Lucknow Super Giants Report Card: ಕಳಪೆ ಮಧ್ಯಮ ಕ್ರಮಾಂಕ, ಬಲಿಷ್ಠ ಬೌಲಿಂಗ್; ಇದು ಲಕ್ನೋ ತಂಡದ ರಿಪೋರ್ಟ್​ ಕಾರ್ಡ್

Lucknow Super Giants Report Card: ಲಕ್ನೋ ತಂಡದ ಬ್ಯಾಟಿಂಗ್ ನೋಡಿದರೆ, ಅದು ನಾಯಕ ಕೆಎಲ್ ರಾಹುಲ್ ಮತ್ತು ಅವರ ಆರಂಭಿಕ ಪಾಲುದಾರ ಕ್ವಿಂಟನ್ ಡಿ ಕಾಕ್ ಮೇಲೆ ಅವಲಂಬಿತವಾಗಿದೆ. ದೀಪಕ್ ಹೂಡಾ ಕೊಂಚ ಈ ಇಬ್ಬರಿಗೆ ಬೆಂಬಲ ನೀಡಿದರು.

Lucknow Super Giants Report Card: ಕಳಪೆ ಮಧ್ಯಮ ಕ್ರಮಾಂಕ, ಬಲಿಷ್ಠ ಬೌಲಿಂಗ್; ಇದು ಲಕ್ನೋ ತಂಡದ ರಿಪೋರ್ಟ್​ ಕಾರ್ಡ್
LSG
Follow us
TV9 Web
| Updated By: Vinay Bhat

Updated on: May 27, 2022 | 6:56 AM

ಇಂಡಿಯನ್ ಪ್ರೀಮಿಯರ್ ಲೀಗ್‌ (Indian Premier League) 15 ನೇ ಸೀಸನ್​ಗೆ ಎರಡು ಹೊಸ ತಂಡಗಳು ಬಂದಿಳಿದಿದ್ದವು. ಇವುಗಳಲ್ಲಿ ಒಂದು ಅಂತಿಮ ಪಂದ್ಯವನ್ನು ಆಡಲಿರುವ ಗುಜರಾತ್ ಟೈಟಾನ್ಸ್ (Gujarat Titans) ಮತ್ತು ಇನ್ನೊಂದು ಎಲಿಮಿನೇಟರ್ ಪಂದ್ಯದಲ್ಲಿ ಸೋತ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants). ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋವನ್ನು ಸೋಲಿಸಿತು. (IPL 2022) ಈ ಪಂದ್ಯದಲ್ಲಿ, ಲಕ್ನೋ ತನ್ನ ಕಳಪೆ ಫೀಲ್ಡಿಂಗ್ ಜೊತೆಗೆ ಅನೇಕ ಕಾರ್ಯತಂತ್ರದ ತಪ್ಪುಗಳ ಭಾರವನ್ನು ಹೊರಬೇಕಾಯಿತು. ಈ ಪಂದ್ಯದಲ್ಲಿ ಬೆಂಗಳೂರಿನ ಬ್ಯಾಟ್ಸ್​ಮನ್ ರಜತ್ ಪಾಟಿದಾರ್ ಭರ್ಜರಿ ಶತಕ ಬಾರಿಸಿದರು. ಆದರೆ ಅದಕ್ಕೂ ಮುನ್ನ ಲಖನೌ ಆಟಗಾರರು ಅವರಿಗೆ ಸಾಕಷ್ಟು ಜೀವದಾನ ನೀಡಿದರು. ಜೊತೆಗೆ ದಿನೇಶ್ ಕಾರ್ತಿಕ್ ಅವರ ಕ್ಯಾಚ್‌ಗಳನ್ನೂ ಸಹ ಕೈಬಿಡಲಾಯಿತು. ನಂತರ 19ನೇ ಓವರ್‌ನಲ್ಲಿ ಲಕ್ನೋ ನಾಯಕ ಕೆಎಲ್ ರಾಹುಲ್ ಔಟಾಗುವುದರೊಂದಿಗೆ ಲಕ್ನೋ ಸೋಲಿನ ಕದ ತಟ್ಟಿತು. ಈ ಸೋಲಿನೊಂದಿಗೆ ಲಕ್ನೋದ ಮೊದಲ ಐಪಿಎಲ್ ಸೀಸನ್ ಕೊನೆಗೊಂಡಿತು.

ಮೈದಾನದಲ್ಲಿ ಕಳಪೆ ಫೀಲ್ಡಿಂಗ್ ಈ ತಂಡದ ಕಳವಳವಾಗಿತ್ತು ಆದರೆ ಇದರ ಹೊರತಾಗಿ ಕೆಲವು ಇತರ ಸಮಸ್ಯೆಗಳಿದ್ದವು. ಈ ಸಮಸ್ಯೆಗಳಿಂದ ಲಕ್ನೋ ಇಡೀ ಸೀಸನ್​ನಲ್ಲಿ ಹೊರಬರಲು ಸಾಧ್ಯವಾಗಲಿಲ್ಲ. ಲಕ್ನೋ ತಂಡ ಬಲಿಷ್ಠ ಕ್ರಿಕೆಟ್ ಆಡಿದ್ದು, ಇದರ ಆಧಾರದ ಮೇಲೆ ಪ್ಲೇಆಫ್ ತಲುಪಿದೆ ಎಂಬುದನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. ಹೌದು, ಲೀಗ್ ಹಂತದ ಕೊನೆಯ ಕೆಲವು ಪಂದ್ಯಗಳಲ್ಲಿ ಈ ತಂಡವು ತನ್ನ ಟ್ರ್ಯಾಕ್ ಕಳೆದುಕೊಂಡಿತ್ತು, ಇದರಿಂದಾಗಿ ಎರಡನೇ ಸ್ಥಾನವನ್ನು ಪಡೆಯದೆ ಮೂರನೇ ಸ್ಥಾನಕ್ಕೆ ತಲುಪಿತು.

ಇದನ್ನೂ ಓದಿ:IPL 2022: ಕ್ರಿಕೆಟಿಗ ಶಿಖರ್ ಧವನ್​ಗೆ ತಂದೆಯಿಂದಲೇ ಮನಬಂದಂತೆ ಥಳಿತ! ಕಾರಣ ಸಿಂಪಲ್; ವಿಡಿಯೋ ನೋಡಿ

ಇದನ್ನೂ ಓದಿ
Image
IPL 2022: ಪ್ಲೇ ಆಫ್​ನಲ್ಲಿ ಸೋತರೂ, ಐಪಿಎಲ್​ನಲ್ಲಿ ಯಾರೂ ಮಾಡದ ವಿಶಿಷ್ಟ ದಾಖಲೆ ಬರೆದ ಕೆ ಎಲ್ ರಾಹುಲ್..!
Image
IPL 2022: ಕ್ರಿಕೆಟಿಗ ಶಿಖರ್ ಧವನ್​ಗೆ ತಂದೆಯಿಂದಲೇ ಮನಬಂದಂತೆ ಥಳಿತ! ಕಾರಣ ಸಿಂಪಲ್; ವಿಡಿಯೋ ನೋಡಿ
Image
ಆರ್​ಸಿಬಿಯಿಂದ ಅನಿರೀಕ್ಷಿತ ಕರೆ; ಐಪಿಎಲ್​ಗಾಗಿ ತನ್ನ ಮದುವೆಯನ್ನೇ ಮುಂದೂಡಿದ ರಜತ್ ಮ್ಯಾರೇಜ್​ ಸ್ಟೋರಿಯಿದು

ನಂಬರ್-3ರಲ್ಲಿ ಉತ್ತಮ ಬ್ಯಾಟ್ಸ್‌ಮನ್‌ಗಳ ಕೊರತೆ

ಐಪಿಎಲ್ ಮೆಗಾ ಹರಾಜಿನಲ್ಲಿ ಲಕ್ನೋ ತನ್ನ ತಂಡವನ್ನು ಉತ್ತಮ ರೀತಿಯಲ್ಲಿ ಕಟ್ಟಿತ್ತು. ಮನೀಶ್ ಪಾಂಡೆ ಈ ತಂಡದಲ್ಲಿ 3ನೇ ಸ್ಥಾನಕ್ಕೆ ಆಯ್ಕೆಯಾಗಿದ್ದರು. ತಂಡವು ಆರಂಭಿಕ ಪಂದ್ಯಗಳಲ್ಲಿ ಅವರಿಗೆ ಅವಕಾಶಗಳನ್ನು ನೀಡಿತು. ಆದರೆ ಮನಿಷ್ ಈ ಸ್ಥಾನದಲ್ಲಿ ವಿಫಲರಾದ್ದರಿಂದ, ನಂತರ ಲಕ್ನೋ ಈ ಸ್ಥಾನವನ್ನು ಸರಿದೂಗಿಸಲು ಸಾಧ್ಯವಾಗಲಿಲ್ಲ. ಋತುವಿನ ಉದ್ದಕ್ಕೂ ನಂಬರ್-3 ಸ್ಲಾಟ್ ಅವರಿಗೆ ಕಾಳಜಿಯ ವಿಷಯವಾಗಿತ್ತು.

ದುರ್ಬಲ ಮಧ್ಯಮ ಕ್ರಮಾಂಕ

ಲಕ್ನೋ ತಂಡದ ಬ್ಯಾಟಿಂಗ್ ನೋಡಿದರೆ, ಅದು ನಾಯಕ ಕೆಎಲ್ ರಾಹುಲ್ ಮತ್ತು ಅವರ ಆರಂಭಿಕ ಪಾಲುದಾರ ಕ್ವಿಂಟನ್ ಡಿ ಕಾಕ್ ಮೇಲೆ ಅವಲಂಬಿತವಾಗಿದೆ. ದೀಪಕ್ ಹೂಡಾ ಕೊಂಚ ಈ ಇಬ್ಬರಿಗೆ ಬೆಂಬಲ ನೀಡಿದರು. ಈ ಮೂವರನ್ನು ಹೊರತುಪಡಿಸಿ, ಲಕ್ನೋ ಬ್ಯಾಟ್ಸ್‌ಮನ್‌ಗಳು ಯಾರೂ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಹೀಗಾಗಿ ತಂಡದ ಮಧ್ಯಮ ಕ್ರಮಾಂಕವು ಋತುವಿನ ಉದ್ದಕ್ಕೂ ಹೋರಾಡಿತು. ಮಾರ್ಕಸ್ ಸ್ಟೊಯಿನಿಸ್ ಅವರಿಂದ ನಿರೀಕ್ಷಿಸಿದ ರೀತಿಯ ಪ್ರದರ್ಶನವನ್ನು ನೀಡಲು ಸಾಧ್ಯವಾಗಲಿಲ್ಲ ಮತ್ತು ಕೃನಾಲ್ ಪಾಂಡ್ಯ ಕೂಡ ಪರಿಣಾಮಕಾರಿಯಾಗಲಿಲ್ಲ.

ಬೌಲಿಂಗ್ ಬಲಿಷ್ಠ

ಆದರೆ, ಲಕ್ನೋ ತಂಡದ ಬೌಲಿಂಗ್ ಉತ್ತಮವಾಗಿದ್ದು ತಂಡದ ಗೆಲುವಿಗೆ ದೊಡ್ಡ ಕಾರಣವಾಗಿದೆ. ಆರಂಭಿಕ ಪಂದ್ಯಗಳ ನಂತರ ಅವೇಶ್ ಖಾನ್ ಉತ್ತಮ ಕಮ್ ಬ್ಯಾಕ್ ಮಾಡಿ ಬಲಿಷ್ಠ ಆಟ ಪ್ರದರ್ಶಿಸಿದರು. ರವಿ ಬಿಷ್ಣೋಯ್ ಈ ಋತುವಿನಲ್ಲಿ ಹೆಚ್ಚು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅವರು 14 ಪಂದ್ಯಗಳಲ್ಲಿ 13 ವಿಕೆಟ್ ಪಡೆದರು. ಅವರ ಪ್ರದರ್ಶನ ಸಾಧಾರಣವಾಗಿತ್ತು. ಮೊಹ್ಸಿನ್ ಖಾನ್ ರೂಪದಲ್ಲಿ, ತಂಡಕ್ಕೆ ಉತ್ತಮ ಬೌಲರ್ ಸಿಕ್ಕಿದ್ದು, ಅವರು ಮುಂಬರುವ ಸೀಸನ್​ಗಳಲ್ಲಿ ತಂಡಕ್ಕೆ ಹೆಚ್ಚು ಉಪಯೋಗವಾಗಬಲ್ಲರು. ಇದಲ್ಲದೇ ಜೇಸನ್ ಹೋಲ್ಡರ್ ಮತ್ತು ದುಷ್ಮಂತ ಚಮೀರ ಕೂಡ ಪ್ರಬಲ ಆಟ ಪ್ರದರ್ಶಿಸಿದರು. ರವಿ ಹೊರತಾಗಿ ಕೃನಾಲ್ ಪಾಂಡ್ಯ ಕೂಡ ತಮ್ಮ ಸ್ಪಿನ್‌ನಿಂದ ಪ್ರಭಾವಿ ಪ್ರದರ್ಶನ ನೀಡಿದರು.

ಆಟಗಾರರಿಗೆ ಆತ್ಮವಿಶ್ವಾಸ ತುಂಬಿದ ಗಂಭೀರ್

ಮೊದಲ ಸೀಸನ್​ನಲ್ಲಿ ಲಕ್ನೋ ತಂಡದ ಯಶಸ್ಸಿನ ಹಿಂದಿನ ಕಾರಣವೆಂದರೆ ಅದರ ತಂಡದ ನಿರ್ವಹಣೆ. ಎರಡು ಬಾರಿ ಐಪಿಎಲ್ ಗೆದ್ದ ಅನುಭವ ಹೊಂದಿರುವ ಗೌತಮ್ ಗಂಭೀರ್ ರೂಪದಲ್ಲಿ ತಂಡಕ್ಕೆ ಮೆಂಟರ್ ಇದ್ದಾರೆ. ಆಟಗಾರರನ್ನು ಹೇಗೆ ತಯಾರಿಸಬೇಕೆಂದು ಅವರಿಗೆ ತಿಳಿದಿದೆ. ಇದಕ್ಕೆ ಉದಾಹರಣೆ ದೀಪಕ್ ಹೂಡಾ. ಇದು ಹೂಡಾ ಅವರ ಇದುವರೆಗಿನ ಅತ್ಯುತ್ತಮ ಐಪಿಎಲ್ ಆಗಿದೆ. ಈ ಋತುವಿನಲ್ಲಿ ಅವರು 15 ಪಂದ್ಯಗಳಲ್ಲಿ 451 ರನ್ ಗಳಿಸಿದರು. ಈ ಸಮಯದಲ್ಲಿ ಅವರ ಸರಾಸರಿ 32.21 ಆಗಿತ್ತು. ಅವರು 136.67 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದರು. ಈ ಋತುವಿನಲ್ಲಿ ದೀಪಕ್ ನಾಲ್ಕು ಬಾರಿ ಐವತ್ತರ ಗಡಿ ದಾಟಿದ್ದಾರೆ. ದೀಪಕ್ ಹೊರತಾಗಿ, ಮೊಹ್ಸಿನ್ ಖಾನ್ ಮತ್ತು ರವಿ ಬಿಷ್ಣೋಯ್ ಅವರನ್ನು ಬಲಗೊಳ್ಳಿಸುವಲ್ಲಿ ಗಂಭೀರ್ ಪಾತ್ರ ಹೆಚ್ಚಿದೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್