IPL 2022: ಕ್ರಿಕೆಟಿಗ ಶಿಖರ್ ಧವನ್​ಗೆ ತಂದೆಯಿಂದಲೇ ಮನಬಂದಂತೆ ಥಳಿತ! ಕಾರಣ ಸಿಂಪಲ್; ವಿಡಿಯೋ ನೋಡಿ

Shikhar Dhawan: ಧವನ್ ತಂದೆ ಮೊದಲು ಧವನ್​ಗೆ ಕಪಾಳಮೋಕ್ಷ ಮಾಡಿ, ನಂತರ ಧವನ್​ರನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ಒದೆಯುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

IPL 2022: ಕ್ರಿಕೆಟಿಗ ಶಿಖರ್ ಧವನ್​ಗೆ ತಂದೆಯಿಂದಲೇ ಮನಬಂದಂತೆ ಥಳಿತ! ಕಾರಣ ಸಿಂಪಲ್; ವಿಡಿಯೋ ನೋಡಿ
ಶಿಖರ್ ಧವನ್
Follow us
TV9 Web
| Updated By: ಪೃಥ್ವಿಶಂಕರ

Updated on:May 26, 2022 | 8:50 PM

ಐಪಿಎಲ್ 2022 (IPL 2022) ರಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡದ ಪ್ರಯಾಣವು ಲೀಗ್ ಸುತ್ತಿನಲ್ಲಿಯೇ ಕೊನೆಗೊಂಡಿತು. ತಂಡವು ಪ್ಲೇ ಆಫ್‌ಗೆ ಅರ್ಹತೆ ಗಳಿಸಲು ಸಾಧ್ಯವಾಗಲಿಲ್ಲ. ತಂಡದ ಎಲ್ಲ ಆಟಗಾರರು ಮುಂಬೈನಿಂದ ತಮ್ಮ ತಮ್ಮ ಮನೆಗೆ ಮರಳಿದ್ದಾರೆ. ಈ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಶಿಖರ್ ಧವನ್ (Shikhar Dhawan) ಸಾಕಷ್ಟು ಸ್ಕೋರ್ ಮಾಡಿದರು. ಆದರೆ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಇದರಿಂದ ನಿರಾಶೆಗೊಂಡ ಶಿಖರ್ ಧವನ್ ತಂದೆ, ಧವನ್ ಮನೆಗೆ ಬಂದ ಕೂಡಲೇ ಮನಬಂದಂತೆ ಥಳಿಸಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ. ಬದಲಿಗೆ ಈ ವಿಷಯವನ್ನು ಸ್ವತಃ ಶಿಖರ್ ಧವನ್ ಅವರೇ ವಿಡಿಯೋ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಧವನ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಸಾಕಷ್ಟು ವೈರಲ್ ಆಗುತ್ತಿದೆ.

ಧವನ್ ತಂದೆಗೆ ಇನ್ನಿಲ್ಲದ ಕೋಪ

ಇದನ್ನೂ ಓದಿ
Image
ಆರ್​ಸಿಬಿಯಿಂದ ಅನಿರೀಕ್ಷಿತ ಕರೆ; ಐಪಿಎಲ್​ಗಾಗಿ ತನ್ನ ಮದುವೆಯನ್ನೇ ಮುಂದೂಡಿದ ರಜತ್ ಮ್ಯಾರೇಜ್​ ಸ್ಟೋರಿಯಿದು
Image
RR vs RCB Head to Head Records: ಫೈನಲ್ ರೇಸ್​ನಲ್ಲಿ ಗೆಲುವು ಯಾರಿಗೆ? ಹಿಂದಿನ ಪಂದ್ಯಗಳ ಅಂಕಿಅಂಶ ಹೇಳಿದ ಕಥೆಯಿದು

ಶಿಖರ್ ಧವನ್ ಅವರು ತಮ್ಮ ತಂದೆ ಅವರಿಗೆ ಮನಬಂದಂತೆ ಥಳಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಧವನ್ ತಂದೆ ಡಾನ್‌ನಂತೆ ಕಪ್ಪು ಕೋಟ್ ಪ್ಯಾಂಟನ್ನು ಧರಿಸಿರುವುದನ್ನು ನಾವು ಕಾಣಬಹುದು. ಅವರೊಂದಿಗೆ ಇನ್ನೂ ಕೆಲವು ಮಂದಿಯಿದ್ದು, ಅವರಲ್ಲಿ ಒಬ್ಬ ಪೋಲೀಸ್ ಸಹ ಇದ್ದಾರೆ. ಧವನ್ ತಂದೆ ಮೊದಲು ಧವನ್​ಗೆ ಕಪಾಳಮೋಕ್ಷ ಮಾಡಿ, ನಂತರ ಧವನ್​ರನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ಒದೆಯುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಇತರರು ಅವರನ್ನು ತಡೆಯಲು ಪ್ರಯತ್ನಿಸುತ್ತಿದ್ದರಾದರೂ, ಅವರನ್ನು ತಡೆಯಲು ಯಾರಿಗೂ ಸಾಧ್ಯವಾಗಿಲ್ಲ. ಈ ವೇಳೆ ತಂದೆಯಿಂದ ಒದೆ ತಿಂದ ಧವನ್ ನೆಲದಲ್ಲೇ ಬಿದ್ದು ಹೊರಳಾಡುವುದನ್ನು ನಾವು ಕಾಣಬಹುದು. ತಮಾಷೆಯ ವಿಚಾರವೆಂದರೆ, ಇದೆಲ್ಲವೂ ನಿಜವಾಗಿ ಸಂಭವಿಸಿಲ್ಲ,ಬದಲಿಗೆ ಧವನ್​ರ ತಂದೆ ಇನ್​ಸ್ಟಾ ರೀಲ್ ವೀಡಿಯೊ ಮಾಡುವ ಸಲುವಾಗಿ ಈ ರೀತಿ ವರ್ತಿಸಿದ್ದಾರೆ. ನಾಕೌಟ್‌ಗೆ ಅರ್ಹತೆ ಪಡೆಯದಿದ್ದಕ್ಕೆ ತಂದೆ ನನ್ನನ್ನು ಥಳಿಸಿದ್ದಾರೆ ಎಂಬ ಶೀರ್ಷಿಕೆಯನ್ನು ಈ ವಿಡಿಯೋಗೆ ಧವನ್ ನೀಡಿದ್ದಾರೆ.

ದಿಗ್ಗಜರ ಶಭಾಷ್​ಗಿರಿ

ಧವನ್ ಶೇರ್ ಮಾಡಿರುವ ಈ ವಿಡಿಯೋ ಸಾಕಷ್ಟು ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾರತದ ಅನುಭವಿ ಬೌಲರ್ ಹರ್ಭಜನ್ ಸಿಂಗ್ ವಿಡಿಯೋ ಕುರಿತು ಪ್ರತಿಕ್ರಿಯಿಸಿ, ನಿಮ್ಮ ಬಾಪು ನಿಮಗಿಂತ ದೊಡ್ಡ ನಟ’ ಎಂದು ಬರೆದಿದ್ದಾರೆ. ಕ್ರೀಡಾ ನಿರೂಪಕ ಗೌರವ್ ಕಪೂರ್ ಕೂಡ ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿ, ಇಡೀ ಕುಟುಂಬವು ಉತ್ತಮ ಪ್ರದರ್ಶನ ನೀಡುತ್ತಿದೆ ಎಂದು ಬರೆದಿದ್ದಾರೆ. ಶಿಖರ್ ಧವನ್ ತಂಡವು ಪ್ಲೇಆಫ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ ಆದರೆ ಗಬ್ಬರ್ ಅವರ ಬ್ಯಾಟ್ ಸಾಕಷ್ಟು ಸದ್ದು ಮಾಡಿತು. ಅವರು 14 ಪಂದ್ಯಗಳಲ್ಲಿ 122.74 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 460 ರನ್ ಗಳಿಸಿದರು, ಔಟಾಗದೆ 88 ರನ್ ಗಳಿಸಿದ್ದು ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು. ಶಿಖರ್ ಒಟ್ಟಾರೆ ಈ ಸೀಸನ್​ನಲ್ಲಿ 47 ಬೌಂಡರಿ ಮತ್ತು 12 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಇದರೊಂದಿಗೆ ಐಪಿಎಲ್ 15ನೇ ಸೀಸನ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಸದ್ಯ ಆರನೇ ಸ್ಥಾನದಲ್ಲಿದ್ದಾರೆ.

Published On - 8:50 pm, Thu, 26 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್