ICC Test Rankings: ನಂ.1 ಸ್ಥಾನ ಉಳಿಸಿಕೊಂಡ ರವೀಂದ್ರ ಜಡೇಜಾ! ಕೊಹ್ಲಿ-ರೋಹಿತ್ ಸ್ಥಾನ ಯಾವುದು?

ICC Test Rankings: ಮುಶ್ಫಿಕರ್ ರಹೀಮ್, ಲಿಟ್ಟನ್ ದಾಸ್ ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಶ್ರೀಲಂಕಾದ ಹಿರಿಯ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಕೂಡ ಉತ್ತಮ ಪ್ರದರ್ಶನದಿಂದ ಮುಂಬಡ್ತಿ ಪಡೆದಿದ್ದಾರೆ.

ICC Test Rankings: ನಂ.1 ಸ್ಥಾನ ಉಳಿಸಿಕೊಂಡ ರವೀಂದ್ರ ಜಡೇಜಾ! ಕೊಹ್ಲಿ-ರೋಹಿತ್ ಸ್ಥಾನ ಯಾವುದು?
ರವೀಂದ್ರ ಜಡೇಜಾ
Follow us
TV9 Web
| Updated By: ಪೃಥ್ವಿಶಂಕರ

Updated on:May 26, 2022 | 3:27 PM

ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕ (ICC Test Rankings) ಬಿಡುಗಡೆಯಾಗಿದ್ದು, ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮಾರ್ನಸ್ ಲ್ಯಾಬುಸ್ಚಾಗ್ನೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಮತ್ತೊಂದೆಡೆ ಭಾರತದ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಎಂಟು ಮತ್ತು 10 ನೇ ಸ್ಥಾನಗಳಲ್ಲಿ ಮುಂದುವರಿದಿದ್ದಾರೆ. ಬೌಲಿಂಗ್ ಪಟ್ಟಿಯಲ್ಲಿ ಪ್ಯಾಟ್ ಕಮಿನ್ಸ್ (901 ಅಂಕ) ಎರಡನೇ ಶ್ರೇಯಾಂಕದ ರವಿಚಂದ್ರನ್ ಅಶ್ವಿನ್‌ಗಿಂತ 51 ಅಂಕಗಳ ಮುನ್ನಡೆ ಹೊಂದಿದ್ದಾರೆ. ಭಾರತದವರೇ ಆದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮೂರನೇ ಸ್ಥಾನದಲ್ಲಿದ್ದಾರೆ. ಆಲ್ ರೌಂಡರ್ ಪಟ್ಟಿಯಲ್ಲಿ ಭಾರತದ ರವೀಂದ್ರ ಜಡೇಜಾ (Ravindra Jadeja) ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಶ್ರೀಲಂಕಾ-ಬಾಂಗ್ಲಾದೇಶ ಆಟಗಾರರಿಗೆ ಲಾಭ

ಹಿಂದಿನ ಮತ್ತು ಪ್ರಸ್ತುತ ಶ್ರೇಯಾಂಕಗಳ ಸಮಯದಲ್ಲಿ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿ ಪಂದ್ಯವನ್ನು ಆಡುತ್ತಿದ್ದವು. ಆದ್ದರಿಂದ ಈ ಎರಡು ದೇಶಗಳ ಆಟಗಾರರು ಮಾತ್ರ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶದ ಏಕೈಕ ಇನ್ನಿಂಗ್ಸ್‌ನಲ್ಲಿ 88 ರನ್ ಗಳಿಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಲಿಟ್ಟನ್ ದಾಸ್ ಮೂರು ಸ್ಥಾನ ಮೇಲೇರಿ 17ನೇ ಸ್ಥಾನಕ್ಕೆ ತಲುಪಿದ್ದಾರೆ. ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಎನಿಸಿಕೊಂಡಿದ್ದ ಮ್ಯಾಥ್ಯೂಸ್ ಮೊದಲ ಇನಿಂಗ್ಸ್‌ನಲ್ಲಿ 199 ರನ್ ಗಳಿಸಿ ಐದು ಸ್ಥಾನ ಮೇಲೇರಿ 21ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ
Image
RCB vs RR, IPL 2022: 7 ವರ್ಷಗಳ ನಂತರ ಕ್ವಾಲಿಫೈಯರ್​ 2ಗೆ ಆರ್​ಸಿಬಿ! 2011ರ ಇತಿಹಾಸ ಮರುಕಳಿಸುತ್ತಾ?
Image
Virat Kohli: ವಿರಾಟ್ ಕೊಹ್ಲಿ ಸಿಡಿಸಿದ ಬೌಂಡರಿ ಕಂಡು ಸ್ಟೇಡಿಯಂನಲ್ಲಿ ಸೌರವ್ ಗಂಗೂಲಿ ಮಾಡಿದ್ದೇನು ನೋಡಿ
Image
Rajat Patidar: ನಿನ್ನೆಯ ಒಂದೇ ಪಂದ್ಯದಿಂದ ರಜತ್ ಪಟಿದಾರ್​ಗೆ ಸಿಕ್ಕ ಒಟ್ಟು ಹಣವೆಷ್ಟು ಗೊತ್ತೇ?: ಶಾಕ್ ಆಗ್ತೀರಾ

ಇದನ್ನೂ ಓದಿ:ICC: ಭಾರತ-ಶ್ರೀಲಂಕಾ ಪಂದ್ಯದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಪಿಚ್ ಕಳಪೆ ಎಂದು ರೇಟಿಂಗ್ ಕೊಟ್ಟ ಐಸಿಸಿ

ರ್ಯಾಂಕಿಂಗ್‌ನ ವಾರದ ನವೀಕರಣದಲ್ಲಿ, ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಬಾಂಗ್ಲಾದೇಶದ ಮುಶ್ಫಿಕರ್ ರಹೀಮ್ ಮತ್ತು ತಮೀಮ್ ಇಕ್ಬಾಲ್ ಕೂಡ ಲಾಭ ಗಳಿಸಿದ್ದಾರೆ. ಮುಷ್ಫಿಕರ್ 105 ರನ್‌ಗಳ ನೆರವಿನಿಂದ ನಾಲ್ಕು ಸ್ಥಾನ ಮೇಲೇರಿ 25ನೇ ಸ್ಥಾನಕ್ಕೆ ತಲುಪಿದ್ದಾರೆ. ತಮೀಮ್ ಆರು ಸ್ಥಾನಗಳನ್ನು ಹೆಚ್ಚಿಸಿಕೊಂಡು 27ನೇ ಸ್ಥಾನದಲ್ಲಿದ್ದಾರೆ.

ಶಕೀಬ್ ಅಲ್ ಹಸನ್-ರಜಿತಾಗೂ ಲಕ್

ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಮೇಲೇರಿ 29ನೇ ಸ್ಥಾನಕ್ಕೆ ತಲುಪಿದ್ದಾರೆ. ಶಕೀಬ್ ಮೊದಲ ಟೆಸ್ಟ್​ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದರು. ಆಫ್ ಸ್ಪಿನ್ನರ್ ನಯೀಮ್ ಹಸನ್ ಅವರು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 105ಕ್ಕೆ 6 ವಿಕೆಟ್ ಕಬಳಿಸಿ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನದೊಂದಿಗೆ ಒಂಬತ್ತು ಸ್ಥಾನ ಮೇಲೇರಿ 53ನೇ ಸ್ಥಾನಕ್ಕೆ ತಲುಪಿದ್ದಾರೆ. ಶ್ರೀಲಂಕಾದ ವೇಗದ ಬೌಲರ್ ಕಸುನ್ ರಜಿತಾ 75ನೇ ಸ್ಥಾನದಿಂದ 61ನೇ ಸ್ಥಾನಕ್ಕೆ ಏರಿದ್ದಾರೆ. ರಜಿತಾ ಈ ಟೆಸ್ಟ್​ನಲ್ಲಿ ನಾಲ್ಕು ವಿಕೆಟ್ ಪಡೆದರು. ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮುಶ್ಫಿಕರ್ ರಹೀಮ್ ಮತ್ತು ಲಿಟ್ಟನ್ ದಾಸ್ ಅದ್ಭುತ ಪ್ರದರ್ಶನ ನೀಡಿರುವುದರಿಂದ ಬಾಂಗ್ಲಾದೇಶದ ಆಟಗಾರರ ಶ್ರೇಯಾಂಕದಲ್ಲಿ ಹೆಚ್ಚಿನ ಜಿಗಿತ ಕಂಡುಬಂದಿದೆ.

Published On - 3:27 pm, Thu, 26 May 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ