IPL 2022: ಇಡೀ ಸೀಸನ್​ನಲ್ಲಿ ಒಂದೇ ಒಂದು ಅವಕಾಶ ಪಡೆಯದ ಅರ್ಜುನ್ ತೆಂಡೂಲ್ಕರ್​ಗೆ ಅಕ್ಕನ ಭಾವನಾತ್ಮಕ ಸಾಂತ್ವನ

IPL 2022: ಈ ಬಾರಿಯ ಐಪಿಎಲ್​ನಲ್ಲಿ ಅರ್ಜುನ್ ತೆಂಡೂಲ್ಕರ್ ಆಡಲಿದ್ದಾರೆ ಎಂದು ಹಲವು ಕ್ರೀಡಾ ವಿಮರ್ಶಕರು ವಿಶ್ವಾಸ ವ್ಯಕ್ತಪಡಿಸಿದ್ದರು. ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ ಪುತ್ರನನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕೂಡ ಕಾತರರಾಗಿದ್ದರು.

IPL 2022: ಇಡೀ ಸೀಸನ್​ನಲ್ಲಿ ಒಂದೇ ಒಂದು ಅವಕಾಶ ಪಡೆಯದ ಅರ್ಜುನ್ ತೆಂಡೂಲ್ಕರ್​ಗೆ ಅಕ್ಕನ ಭಾವನಾತ್ಮಕ ಸಾಂತ್ವನ
sara tendulkar emotional post
Follow us
TV9 Web
| Updated By: ಪೃಥ್ವಿಶಂಕರ

Updated on: May 24, 2022 | 7:30 AM

ಐಪಿಎಲ್ 2022 (IPL 2022)ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವಕಾಶ ಪಡೆದ ಅರ್ಜುನ್ ತೆಂಡೂಲ್ಕರ್ (Arjun Tendulkar), ಇಡೀ ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆಯಲಿಲ್ಲ. ಇದರ ಜೊತೆಗೆ ಈಗ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2022 ರಿಂದ ಲೀಗ್​ ಹಂತದಲ್ಲೇ ಟೂರ್ನಿಯಿಂದ ಹೊರಗುಳಿದಿದೆ. ಇಡೀ ಸೀಸನ್​ನಲ್ಲಿ ಒಂದೇ ಒಂದು ಅವಕಾಶ ಪಡೆಯದ ಅರ್ಜುನ್ ತೆಂಡೂಲ್ಕರ್ ಅವರನ್ನು ಹುರಿದುಂಬಿಸಲು ಅಕ್ಕ ಸಾರಾ (Sara Tendulkar) ಭಾವನಾತ್ಮಕ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಸಾರಾ ಮುಂಬೈ ಮ್ಯಾಚ್‌ ಅನ್ನು ವೀಕ್ಷಿಸಲು ಬಂದಾಗ ಅರ್ಜುನ್‌ನ ವಿಡಿಯೋವನ್ನು ಶೂಟ್ ಮಾಡಿದ್ದರು. ಅವರು ಈ ಪೋಸ್ಟ್‌ನಲ್ಲಿ ಆ ವೀಡಿಯೊವನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಅರ್ಜುನ್ ಬಾಲ್ ಬಾಯ್ ಆಗಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದಾಗಿದೆ.ಆ ವಿಡಿಯೋದ ಹಿನ್ನೆಲೆಯಲ್ಲಿ ಅಪ್ನಾ ಟೈಮ್ ಆಯೇಗಾ ಹಾಡು ಕೇಳಿ ಬರುತ್ತಿದೆ. ಅರ್ಜುನ್​ಗೆ ನಿರಾಸೆಯಾಗುವುದನ್ನು ತಡೆಯಲೂ ಸಾರಾ ಈ ವಿಡಿಯೋ ಮೂಲಕ ತಮ್ಮನಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಈಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ತ್ ವೈರಲ್ ಆಗುತ್ತಿದೆ.

ಎರಡು ಬಾರಿಯೂ ಅವಕಾಶ ಸಿಗಲಿಲ್ಲ

ಈ ಬಾರಿಯ ಐಪಿಎಲ್​ನಲ್ಲಿ ಅರ್ಜುನ್ ತೆಂಡೂಲ್ಕರ್ ಆಡಲಿದ್ದಾರೆ ಎಂದು ಹಲವು ಕ್ರೀಡಾ ವಿಮರ್ಶಕರು ವಿಶ್ವಾಸ ವ್ಯಕ್ತಪಡಿಸಿದ್ದರು. ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ ಪುತ್ರನನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕೂಡ ಕಾತರರಾಗಿದ್ದರು. ಆದರೆ ಅರ್ಜುನ್​ಗೆ ಆ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ನಡೆದ ಹರಾಜಿನಲ್ಲಿ ಅರ್ಜುನ್ ಅವರನ್ನು ಮುಂಬೈ ಇಂಡಿಯನ್ಸ್ 30 ಲಕ್ಷ ರೂ.ಗೆ ಅವರನ್ನು ಖರೀದಿಸಿತ್ತು. ಆದರೆ ಯಾವುದೇ ಪಂದ್ಯದಲ್ಲೂ ಅವಕಾಶ ಸಿಗಲಿಲ್ಲ. ಕಳೆದ ವರ್ಷ ಐಪಿಎಲ್ 2021 ರಲ್ಲಿ ಅವರನ್ನು ಮುಂಬೈ ಇಂಡಿಯನ್ಸ್ 20 ಲಕ್ಷ ರೂ.ಗೆ ಖರೀದಿಸಿತು. ಆದರೆ ಆ ಸಮಯದಲ್ಲೂ ಅವರಿಗೆ ಅವಕಾಶ ಸಿಗಲಿಲ್ಲ.

ಇದನ್ನೂ ಓದಿ
Image
GT vs RR Prediction Playing XI: ಗುಜರಾತ್ ಮತ್ತು ರಾಜಸ್ಥಾನದ ಮುಂದೆ ಒಂದೇ ಪ್ರಶ್ನೆ.. ಮೂರನೇ ವೇಗಿ ಯಾರು?
Image
GT vs RR, Playoff Prediction: ಫೈನಲ್ ಸುತ್ತು, ಪೈಪೋಟಿ ಗುಜರಾತ್ ಜೊತೆ; ರಾಜಸ್ಥಾನದ ಕಾಯುವಿಕೆ ಕೊನೆಗೊಳ್ಳುತ್ತಾ?
Image
IPL 2022: ಈ ಸೀಸನ್​ನಲ್ಲಿ ಒಂದೇ ಒಂದು ಸೂಪರ್ ಓವರ್ ಇಲ್ಲ; ಮೊದಲ ಸೂಪರ್ ಓವರ್ ನಡೆದಿದ್ದು ಯಾವಾಗ?

ಇದನ್ನೂ ಓದಿ:GT vs RR Prediction Playing XI: ಗುಜರಾತ್ ಮತ್ತು ರಾಜಸ್ಥಾನದ ಮುಂದೆ ಒಂದೇ ಪ್ರಶ್ನೆ.. ಮೂರನೇ ವೇಗಿ ಯಾರು?

ನಿಮ್ಮ ಸಮಯ ಬರುತ್ತದೆ

ಸಾರಾ ಪೋಸ್ಟ್ ಮಾಡಿದ ವೀಡಿಯೊದ ನಂತರ, ಅನೇಕರು ಅವರ ಪೋಸ್ಟ್ ಅನ್ನು ಶ್ಲಾಘಿಸಿದ್ದಾರೆ. ಅಲ್ಲದೇ ಈ ಬಾರಿ ಅರ್ಜುನ್​ಗೆ ಅವಕಾಶ ಸಿಗಬೇಕಿತ್ತು ಅನ್ನೋದು ಹಲವರ ಪ್ರತಿಕ್ರಿಯೆಯಾಗಿದೆ. ಒಬ್ಬ ಸಹೋದರಿ ತನ್ನ ಸಹೋದರನಿಗೆ ನೀಡಿದ ಬೆಂಬಲವನ್ನು ಅನೇಕರು ಶ್ಲಾಘಿಸಿದ್ದಾರೆ. ಅರ್ಜುನ್‌ನಂತಹ ಇತರ ಕೆಲವು ಕ್ರಿಕೆಟಿಗರಿಗೆ ಐಪಿಎಲ್ 2022 ರಲ್ಲಿ ಆಡಲು ಅವಕಾಶ ಸಿಗಲಿಲ್ಲ.

ಮುಂಬೈ ಇಂಡಿಯನ್ಸ್‌ನ ಕಳಪೆ ಪ್ರದರ್ಶನ

ಈ ವರ್ಷದ ಐಪಿಎಲ್ ಹಲವು ಆಘಾತಕಾರಿ ಫಲಿತಾಂಶಗಳನ್ನು ಕಂಡಿದೆ . ಮುಂಬೈ ಇಂಡಿಯನ್ಸ್ , ಚೆನ್ನೈ ಸೂಪರ್ ಕಿಂಗ್ಸ್ ಮತ್ತು ದೆಹಲಿಯಂತಹ ದೊಡ್ಡ ತಂಡಗಳು ಈ ವರ್ಷ ಪ್ಲೇ ಆಫ್ ತಲುಪಲು ಸಾಧ್ಯವಾಗಲಿಲ್ಲ. ಮುಂಬೈ ಮತ್ತು ಚೆನ್ನೈ ಈ ಹಿಂದೆ ಹಲವು ಬಾರಿ ಐಪಿಎಲ್ ಗೆದ್ದಿವೆ. ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ಈ ಬಾರಿ ತೃಪ್ತಿಕರವಾಗಿರಲಿಲ್ಲ. 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದ ಅವರು ಸ್ಕೋರ್‌ಬೋರ್ಡ್‌ನಲ್ಲಿ ಕೊನೆಯ ಸ್ಥಾನದಲ್ಲಿ ಉಳಿದರು.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್