IPL 2022: ಲಕ್ನೋ ಸೋಲಿಗೆ ನಾಯಕ ರಾಹುಲ್ ಕಾರಣ ಎಂದ ಸಂಜಯ್ ಮಂಜ್ರೇಕರ್- ರವಿಶಾಸ್ತ್ರೀ..!

KL Rahul: ನನ್ನ ಪ್ರಕಾರ ಕೆಎಲ್ ರಾಹುಲ್ ಕೊನೆಯವರೆಗೂ ಆಡಲು ಪ್ರಯತ್ನಿಸುತ್ತಾರೆ. ಅವರು ಕ್ರೀಸ್‌ನಲ್ಲಿ ಉಳಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾನು ಕೋಚ್ ಆಗಿದ್ದರೆ ಬೇರೆ ರೀತಿಯಲ್ಲಿ ಆಡಲು ಹೇಳುತ್ತೇನೆ.

IPL 2022: ಲಕ್ನೋ ಸೋಲಿಗೆ ನಾಯಕ ರಾಹುಲ್ ಕಾರಣ ಎಂದ ಸಂಜಯ್ ಮಂಜ್ರೇಕರ್- ರವಿಶಾಸ್ತ್ರೀ..!
ಕೆಎಲ್ ರಾಹುಲ್
Follow us
| Updated By: ಪೃಥ್ವಿಶಂಕರ

Updated on: May 26, 2022 | 4:18 PM

ಎಲಿಮಿನೆಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನೀಡಿದ್ದ 208 ರನ್‌ಗಳ ಗುರಿಯನ್ನು ಬೆಂಬತ್ತಲು ಲಕ್ನೋ ಸೂಪರ್ ಜೈಂಟ್ಸ್ ವಿಫಲವಾಯಿತು. ಲಕ್ನೋದ ಇನಿಂಗ್ಸ್‌ನ ನಾಯಕತ್ವವನ್ನು ಕೆಎಲ್ ರಾಹುಲ್ (KL Rahul) ವಹಿಸಿದ್ದರೂ ಟಾರ್ಗೆಟ್ ತಲುಪಲು ಸಾಧ್ಯವಾಗಲಿಲ್ಲ. ರಾಹುಲ್ 59 ಎಸೆತಗಳಲ್ಲಿ 78 ರನ್ ಗಳಿಸಿ ಲಕ್ನೋ ಪರ ಗರಿಷ್ಠ ಸ್ಕೋರ್ ಮಾಡಿದರು. ಆದರೆ ನಿರ್ಣಾಯಕ ಕ್ಷಣದಲ್ಲಿ ಔಟಾದರು. ಹೀಗಾಗಿ ತಂಡ ಗೆಲ್ಲಲು ವಿಫಲವಾಯಿತು. ಈ ಮೂಲಕ RCB ಲಕ್ನೋವನ್ನು 14 ರನ್‌ಗಳಿಂದ ಸೋಲಿಸಿತು. ಈ ಸೋಲು ಐಪಿಎಲ್ 2022 ರಲ್ಲಿ ಲಕ್ನೋ ಓಟವನ್ನು ಕೊನೆಗೊಳಿಸಿತು. ಲಕ್ನೋ ಸೋಲಿನ ನಂತರ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri) ಹಾಗೂ ಸಂಜಯ್ ಮಂಜ್ರೆಕರ್, ಕೆಎಲ್ ರಾಹುಲ್ ಅವರ ಬ್ಯಾಟಿಂಗ್​ ಅನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಈ ಸೋಲಿಗೆ ಅವರನ್ನೇ ಹೊಣೆ ಮಾಡಲಾಗುತ್ತಿದೆ.

ಏಳು ಓವರ್‌ಗಳಲ್ಲಿ ಕೇವಲ ಒಂದು ಬೌಂಡರಿ ಬಾರಿಸಿದ ರಾಹುಲ್

ದೊಡ್ಡ ಗುರಿ ಬೆನ್ನತ್ತಿದ ಕೆಎಲ್ ರಾಹುಲ್ ಮಧ್ಯಮ ಓವರ್‌ಗಳಲ್ಲಿ ಆಡುತ್ತಿದ್ದ ರೀತಿಯನ್ನು ಪ್ರಶ್ನಿಸಲಾಗುತ್ತಿದೆ. ಲಕ್ನೋ ತಂಡ ಉತ್ತಮ ಆರಂಭ ಪಡೆದು ಪವರ್‌ಪ್ಲೇಯ ಆರು ಓವರ್‌ಗಳಲ್ಲಿ 62 ರನ್ ಗಳಿಸಿತು. ಆದರೆ ಪವರ್‌ಪ್ಲೇಯಲ್ಲಿ ರಾಹುಲ್ 17 ಎಸೆತಗಳಲ್ಲಿ 26 ರನ್ ಗಳಿಸಿದರು. ನಂತರದ ಏಳು ಓವರ್‌ಗಳಲ್ಲಿ ರಾಹುಲ್ ಕೇವಲ ಒಂದು ಬೌಂಡರಿ ಬಾರಿಸಿದರು.ಹೀಗಾಗಿ ತಂಡಕ್ಕೆ ಬೇಕಾಗಿದ್ದ ಅವಶ್ಯಕ ರನ್​ರೇಟ್ ಹೆಚ್ಚಾಗಿತ್ತು.

ಇದನ್ನೂ ಓದಿ
Image
ICC Test Rankings: ನಂ.1 ಸ್ಥಾನ ಉಳಿಸಿಕೊಂಡ ರವೀಂದ್ರ ಜಡೇಜಾ! ಕೊಹ್ಲಿ-ರೋಹಿತ್ ಸ್ಥಾನ ಯಾವುದು?
Image
RCB vs RR, IPL 2022: 7 ವರ್ಷಗಳ ನಂತರ ಕ್ವಾಲಿಫೈಯರ್​ 2ಗೆ ಆರ್​ಸಿಬಿ! 2011ರ ಇತಿಹಾಸ ಮರುಕಳಿಸುತ್ತಾ?

ಇದನ್ನೂ ಓದಿ:KL Rahul: ರೋಹಿತ್ ಶರ್ಮಾರ ಸೆಂಚುರಿ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್

ಪಂದ್ಯವನ್ನು ಮುಗಿಸಲು ಸಾಧ್ಯವಾಗಲಿಲ್ಲ

ಎಲ್‌ಎಸ್‌ಜಿ 7 ರಿಂದ 13 ಓವರ್‌ಗಳಲ್ಲಿ ಕೇವಲ 49 ರನ್ ಗಳಿಸಿತು. ದೀಪಕ್ ಹೂಡಾ ದೊಡ್ಡ ಹೊಡೆತಗಳನ್ನು ಆಡಿದರು. ಆದರೆ 15ನೇ ಓವರ್‌ನಲ್ಲಿ ಔಟಾದರು. ದೀಪಕ್ 26 ಎಸೆತಗಳಲ್ಲಿ 45 ರನ್ ಗಳಿಸಿದರು. ಹೂಡಾ ಔಟಾದ ನಂತರ ರಾಹುಲ್ ಜವಾಬ್ದಾರಿ ವಹಿಸಿಕೊಂಡು ವೇಗವಾಗಿ ರನ್ ಗಳಿಸಿದರು. ಆದರೆ ಪಂದ್ಯವನ್ನು ಮುಗಿಸಲು ಸಾಧ್ಯವಾಗಲಿಲ್ಲ. ಜೋಶ್ ಹ್ಯಾಜಲ್‌ವುಡ್ ಅವರ 19ನೇ ಓವರ್‌ನಲ್ಲಿ ರಾಹುಲ್ 79 ರನ್ ಗಳಿಸಿ ಔಟಾದರು. ಲಕ್ನೋ ಸೂಪರ್ ಜೈಂಟ್ಸ್ ನಿಗದಿತ 20 ಓವರ್‌ಗಳಲ್ಲಿ 193/6 ಗಳಿಸಲಷ್ಟೇ ಶಕ್ತವಾಯಿತು. ಆರ್‌ಸಿಬಿ 14 ರನ್‌ಗಳ ಜಯ ಸಾಧಿಸಿತು.

ರಾಹುಲ್ ಕೆಲವು ರಿಸ್ಕ್ ತೆಗೆದುಕೊಳ್ಳಬೇಕಾಗಿತ್ತು “ಕೆಲವೊಮ್ಮೆ ನೀವು ಸ್ವಲ್ಪ ಸಮಯ ಕಾಯುತ್ತೀರಿ. ಇಲ್ಲಿ 9 ರಿಂದ 14 ನೇ ಓವರ್‌ನಲ್ಲಿ ಗುರಿಯನ್ನು ಗಮನದಲ್ಲಿಟ್ಟುಕೊಂಡು ಜೊತೆಯಾಟವನ್ನು ಹೊಂದುವುದು ಅಗತ್ಯವಾಗಿತ್ತು ಎಂದು ರವಿಶಾಸ್ತ್ರಿ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡುತ್ತಾ ಹೇಳಿದರು. ಹೂಡಾ ಮತ್ತು ರಾಹುಲ್ ಬ್ಯಾಟಿಂಗ್ ಮಾಡುವಾಗ, ಕೆಎಲ್ ರಾಹುಲ್ ಕೆಲವು ಅಪಾಯಗಳನ್ನು ತೆಗೆದುಕೊಳ್ಳಬೇಕಾಯಿತು. ಕೊನೆಯ ಓವರ್‌ಗಳಲ್ಲಿ ಹರ್ಷಲ್ ಪಟೇಲ್ ಬರುತ್ತಿದ್ದರು. ಆದ್ದರಿಂದ, 9 ರಿಂದ 13 ಓವರ್‌ಗಳ ನಡುವೆ, ಕೆಎಲ್ ರಾಹುಲ್ ಅವಕಾಶವನ್ನು ಪಡೆದು ದೊಡ್ಡ ಹೊಡೆತಗಳನ್ನು ಆಡಬೇಕಿತ್ತು ಎಂದು ರವಿಶಾಸ್ತ್ರಿ ಹೇಳಿದರು.

ರಾಹುಲ್ ಬ್ಯಾಟಿಂಗ್ ಪ್ರಶ್ನಿಸಿದೆ ಸಂಜಯ್ ಮಂಜ್ರೇಕರ್

ಕೆಎಲ್ ರಾಹುಲ್ ಪ್ರತಿ ಋತುವಿನಲ್ಲಿ 600 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸುತ್ತಿದ್ದಾರೆ. ಈ ವರ್ಷವೂ ಕೆಎಲ್ ರಾಹುಲ್ ಅದನ್ನೇ ಮಾಡಿದ್ದಾರೆ. ಅವರು 15 ಇನ್ನಿಂಗ್ಸ್‌ಗಳಲ್ಲಿ 50 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 616 ರನ್ ಗಳಿಸಿದರು. ಆದರೆ ಇದರ ಹೊರತಾಗಿಯೂ, ಈ ಆಟಗಾರನ ತಂಡ ಲಕ್ನೋ ಸೂಪರ್‌ಜೈಂಟ್ಸ್ ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ತಂಡ ಲಕ್ನೋವನ್ನು 14 ರನ್ ಗಳಿಂದ ಸೋಲಿಸಿದ್ದು, ಈ ಸೋಲಿನ ಬಳಿಕ ಕೆಎಲ್ ರಾಹುಲ್ ಬ್ಯಾಟಿಂಗ್ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು ಕೆಎಲ್ ರಾಹುಲ್ ಮನಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಸಂಜಯ್ ಮಂಜ್ರೇಕರ್ ಟಾರ್ಗೆಟ್ ಕೆಎಲ್ ರಾಹುಲ್

ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ಜೊತೆಗಿನ ಸಂವಾದದಲ್ಲಿ ಸಂಜಯ್ ಮಂಜ್ರೇಕರ್, ‘ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್‌ಗಾಗಿ ಆಡುವಾಗ ಇದೇ ಮನೋಭಾವವನ್ನು ಹೊಂದಿದ್ದರು. ನನ್ನ ಪ್ರಕಾರ ಕೆಎಲ್ ರಾಹುಲ್ ಕೊನೆಯವರೆಗೂ ಆಡಲು ಪ್ರಯತ್ನಿಸುತ್ತಾರೆ. ಅವರು ಕ್ರೀಸ್‌ನಲ್ಲಿ ಉಳಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾನು ಕೋಚ್ ಆಗಿದ್ದರೆ ಬೇರೆ ರೀತಿಯಲ್ಲಿ ಆಡಲು ಹೇಳುತ್ತೇನೆ. ಕ್ರೀಸ್‌ನಲ್ಲಿ ದೀರ್ಘಕಾಲ ಉಳಿಯುವುದಕ್ಕಿಂತ ಕೆಎಲ್ ರಾಹುಲ್ ಅವರ ತ್ವರಿತ ರನ್ ಉತ್ತಮವಾಗಿರುತ್ತದೆ ಎಂದು ನಾನು ನಂಬುತ್ತೇನೆ. ಕೆಎಲ್ ರಾಹುಲ್ ವೇಗವಾಗಿ ರನ್ ಗಳಿಸಿದಾಗ ತಂಡಕ್ಕೆ ಹೆಚ್ಚಿನ ಲಾಭವಾಗುವುದನ್ನು ನಾವು ನೋಡಿದ್ದೇವೆ ಎಂದಿದ್ದಾರೆ.

ಕೆಎಲ್ ರಾಹುಲ್ ನಿಧಾನಗತಿಯ ಇನ್ನಿಂಗ್ಸ್ ಲಖನೌ ಸೋಲಿಗೆ ಕಾರಣ?

ಕೆಎಲ್ ರಾಹುಲ್ ಅವರ ನಿಧಾನಗತಿಯ ಇನ್ನಿಂಗ್ಸ್ ಲಕ್ನೋ ಸೂಪರ್ ಜೈಂಟ್ಸ್ ಸೋಲಿಗೆ ಪ್ರಮುಖ ಕಾರಣ ಎಂದು ನಂಬಲಾಗಿದೆ. ಅಂದಹಾಗೆ, ರಾಹುಲ್ 58 ಎಸೆತಗಳಲ್ಲಿ 79 ರನ್ ಗಳಿಸಿದರು. ಆದರೆ 200ಕ್ಕೂ ಹೆಚ್ಚು ರನ್‌ಗಳ ಗುರಿ ಅಗತ್ಯವಿದ್ದಾಗ ಈ ಇನ್ನಿಂಗ್ಸ್ ಆ ನಿಟ್ಟಿನಲ್ಲಿ ನಿಧಾನವಾಗಿದೆ. ರಾಹುಲ್ ಅರ್ಧಶತಕ ಪೂರೈಸಲು 43 ಎಸೆತಗಳನ್ನು ಆಡಿದ್ದು ದೊಡ್ಡ ವಿಷಯ. ಅದೇ ಸಮಯದಲ್ಲಿ, ಲಕ್ನೋ ಇನ್ನಿಂಗ್ಸ್‌ನಲ್ಲಿ 43 ಎಸೆತಗಳಲ್ಲಿ ಯಾವುದೇ ರನ್ ಗಳಿಸಲಿಲ್ಲ. ಕೆಎಲ್ ರಾಹುಲ್ ಕೊನೆಯವರೆಗೂ ಆಡಲು ಪ್ಲಾನ್ ಮಾಡಿದರು ಆದರೆ ಅವರು ಆಕ್ರಮಣಕಾರಿಯಾಗಬೇಕಿದ್ದ ಓವರ್​ಗಳಲ್ಲಿ ಅವರು ಯಶಸ್ವಿಯಾಗಲಿಲ್ಲ. ಇಂತಹ ಸಂದರ್ಭದಲ್ಲಿ ರಾಹುಲ್ ಮೇಲೆ ಪ್ರಶ್ನೆ ಎತ್ತುವುದು ಅನಿವಾರ್ಯವಾಗಿದೆ.

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು