ಜುನ್ ಅವರನ್ನೂ ಪ್ರಯತ್ನಿಸಬಹುದು ಎಂದು ನಂಬಲಾಗಿತ್ತು ಆದರೆ ಅದು ಆಗಲಿಲ್ಲ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್