Virat Kohli: ವಿರಾಟ್ ಕೊಹ್ಲಿ ಸಿಡಿಸಿದ ಬೌಂಡರಿ ಕಂಡು ಸ್ಟೇಡಿಯಂನಲ್ಲಿ ಸೌರವ್ ಗಂಗೂಲಿ ಮಾಡಿದ್ದೇನು ನೋಡಿ

Sourav Ganguly, LSG vs RCB: ಆರ್​ಸಿಬಿ-ಎಲ್​ಎಸ್​ಜಿ ನಡುವಣ ರೋಚಕ ಕಾದಾಟ ವೀಕ್ಷಿಸಲು ಕ್ರಿಕೆಟ್ ದಿಗ್ಗಜರು ಹಾಜರಿದ್ದರು. ಬೆಂಗಳೂರು ಕಡೆಯಿಂದ 21 ಫೋರ್, 7 ಸಿಕ್ಸರ್​ಗಳು ಮೂಡಿಬಂದವು. ಆದರೆ, ಇವೆಲ್ಲದರ ಮಧ್ಯೆ ಗಂಗೂಲಿಯನ್ನು ದಂಗು ಬಡಿಸಿದ್ದು ವಿರಾಟ್ ಕೊಹ್ಲಿ ಸಿಡಿಸಿದ ಫೋರ್.

Virat Kohli: ವಿರಾಟ್ ಕೊಹ್ಲಿ ಸಿಡಿಸಿದ ಬೌಂಡರಿ ಕಂಡು ಸ್ಟೇಡಿಯಂನಲ್ಲಿ ಸೌರವ್ ಗಂಗೂಲಿ ಮಾಡಿದ್ದೇನು ನೋಡಿ
Virat Kohli and Sourav Ganguly LSG vs RCB
Follow us
| Updated By: Vinay Bhat

Updated on:May 26, 2022 | 1:10 PM

ಲಖನೌ ಸೂಪರ್ ಜೇಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ನಡುವಣ ಐಪಿಎಲ್ 2022 ಎಲಿಮಿನೇಟರ್ (IPL 2022 Eliminator) ಪಂದ್ಯ ವೀಕ್ಷಿಸಲು ಕ್ರಿಕೆಟ್ ದಿಗ್ಗಜರು ಈಡನ್ ಗಾರ್ಡನ್ಸ್​ನಲ್ಲಿ ಹಾಜರಿದ್ದರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಕೂಡ ಈ ಹೈಸ್ಕೋರ್ ಪಂದ್ಯವನ್ನು ಕಣ್ತುಂಬಿಕೊಂಡರು. ಆರ್​ಸಿಬಿ ಹಾಗೂ ಎಲ್​ಎಸ್​ಜಿ ನಡುವಣ ರೋಚಕ ಕಾದಾಟದಲ್ಲಿ ಫಾಫ್ ಡುಪ್ಲೆಸಿಸ್ ಪಡೆ 14 ರನ್​ಗಳ ಜಯ ಸಾಧಿಸಿ ಕ್ವಾಲಿಫೈಯರ್-2 ಗೆ ಲಗ್ಗೆಯಿಟ್ಟಿದೆ. ಆರ್​ಸಿಬಿ ಬ್ಯಾಟರ್​ಗಳು ಈ ಮೈದಾನದಲ್ಲಿ ರನ್ ಮಳೆಯನ್ನೇ ಸುರಿಸಿದರು. ರಜತ್ ಪಟಿದಾರ್ ಸ್ಫೋಟಕ ಶತಕ ಸಿಡಿಸಿದರೆ ದಿನೇಶ್ ಕಾರ್ತಿಕ್ ಫಿನಿಶಿಂಗ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಬೆಂಗಳೂರು ತಂಡದ ಕಡೆಯಿಂದ 21 ಫೋರ್ ಹಾಗೂ 7 ಸಿಕ್ಸರ್​ಗಳು ಮೂಡಿಬಂದವು. ಆದರೆ, ಇವೆಲ್ಲದರ ಮಧ್ಯೆ ಸೌರವ್ ಗಂಗೂಲಿಯನ್ನು ದಂಗು ಬಡಿಸಿದ್ದು ವಿರಾಟ್ ಕೊಹ್ಲಿ (Virat Kohli) ಅವರು ಸಿಡಿಸಿದ ಫೋರ್.

ಹೌದು, ಎಲ್​ಎಸ್​ಜಿ ಪರ ಇನ್ನಿಂಗ್ಸ್​ನ ಎರಡನೇ ಓವರ್ ಬೌಲಿಂಗ್ ಮಾಡಲು ದುಶ್ಮಂತ ಚಮೀರಾ ಅವರ ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿ ಫೋರ್ ಸಿಡಿಸಿದರು. ನೇರವಾಗಿ ಕಾಲ ಬುಡಕ್ಕೆ ಬಂದಿದ್ದ ಚೆಂಡನ್ನು ಕೊಹ್ಲಿ ತಮ್ಮ ಟೆಕ್ನಿಕ್ ಉಪಯೋಗಿಸಿ ಮಿಡ್ ಆನ್ ಕಡೆ ಫ್ಲಿಕ್ ಮಾಡಿಬಿಟ್ಟರು. ಚೆಂಡು ಮಿಡ್ ಆನ್ ಕಡೆಗೆ ಸಾಗಿ ಬೌಂಡರಿ ಗೆರೆ ತಲುಪಿತು. ಕೊಹ್ಲಿ ಅವರ ಈ ಅದ್ಭುತ ಶಾಟ್ ಕಂಡು ಸ್ಟೇಡಿಯಂನಲ್ಲಿ ಕೂತಿದ್ದ ಸೌರವ್ ಗಂಗೂಲಿ ಮನಸೋತರು. ವಾವ್ ಎಂಬಂತೆ ರಿಯಾಕ್ಷನ್ ಕೊಟ್ಟರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
Faf du Plessis: ಪಟಿದಾರ್ ಶತಕದ ಬಗ್ಗೆ ಖುಷಿ ತಾಳಲಾರದೆ ಫಾಪ್ ಡುಪ್ಲೆಸಿಸ್ ನೀಡಿದ ಹೇಳಿಕೆ ಏನು ಗೊತ್ತೇ?
Image
Rajat Patidar: ಪಂದ್ಯ ಮುಗಿದ ಬಳಿಕ ಬೇಸರದ ಮಾತುಗಳನ್ನಾಡಿದ ರಜತ್ ಪಟಿದಾರ್: ಏನು ಹೇಳಿದ್ರು ಕೇಳಿ
Image
Rajat Patidar: ಪಟಿದಾರ್ ಶತಕವನ್ನು ತನ್ನ ಶತಕದಂತೆ ಸಂಭ್ರಮಿಸಿದ ವಿರಾಟ್ ಕೊಹ್ಲಿ: ವಿಡಿಯೋ ನೋಡಿ
Image
LSG vs RCB Match Report: ಆರ್​ಸಿಬಿ ಸಾಂಘಿಕ ಹೋರಾಟಕ್ಕೆ ಮಣಿದ ಲಕ್ನೋ; ಮುಂದಿನ ಎದುರಾಳಿ ರಾಜಸ್ಥಾನ

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ಆರಂಭದಲ್ಲೇ ಆಘಾತ ಅನುಭವಿಸಿತು. ಮೊದಲ ಓವರ್‌ನಲ್ಲಿಯೇ ಫಾಫ್ ಡು ಪ್ಲೆಸಿಸ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಂತರ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್ ಜೊತೆ ಉತ್ತಮ ಜೊತೆಯಾಟವಾಡುವ ಸೂಚನೆ ನೀಡಿದರು. ಆದರೆ, ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ 25 ರನ್​ಗೆ ವಿಕೆಟ್ ಒಪ್ಪಿಸಿದರು. ಮ್ಯಾಕ್ಸ್‌ವೆಲ್ ಕೇವಲ 9 ರನ್ ಗಳಿಸಿ ಔಟ್ ಆದರು. ಮಹಿಪಾಲ್ ಲುಮ್ರೂರ್ ಕೂಡ 14 ರನ್​ಗೆ ಬ್ಯಾಟ್ ಕೆಳಗಿಟ್ಟರು. ನಂತರ ನಡೆದಿದ್ದು ರಜತ್ ಪಾಟಿದಾರ್ ಮತ್ತು ದಿನೇಶ್ ಕಾರ್ತಿಕ್ ಆಟ.

Rajat Patidar: ನಿನ್ನೆಯ ಒಂದೇ ಪಂದ್ಯದಿಂದ ರಜತ್ ಪಟಿದಾರ್​ಗೆ ಸಿಕ್ಕ ಒಟ್ಟು ಹಣವೆಷ್ಟು ಗೊತ್ತೇ?: ಶಾಕ್ ಆಗ್ತೀರಾ

ಈ ಜೋಡಿ ಮುರಿಯದ ಐದನೇ ವಿಕೆಟ್‌ಗೆ 43 ಎಸೆತಗಳಲ್ಲಿ 92 ರನ್‌ಗಳ ಕಾಣಿಕೆ ನೀಡಿದರು. ಬೌಲಿಂಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಎಲ್ಲ ಬೌಲರ್‌ಗಳು ದುಬಾರಿಯಾದರು. ಪಟಿದಾರ್ ಅಜೇಯ 112 ರನ್ ಗಳಿಸಿದರೆ, ಕಾರ್ತಿಕ್ 23 ಎಸೆತಗಳಲ್ಲಿ 5 ಫೋರ್, 1 ಸಿಕ್ಸರ್​ನೊಂದಿಗೆ ಅಜೇಯ 37 ರನ್ ಸಿಡಿಸಿದರು. ಆರ್​ಸಿಬಿ 20 ಓವರ್​ಗೆ 4 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿತು.

208 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ಲಖನೌ ಕೂಡ ಆರಂಭದಲ್ಲಿಯೇ ಕ್ವಿಂಟನ್ ಡಿ ಕಾಕ್, ಮನನ್ ವೋಹ್ರಾ ವಿಕೆಟ್ ಕಳೆದುಕೊಂಡಿತು. ಬಳಿಕ ದೀಪಕ್ ಹೂಡಾ ಮತ್ತು ಕೆಎಲ್ ರಾಹುಲ್ ಉತ್ತಮ ಜೊತೆಯಾಟವಾಡಿದರು. ಆದರೆ, ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ. ರಾಹುಲ್‌ 58 ಎಸೆತಗಳಿಂದ 3 ಬೌಂಡರಿ ಮತ್ತು 5 ಸಿಕ್ಸರ್‌ ನೆರವಿನಿಂದ 79 ರನ್‌ ಗಳಿಸಿದರೆ ದೀಪಕ್‌ ಹೂಡಾ 45 ರನ್‌ ಹೊಡೆದರು. ಲಖನೌ 6 ವಿಕೆಟ್‌ಗೆ 193 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:10 pm, Thu, 26 May 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ