Sign In

By signing in or creating an account, you agree with Associated Broadcasting Company's Terms & Conditions and Privacy Policy.

Explained, IPL 2022: ಸೋತರೂ ರಾಜಸ್ಥಾನ್ ತಂಡಕ್ಕೆ ಯಾಕೆ ಮತ್ತೊಂದು ಚಾನ್ಸ್?

IPL 2022: ಮೊದಲ ಕ್ವಾಲಿಫೈಯರ್ (Qualifier 1) ಪಂದ್ಯ ಮುಗಿದಿದ್ದು, ರಾಜಸ್ಥಾನ್ ರಾಯಲ್ಸ್​ ತಂಡವನ್ನು ಸೋಲಿಸಿ ಗುಜರಾತ್ ಟೈಟಾನ್ಸ್ (GT vs RR) ಭರ್ಜರಿ ಜಯ ಸಾಧಿಸಿದೆ.

Explained, IPL 2022: ಸೋತರೂ ರಾಜಸ್ಥಾನ್ ತಂಡಕ್ಕೆ ಯಾಕೆ ಮತ್ತೊಂದು ಚಾನ್ಸ್?
Rajasthan Royals
Follow us
TV9 Web
| Updated By: ಝಾಹಿರ್ ಯೂಸುಫ್

Updated on: May 25, 2022 | 4:35 PM

IPL 2022: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಪ್ಲೇಆಫ್​ ಪಂದ್ಯಗಳು ಶುರುವಾಗಿದೆ. ಲೀಗ್​ ಹಂತದಲ್ಲಿ ಆಡಿದ 10 ತಂಡಗಳಲ್ಲಿ ನಾಲ್ಕು ತಂಡಗಳು ಪ್ಲೇಆಫ್​ಗೆ ಕಾಲಿಫೈ ಆಗಿದ್ದು, ಅದರಂತೆ ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪಂದ್ಯಗಳನ್ನು ಆಡಲಿದೆ. ಈ ಪೈಕಿ ಮೊದಲ ಕ್ವಾಲಿಫೈಯರ್ (Qualifier 1) ಪಂದ್ಯ ಮುಗಿದಿದ್ದು, ರಾಜಸ್ಥಾನ್ ರಾಯಲ್ಸ್​ ತಂಡವನ್ನು ಸೋಲಿಸಿ ಗುಜರಾತ್ ಟೈಟಾನ್ಸ್ (GT vs RR) ಭರ್ಜರಿ ಜಯ ಸಾಧಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಜಯಗಳಿಸಿರುವ ಗುಜರಾತ್ ಟೈಟಾನ್ಸ್ ತಂಡವು ನೇರವಾಗಿ ಫೈನಲ್​ ಪ್ರವೇಶಿಸಿದೆ. ಆದರೆ ಸೋತ ರಾಜಸ್ಥಾನ್ ರಾಯಲ್ಸ್​ ತಂಡವು ಐಪಿಎಲ್​ನಿಂದ ಹೊರಬಿದ್ದಿಲ್ಲ. ಬದಲಾಗಿ ರಾಜಸ್ಥಾನ್ ರಾಯಲ್ಸ್​ ತಂಡಕ್ಕೆ ಫೈನಲ್​ಗೆ ಪ್ರವೇಶಿಸಲು ಮತ್ತೊಂದು ಅವಕಾಶ ಇರಲಿದೆ.

ಅಂದರೆ ಇಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ತಂಡಗಳಿಗೆ ಫೈನಲ್​ ಪ್ರವೇಶಿಸಲು ಎರಡು ಅವಕಾಶ ನೀಡಲಾಗುತ್ತದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್​ ತಂಡ ಸೋತರೂ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಮೂಲಕ ಫೈನಲ್​ಗೆ ಪ್ರವೇಶಿಸಬಹುದು. ಇಂತಹದೊಂದು ಅವಕಾಶ ನೀಡಲೆಂದೇ ಕ್ವಾಲಿಫೈಯರ್ ನಿಯಮಗಳನ್ನು ಐಪಿಎಲ್​ನಲ್ಲಿ ಪರಿಚಯಿಸಲಾಗಿದೆ.

ಏಕೆಂದರೆ ಐಪಿಎಲ್​ ದೀರ್ಘಾವಧಿಯ ಟೂರ್ನಿಯಾಗಿದ್ದು, ಇಲ್ಲಿ ಪ್ರತಿ ತಂಡಗಳು ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡುತ್ತದೆ. ಈ ಮೂಲಕ ಪಾಯಿಂಟ್ಸ್​ ಟೇಬಲ್​ನಲ್ಲಿ ಟಾಪ್ 4 ನಲ್ಲಿ ಕಾಣಿಸಿಕೊಳ್ಳುವ ನಾಲ್ಕು ತಂಡಗಳು ಪ್ಲೇಆಫ್ ಪ್ರವೇಶಿಸಲಿದೆ. ಹಾಗೆಯೇ ಅಗ್ರ ಎರಡು ಸ್ಥಾನಗಳನ್ನು ಪಡೆಯುವ 2 ತಂಡಗಳಿಗೆ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ಅವಕಾಶ ನೀಡಲಾಗುತ್ತದೆ. ಇಲ್ಲಿ ಸೆಮಿಫೈನಲ್ ಬದಲು ಕ್ವಾಲಿಫೈಯರ್ ಪಂದ್ಯಗಳ ಅವಕಾಶ ನೀಡುವ ಮೂಲಕ ಇಡೀ ಟೂರ್ನಿಯುದಕ್ಕೂ ಉತ್ತಮ ಪ್ರದರ್ಶನದ ನೀಡಿದ 2 ತಂಡಗಳಿಗೆ ಫೈನಲ್​ಗೇರಲು 2 ಅವಕಾಶ ನೀಡಲಾಗಿದೆ.

ಇದನ್ನೂ ಓದಿ
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು
Image
Virat Kohli: ಕೊಹ್ಲಿ ಕಡೆಯಿಂದ ರಶೀದ್ ಖಾನ್​​ಗೆ ಸ್ಪೆಷಲ್ ಗಿಫ್ಟ್​: ಸೇಫ್ ಆಗಿ ಇಟ್ಟಿರಿ ಎಂದ ಸೌತ್ ಆಫ್ರಿಕಾ ಕ್ರಿಕೆಟಿಗ
Image
KL Rahul: ಐಪಿಎಲ್​ನಲ್ಲಿ ರಾಹುಲ್ ಅಬ್ಬರ: ಸತತ 5ನೇ ಬಾರಿ ಕೆಎಲ್ ಕಿಂಗ್
Image
IPL 2022: ಬುಮ್ರಾ ದಾಖಲೆ ಮುರಿದ ಉಮ್ರಾನ್ ಮಲಿಕ್

ಅಂದರೆ ಸೆಮಿಫೈನಲ್ ಆಡಿಸಿದ್ರೆ ಒಂದು ತಂಡವು ನೇರವಾಗಿ ಹೊರಬೀಳಲಿದೆ. ಆದರೆ ಲೀಗ್ ಹಂತದಲ್ಲಿ 14 ಪಂದ್ಯಗಳಲ್ಲಿ ಉತ್ತಮವಾಗಿ ಆಡಿದರೂ, ಅಂತಿಮವಾಗಿ ಕೇವಲ ಒಂದು ಪಂದ್ಯದಿಂದ ತಂಡವನ್ನು ಹೊರಗಿಡುವುದನ್ನು ತಪ್ಪಿಸಲು ಕ್ವಾಲಿಫೈಯರ್ ಮೂಲಕ ನಾಕೌಟ್ ಪಂದ್ಯಗಳನ್ನು ಆಡಿಸಲಾಗುತ್ತಿದೆ. ಅದರಂತೆ ಪಾಯಿಂಟ್ಸ್ ಟೇಬಲ್​ನಲ್ಲಿ ಮೊದಲ ಮತ್ತು ದ್ವಿತೀಯಾ ಸ್ಥಾನ ಪಡೆಯುವ 2 ತಂಡಗಳಿಗೆ ಫೈನಲ್​ಗೇರಲು 2 ಅವಕಾಶ ನೀಡಲಾಗಿದೆ. ಇದೀಗ ಮೊದಲ ಕ್ವಾಲಿಫೈಯರ್ ಅವಕಾಶದಲ್ಲಿ ಗುಜರಾತ್ ಟೈಟಾನ್ಸ್ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಹಾಗೆಯೇ ಸೋತಿರುವ ರಾಜಸ್ಥಾನ್ ರಾಯಲ್ಸ್ ತಂಡವು 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ.

ಅದರಂತೆ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 2ನೇ ಕ್ವಾಲಿಫೈಯರ್ ಪಂದ್ಯವಾಡುವ ಅವಕಾಶ ಸಿಕ್ಕಿದೆ. ಅಂದರೆ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡವು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡದೊಡನೆ 2ನೇ ಕ್ವಾಲಿಫೈಯರ್ ಪಂದ್ಯವಾಡಬೇಕಾಗುತ್ತದೆ.

ಇಲ್ಲಿ ಮೊದಲ ಅವಕಾಶದಲ್ಲಿ ಸೋತರೂ, 2ನೇ ಕ್ವಾಲಿಫೈಯರ್ ಪಂದ್ಯದ ಮೂಲಕ ಫೈನಲ್​ಗೆ ಎಂಟ್ರಿ ಕೊಡುವ ಚಾನ್ಸ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಇರಲಿದೆ. ಆದರೆ ಎಲಿಮಿನೇಟರ್ ಪಂದ್ಯವಾಡುವ ಆರ್​ಸಿಬಿ-ಲಕ್ನೋ ತಂಡಗಳಲ್ಲಿ ಸೋತ ತಂಡ ನೇರವಾಗಿ ಐಪಿಎಲ್​ನಿಂದ ಹೊರಬೀಳಲಿದೆ. ಅಂದರೆ ಪಾಯಿಂಟ್ಸ್ ಟೇಬಲ್​ನಲ್ಲಿ 3ನೇ ಮತ್ತು 4ನೇ ಸ್ಥಾನ ಪಡೆಯುವ ತಂಡಗಳಿಗೆ ಮತ್ತೊಂದು ಅವಕಾಶ ಇರುವುದಿಲ್ಲ. ಹೀಗಾಗಿಯೇ ಈ ಪಂದ್ಯವನ್ನು ಎಲಿಮಿನೇಟರ್​ ಪಂದ್ಯ ಎಂದು ಕರೆಯಲಾಗುತ್ತದೆ. ಇಲ್ಲಿ ಸೋತ ತಂಡವು ಐಪಿಎಲ್​ನಿಂದ ಹೊರಬೀಳಲಿದೆ.

ಹಾಗೆಯೇ ಎಲಿಮಿನೇಟರ್​ನಲ್ಲಿ ಗೆದ್ದ ತಂಡವು 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ. ಅಂದರೆ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಆರ್​ಸಿಬಿ ನಡುವಣ ಪಂದ್ಯದಲ್ಲಿ ಗೆದ್ದ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ದ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್​ಗೆ ಪ್ರವೇಶಿಸಲಿದೆ. ಅದರಂತೆ ಫೈನಲ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು