RCB vs RR, IPL 2022: 7 ವರ್ಷಗಳ ನಂತರ ಕ್ವಾಲಿಫೈಯರ್​ 2ಗೆ ಆರ್​ಸಿಬಿ! 2011ರ ಇತಿಹಾಸ ಮರುಕಳಿಸುತ್ತಾ?

RCB vs RR, IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದೃಷ್ಟದಿಂದ ಪ್ಲೇಆಫ್ ಆಡಲು ಟಿಕೆಟ್ ಪಡೆದಿರಬಹುದು. ಆದರೆ ಈ ತಂಡವು ಕ್ವಾಲಿಫೈಯರ್ ಎರಡರಲ್ಲಿ, ಪಂದ್ಯಾವಳಿಯ ಗುಂಪು ಹಂತದಲ್ಲಿ RCB ಗಿಂತ ಉತ್ತಮ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

RCB vs RR, IPL 2022: 7 ವರ್ಷಗಳ ನಂತರ ಕ್ವಾಲಿಫೈಯರ್​ 2ಗೆ ಆರ್​ಸಿಬಿ! 2011ರ ಇತಿಹಾಸ ಮರುಕಳಿಸುತ್ತಾ?
ಆರ್​ಸಿಬಿ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: May 26, 2022 | 2:53 PM

ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡವನ್ನು ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಅಹಮದಾಬಾದ್‌ಗೆ ಟಿಕೆಟ್ ಖಚಿತಪಡಿಸಿಕೊಂಡಿದೆ. ಬೆಂಗಳೂರು ತಂಡ ಈಗ ಕ್ವಾಲಿಫೈಯರ್ 2 (Qualifier 2) ಪಂದ್ಯವನ್ನು ಆಡಬೇಕಾದ ಸ್ಥಳ ಅಹಮದಾಬಾದ್. ಈ ಮೂಲಕ ಆರ್​ಸಿಬಿ ಒಟ್ಟಾರೆ ಮೂರನೇ ಬಾರಿ ಮತ್ತು ಕಳೆದ 7 ವರ್ಷಗಳಲ್ಲಿ ಮೊದಲ ಬಾರಿಗೆ ಕ್ವಾಲಿಫೈಯರ್ 2 ಪಂದ್ಯವನ್ನು ಆಡಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ RCB ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಎರಡು ತಂಡಗಳ ನಡುವಿನ ಈ ಕ್ರಿಕೆಟ್ ಕದನವು ಯಾವ ತಂಡವು ಫೈನಲ್‌ಗೆ ಹೋಗಲಿದೆ ಎಂಬುದನ್ನು ನಿರ್ಧರಿಸುತ್ತದೆ. ಈ ಪಂದ್ಯದಲ್ಲಿ ಗೆದ್ದವರು ಮೇ 29 ರಂದು ಗುಜರಾತ್ ಟೈಟಾನ್ಸ್ (Gujarat Titans) ತಂಡವನ್ನು ಎದುರಿಸಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದೃಷ್ಟದಿಂದ ಪ್ಲೇಆಫ್ ಆಡಲು ಟಿಕೆಟ್ ಪಡೆದಿರಬಹುದು. ಆದರೆ ಈ ತಂಡವು ಕ್ವಾಲಿಫೈಯರ್ ಎರಡರಲ್ಲಿ, ಪಂದ್ಯಾವಳಿಯ ಗುಂಪು ಹಂತದಲ್ಲಿ RCB ಗಿಂತ ಉತ್ತಮ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಹೀಗಿರುವಾಗ ಫೈನಲ್‌ನ ಟಿಕೆಟ್ ಗೆಲ್ಲುವ ಸವಾಲು ಆರ್‌ಸಿಬಿಗೆ ಸುಲಭವಲ್ಲ.

ಇದನ್ನೂ ಓದಿ:IPL 2022 Eliminator: ಪ್ಲೇ ಆಫ್ ಪಂದ್ಯಗಳಲ್ಲಿ ಕೊಹ್ಲಿಯೇ ಕಿಂಗ್! ಲಕ್ನೋ ಎದುರು ಮತ್ತೆ ಅಬ್ಬರಿಸ್ತಾರಾ ವಿರಾಟ್?

ಇದನ್ನೂ ಓದಿ
Image
Virat Kohli: ವಿರಾಟ್ ಕೊಹ್ಲಿ ಸಿಡಿಸಿದ ಬೌಂಡರಿ ಕಂಡು ಸ್ಟೇಡಿಯಂನಲ್ಲಿ ಸೌರವ್ ಗಂಗೂಲಿ ಮಾಡಿದ್ದೇನು ನೋಡಿ
Image
Rajat Patidar: ನಿನ್ನೆಯ ಒಂದೇ ಪಂದ್ಯದಿಂದ ರಜತ್ ಪಟಿದಾರ್​ಗೆ ಸಿಕ್ಕ ಒಟ್ಟು ಹಣವೆಷ್ಟು ಗೊತ್ತೇ?: ಶಾಕ್ ಆಗ್ತೀರಾ
Image
Rajat Patidar: ಪಂದ್ಯ ಮುಗಿದ ಬಳಿಕ ಬೇಸರದ ಮಾತುಗಳನ್ನಾಡಿದ ರಜತ್ ಪಟಿದಾರ್: ಏನು ಹೇಳಿದ್ರು ಕೇಳಿ

ಕ್ವಾಲಿಫೈಯರ್ 2 ರಲ್ಲಿ RCB ಇತಿಹಾಸ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ತನ್ನ ಮೂರನೇ ಕ್ವಾಲಿಫೈಯರ್ 2 ಪಂದ್ಯವನ್ನು ಆಡಲಿದೆ. ಇದಕ್ಕೂ ಮೊದಲು ಆರ್​ಸಿಬಿ 2015 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕ್ವಾಲಿಫೈಯರ್ 2 ರಲ್ಲಿ ಕೊನೆಯ ಬಾರಿಗೆ ಆಡಿತ್ತು. ಆಗ ಸಿಎಸ್​ಕೆ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಅದೇ ಸಮಯದಲ್ಲಿ, ಈ ತಂಡವು 2011 ರಲ್ಲಿ ಮೊದಲ ಬಾರಿಗೆ ಕ್ವಾಲಿಫೈಯರ್ 2 ಅನ್ನು ಆಡುವ ಅವಕಾಶವನ್ನು ಪಡೆದುಕೊಂಡಿತು. ಆ ಋತುವಿನಲ್ಲಿ ಆಡಿದ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ಅನ್ನು ಎದುರಿಸಿತು. ಆ ಪಂದ್ಯದಲ್ಲಿ ಆರ್​ಸಿಬಿ, ಮುಂಬೈ ಇಂಡಿಯನ್ಸ್ ಮಣಿಸಿ ಫೈನಲ್‌ಗೆ ಟಿಕೆಟ್ ಖಚಿತಪಡಿಸಿಕೊಂಡಿತು.

RCB ವಿರುದ್ಧ ಬಲಿಷ್ಠ ರಾಜಸ್ಥಾನ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರನೇ ಬಾರಿಗೆ ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸುತ್ತಿದೆ. ಮುಂಬೈ ಮತ್ತು ಚೆನ್ನೈನಂತೆ ಈ ತಂಡ ಕೂಡ ಮಾಜಿ ಐಪಿಎಲ್ ಚಾಂಪಿಯನ್ ಆಗಿದೆ. ಐಪಿಎಲ್ 2022 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಅದ್ಭುತ ಪ್ರದರ್ಶನ ತೋರಿದೆ. ಮತ್ತೊಂದೆಡೆ, ಎಲಿಮಿನೇಟರ್ ಗೆದ್ದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆತ್ಮವಿಶ್ವಾಸ ಕೊಂಚ ಹೆಚ್ಚಿದೆ. ಆದರೆ ರಾಜಸ್ಥಾನ್ ವಿರುದ್ದ ಗೆಲ್ಲಬೇಕೆಂದರೆ ತಂಡದ ಟಾಪ್ ಆರ್ಡರ್ ಬ್ಯಾಟರ್​ಗಳು ಉತ್ತಮ ರನ್ ಗಳಿಸಬೇಕಿದೆ. ಒಟ್ಟಾರೆ, ಅಹಮದಾಬಾದ್‌ನಲ್ಲಿ ನಡೆಯಲಿರುವ ಕ್ವಾಲಿಫೈಯರ್ 2 ಹಣಾಹಣಿ ಕುತೂಹಲಕಾರಿಯಾಗಿರಲಿದೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್